Sunday, June 12, 2011

"ಪುದೀನಾ....ಪುದೀನಾ....!!"

ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದಿನ ಮಾತು.ರಾಯಚೂರಿನ ಶಾಖೋತ್ಪನ್ನ ಕೇಂದ್ರದ ಶಕ್ತಿನಗರದ ಕಾಲೋನಿಯಲ್ಲಿ ನಮ್ಮ ವಾಸ.ಮಕ್ಕಳಿನ್ನೂ ಸಣ್ಣವರು.ರಜಾ ದಿನಗಳನ್ನು ಬಿಟ್ಟು ಮಾಮೂಲು ದಿನಗಳಲ್ಲಿ ಬೆಳಗಿನ ಎಂಟು ಗಂಟೆ ಎಂದರೆ ಮನೆಯಲ್ಲಿ ಹೆಂಗಸರಿಗೆ  ನಿಜಕ್ಕೂ ತಲೆ ಬಿಸಿಯಾಗುವ ಸಮಯ.ಮಕ್ಕಳನ್ನು ಶಾಲೆಗೆ ರೆಡಿ ಮಾಡಬೇಕು,ಬೆಳಗಿನ ನಾಸ್ತಾ ತಯಾರು ಮಾಡಬೇಕು.ನಂತರವೇ ಸ್ವಲ್ಪ ನಿರಾಳವಾಗಿ ಉಸಿರಾಡಬಹುದು!ನನ್ನ ಹೆಂಡತಿ ದೋಸೆಗೆ ಯಾವ ಚಟ್ನಿ ಹೊಂಚುವುದು ಎಂದು ಯೋಚಿಸುತ್ತಿದ್ದಾಗ ಅವಳಿಗೆ ಹೊರಗೆ 'ಪುದೀನಾ,ಪುದೀನಾ' ಎಂದು ಕೂಗುವ ಸದ್ದು ಕೇಳಿತು.ಆ ಸಮಯದಲ್ಲಿ ಸೊಪ್ಪು ,ತರಕಾರಿ ಮಾರುವವರು ಬರುತ್ತಿದುದು ಸಾಮಾನ್ಯವಾಗಿತ್ತು.ನನ್ನ ಹೆಂಡತಿ ಹೊರಗೆ ಹೋಗಿ ಸೈಕಲ್ ಹಿಂದೆ ಬುಟ್ಟಿಯೊಂದನ್ನು ಕಟ್ಟಿಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು 'ಇಲ್ಲಿ ಬಾರಪ್ಪಾ' ಎಂದು ಕರೆದು ಪುದೀನಾ ಕೊಳ್ಳಲು ಒಳಗೆ ಹೋಗಿ ಹಣ ತಂದು ನೋಡುತ್ತಾಳೆ.......ಅವನು ಕೈಯಲ್ಲಿ ದೊಡ್ಡದೊಂದು ಮೀನು ಹಿಡಿದುಕೊಂಡು .....'ಮೀನಾ .....ಮೀನಾ' ...ಎಂದು ಕೂಗಿದ.ಶುದ್ಧ ಶಾಖಾಹಾರಿಯಾದ ನನ್ನವಳು ನಿಜಕ್ಕೂ ಹೌಹಾರಿ ,ಏನು ಹೇಳುವುದೋ ತಿಳಿಯದೆ ಕಣ್ಣು ಕಣ್ಣು ಬಿಡುತ್ತಾ ನಿಂತಳು.ಮಕ್ಕಳನ್ನು ಶಾಲೆಗೆ  ಕಳಿಸುವ  ಗಡಿಬಿಡಿಯಲ್ಲಿದ್ದ  ನನ್ನವಳಿಗೆ,ಮೀನು ಮಾರುವವನು  'ಮೀನಾ ,ಮೀನಾ,'ಎಂದು ಕೂಗಿದ್ದು 'ಪುದೀನಾ ,ಪುದೀನಾ,' ಎಂದು ಕೇಳಿಸಿತ್ತು!!!

14 comments:

  1. ಹಹಹ ...’ಮೀನಾ’ ಚಟ್ನಿ ಕಥೆ ರುಚಿಯಾಗಿದೆ ! ಧನ್ಯವಾದಗಳು

    ReplyDelete
  2. ಹ್ಹ ಹ್ಹ ಹ್ಹಾ ಸಖತ್ ಕಾಮಿಡಿ ಸಾರ್...

    ReplyDelete
  3. ಹಹಹ..... ಚೆನ್ನಾಗಿದೆ... ಪುದಿನಾ ಚಟ್ನಿ..

    ReplyDelete
  4. ಚೆನ್ನಾಗಿದೆ, ಪುದಿನಾ ಚಟ್ನಿ ಮಾಡಿದ ದಿನ "ಇಂದಿನ ದಿನ ಪುದಿನಾ (ಸುದಿನ) ನಾಳೆಗೆ೦ದರೆ ಅದು ಕಠಿಣ" ಎ೦ದು ಹಾಡುತ್ತಿದ್ದದ್ದು ನೆನಪಾಯ್ತು.

    ReplyDelete
  5. meena chutney arogya ke olledha Doctre....chennagide prasanga....

    ReplyDelete
  6. ಹ್ಹಾ! ಮೀನೂ ಸಸ್ಯಾಹಾರಿ ಅಂತಾರಲ್ಲ ಈ ಫಾರಿನ್ನರ್ಸ್!

    ReplyDelete
  7. sir.. ee tarakari marore haage...

    halavaru vidha.. halavaru bageyalli kooguttare...

    channagide nimma anubhava..

    ReplyDelete
  8. ಓದಿ,ಸಂತಸ ಪಟ್ಟು ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಅನಂತ ಧನ್ಯವಾದಗಳು.ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಮುಂದುವರಿಯಲಿ.ಬರುತ್ತಿರಿ.ನಮಸ್ಕಾರ.

    ReplyDelete
  9. ಪುದೀನ ಅನುಭವ ಸೊಗಸಾಗಿದೆ...:)

    ReplyDelete
  10. ಪುದಿನಾ ಹೋಗಿ "ಥೂ ಮೀನಾ" ಆಯ್ತು..ಪುದಿನಾ ಪ್ರಸಂಗ ತುಂಬಾ ಚೆನ್ನಾಗಿದೆ.

    ReplyDelete

Note: Only a member of this blog may post a comment.