Wednesday, November 17, 2010

"ಏನ್ಮಾಡೋದ್ರೀ ....ಸರ? ಹಂಗಾ,ಬಂದ್ಹಂಗ ..ಹೊಡಿಯೋದ್ರಪಾ!"

ನೆನ್ನೆ ನಮ್ಮ ಬಳ್ಳಾರಿಯ ಮೆಡಿಕಲ್ ಕಾಲೇಜಿನಲ್ಲೇ ಓದಿದ, ವೈದ್ಯರೊಬ್ಬರು ನಾವುಮೊದಲನೇ ವರ್ಷದ ಮೆಡಿಕಲ್ ಓದುತ್ತಿದ ಸಮಯದಲ್ಲಿ (1972) ನಡೆದ ಹಾಸ್ಯ ಘಟನೆಯೊಂದನ್ನು ನೆನಪಿಸಿದರು.ಅದನ್ನು ನಿಮ್ಮ ಜೊತೆಹಂಚಿಕೊಳ್ಳುತ್ತಿದ್ದೇನೆ.ನಮ್ಮ ಮೆಡಿಕಲ್ ಕಾಲೇಜ್ ಆಗ ಕರ್ನಾಟಕ ಯುನಿವರ್ಸಿಟಿಗೆ ಸೇರಿತ್ತು.ಈಗೆಲ್ಲಾ ಕಾನ್ವೆಂಟಿನ ನರ್ಸರಿ ಹುಡುಗರೂ ಮಾತೃ ಭಾಷೆ ಕನ್ನಡವಿದ್ದರೂ,ಕನ್ನಡ ಬರುತಿದ್ದರೂ,ಮನೆಯಲ್ಲೂ ಇಂಗ್ಲೀಶಿನಲ್ಲೇ ಮಾತಾಡುತ್ತಾರೆ.ನಮ್ಮ ಕಾಲೇಜಿನಲ್ಲಿ ಬಹಳಷ್ಟು ಜನ ಹತ್ತನೇ ತರಗತಿಯವರಗೆ ಕನ್ನಡದಲ್ಲಿ ಓದಿದವರೇ ಇದ್ದುದರಿಂದ,ಸುಮಾರು ಜನ ಕನ್ನಡದಲ್ಲೇ ಮಾತನಾಡುತ್ತಿದ್ದರು.
ಗುಲ್ಬರ್ಗದಿಂದಬಂದ,ನಮ್ಮಕ್ಲಾಸಿನ ವಿದ್ಯಾರ್ಥಿಯೊಬ್ಬ ಕಾಲೇಜಿನ ಜನರಲ್ ಸೆಕ್ರೆಟರಿ (ಜಿ.ಎಸ್.) ಆಗಿದ್ದ.ಕನ್ನಡ ಮೀಡಿಯಂನಿಂದ ಬಂದ ಅವನಿಗೆಇಂಗ್ಲೀಷಿನಲ್ಲಿ ಅಷ್ಟು ಶುದ್ಧವಾಗಿ,ವ್ಯಾಕರಣ ಬದ್ಧ ವಾಗಿ ಮಾತನಾಡಲು ಬರುತ್ತಿರಲಿಲ್ಲ.ಅದಕ್ಕೆ ಅವನೂ ತಲೆ ಕೆಡಿಸಿಕೊಂಡಿರಲಿಲ್ಲಾ.'ಅದಕ್ಕೇನು ಮಾಡೋದ್ರೀ ಸರಾsssss,ಬಂದ್ಹಂಗಾ ಹೊಡಿಯೋದ್ರಪಾssss'ಎಂದು ಜೋರಾಗಿ ನಗುತ್ತಿದ್ದ.ಆಗ ಮೊದಲನೆ ವರ್ಷದಪರೀಕ್ಷೆಯನ್ನು ಮುಂದೂಡ ಬೇಕೆಂದು ಎಲ್ಲಾ ಕಾಲೇಜುಗಳಲ್ಲಿ ಸ್ಟ್ರೈಕ್ ನಡೆದದ್ದರಿಂದ, ಕರ್ನಾಟಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ರವರು ಅವರ ಚೇಂಬರ್ ನಲ್ಲಿ,ಎಲ್ಲಾ ಕಾಲೇಜುಗಳ General  Secretary ಗಳ meeting ಕರೆದಿದ್ದರು.ಆ ಮೀಟಿಂಗಿನಲ್ಲಿ ಎಲ್ಲಾ ಕಾಲೇಜುಗಳ General secretary (G.S.)ಗಳೂ ಇದ್ದರು.ನಮ್ಮ G.S.ಕೂಡ ಇದ್ದ.ಮೀಟಿಂಗ್ ಈ ಕೆಳಕಂಡಂತೆ ನಡೆಯಿತು:-
REGISTRAR;- 'Who are the general secretaries who have come?'ಎಂದರು.
ನಮ್ಮ G.S. :- ಎದ್ದು ನಿಂತು"I are the G.S.from Bellary medical college sir ",ಎಂದ !REGISTRAR :-(ಅವನ ಬಾಯಿಂದ ಸರಿಯಾದ ಇಂಗ್ಲೀಶ್ ವಾಕ್ಯ ಬರಿಸುವ ದೃಷ್ಟಿಯಿಂದ )ಮತ್ತೆ " Who is the G.S.from Bellary Medical College?" ಎಂದರು.
ನಮ್ಮ G.S.:-ಕೂತವನು ಎದ್ದು ನಿಂತು"I is the G.S.of Bellary Medical College Sir " ಎಂದ!ರಿಜಿಸ್ಟ್ರಾರ್ ರವರು ಇವನ ಇಂಗ್ಲೀಶ್ ಕೇಳಿ ಸುಸ್ತು!ಆದರೂ ಛಲ ಬಿಡದ ತ್ರಿವಿಕ್ರಮನಂತೆ ಹೇಗಾದರೂ ಇವನ ಬಾಯಿಂದ ಸರಿಯಾದ ಇಂಗ್ಲೀಶ್ ವಾಕ್ಯವನ್ನು ಬರಿಸಲೇಬೇಕೆಂದು ಮತ್ತೆ ಅವನನ್ನೇ ಉದ್ದೇಶಿಸಿ ಕೇಳಿದ ಪ್ರಶ್ನೆ ಇದು!
REGISTRAR :-" Who am  the G.S. of Bellary Medical College?".
ನಮ್ಮG.S.:-"I am the G.S.of Bellary Medical College ",ಎಂದ!
ಕಡೆಗೂ ಬಂದ ಸರಿಯಾದ ಉತ್ತರದಿಂದ ರಿಜಿಸ್ಟ್ರಾರ್ ನಿಟ್ಟಿಸಿರು ಬಿಟ್ಟರು.ಇದನ್ನೆಲ್ಲಾ ನೋಡುತ್ತಿದ್ದ ಮಿಕ್ಕವರು ಹೊಟ್ಟೆ ತುಂಬಾ ನಕ್ಕರು.

27 comments:

 1. ಚೆನ್ನಾಗಿದೆ. ಇ೦ಥವರು ಅನೇಕ ಮ೦ದಿ ನನ್ನ ಓದಿನ ದಿನಗಳಲ್ಲೂ ಇದ್ದರು, ಈಗಲೂ ಇದ್ದಾರೆ. ನಮ್ಮ ರಾಜ್ಯದ ಪ್ರಮುಖ ಸ್ಥಾನಗಳಲ್ಲಿರುವ ಕೆಲ ರಾಜಕಾರಣಿಗಳು ದೆಹಲಿಗೆ ಹೋದಾಗಲೋ, ಆ೦ಗ್ಲ ಪತ್ರಕರ್ತರು ಮತ್ತು ಮಾಧ್ಯಮದ ಮಂದಿ ಕೇಳುವ ಪ್ರಶ್ನೆಗಳಿಗೆ ಇ೦ಗ್ಲೀಶಿನಲ್ಲಿ ಉತ್ತರಿಸುವಾಗ ಮಾಡುವ ಸರಳ (ಸಣ್ಣ ಮಕ್ಕಳೂ ಗಮನಿಸಬಹುದಾದ) ತಪ್ಪುಗಳನ್ನು ಕೇಳಿ ಖೇದವೆನಿಸುತ್ತದೆ. ಎ೦ತೆ೦ತಹ ವಿದ್ಯೆಗಳನ್ನೆಲ್ಲ ಅವರು ಕರಗತ ಮಾಡ್ಕೊ೦ಡಿರ್ತಾರೆ, after all ಒ೦ದು ಭಾಷೆ ಸರಿಯಾಗಿ ಕಲಿಯೋಕೆ ಅವರಿಗ್ಯಾಕೆ ಆಗೋಲ್ಲ ಅನ್ನೋದೇ ಯಕ್ಷಪ್ರಶ್ನೆ.

  ReplyDelete
 2. Sir,

  I is laughing by reading this....hahahaha

  ReplyDelete
 3. :-) :-) nagu thadeyoke agthilla

  ReplyDelete
 4. ನಿಮ್ಮ GS ಭೇಷ್ ಅದಾರ ಬಿಡ್ರಿ. ಹ್ಯಾಂಗ ಬರ್ತದನೊ ಹಾಂಗ beat ಮಾಡ್ತಾರ!

  ReplyDelete
 5. ಹ !!
  ನಮ್ಮ ರೀಡರ್ (ನಿಜವಾಗಿಯೂ ರೀಡರ್-ಯಾಕೆಂದ್ರೆ ಬುಕ್ ಓದ್ತಾ ಇದ್ದೋರು ತಲೆ ಎತ್ತತಾ ಇರಲಿಲ್ಲ ಯಾಕೆಂದ್ರೆ ಲೈನ್ ತಪ್ಪಿದರೆ ಮತ್ತೆ ಎಲ್ಲಿಂದಲೋ ಸುರು ಹಚ್ಹ್ಚ್ಕೊತ್ತಿದ್ದರು) ಒಬ್ಬರು ಇದ್ದರು. ಅವರು ಹಾಜರಿ ಪುಸ್ತಕ ಕೊಟ್ಟು ಸಹಿ ಮಾಡಲು 'ಪ್ಲೀಸ್ ಸೈನ್'(ಅಷ್ಟು ಗೊತ್ತಿತ್ತು) ಅಂಥಾ ಹೇಳುತ್ತಿದ್ದರು. ಆದರೆ ಮೇ ತಿಂಗಳಲ್ಲಿ ಏಪ್ರಿಲ್ ಪೇಜ್ ತೆಗೆದು ಕೊಡುತ್ತಿದ್ದರು. ಆಗ ನಾವು "ಸರ ದಿಸ್ ಇಸ ಏಪ್ರಿಲ್ ನಾಟ್ ಮೇ" ಅಂದಾಗ ಅವರ ಉತ್ತರ " ಯು ಶುಡ್ ನಾಟ್ ಟೆಕ ಇಟ್ ಯಾಸ್.... ಯಾಸ... ಯಾಸ... ಅಲ್ಲೇ ಮಾಡ್ಬೇಕಂತಾ" ನಕ್ಕು ನಕ್ಕು ಸಾಕಾಗ್ತಿತ್ತು.
  November 17, 2010 10:58 AM

  ReplyDelete
 6. ಹಹ್ಹಹ್ಹಾ... ಸರ್ರ, ಪಸಂದ್ ಐತ ಬಿಡ್ರಿ ...

  ReplyDelete
 7. ಹ್ಹ ಹ್ಹ ಹ್ಹ .. :) ಚೆನ್ನಾಗಿದೆ ಸರ್ :)

  ReplyDelete
 8. ಡಾಕ್ಟ್ರೆ...
  ನಮಗೊಬ್ಬರು ಮೇಷ್ಟ್ರು ಇದ್ದ್ರು...

  ಆಯ್ ಒನ್..
  ಯೂ.. ಹಂಡ್ರೆಡ್... ಕಂಟ್ರೋಲ್... ಕಂಟ್ರೋಲ್... ಹೌ... ಕಂಟ್ರೋಲ್...?" ಅಂತಿದ್ರು...

  ಇನ್ನೊಮ್ಮೆ...

  "ಆಯ್ ಜಸ್ಟ್ ಸೊ... ಪ್ರಿನ್ಸಿಪಾಲ್ ಪಾಸ್ ಥ್ರೂ ದಿ ವಿಂಡೊ..."

  ಮಸ್ತ್ ಇದೇರಿ...

  ನಿಮ್ಮ ಸಂಚಿಯಿಂದ ಇನ್ನಷ್ಟು ತೆಗಿರಲಾ....

  ReplyDelete
 9. ಹ್ಹ ಹ್ಹ ಹ್ಹ .... ಸೂಪರ್ ಮೂರ್ತಿ ಸರ್..

  ವಸಂತ್

  ReplyDelete
 10. ಹ್ಹಾ ಹ್ಹಾ ಸಕ್ಕತ್ತಾಗಿದೆ ಸರ್...

  ReplyDelete
 11. ಬರೀ ಕನ್ನಡ ಮಾಧ್ಯಮ ಓದಿದವರು ಮಾತ್ರವಲ್ಲ. ನಾನು ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಧ್ಯಾಪಕ. ಹೆಚ್ಚಿನ ವಿದ್ಯಾರ್ಥಿಗಳು ನಗರದಲ್ಲಿ, ಇಂಗ್ಲೀಷ್ ಮಾಧ್ಯಮದಲ್ಲೇ ಓದಿದವರು. ಆದರೆ ಅವರ ಇಂಗ್ಲೀಷೋ, ಓದಿದರೆ ನಗಬೇಕೋ, ಸಿಟ್ಟು ಮಾಡಿಕೊಳ್ಳಬೇಕೋ ಗೊತ್ತಾಗುವುದಿಲ್ಲ. ನೆಟ್ಟಗೆ ಒಂದು ವಾಕ್ಯ ಸರಿಯಾಗಿ ಬರೆಯಲು ಬರುವುದಿಲ್ಲ. ಕಾರಣ ಏನೆಂದರೆ ಹೆಚ್ಚಿನವರಿಗೆ ಪತ್ರಿಕೆ, ಪುಸ್ತಕ ಓದುವ, ಟಿವಿಯಲ್ಲಿ ವಾರ್ತೆ, informative ಕಾರ್ಯಕ್ರಮಗಳು, ಇವನ್ನೆಲ್ಲ ನೋಡುವ ಅಭ್ಯಾಸವೇ ಇಲ್ಲ. ಆದ್ದರಿಂದ ಅನೇಕರಿಗೆ ಸಾಮಾನ್ಯ ಜ್ಣ್ಯಾನ, ಭಾಷೆ ಹಿಡಿತ ಇಲ್ಲವೇ ಇಲ್ಲ. ಹೀಗೆ ಮುಂದುವರೆದರೆ ನಮ್ಮ ಮುಂದಿನ ಪೀಳಿಗೆ ಬಗ್ಗೆ ಆತಂಕವಾಗುತ್ತದೆ

  ReplyDelete
 12. Tumba nagu bantu sir..

  Namagobba meshtru idru.. He will always pause at the end of a question and say " What to do and What not to do"

  ReplyDelete
 13. ಇಂಗ್ಲಿಷ್ ಅನಿವಾರ್ಯ ಆಗಿರೋದು ಅವಕಾಶನೋ ವಿಪರ್ಯಾಸನೋ ಗೊತ್ತಿಲ್ಲ

  BhaShe

  ReplyDelete
 14. you writing i reading Sir, your blog good. you write so so so many ......how can reed

  ಇದು ನನ್ನ ಮೊಬೈಲಿಗೆ ಬಂದ ಓದುಗರೊಬ್ಬರ ಸಂದೇಶ, ಅವರ ಆಂಗ್ಲ ಭಾಷೆಯನ್ನು ಓದಿ ಅರ್ಥೈಲು ೩ ನಿಮಿಷವಾದುದರ ಜತೆಗೆ ನಗುವೂ ಬಂದಿತ್ತು, ಮೊನ್ನೆ ಮೊನ್ನೆ ಮಾಮು[ಕುಮಾರಸ್ವಾಮಿ]ಒಬ್ಬರು ಮಾಧ್ಯಮದವರಿಗೆ ಉತ್ತರಿಸುವಾಗ ಬಳಸಿದ ಆಂಗ್ಲ ಶಬ್ದಗಳು ದೇವರಿಗೇ ಪ್ರೀತಿ! ಬರಹ ನಗುಬರಿಸಿತು, ಮತ್ತಷ್ಟು ಬರಲಿ, ಧನ್ಯವಾದಗಳು

  ReplyDelete
 15. ಡಾಕ್ಟರ್ ಸರ್ ಚೆನ್ನಾಗಿದೆ. ನೀವ್ ಡೋಂಟ್ ವರಿ ಮಾಡ್ಕೋಬೇಡಿ ಎಲ್ಲರಿಗೂ ನಗು ಬರಿಸುವ ಲೇಖನ.ನೀವು ಮೈಸೂರಿಗೆ ಬಂದಾಗ ಈ ವಿಚಾರದ ಬಗ್ಗೆ ಮಾತಾಡೋಣ.ಎಲ್ಲರ ಮುಖದಲ್ಲೂ ನಗೆ ಅರಳಿಸಿದ ನಿಮಗೆ ಹ ಹ ಹ ಥ್ಯಾಂಕ್ಸ್.

  --
  ಪ್ರೀತಿಯಿಂದ ನಿಮ್ಮವ ಬಾಲು.

  ReplyDelete
 16. ಆಸ್ಥೆಯಿಂದ ಓದಿ,ನಲ್ಮೆಯಿಂದ ಪ್ರತಿಕ್ರಿತಿಸಿದ ಎಲ್ಲಾ ಓದುಗರಿಗೂ ನನ್ನ ಅನಂತ ಧನ್ಯವಾದಗಳು.ತಮ್ಮೆಲ್ಲರ ಪ್ರೋತ್ಸಾಹ ಹೀಗೇ ಮುಂದುವರಿಯಲಿ.ನಮಸ್ಕಾರ.

  ReplyDelete
 17. ಡಾಕ್ಟರ್ ಹಾಸ್ಯ ಅಪಹಾಸ್ಯಕ್ಕೀಡಾಗದ ರೀತಿ ಇದೆ. ಇದನ್ನು ಓದಿ ಮುಕ್ತವಾಗಿ ನಗಬಹುದು...ಅಭಿನಂದನೆಗಳು

  ReplyDelete
 18. ಡಾಕ್ಟರ್ ಸರ್,

  ಜಿ.ಎಸ್ is sooper..
  ನಕ್ಕು ನಕ್ಕು ಸಾಕಾತು :)

  ReplyDelete
 19. ಹ್ಹೆ ಹ್ಹೆ ಹ್ಹೇ... ಅವನ ಬಾಯಿಂದ ಸರಿಯಾದ ಇಂಗ್ಲೀಷ್ ಮಾತನಾಡಿಸಲು ಹೋಗಿ ಇವರು ತಮ್ಮ ಇಂಗ್ಲೀಷ್ನೇ ಬಲಿ ಕೊಟ್ಟರಲ್ಲ ... :)

  ReplyDelete
 20. ಓದಿ ನಲ್ಮೆಯಿಂದ ಪ್ರತಿಕ್ರಿಯೆ ನೀಡಿದ @ಶ್ರೀನಿಧಿ,@ಉಮೇಶ್ ದೇಸಾಯ್@ಅಪ್ಪ ಅಮ್ಮ @ಉಮೇಶ್ ,ಇವರಿಗೆಲ್ಲಾ ಅನಂತ ವಂದನೆಗಳು.

  ReplyDelete
 21. super sir
  nimma nenapina buttigala putagalannu ivattu tirugista idini ondondaagi

  ReplyDelete
 22. en maadodu paapa, nam tara kannada medium huduga alwa.. it happens...

  ReplyDelete
 23. ha ha ha .....ha ha ha......ha ha ha...

  ReplyDelete