Friday, October 21, 2011

"ಬುದ್ಧಿವಂತಿಕೆ "

ನಮ್ಮ ಆಸ್ಪತ್ರೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿರುವ  ಮಾಲಿಂಗ  ಓದಿರುವುದು ಬರೀ ಏಳನೇ ತರಗತಿಅಷ್ಟೇ!.ಆದರೆ ಅವನ ಬುದ್ಧಿಯ ಹರಿತ, ನೋಡಿದರಷ್ಟೇ ನಂಬಿಕೆ ಬರುವುದು.ಓದಿಗೂ ಬುದ್ಧಿಗೂ ಯಾವುದೇ ಸಂಬಂಧ ಇಲ್ಲ ಎನ್ನುವ ನನ್ನ ಅನಿಸಿಕೆಗೆ ನಮ್ಮ ಮಾಲಿಂಗ ಒಳ್ಳೇ ಉದಾಹರಣೆ.ಏನನ್ನಾದರೂ ಒಮ್ಮೆ ನೋಡಿದರೆ ಅದನ್ನು ತಕ್ಷಣ ಕಲಿತಿರುತ್ತಾನೆ.
Tailoring,carpentry,electrical repair,ಸೀರೆಗೆ ಫಾಲ್ಸ್ ಹಾಕುವುದು,ಗಿಣಿ ಪಾರಿವಾಳಗಳನ್ನು ಸಾಕುವುದು,ಅವನ ಹವ್ಯಾಸಗಳು  ಒಂದೇ ಎರಡೇ!ಒಂದೇ ಒಂದು ನಿಮಿಷವೂ ಸುಮ್ಮನಿರುವ ಪಾರ್ಟಿಯಲ್ಲ!ಅವನ ಸಮಯ ಪ್ರಜ್ಞೆ ಅದ್ಭುತ!ಎಲ್ಲಾ ದಿನ ನಿತ್ಯದ ಸಮಸ್ಯೆಗೂ ಅವನಲ್ಲಿ ಉತ್ತರವಿರುತ್ತದೆ.ಮೊನ್ನೆ ನನ್ನ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಬ್ಯಾಗಿನ ಜಿಪ್ ನ ಹಿಡಿ ಕಿತ್ತುಹೋಯಿತು.ಕಿತ್ತು ಹೋದ ಜಿಪ್ಪಿನ ಜೊತೆಯೇ ಎರಡು ದಿನ ಗುದ್ದಾಡಿ ನನ್ನ ಉಗುರು ಕಿತ್ತು ಹೋಗಿತ್ತು.ನಾನು ಒದ್ದಾಡುತ್ತಿರುವುದು ಮಾಲಿಂಗನ ಗಮನಕ್ಕೆ ಬಂತು.ತಕ್ಷಣ ನನ್ನ ಕೀ ಬಂಚಿನಲ್ಲಿದ್ದ ಸ್ಟೀಲ್ ರಿಂಗ್ ಒಂದನ್ನು ತೆಗೆದು ಬ್ಯಾಗಿನ  ಜಿಪ್ಪಿಗೆ ಸಿಗಿಸಿ ಒಂದು ಸೊಗಸಾದ ಜಿಪ್ಪಿನ ಹಿಡಿ ತಯಾರು ಮಾಡಿಕೊಟ್ಟಿದ್ದ!ಈಗ  ಬ್ಯಾಗಿನ  ಜಿಪ್ಪು ತೆಗೆಯುವಾಗ ಮತ್ತು ಹಾಕುವಾಗಲೆಲ್ಲಾ ಮನಸ್ಸು ಕೃತಜ್ಞತೆಯಿಂದ ಮಾಲಿಂಗನನ್ನು ನೆನೆಯುತ್ತದೆ!ಈಗ ನೀವೇ ಹೇಳಿ.Rank ಬಂದವರು ಮಾತ್ರ ಬುದ್ಧಿವಂತರೇ?

21 comments:

  1. ನಿಜ, ಡಾಕ್ಟರ್! ಸಮಯಕ್ಕೆ ಒದಗುವ ಬುದ್ಧಿವಂತಿಕೆಯೇ ನಿಜವಾದ ಬುದ್ಧಿವಂತಿಕೆ. ನಿಮ್ಮ ಸಂಪರ್ಕದಲ್ಲಿ ಬಂದ ಎಲ್ಲ ವ್ಯಕ್ತಿಗಳ ವೈಶಿಷ್ಟ್ಯವನ್ನು ನೀವು ಗುರುತಿಸುವದೂ ನಿಮ್ಮ ಪ್ರತಿಭೆಯ ಲಕ್ಷಣವೇ ಎಂದು ಅನಿಸುತ್ತದೆ.

    ReplyDelete
  2. ಡಾಕ್ಟರ್ ಟಿ.ಡಿ.ಕೆ. ಮಾಲಿಂಗನ ಬಹುಮುಖ ಪ್ರತಿಭೆ ರಾಂಕ್ ನಿಂದ ಬರುವಂಥಹುದಲ್ಲ...ಆಸಕ್ತಿ ಆತನದ್ದು ಅಪಾರ...ಒಳ್ಳೆ ಚಿಕ್ಕ ಚೊಕ್ಕ ಸಂದೇಶಭರಿತ ಪೋಸ್ಟ್...

    ReplyDelete
  3. ಸುನಾತ್ ಸರ್;ಸಮಯಪ್ರಜ್ಞೆ,ಸಾಮಾನ್ಯ ಜ್ಞಾನ ಮತ್ತು ಯಾವುದನ್ನಾದರೂ ತಕ್ಷಣ ಗ್ರಹಿಸುವಿಕೆ ಇವು ಮೂರೂ ಬುದ್ಧಿವಂತಿಕೆಯ ಲಕ್ಷಣಗಳು ಅಂತ ನನ್ನ ಅನಿಸಿಕೆ.ಇಂತಹವರ response ಮಾತಿನಲ್ಲಿಯೇ ಆಗಲೀ ಕೃತಿಯಲ್ಲಿಯೇ ಆಗಲೀ will be the most appropriate for the situation!ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  4. ಸುಬ್ರಮಣ್ಯಮಾಚಿಕೊಪ್ಪ;ನಿಮ್ಮ :-)ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು:-D

    ReplyDelete
  5. ಅಜಾದ್ ಸರ್; RANK ಬಂದರೆ ಮಾತ್ರ ಅಥವಾ ಓದಿನಲ್ಲಿ ಮುಂದಿರುವ ಮಕ್ಕಳು ಮಾತ್ರ ಬುದ್ಧಿವಂತರೆನ್ನುವ ಮಾನ ದಂಡ ಹಲವು ತಂದೆ ತಾಯಂದಿರಲ್ಲಿ ಇನ್ನೂ ಇದೆ. ಮಕ್ಕಳಲ್ಲಿ ಬುದ್ಧಿವಂತಿಕೆ ಬೇರೆಯದೇ ಸ್ವರೂಪದಲ್ಲಿರಬಹುದು.ಅದನ್ನು ಗುರುತಿಸುವ ಬುದ್ಧಿವಂತಿಕೆ ನಮ್ಮಲ್ಲಿರಬೇಕು!ಅಲ್ಲವೇ?

    ReplyDelete
  6. ಡಾಕ್ಟ್ರೆ...

    ನಮ್ಮ ಊರಿನ ಕಡೆ ಓಮ್ದು ಗಾದೆ ಮಾತಿದೆ..

    "ಓದಿ ಓದಿ ಮರುಳಾದ ಕೂಚು ಭಟ್ಟ..
    ಓದದಿದ್ದ ನಮ್ಮ ರೈತ ಅನ್ನ ಕೊಟ್ಟ" ಅಂತ...

    ನೀವೆನ್ನುವದು ಸತ್ಯವಾದ ಮಾತು...

    ಸಾಮಾನ್ಯ ಜ್ಞಾನ ಕೊಡದು "ಓದು" ಪ್ರಯೋಜನವಿಲ್ಲ..

    ಧನ್ಯವಾದಗಳು..

    ReplyDelete
  7. ಪಕ್ಕೇಶ್ ಹೆಗ್ಗಡೆಯವರಿಗೆ;ನಮಸ್ಕಾರ.ನಿಮ್ಮ ಲೇಖನಗಳಲ್ಲಿ ಬರುವ ಕುಷ್ಟನಂತಹವರು ನನಗೆ ತಿಳಿದ ಮಟ್ಟಿಗೆ ಬಹಳ ಓದಿಕೊಂಡವರಲ್ಲ.ಆದರೆ ಪ್ರಚಂಡರು.ಅವರಂಥವರು ಬದುಕಿನ ಪಾಠಶಾಲೆಯಲ್ಲಿ ಸಾಕಷ್ಟು ಕಲಿತು ಬುದ್ಧಿವಂತರಾದವರು!ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  8. ಹೌದು.. ಸಮಯೋಚಿತ ಬುದ್ಧಿವಂತಿಕೆಯೇ ಮುಖ್ಯ ಸರ್..

    ReplyDelete
  9. Rank ಗೂ ಬುದ್ದಿವಂತಿಕೆಗೂ ಸಂಬಂದ ಇರದೇ ಇರಬಹುದು...ಆದರೆ rank ಬಾರದವರು ಇಂದು ಎಲ್ಲಿ ಸಲ್ಲುವರಯ್ಯ...?!

    ReplyDelete
  10. ಈಶ್ವರ್ ಭಟ್;ಸಮಯಕ್ಕಾದವನೇ ನೆಂಟ ಅಂದ ಹಾಗೆ ಸಮಯಕ್ಕೆ ಉಪಯೋಗಕ್ಕೆ ಬಂದ ಬುದ್ಧಿವಂತಿಕೆಯೇ ಬುದ್ಧಿವಂತಿಕೆ.ಇಲ್ಲದಿದ್ದರೆ ಪರಮ ಹಂಸರ ಕಥೆಯಲ್ಲಿ ಬರುವ ಈಜು ಬಾರದ ವ್ಯಾಕರಣ ಪಂಡಿತ ಪ್ರವಾಹ ಬಂದ ನದಿಯಲ್ಲಿ ಮುಳುಗಿದಂತಾಗುತ್ತದೆ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  11. ಮೌನ ರಾಗ ಮೇಡಂ;ಹ...ಹ..ಹಾ...!ಒಳ್ಳೆಯ ಪ್ರಶ್ನೆ!ಇಂದಿನ ಪರಿಸ್ಥಿತಿಗೆ ಕನ್ನಡಿ ಹಿಡಿದಂತಿದೆ!ಧೈರ್ಯಗೆಡಬೇಡಿ!ಸ್ಟೀವ್ ಜಾಬ್ಸ್,ಬಿಲ್ ಗೇಟ್ಸ್,ಧೀರೂ ಭಾಯಿ ಅಂಬಾನಿ......ಬಹಳ ಜನ ಇದ್ದಾರೆ.ಓದಿನಲ್ಲಿ rank ಬರದೇ ಜೀವನದಲ್ಲಿ ಮುಂದೆ ಬಂದವರು.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  12. ಚಿಕ್ಕ ಪೋಸ್ಟ್ ನಲ್ಲಿ ಒ೦ದು ಚೊಕ್ಕ ಸ೦ದೇಶ. ಅಭಿನ೦ದನೆಗಳು ಡಾ. ಸರ್.

    ಅನ೦ತ್

    ReplyDelete
  13. ಅನಂತ್ ಸರ್;ನಿಮ್ಮಂತಹ ಹಿರಿಯರ ಪ್ರೋತ್ಸಾಹಕ ಪ್ರತಿಕ್ರಿಯೆ ನನ್ನ ಬ್ಲಾಗಿನ ಬೆನ್ನೆಲಬು.ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.ಬರುತ್ತಿರಿ.ನಮಸ್ಕಾರ.

    ReplyDelete
  14. ಹೇಮಚಂದ್ರ;ನೀವು ಹೇಳುವುದು ಸರಿ.ಆಸಕ್ತಿ ಮುಖ್ಯ.ಆಸಕ್ತಿ ಇದ್ದಲ್ಲಿ ಅನ್ವೇಷಣೆ ಇರುತ್ತದೆ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  15. ಮಾಲಿಂಗನಂತವರು ನನ್ನಂತಹ ಸೋಮಾರಿ ಮನಸ್ಥಿತಿಯವರಿಗೆ ಆದರ್ಶಪ್ರಾಯ.
    ಅವನ ಸಯ ಪ್ರಜ್ಞೆ ಮತ್ತು ಕಲೆವಂತಿಕೆಗೆ ಶರಣು.
    ಇಂತಹ ಸುತ್ತಲಿನ ಮಾನವಾಕೃತಿಗಳನ್ನೇ ಕೃತಿಯಾಗಿಸುವ ನಿಮ್ಮ ಗ್ರಹಿಸಿಕೆ ಅದ್ಭುತ ಸಾರ್.

    ReplyDelete
  16. ಬದರಿ;ನಿಮ್ಮ ಕವನಗಳಲ್ಲಿದೆ ನಿಮ್ಮ ಬುದ್ಧಿವಂತಿಕೆ!ಆ ದೇವರು ಒಬ್ಬೊಬ್ಬರಲ್ಲಿ ಒಂದೊಂದು ವಿಶೇಷತೆ ಇಟ್ಟಿರುತ್ತಾನೆ.ನಿಮ್ಮಲ್ಲಿ ಕವನವನ್ನಿಟ್ಟಿದ್ದಾನೆ.ನಮ್ಮಲ್ಲಿ ಅದನ್ನು ಆಸ್ವಾದಿಸುವ ಗುಣವನ್ನು ಕೊಟ್ಟಿದ್ದಾನೆ!

    ReplyDelete
  17. i agree with u our mother is another best example ranganna

    ReplyDelete
  18. ರಂಗಣ್ಣ;ನನ್ನ ಬ್ಲಾಗಿಗೆ ಸ್ವಾಗತ.ನೀವು ಹೇಳುವುದು ಸರಿ.ಬರುತ್ತಿರಿ.ನಮಸ್ಕಾರ.

    ReplyDelete
  19. ವೈಜ್ಞಾನಿಕ ಉತ್ಕರ್ಷ ಮತ್ತು ಕಲಿಕೆಯ ನಿರಂತರ ದಾಹ ವಿದ್ದಲ್ಲಿ ಎಂತಹ ಸಮಸ್ಯೆಯನ್ನೂ ಪರಿಹರಿಸಬಹುದು. ಓದು ಅದಕ್ಕೆ ಪೂರಕವೇ ಹೊರತು ಪುಸ್ತಕದ ಬದನೆಯಿಂದ ಬಾಳು ಬೆಳಗದು...ಅದು ನಮ್ಮ ಪ್ರಾಯೋಗಿಕ ಬದುಕಲ್ಲಿ ಸುಲಭ ದಾರಿಗೆ ದೀಪ ಅಷ್ಟೆ. ನಿಂತವನಿಗೆ ಅದು ಉಪಯೋಗವಾಗದು.. ನಿರಂತರತೆ ತುಡಿತ ಅವಸ್ಯವಾದಲ್ಲಿ ಎಲ್ಲವು ಸಾಧ್ಯ.

    ReplyDelete
  20. Thadviruddavagi 'Jack of all trades, master of none'- yamba matoo kooda ide

    ReplyDelete

Note: Only a member of this blog may post a comment.