Saturday, September 28, 2013

"ಏನು ಮಾಡೋದ್ರೀ ಸರ್? ಬಂದ ಹಂಗಾ....ಹೊಡಿಯೋದ್ರಪಾ!!!! "

ನೆನ್ನೆ ನಮ್ಮ ಬಳ್ಳಾರಿಯ ಮೆಡಿಕಲ್ ಕಾಲೇಜಿನಲ್ಲೇ ಓದಿದ, ವೈದ್ಯರೊಬ್ಬರು ನಾವುಮೊದಲನೇ ವರ್ಷದ ಮೆಡಿಕಲ್ ಓದುತ್ತಿದ ಸಮಯದಲ್ಲಿ (1972) ನಡೆದ ಹಾಸ್ಯ ಘಟನೆಯೊಂದನ್ನು ನೆನಪಿಸಿದರು.ಅದನ್ನು ನಿಮ್ಮ ಜೊತೆಹಂಚಿಕೊಳ್ಳುತ್ತಿದ್ದೇನೆ.ನಮ್ಮ ಮೆಡಿಕಲ್ ಕಾಲೇಜ್ ಆಗ ಕರ್ನಾಟಕ ಯುನಿವರ್ಸಿಟಿಗೆ ಸೇರಿತ್ತು.ಈಗೆಲ್ಲಾ ಕಾನ್ವೆಂಟಿನ ನರ್ಸರಿ ಹುಡುಗರೂ ಮಾತೃ ಭಾಷೆ ಕನ್ನಡವಿದ್ದರೂ,ಕನ್ನಡ ಬರುತಿದ್ದರೂ,ಮನೆಯಲ್ಲೂ ಇಂಗ್ಲೀಶಿನಲ್ಲೇ ಮಾತಾಡುತ್ತಾರೆ.ನಮ್ಮ ಕಾಲೇಜಿನಲ್ಲಿ ಬಹಳಷ್ಟು ಜನ ಹತ್ತನೇ ತರಗತಿಯವರಗೆ ಕನ್ನಡದಲ್ಲಿ ಓದಿದವರೇ ಇದ್ದುದರಿಂದ,ಸುಮಾರು ಜನ ಕನ್ನಡದಲ್ಲೇ ಮಾತನಾಡುತ್ತಿದ್ದರು.
ಗುಲ್ಬರ್ಗದಿಂದಬಂದ,ನಮ್ಮಕ್ಲಾಸಿನ ವಿದ್ಯಾರ್ಥಿಯೊಬ್ಬ ಕಾಲೇಜಿನ ಜನರಲ್ ಸೆಕ್ರೆಟರಿ (ಜಿ.ಎಸ್.) ಆಗಿದ್ದ.ಕನ್ನಡ ಮೀಡಿಯಂನಿಂದ ಬಂದ ಅವನಿಗೆಇಂಗ್ಲೀಷಿನಲ್ಲಿ ಅಷ್ಟು ಶುದ್ಧವಾಗಿ,ವ್ಯಾಕರಣ ಬದ್ಧ ವಾಗಿ ಮಾತನಾಡಲು ಬರುತ್ತಿರಲಿಲ್ಲ.ಅದಕ್ಕೆ ಅವನೂ ತಲೆ ಕೆಡಿಸಿಕೊಂಡಿರಲಿಲ್ಲಾ.'ಅದಕ್ಕೇನು ಮಾಡೋದ್ರೀ ಸರಾsssss,ಬಂದ್ಹಂಗಾ ಹೊಡಿಯೋದ್ರಪಾssss'ಎಂದು ಜೋರಾಗಿ ನಗುತ್ತಿದ್ದ.ಆಗ ಮೊದಲನೆ ವರ್ಷದಪರೀಕ್ಷೆಯನ್ನು ಮುಂದೂಡ ಬೇಕೆಂದು ಎಲ್ಲಾ ಕಾಲೇಜುಗಳಲ್ಲಿ ಸ್ಟ್ರೈಕ್ ನಡೆದದ್ದರಿಂದ, ಕರ್ನಾಟಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ರವರು ಅವರ ಚೇಂಬರ್ ನಲ್ಲಿ,ಎಲ್ಲಾ ಕಾಲೇಜುಗಳ General  Secretary ಗಳ meeting ಕರೆದಿದ್ದರು.ಆ ಮೀಟಿಂಗಿನಲ್ಲಿ ಎಲ್ಲಾ ಕಾಲೇಜುಗಳ General secretary (G.S.)ಗಳೂ ಇದ್ದರು.ನಮ್ಮ G.S.ಕೂಡ ಇದ್ದ.ಮೀಟಿಂಗ್ ಈ ಕೆಳಕಂಡಂತೆ ನಡೆಯಿತು:-
REGISTRAR;- 'Who are the general secretaries who have come?'ಎಂದರು.
ನಮ್ಮ G.S. :- ಎದ್ದು ನಿಂತು"I are the G.S.from Bellary medical college sir ",ಎಂದ !REGISTRAR :-(ಅವನ ಬಾಯಿಂದ ಸರಿಯಾದ ಇಂಗ್ಲೀಶ್ ವಾಕ್ಯ ಬರಿಸುವ ದೃಷ್ಟಿಯಿಂದ )ಮತ್ತೆ " Who is the G.S.from Bellary Medical College?" ಎಂದರು.
ನಮ್ಮ G.S.:-ಕೂತವನು ಎದ್ದು ನಿಂತು"I is the G.S.of Bellary Medical College Sir " ಎಂದ!ರಿಜಿಸ್ಟ್ರಾರ್ ರವರು ಇವನ ಇಂಗ್ಲೀಶ್ ಕೇಳಿ ಸುಸ್ತು!ಆದರೂ ಛಲ ಬಿಡದ ತ್ರಿವಿಕ್ರಮನಂತೆ ಹೇಗಾದರೂ ಇವನ ಬಾಯಿಂದ ಸರಿಯಾದ ಇಂಗ್ಲೀಶ್ ವಾಕ್ಯವನ್ನು ಬರಿಸಲೇಬೇಕೆಂದು ಮತ್ತೆ ಅವನನ್ನೇ ಉದ್ದೇಶಿಸಿ ಕೇಳಿದ ಪ್ರಶ್ನೆ ಇದು!
REGISTRAR :-" Who am  the G.S. of Bellary Medical College?".
ನಮ್ಮG.S.:-"I am the G.S.of Bellary Medical College ",ಎಂದ!
ಕಡೆಗೂ ಬಂದ ಸರಿಯಾದ ಉತ್ತರದಿಂದ ರಿಜಿಸ್ಟ್ರಾರ್ ನಿಟ್ಟಿಸಿರು ಬಿಟ್ಟರು.ಇದನ್ನೆಲ್ಲಾ ನೋಡುತ್ತಿದ್ದ ಮಿಕ್ಕವರು ಹೊಟ್ಟೆ ತುಂಬಾ ನಕ್ಕರು.

6 comments:

  1. ಕೃಷ್ಣಮೂರ್ತಿ ಸರ ,

    ಜಿ ಎಸ ಪ್ರಸಂಗ ನಗಿಸ್ತು :)

    ಈಗ ಅವ್ರು ಏನು ಮಾಡ್ತಾ ಇದಾರೆ ಅನ್ನುವ ಕುತೂಹಲ :)

    ReplyDelete
  2. ಈಗ ಅವರು ಮೆಡಿಕಲ್ ಕಾಲೇಜ್ ಒಂದರಲ್ಲಿ ಪ್ರೊಫೆಸರ್ !!!!!

    ReplyDelete
  3. ನಮ್ಮಂತ ಕನ್ನಡ ಮೀಡಿಯಂ ಶಾಲೆಯಲ್ಲಿ ಓದಿದವರ ಪಾಡು ಇದು.......!!!!
    ಕೊನೆಗೂ GS ಬಾಯಲ್ಲಿ ಸರಿಯಾದ ವಾಕ್ಯ ಬಂತಲ್ಲ....!


    Nice One

    ReplyDelete
  4. ಕುದುರೆ ನೀರ ಹತ್ತಿರ ಬರದೆ ಇದಾಗ ನೀರೆ ಕುದುರೆ ಹತ್ತಿರ ಬಂದ ಹಾಗೆ ಆಯಿತು ಸೂಪರ್ ಸರ್. ಹೌದು ಕನ್ನದಲ್ಲಿ ಓದಿದ ಪ್ರತಿಭೆಗಳು ಜೀವನದ ನೌಕೆಯಲ್ಲಿ ಬಲು ದೂರಸಾಗಿದ್ದಾರೆ.. ಉನ್ನತ ಸಾಧನೆ ಮಾಡಿದ್ದಾರೆ. ಅದಕ್ಕೆ ಭಾಷೆಯ ತೊಡಕು ಅಡ್ಡ ಬರುವುದಿಲ್ಲ. ಸುಮ್ಮನೆ ಅಂಗ್ಲ ಭಾಷೆಗೆ ಜೋತು ಬೀಳುತ್ತೇವೆ. ಜ್ಞಾನದ ಹರಿವನ್ನು ಹೆಚ್ಚಿಸಿಕೊಳ್ಳಲು ಬಹು ಭಾಷಾ ಜ್ಞಾನ ಬೇಕು.. ಆದರೆ ಬದುಕಲಿಕ್ಕೆ, ಒಣ ಪ್ರತಿಷ್ಠೆಗಾಗಿ ಅಲ್ಲ. ಸುಂದರ ಲೇಖನ

    ReplyDelete