ಈಗ "ಮಾಸಿದ ಕೋಟಿನ"ಕಥೆಯ ಮುಂದಿನ ಭಾಗವನ್ನು ಓದಿ ,ನಂತರ ನಿಮ್ಮ ಅಭಿಪ್ರಾಯ ತಿಳಿಸಿ:ವೈದ್ಯರು,ನಡೆದ ಆಕಸ್ಮಿಕ ಘಟನೆ ಯಿಂದ ಅವಾಕ್ಕಾದರು!ಮಾತೇ ಹೊರಡಲಿಲ್ಲ!ಆದರೂ ತಕ್ಷಣ ಸಾವರಿಸಿಕೊಂಡು,ಆ ಮಾಸಿದ ಕೋಟಿನ ವ್ಯಕ್ತಿಯನ್ನು ವಾಪಸ್ಸು ಕರೆದು ಕೂರಿಸಿದರು.ವ್ಯಕ್ತಿ ಬಿಕ್ಕಿ,ಬಿಕ್ಕಿ ಅಳುತ್ತಿದ್ದ!ಅವನನ್ನು ಸಮಾಧಾನ ಪಡಿಸಿದ ನಂತರ ವೈದ್ಯರು'ನೋಡಪ್ಪಾ,ನೀನು ಫೀಸು ಕೊಡಲಿಲ್ಲಅಂತ ತಕ್ಷಣ ಸಿಟ್ಟು ಬಂತು.ಕೋಪದಲ್ಲಿ ಏನೋ ಹೇಳಿಬಿಟ್ಟೆ ಅಂತ ಬೇಜಾರು ಮಾಡಿಕೋ ಬೇಡ,ನಿನ್ನ ಕತೆ ಏನು?'ಎಂದರು.ಅದಕ್ಕೆ ಆತ 'ಆರು ತಿಂಗಳ ಕೆಳಗೆ ನನ್ನ ಹೆಂಡತಿ ತೀರಿಕೊಂಡಳು ಸಾರ್ ,ನನಗೆ ಜೀವನಾನೆ ಬೇಡ ಅನ್ನಿಸಿತ್ತು.ಆತ್ಮಹತ್ಯೆ ಮಾಡಿ ಕೊಳ್ಳೋಣ ಅಂತಿದ್ದೆ.ನೀವು ಫೀಸು ಕೊಡದೆ ಇದ್ದರೂ, ಚಿಕೆತ್ಸೆ ಮಾಡಿದಿರಿ!ಈಗ ಅವಳ ಒಡವೆ ಗಿರವಿ ಇಟ್ಟು ಹತ್ತು ಸಾವಿರ ತಂದಿದ್ದೀನಿ.ನಿಮ್ಮ ಋಣ ಈ ಜನ್ಮದಲ್ಲಿ ತೀರಿಸೋಕೆ ಆಗೋಲ್ಲ.ಹಾಗೇ ಹತ್ತು ಸಾವಿರಕೊಟ್ಟರೆ,ನೀವುತೊಗೊಳಲ್ಲಾ.ಅದಕ್ಕೇನನಗೆ ಬಹಳ ಇಷ್ಟವಾದ ಈ ಕೋಟಿನಲ್ಲಿ ಇಟ್ಟು ಕೊಟ್ಟೆ .ಈ ಕೋಟೂ ಅವಳೇ ಯಾವುದೋ ಹಬ್ಬಕ್ಕೆ ಅಂತ ನನಗೆ ತಂದು ಕೊಟ್ಟಿದ್ದು ಸಾರ್'ಎಂದ.ಈಗ ವೈದ್ಯರ ಕಣ್ಣಲ್ಲಿ ನೀರಿತ್ತು!ವೈದ್ಯರು ನಿಧಾನವಾಗಿ ಹೇಳಿದರು'ನೋಡಪ್ಪಾ ನನಗೆ ನಿನ್ನ ಈ ಹಣದ ಅವಶ್ಯಕತೆಇಲ್ಲ.ದೇವರು ಸಾಕಷ್ಟು ಹಣ ಕೊಟ್ಟಿದ್ದಾನೆ.ಎಷ್ಟೋ ಜನ ಚಿಕಿತ್ಸೆ ಪಡೆದವರು ತಿರುಗಿಯೂ ನೋಡುವುದಿಲ್ಲ .ಈ ಹಣದಿಂದ ಯಾರಾದರೂ ಕಷ್ಟದಲ್ಲಿ ಇದ್ದವರಿಗೆ ನೀನೂ ಸಹಾಯ ಮಾಡು ಎಂದು ,ಆ ಹಣವನ್ನು ಅವನಿಗೇ ಹಿಂದಿರುಗಿಸಿ,ಅವನನ್ನು ಬಾಗಿಲಿನ ತನಕ ಬಂದು ಬೀಳ್ಕೊಟ್ಟರು.ಆಗ ರಾತ್ರಿ ಒಂಬತ್ತರ ಸಮಯ.ಕ್ಲಿನಿಕ್ಕಿನ ಬಾಗಿಲು ಮುಚ್ಚುವ ವೇಳೆಯಾಗಿತ್ತು.ಟೇಬಲ್ ಮೇಲೆ ಇದ್ದ ಬುದ್ದನ ಪ್ರತಿಮೆಯ ನಗು ಹೊರಗೆಲ್ಲಾ ತಣ್ಣನೆ ಬೆಳದಿಂಗಳಾಗಿ ಹರಡಿತ್ತು.
Sunday, April 25, 2010
Wednesday, April 21, 2010
' ಮಾಸಿದ ಕೋಟು '{ ಭಾಗ -1}
ಹೀಗೊಂದು ಪುಟ್ಟ ಕಥೆ .ಎಂದೋ ಓದಿದ್ದು.ನಿಮಗೆಲ್ಲಾ ಹೇಳಬೇಕು ಅಂತ ಅನ್ನಿಸಿತು .ಹೇಳಿಬಿಡುತ್ತೇನೆ .ಹೀಗೆಲ್ಲಾ ನಡಿದಿರಲಿಕ್ಕೂ ಸಾಧ್ಯ ಅನ್ನಿಸುತ್ತದೆ.ಒಮ್ಮೊಮ್ಮೆ ಇದು ಬರೀ ಒಂದು ಕಾಲ್ಪನಿಕ ಘಟನೆ ಇರಬಹುದು ಅಂತಲೂಅನ್ನಿಸುತ್ತದೆ .ನೀವೇ ಓದಿ ನೋಡಿ.ಆತ ಸದಾ ಆ ಮಾಸಿದ ಕೋಟನ್ನು ಧರಿಸುತ್ತಿದ್ದ.ಅದರ ಜೊತೆ ಏನೇನು ನೆನಪುಗಳು ಅಂಟಿಕೊಂಡಿದ್ದವೋ ಅವನಿಗೇ ಗೊತ್ತು.ಸುಮಾರು ಮೂರು ತಿಂಗಳಿಂದ ಅವನು ಆ ವೈದ್ಯರ ಬಳಿಗೆ ಚಿಕಿತ್ಸೆಗೆ ಬರುತ್ತಿದ್ದ.ಅವರುಫೀಸುಕೇಳಿದಾಗಲೆಲ್ಲಾ 'ಮುಂದಿನ ಸಾರಿ ಖಂಡಿತ ಕೊಡುತ್ತೀನಿ ಸಾರ್'ಎಂಬ ಉತ್ತರ ಅವನ ಬಳಿ ಸಿದ್ದವಾಗಿರುತ್ತಿತ್ತು.ಆದಿನ ಅವನು'ನನಗೆ ಪೂರ್ತಿ ಗುಣವಾಗಿದೆ ಸರ್ 'ಎಂದ.ವೈದ್ಯರು 'ನನ್ನ ಫೀಸು ನಾಲಕ್ಕು ಸಾವಿರ ವಾಗಿದೆ ,ಈಗಲಾದರೂ ಕೊಡುತ್ತೀಯೇನಪ್ಪಾ 'ಎಂದರು.ಆತನ ಮುಖದಲ್ಲಿ ದೈನ್ಯ ಭಾವ ಇತ್ತು.ತನ್ನ ಖಾಯಿಲೆಗುಣ ಮಾಡಿದ್ದಕ್ಕೆವೈದ್ಯರ ಬಗ್ಗೆ ಕೃತಜ್ಞತೆಇತ್ತು.ತಾನು ಬಹಳವಾಗಿ ಇಷ್ಟಪಡುತ್ತಿದ್ದ ಕೋಟನ್ನು ಬಿಚ್ಚಿ, ಟೇಬಲ್ ಮೇಲೆ ಇಟ್ಟು'ನೀವು ದೇವರು ಇದ್ದ ಹಾಗೆ ಸರ್'ಎಂದ.ವೈದ್ಯರಿಗೆ ಅಸಾಧ್ಯ ಕೋಪ ಬಂತು.ಇನ್ನೂ ಏನೋ ಹೇಳಬೇಕೆಂದಿದ್ದ ಅವನನ್ನು ಅರ್ಧಕ್ಕೇ ತಡೆದು ಸಿಟ್ಟಿನಿಂದ 'ಎತ್ಕೊಂಡು ಹೋಗಯ್ಯ ನಿನ್ ಹಾಳು ಕೋಟು ಯಾವೋನಿಗೆ ಬೇಕು,ನನ್ನ ನಾಲ್ಕು ಸಾವಿರ ರೂಪಾಯಿ ತಂದುಕೊಡು'ಎಂದು ,ಆ ಮಾಸಿದ ಕೋಟನ್ನು ಕೆಳಗೆ ಬಿಸಾಕಿದರು .ಆತನಿಗೆ ತುಂಬಾ ನೋವಾಗಿತ್ತು.ಕಣ್ಣಿನಲ್ಲಿ ನೀರಿತ್ತು.ಏನೂ ಮಾತಾಡದೆ ನಿಧಾನವಾಗಿ ಕೋಟನ್ನುನೆಲದಿಂದ ಎತ್ತಿಕೊಂಡು ಧರಿಸಿ,ಅದರ ಒಳ ಜೇಬಿನಲ್ಲಿದ್ದ ಹತ್ತು ಸಾವಿರ ರೂಪಾಯಿಯ ಹೊಸ ನೋಟುಗಳ ಕಟ್ಟನ್ನು ಬಿಡಿಸಿ,ನಾಲಕ್ಕು ಸಾವಿರ ಎಣಿಸಿ,ಟೇಬಲ್ ಮೇಲೆ ಇಟ್ಟು ಇನ್ನುಳಿದ ಆರು ಸಾವಿರವನ್ನು ಕೋಟಿನ ಜೇಬಿನಲಿಟ್ಟು ಮೌನವಾಗಿ ಹೊರನಡೆದ.ಟೇಬಲ್ ಮೇಲಿದ್ದ ನಾಲಕ್ಕು ಸಾವಿರ ನೋಟುಗಳು ಇಷ್ಟು ಹೊತ್ತೂ ಜೊತೆಗಿದ್ದ ಮಾಸಿದ ಕೋಟಿನೊಳಗಿನ ಆರು ಸಾವಿರ ನೋಟುಗಳಿಗೆ 'ಟಾ--ಟಾ' ಮಾಡುತ್ತಿದ್ದವು!ಟೇಬಲ್ ಮೇಲೆ ಇದ್ದ 'ಲಾಫಿಂಗ್ ಬುದ್ಧನ' ಮೂರ್ತಿ ವೈದ್ಯರನ್ನು ನೋಡಿ ನಗುತ್ತಲೇ ಇತ್ತು!
Tuesday, April 20, 2010
' ನವ್ಯ --------ಕಲೆ '
ನಾನು ಬಹಳ ವರ್ಷಗಳ ಹಿಂದೆ ಒಂದು ಚಿತ್ರಕಲಾ
ಪ್ರದರ್ಶನಕ್ಕೆಹೋಗಿದ್ದೆ.ಅಲ್ಲಿದ್ದ ನವ್ಯ ಚಿತ್ರವೊಂದು
ವಿಚಿತ್ರವಾಗಿತ್ತು.ಅದರತಲೆಬುಡಅರ್ಥವಾಗಲಿಲ್ಲ.
'ಇದನ್ನು ಕಲೆ ಅಂತ ಏಕೆ ಕರೆಯುತ್ತಾರೆ',ಎಂದು
ತಲೆ ಕೆರೆದುಕೊಂಡೆ! ಯಾರೋ ಸಣ್ಣ ಮಕ್ಕಳು
ಸಿಕ್ಕಿದ್ದನ್ನು ಗೀಚಿಅದಕ್ಕೆಸಿಕ್ಕಾಪಟ್ಟೆ ಬಣ್ಣ ಬಳಿದ ಹಾಗಿತ್ತು!
ಹಾಗೆಂದು ನವ್ಯ ಕಲೆಯನ್ನುನಾನುತಿರಸ್ಕಾರದಿಂದ
ಕಾಣುತ್ತೇನೆಂದು ತಪ್ಪು ತಿಳಿಯಬೇಡಿ. ಕೆಲವು
ನವ್ಯಚಿತ್ರಗಳನ್ನು ತುಂಬಾ ಇಷ್ಟಪಟ್ಟಿದ್ದುಂಟು.
ಆಗ ಅನಿಸಿದ್ದನ್ನುಕವಿತೆಯಲ್ಲಿಹಿಡಿದಿಟ್ಟಿದ್ದೆ.ನಿಮ್ಮಲ್ಲೂ
ಕೆಲವರಿಗೆ ನವ್ಯ ಚಿತ್ರಗಳನ್ನು ನೋಡಿಹಾಗೆಯೇಅನಿಸಿರಬಹುದು
.ನವ್ಯ ಚಿತ್ರಕಾರರು ದಯವಿಟ್ಟು ಸಿಟ್ಟಾಗಬೇಡಿ.
ಇದುಶ್ರೀಸಾಮಾನ್ಯನೊಬ್ಬನ ಅನಿಸಿಕೆ ಎಂದು ನಕ್ಕುಬಿಡಿ;
-------------------------
'ನವ್ಯ ಕಲೆ '
-------------------------
ಡಾಳಾದ ಎರಡು ಗೆರೆ !
ಮಧ್ಯೆ ಕೆಂಪು ಬರೆ !
ಎತ್ತಲೋ ನೋಡುವ ಕಣ್ಣು!
ಅರ್ಥವೇ ಆಗುತ್ತಿಲ್ಲ ಮಣ್ಣು!
ಪಕ್ಕದಲ್ಲೇ ಒಂದಷ್ಟು ಮಸಿ !
ಅದಕ್ಕೇನೋ ಮಾಡಿದ್ದಾನೆ ಕಸಿ !
ಓ -----ಅಲ್ಲೆಲ್ಲೋ ಇದ್ದಾನೆ ಚಂದ್ರ !
ಇದನ್ನು ನೋಡೋಕೆ ನೀವೂ ಬಂದ್ರ !
ಆಕಾಶದಲ್ಲಿ ಯಾಕಿವೆ ಮೀನುಗಳು?
ಕೆಳಗೆ ಹರಿದಾಡುವ ಹಕ್ಕಿಗಳು !
ಕ್ಯಾನ್ವಾಸ್ ತುಂಬೆಲ್ಲಾ ಪುಕ್ಕಗಳು ;
ತಲೆ ಕೆಟ್ಟು ಕುಣಿಯುವ ಬಣ್ಣಗಳು !
ಇದೇನಾ ---------ನವ್ಯ ಕಲೆ !
ಇದು -----------ಕಲೆಯಲ್ಲ ,
ಹುಚ್ಚು ಹಿಡಿದ ತಲೆ !
ಪ್ರದರ್ಶನಕ್ಕೆಹೋಗಿದ್ದೆ.ಅಲ್ಲಿದ್ದ ನವ್ಯ ಚಿತ್ರವೊಂದು
ವಿಚಿತ್ರವಾಗಿತ್ತು.ಅದರತಲೆಬುಡಅರ್ಥವಾಗಲಿಲ್ಲ.
'ಇದನ್ನು ಕಲೆ ಅಂತ ಏಕೆ ಕರೆಯುತ್ತಾರೆ',ಎಂದು
ತಲೆ ಕೆರೆದುಕೊಂಡೆ! ಯಾರೋ ಸಣ್ಣ ಮಕ್ಕಳು
ಸಿಕ್ಕಿದ್ದನ್ನು ಗೀಚಿಅದಕ್ಕೆಸಿಕ್ಕಾಪಟ್ಟೆ ಬಣ್ಣ ಬಳಿದ ಹಾಗಿತ್ತು!
ಹಾಗೆಂದು ನವ್ಯ ಕಲೆಯನ್ನುನಾನುತಿರಸ್ಕಾರದಿಂದ
ಕಾಣುತ್ತೇನೆಂದು ತಪ್ಪು ತಿಳಿಯಬೇಡಿ. ಕೆಲವು
ನವ್ಯಚಿತ್ರಗಳನ್ನು ತುಂಬಾ ಇಷ್ಟಪಟ್ಟಿದ್ದುಂಟು.
ಆಗ ಅನಿಸಿದ್ದನ್ನುಕವಿತೆಯಲ್ಲಿಹಿಡಿದಿಟ್ಟಿದ್ದೆ.ನಿಮ್ಮಲ್ಲೂ
ಕೆಲವರಿಗೆ ನವ್ಯ ಚಿತ್ರಗಳನ್ನು ನೋಡಿಹಾಗೆಯೇಅನಿಸಿರಬಹುದು
.ನವ್ಯ ಚಿತ್ರಕಾರರು ದಯವಿಟ್ಟು ಸಿಟ್ಟಾಗಬೇಡಿ.
ಇದುಶ್ರೀಸಾಮಾನ್ಯನೊಬ್ಬನ ಅನಿಸಿಕೆ ಎಂದು ನಕ್ಕುಬಿಡಿ;
-------------------------
'ನವ್ಯ ಕಲೆ '
-------------------------
ಡಾಳಾದ ಎರಡು ಗೆರೆ !
ಮಧ್ಯೆ ಕೆಂಪು ಬರೆ !
ಎತ್ತಲೋ ನೋಡುವ ಕಣ್ಣು!
ಅರ್ಥವೇ ಆಗುತ್ತಿಲ್ಲ ಮಣ್ಣು!
ಪಕ್ಕದಲ್ಲೇ ಒಂದಷ್ಟು ಮಸಿ !
ಅದಕ್ಕೇನೋ ಮಾಡಿದ್ದಾನೆ ಕಸಿ !
ಓ -----ಅಲ್ಲೆಲ್ಲೋ ಇದ್ದಾನೆ ಚಂದ್ರ !
ಇದನ್ನು ನೋಡೋಕೆ ನೀವೂ ಬಂದ್ರ !
ಆಕಾಶದಲ್ಲಿ ಯಾಕಿವೆ ಮೀನುಗಳು?
ಕೆಳಗೆ ಹರಿದಾಡುವ ಹಕ್ಕಿಗಳು !
ಕ್ಯಾನ್ವಾಸ್ ತುಂಬೆಲ್ಲಾ ಪುಕ್ಕಗಳು ;
ತಲೆ ಕೆಟ್ಟು ಕುಣಿಯುವ ಬಣ್ಣಗಳು !
ಇದೇನಾ ---------ನವ್ಯ ಕಲೆ !
ಇದು -----------ಕಲೆಯಲ್ಲ ,
ಹುಚ್ಚು ಹಿಡಿದ ತಲೆ !
Sunday, April 18, 2010
'ಮರೆವು'
ಗಂಡ ಹೆಂಡತಿ ಇಬ್ಬರಿಗೂ ಸುಮಾರು ಎಂಬತ್ತೈದರ ವಯಸ್ಸು.
ವಯೋಗುಣಕ್ಕೆ ಸಹಜವಾಗಿ ಸಣ್ಣ ಪುಟ್ಟ ತೊಂದರೆಗಳಿದ್ದರೂ ಅವರಿಗಿದ್ದ ಬಹು ದೊಡ್ಡ ಸಮಸ್ಯೆ ಎಂದರೆ ಮರೆವು .
ಮರೆತು ಹೋಗಬಹುದದ್ದನ್ನು ಬರೆದಿಟ್ಟುಕೊಳ್ಳುವಂತೆ ಡಾಕ್ಟರ್ ಒಬ್ಬರು ಸಲಹೆ ನೀಡಿದರು .ಆದರೆ ಇಬ್ಬರೂ ತಮಗೆ ಮರೆವಿದೆಯೆಂದು ಒಪ್ಪಿಕೊಳ್ಳಲು ತಯಾರಿರಲಿಲ್ಲ .
ಗಂಡ 'ನನ್ನ ಹೆಂಡತಿಗೆ ತುಂಬಾ ಮರೆವು ಡಾಕ್ಟ್ರೆ'ಎಂದರೆ, ಹೆಂಡತಿ 'ಹಾಗೇನಿಲ್ಲಾ ಡಾಕ್ಟ್ರೆ ಅವರಿಗೇ ವಿಪರೀತ ಮರೆವು 'ಎಂದು ದಬಾಯಿಸುತ್ತಿದ್ದಳು .
ಒಂದು ಸಂಜೆ ಇಬ್ಬರೂ ಟಿ.ವಿ.ನೋಡುತ್ತಾ ಕುಳಿತಾಗ ಗಂಡ ಅಡಿಗೆ ಮನೆಗೆ ಹೋಗಲು ಎದ್ದುನಿಂತ .
ಹೆಂಡತಿ' ಯಾಕ್ರೀ ಎದ್ರಿ' ?ಎಂದಳು .ಗಂಡ 'ಅಡಿಗೆ ಮನೆಗೆ ,ನೀರು ಕುಡಿಯೋಕೆ 'ಎಂದ .
'ಹಾಗೇ ಅಡಿಗೆಮನೆ ಫ್ರಿಡ್ಜ್ ನಿಂದ ನನಗೊಂದು ಕೇಕ್ ತಂದುಕೊಡಿ .ಬರೆದಿಟ್ಟುಕೊಳ್ಳಿ ,ಮರೀತೀರ 'ಎಂದಳು ಹೆಂಡತಿ.
ಗಂಡನಿಗೆ ಸಿಟ್ಟು ಬಂತು . 'ಹೋಗೇ---ಹೋಗೇ ,ಅದನ್ನೆಲ್ಲಾ ಯಾರಾದರೂ ಬರೆದಿಟ್ಟು ಕೊಳ್ಳುತ್ತಾರಾ ,ನೀ ಹೇಳಿದ ಕೇಕ್ ಮರೀದೆ ತರ್ತೀನಿ,ನೋಡ್ತಾ ಇರು 'ಎಂದು ನಿಧಾನವಾಗಿ ಅಡಿಗೆ ಮನೆಗೆ ಹೋದ .
ಅರ್ಧ ಗಂಟೆಯ ನಂತರ ಬ್ರೆಡ್ ಟೋಸ್ಟ್ ಇದ್ದ ಪ್ಲೇಟ್ ಒಂದನ್ನು ಕೈಯಲ್ಲಿ ಹಿಡಿದು ಬಂದು, 'ನೋಡು ,ನೀನು ಹೇಳಿದ ಬ್ರೆಡ್ ಟೋಸ್ಟ್ ಜ್ಞಾಪಕ ಇಟ್ಟು ಕೊಂಡು ತಂದಿಲ್ವಾ ?ಸುಮ್ನೆ ಮರೆವೂ ,ಮರೆವೂ ಅಂತೀಯ', ಎಂದ .
ಹೆಂಡತಿ ಆಶ್ಚರ್ಯದಿಂದ 'ಹೌದಲ್ರೀ ನಿಮ್ಮ ನೆನಪಿನ ಶಕ್ತಿ ಚೆನ್ನಾಗೆ ಇದೆ !ನಾನು ಹೇಳಿದ್ದು ಬ್ರೆಡ್ ಟೋಸ್ಟೇ 'ಎಂದು ಒಪ್ಪಿಕೊಂಡಳು.
'ನೋಡಿದ್ಯಾ ,ನೆನಪಿಟ್ಟುಕೊಂಡು ನಿನಗೆ ಬ್ರೆಡ್ ಟೋಸ್ಟ್ ತಂದಿದ್ದಲ್ಲದೇ ನಾನು ಕುಡಿಯೋಕೆ ಅಂತ ಹೋಗಿದ್ದ ಕಾಫಿಯನ್ನೂ ಮರೀದೆ ಮಾಡಿ ಕುಡಿದು ಬಂದೆ ',ಎಂದು ಗಂಡ ಜಂಬ ಕೊಚ್ಚಿಕೊಂಡ !!!
Thursday, April 15, 2010
'ಬಾಲ್ಯ'
ಬಾಲ್ಯದ --------ಕನಸುಗಳು ,
ಈ ನಡು ವಯಸ್ಸಿನ ಮಧ್ಯಾಹ್ನದ
ಕನವರಿಕೆಗಳು -----------!
ಚಿಂತೆ ಸಂತಾಪಗಳ ಉರಿಬಿಸಿಲಿಗೆ ,
ಐಸ್ ಕ್ಯಾಂಡಿ ಮಾರುವ ಗಾಡಿಯೊಳಗಿನ,
ಬಣ್ಣ ,ಬಣ್ಣದ ,ತಣ್ಣಗಿನ -----ಐಸು!
ಹುಡುಗಿಯರ ಜಾಮಿಟ್ರಿ ಬಾಕ್ಸಿನ ,
ಹುಣಿಸೇ ಕಾಯಿ ,ಹುಣಿಸೇ ಚಿಗುರುಗಳ ,
ಹುಳಿ,ಹುಳೀ ------------ಒಗರು !
ನೆನಸಿ ಕೊಂಡರೇ------ಮೈ ನವಿರು !
ಬಣ್ಣ ,ಬಣ್ಣದ ಗೋಲಿಗಳ ಕದಪಿನ ,
ನುಣುಪಿನ ,ಮಿರಿ ,ಮಿರಿ ,ಮಿಂಚು !
ನಾ ಓಡಿಸುತ್ತಿದ್ದ ಸವೆದ ,
ಸೈಕಲ್ ಟೈರಿನ ಅಂಚು !
ಓಡುತ್ತಲೇ ಇರುತ್ತದೆ ,
ಬದುಕಿನಾಚೆಗೂ --------!
ಹಾರುತ್ತವೆ ------ದಿಗಂತದಾಚೆಗೂ !
ನಾ ಬಿಟ್ಟ ಗಾಳಿ ಪಟಗಳಂತೆ !
ಚಿನ್ನಿ ದಾಂಡು ,ಲಗೋರಿ ,ಕಬಡ್ಡಿ !
ಒಂದೇ ,ಎರಡೇ ?ಕನವರಿಸಲೇನಡ್ಡಿ?
ಹೇ ------------ಬದುಕೇ ,
ನೀ ಮತ್ತೆ ನೀಡಬಲ್ಲೆಯಾ ?
ಕಳೆದು -----------ಹೋದ ,
ಆ -------ನನ್ನ ಬಾಲ್ಯ !
ಈ ನಡು ವಯಸ್ಸಿನ ಮಧ್ಯಾಹ್ನದ
ಕನವರಿಕೆಗಳು -----------!
ಚಿಂತೆ ಸಂತಾಪಗಳ ಉರಿಬಿಸಿಲಿಗೆ ,
ಐಸ್ ಕ್ಯಾಂಡಿ ಮಾರುವ ಗಾಡಿಯೊಳಗಿನ,
ಬಣ್ಣ ,ಬಣ್ಣದ ,ತಣ್ಣಗಿನ -----ಐಸು!
ಹುಡುಗಿಯರ ಜಾಮಿಟ್ರಿ ಬಾಕ್ಸಿನ ,
ಹುಣಿಸೇ ಕಾಯಿ ,ಹುಣಿಸೇ ಚಿಗುರುಗಳ ,
ಹುಳಿ,ಹುಳೀ ------------ಒಗರು !
ನೆನಸಿ ಕೊಂಡರೇ------ಮೈ ನವಿರು !
ಬಣ್ಣ ,ಬಣ್ಣದ ಗೋಲಿಗಳ ಕದಪಿನ ,
ನುಣುಪಿನ ,ಮಿರಿ ,ಮಿರಿ ,ಮಿಂಚು !
ನಾ ಓಡಿಸುತ್ತಿದ್ದ ಸವೆದ ,
ಸೈಕಲ್ ಟೈರಿನ ಅಂಚು !
ಓಡುತ್ತಲೇ ಇರುತ್ತದೆ ,
ಬದುಕಿನಾಚೆಗೂ --------!
ಹಾರುತ್ತವೆ ------ದಿಗಂತದಾಚೆಗೂ !
ನಾ ಬಿಟ್ಟ ಗಾಳಿ ಪಟಗಳಂತೆ !
ಚಿನ್ನಿ ದಾಂಡು ,ಲಗೋರಿ ,ಕಬಡ್ಡಿ !
ಒಂದೇ ,ಎರಡೇ ?ಕನವರಿಸಲೇನಡ್ಡಿ?
ಹೇ ------------ಬದುಕೇ ,
ನೀ ಮತ್ತೆ ನೀಡಬಲ್ಲೆಯಾ ?
ಕಳೆದು -----------ಹೋದ ,
ಆ -------ನನ್ನ ಬಾಲ್ಯ !
Monday, April 12, 2010
ಸೈಕಲ್ ಹಿಂದಿನ ಚಕ್ರ ---ತಿರುಗುತ್ತಲೇ ಇತ್ತು !
{ಚೆನ್ನೈನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಸ್ನೇಹಿತನೊಬ್ಬನ ಕ್ಲಿನಿಕ್ ನಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಡೆದ ನೈಜ ಘಟನೆಯನ್ನು ಆಧರಿಸಿದ್ದು }
ಆ ದಿನ ಸಂಜೆ ಸುಮಾರು ಐದೂವರೆ ಆಗಿತ್ತು .ಕ್ಲಿನಿಕ್ಕಿನಲ್ಲಿ ಹೆಚ್ಚು ರೋಗಿಗಳಿರಲಿಲ್ಲ .ಒಳಗಿನ ಪರೀಕ್ಷಾ ಕೋಣೆಯಲ್ಲಿ ರೋಗಿಯೊಬ್ಬನನ್ನು ಪರೀಕ್ಷೆ ಮಾಡಿ ಹೊರಗೆ ಬಂದೆ .ಆಗ ತಾನೇ ಬಂದಿದ್ದಆರಡಿಯ,ಧಡೂತಿದೇಹದ,ಮೈಯೆಲ್ಲಾ ಬೆವರಿನಿಂದ ತೋಯ್ದು ತೊಪ್ಪೆಯಾಗಿದ್ದ ವ್ಯಕ್ತಿಯೊಬ್ಬ 'ತುಂಬಾ ಎದೆ ನೋವು ಡಾಕ್ಟರ್ ',ಎನ್ನುತ್ತಾ ,ಎದೆಯನ್ನು ಕೈಯಲ್ಲಿ ಹಿಡಿದು ಕೊಂಡೇ,ಕಡಿದು ಬಿದ್ದ ದೊಡ್ಡದೊಂದು ಮರದಂತೆ ,ಧೊಪ್ಪೆಂದು ಬಿದ್ದ.ಹೃದಯದ ಬಡಿತ ಮತ್ತು ಉಸಿರಾಟ ಸಂಪೂರ್ಣವಾಗಿ ನಿಂತಿತ್ತು .ಅವನ ಜೊತೆ ಯಾರಾದರೂ ಬಂದಿದ್ದಾರೆಯೇ ಎಂದು ನೋಡಲು ಕ್ಲಿನಿಕ್ಕಿನ ಹೊರಗೆ ಬಂದೆ .ಆ ವ್ಯಕ್ತಿ ಸ್ಟ್ಯಾಂಡ್ ಹಾಕಿ ನಿಲ್ಲಿಸಿದ್ದ ಸೈಕಲ್ ಅಲ್ಲಿತ್ತು.ಸೈಕಲ್ಲಿನ ಹಿಂದಿನ ಚಕ್ರ ಇನ್ನೂ ತಿರುಗುತ್ತಲೇ ಇತ್ತು ! ಕ್ಯಾರಿಯರ್ರಿನಲ್ಲಿದ್ದ ಕೈ ಚೀಲ ಕೆಳಗೆಬಿದ್ದು ,ಅದರಲ್ಲಿದ್ದ ತರಕಾರಿ ,ಹೂವು ,ಹಣ್ಣು ಮತ್ತು ಎರಡು ಪ್ಲಾಸ್ಟಿಕ್ ಗೊಂಬೆಗಳು, ಫುಟ್ ಪಾತ್ ನಲ್ಲಿ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು !
ಆ ದಿನ ಸಂಜೆ ಸುಮಾರು ಐದೂವರೆ ಆಗಿತ್ತು .ಕ್ಲಿನಿಕ್ಕಿನಲ್ಲಿ ಹೆಚ್ಚು ರೋಗಿಗಳಿರಲಿಲ್ಲ .ಒಳಗಿನ ಪರೀಕ್ಷಾ ಕೋಣೆಯಲ್ಲಿ ರೋಗಿಯೊಬ್ಬನನ್ನು ಪರೀಕ್ಷೆ ಮಾಡಿ ಹೊರಗೆ ಬಂದೆ .ಆಗ ತಾನೇ ಬಂದಿದ್ದಆರಡಿಯ,ಧಡೂತಿದೇಹದ,ಮೈಯೆಲ್ಲಾ ಬೆವರಿನಿಂದ ತೋಯ್ದು ತೊಪ್ಪೆಯಾಗಿದ್ದ ವ್ಯಕ್ತಿಯೊಬ್ಬ 'ತುಂಬಾ ಎದೆ ನೋವು ಡಾಕ್ಟರ್ ',ಎನ್ನುತ್ತಾ ,ಎದೆಯನ್ನು ಕೈಯಲ್ಲಿ ಹಿಡಿದು ಕೊಂಡೇ,ಕಡಿದು ಬಿದ್ದ ದೊಡ್ಡದೊಂದು ಮರದಂತೆ ,ಧೊಪ್ಪೆಂದು ಬಿದ್ದ.ಹೃದಯದ ಬಡಿತ ಮತ್ತು ಉಸಿರಾಟ ಸಂಪೂರ್ಣವಾಗಿ ನಿಂತಿತ್ತು .ಅವನ ಜೊತೆ ಯಾರಾದರೂ ಬಂದಿದ್ದಾರೆಯೇ ಎಂದು ನೋಡಲು ಕ್ಲಿನಿಕ್ಕಿನ ಹೊರಗೆ ಬಂದೆ .ಆ ವ್ಯಕ್ತಿ ಸ್ಟ್ಯಾಂಡ್ ಹಾಕಿ ನಿಲ್ಲಿಸಿದ್ದ ಸೈಕಲ್ ಅಲ್ಲಿತ್ತು.ಸೈಕಲ್ಲಿನ ಹಿಂದಿನ ಚಕ್ರ ಇನ್ನೂ ತಿರುಗುತ್ತಲೇ ಇತ್ತು ! ಕ್ಯಾರಿಯರ್ರಿನಲ್ಲಿದ್ದ ಕೈ ಚೀಲ ಕೆಳಗೆಬಿದ್ದು ,ಅದರಲ್ಲಿದ್ದ ತರಕಾರಿ ,ಹೂವು ,ಹಣ್ಣು ಮತ್ತು ಎರಡು ಪ್ಲಾಸ್ಟಿಕ್ ಗೊಂಬೆಗಳು, ಫುಟ್ ಪಾತ್ ನಲ್ಲಿ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು !
Sunday, April 11, 2010
ಪತ್ತೆಯಾದರೆ ,ತಿಳಿಸಿ ----ಪ್ಲೀಸ್ !
ನಮ್ಮ ಮನದ ಅಹಂಕಾರದ
ಗಂಟುಗಳ------ ಬಿಡಿಸಿ ,
ದಶಕಗಳ ಕೊಳೆಯ
ತಿಕ್ಕಿ-------- ತೊಳೆದು
ಶುದ್ಧ ಗೊಳಿಸಿ -----,
ಮಡಿಕೆ ಮಡಿಕೆಗಳ ತೆಗೆದು ,
ಸುಕ್ಕುಗಳ ತಿದ್ದಿ ತೀಡಿ ,
ನೀಟಾಗಿ ,ಗರಿ ಗರಿಯಾಗಿ
ಇಸ್ತ್ರಿ ಮಾಡಿ ----------,
ಮುಗ್ಧತೆಯ ಶುಭ್ರತೆಯ ಸೂಸುವ ,
ಮಗುವಿನ ಮನವಾಗಿ ಮಾರ್ಪಡಿಸುವ ,
ದೋಬಿಯ ----ವಿಳಾಸ ,
ಎಲ್ಲೆಂದು -----ಹುಡುಕುತ್ತಿದ್ದೇನೆ !
ಪತ್ತೆಯಾದರೆ ---------,
ತಿಳಿಸಿ --------ಪ್ಲೀಸ್ !
ಗಂಟುಗಳ------ ಬಿಡಿಸಿ ,
ದಶಕಗಳ ಕೊಳೆಯ
ತಿಕ್ಕಿ-------- ತೊಳೆದು
ಶುದ್ಧ ಗೊಳಿಸಿ -----,
ಮಡಿಕೆ ಮಡಿಕೆಗಳ ತೆಗೆದು ,
ಸುಕ್ಕುಗಳ ತಿದ್ದಿ ತೀಡಿ ,
ನೀಟಾಗಿ ,ಗರಿ ಗರಿಯಾಗಿ
ಇಸ್ತ್ರಿ ಮಾಡಿ ----------,
ಮುಗ್ಧತೆಯ ಶುಭ್ರತೆಯ ಸೂಸುವ ,
ಮಗುವಿನ ಮನವಾಗಿ ಮಾರ್ಪಡಿಸುವ ,
ದೋಬಿಯ ----ವಿಳಾಸ ,
ಎಲ್ಲೆಂದು -----ಹುಡುಕುತ್ತಿದ್ದೇನೆ !
ಪತ್ತೆಯಾದರೆ ---------,
ತಿಳಿಸಿ --------ಪ್ಲೀಸ್ !
Friday, April 9, 2010
'ಬ್ಲಾಗಿನ ಚಾವಡಿಗೆ--------- ಸ್ವಾಗತ'
ಬ್ಲಾಗಿನ ------ಚಾರಣಿಗರೇ!
ಹೀಗೇ ಬನ್ನಿ --------ಇಲ್ಲೇ ,
ಸ್ವಲ್ಪ ವಿರಮಿಸಿಕೊಳ್ಳಿ
ಈ ನನ್ನ --------ಚಾವಡಿಯಲ್ಲಿ !
ಕಷ್ಟಗಳ ಬೆಟ್ಟವೇರಿ ಸುಸ್ತೆ ?
ಚಿಂತೆಯ 'ಬ್ಯಾಕ್ ಪ್ಯಾಕ್' '
ಕೆಳಗಿಳಿಸಿ ----ಹಾಂ --ಹಾಗೆ.
ಕುಳಿತುಕೊಳ್ಳಿ ---ಇಲ್ಲೇ !
'ಕೊಳಲ'ನೂದಲೇ? ,ಗಾಳಿ ಬೀಸಲೇ ?
ಬೇಸರವ ಬದಿಗಿರಿಸಿ ,ನಕ್ಕುಬಿಡಿ ಒಮ್ಮೆ !
ಹಾಗೇ ಇರಿ ಒಂದು ಚಣ !
ಈ ಕ್ಷಣದ ಕ್ಯಾಮರಾದಲ್ಲಿ ಕ್ಲಿಕ್ಕಿಸಿ ,
ನೆನಪಿನ ಫೋಟೋಗಳನ್ನು
ಕೊಟ್ಟುಬಿಡುತ್ತೇನೆ ನಿಮಗೇ!
ಏನು ಕುಡಿಯುತ್ತೀರಿ ಆಸರೆಗೆ ?
ಹನಿಗವನಗಳ ಪಾನಕವೇ ?
ಕವಿತೆಗಳ ಎಳನೀರೆ?
ಅನಿಸಿಕೆಗಳ ಮಜ್ಜಿಗೆಯೇ ?
ಎಲ್ಲವೂ ಇದೆ ಇಲ್ಲಿ !
ಧನ್ಯವಾದಗಳು ಬಂದಿದ್ದಕ್ಕೆ !
ಮತ್ತೆ ಬನ್ನಿ ಮರೆಯದೇ,
ಈ ನನ್ನ ಬ್ಲಾಗಿನ ----ಚಾವಡಿಗೆ !
ಹೀಗೇ ಬನ್ನಿ --------ಇಲ್ಲೇ ,
ಸ್ವಲ್ಪ ವಿರಮಿಸಿಕೊಳ್ಳಿ
ಈ ನನ್ನ --------ಚಾವಡಿಯಲ್ಲಿ !
ಕಷ್ಟಗಳ ಬೆಟ್ಟವೇರಿ ಸುಸ್ತೆ ?
ಚಿಂತೆಯ 'ಬ್ಯಾಕ್ ಪ್ಯಾಕ್' '
ಕೆಳಗಿಳಿಸಿ ----ಹಾಂ --ಹಾಗೆ.
ಕುಳಿತುಕೊಳ್ಳಿ ---ಇಲ್ಲೇ !
'ಕೊಳಲ'ನೂದಲೇ? ,ಗಾಳಿ ಬೀಸಲೇ ?
ಬೇಸರವ ಬದಿಗಿರಿಸಿ ,ನಕ್ಕುಬಿಡಿ ಒಮ್ಮೆ !
ಹಾಗೇ ಇರಿ ಒಂದು ಚಣ !
ಈ ಕ್ಷಣದ ಕ್ಯಾಮರಾದಲ್ಲಿ ಕ್ಲಿಕ್ಕಿಸಿ ,
ನೆನಪಿನ ಫೋಟೋಗಳನ್ನು
ಕೊಟ್ಟುಬಿಡುತ್ತೇನೆ ನಿಮಗೇ!
ಏನು ಕುಡಿಯುತ್ತೀರಿ ಆಸರೆಗೆ ?
ಹನಿಗವನಗಳ ಪಾನಕವೇ ?
ಕವಿತೆಗಳ ಎಳನೀರೆ?
ಅನಿಸಿಕೆಗಳ ಮಜ್ಜಿಗೆಯೇ ?
ಎಲ್ಲವೂ ಇದೆ ಇಲ್ಲಿ !
ಧನ್ಯವಾದಗಳು ಬಂದಿದ್ದಕ್ಕೆ !
ಮತ್ತೆ ಬನ್ನಿ ಮರೆಯದೇ,
ಈ ನನ್ನ ಬ್ಲಾಗಿನ ----ಚಾವಡಿಗೆ !
Thursday, April 8, 2010
ಡುಂಡಿಯವರ 'ಡಿಂಡಿಮ'
ಸನ್ಮಾನ್ಯ ಡುಂಡಿರಾಜ್ಅವರ ಹನಿಗವಿತೆಗಳನ್ನು ನಾನು
ತುಂಬಾ ಇಷ್ಟಪಡುತ್ತೇನೆ .ಡುಂಡಿಯವರ ಡಿಂಡಿಮ ಎನ್ನುವ
ಅಂಕಣದಲ್ಲಿ ಅವರ ಹನಿಗವನಗಳ ಸವಿಯನ್ನು ನನ್ನ ಸಹ
ಬ್ಲಾಗಿಗರೊಡನೆ ಹಂಚಿಕೊಳ್ಳುವ ಇಷ್ಟ .ಇಲ್ಲಿವೆ ನೋಡಿ
ಅವರ ಕೆಲ ಹನಿಗಳು :
1.} ನದಿ ದಾಟಲು ತೆಪ್ಪ ಇರಬೇಕು
ಸಂಸಾರ ಶರಧಿ ದಾಟಲು
ತೆಪ್ಪಗಿರಬೇಕು !
2.}ಕರಾವಳಿಯಲ್ಲಿ ಈ ಬಾರಿ
ಎಂಥಾ ಸೆಕೆ ಅಂತೀರಿ
ಸಾಲದ್ದಕ್ಕೆ ಪವರ್ ಕಟ್ಟು
ಜನರೆಲ್ಲಾ ಬೆವರ್ ಬಿಟ್ಟು
ನೇತ್ರಾವತಿ ,ಸ್ವರ್ಣಾ ,ಸೀತಾ
ನೀರೆಲ್ಲ ಬೆವರು ನಾತ
ಹೊಳೆಯಾಗಿ ಹರಿದು ಬೆವರು
ಉಪ್ಪಾಗಿದೆ ಸಮುದ್ರದ ನೀರು !
3} ಮದುವೆ ಮಂಟಪದಲ್ಲಿ
ಧರ್ಮೇಚ ,ಅರ್ಥೆಚ ----
ಅನ್ನುತ್ತಾ ಹೆಜ್ಜೆ ಹಾಕುವುದು
ಸಪ್ತ ಪದಿ
ಆಮೇಲೆ ಇನ್ನಾರದೋ ಜತೆ
ಗುಟ್ಟಾಗಿ ತಿರುಗುವುದು
ಸುಪ್ತಪದಿ !
4} ಒಳ್ಳೆ ಗುಣ
ಎಲ್ಲೇ ಇದ್ದರೂ
ಬದಲಾಗುವುದಿಲ್ಲ .
ಬೇವಿನ ಕಹಿ ಮರೆಸಿ
ಅದಕ್ಕೂ ಸಿಹಿ ಬೆರಸಿ
ನಗುತ್ತದೆ ಬೆಲ್ಲ !
5}ಆಚಾರಕ್ಕೂ ವಿಚಾರಕ್ಕೂ
ಅತ್ಯಲ್ಪ ಅಂತರ
ಆಚಾರದಲ್ಲಿ 'ಆ 'ಕಾರವಿದ್ದರೆ
ವಿಚಾರದಲ್ಲಿ ವಿಕಾರ !
6}ಇಂಗಿ ಹೋದಳು
ಸರಸ್ವತಿ ನದಿ
ಮಣ್ಣಲ್ಲಿ .
ಸೇರಿಕೊಂಡಳು
ಹೆಂಗಸರ
ಕಣ್ಣಲ್ಲಿ !
7}ಬದುಕಿನ ಬಂಡಿಯಲ್ಲಿ
ಗಂಡನ ಕೈಯಲ್ಲಿ
ವೇಗ ವರ್ಧಕ
ಇದ್ದರೆ ಸಾಕಾ?
ಹೆಂಡತಿಯೂ ಬೇಕು
ಏಕೆಂದರೆ
ಅವಳು ಬ್ರೇಕು !
8}ಸುತ್ತುತ್ತಾರೆ ಹುಡುಗರು
ಸದಾ ಹುಡುಗಿಯರ ಹಿಂದೆ .
ಆದ್ದರಿಂದಲೇ
ಫಲಿತಾಂಶದಲ್ಲಿ
ಹುಡುಗಿಯರೇ
ಮುಂದೆ .
9}ಗಾಂಧಿ ತತ್ವವನ್ನು
ಮರೆತಿಲ್ಲ ನಾವು
ಕೊಂಚ ಬದಲಾವಣೆ ಆಗಿದೆ .
ಅಹಿಂಸೆಯಿಂದ
'ಅ 'ತೆಗೆದು
ಸತ್ಯಕ್ಕೆ ಅಂಟಿಸಲಾಗಿದೆ !
ತುಂಬಾ ಇಷ್ಟಪಡುತ್ತೇನೆ .ಡುಂಡಿಯವರ ಡಿಂಡಿಮ ಎನ್ನುವ
ಅಂಕಣದಲ್ಲಿ ಅವರ ಹನಿಗವನಗಳ ಸವಿಯನ್ನು ನನ್ನ ಸಹ
ಬ್ಲಾಗಿಗರೊಡನೆ ಹಂಚಿಕೊಳ್ಳುವ ಇಷ್ಟ .ಇಲ್ಲಿವೆ ನೋಡಿ
ಅವರ ಕೆಲ ಹನಿಗಳು :
1.} ನದಿ ದಾಟಲು ತೆಪ್ಪ ಇರಬೇಕು
ಸಂಸಾರ ಶರಧಿ ದಾಟಲು
ತೆಪ್ಪಗಿರಬೇಕು !
2.}ಕರಾವಳಿಯಲ್ಲಿ ಈ ಬಾರಿ
ಎಂಥಾ ಸೆಕೆ ಅಂತೀರಿ
ಸಾಲದ್ದಕ್ಕೆ ಪವರ್ ಕಟ್ಟು
ಜನರೆಲ್ಲಾ ಬೆವರ್ ಬಿಟ್ಟು
ನೇತ್ರಾವತಿ ,ಸ್ವರ್ಣಾ ,ಸೀತಾ
ನೀರೆಲ್ಲ ಬೆವರು ನಾತ
ಹೊಳೆಯಾಗಿ ಹರಿದು ಬೆವರು
ಉಪ್ಪಾಗಿದೆ ಸಮುದ್ರದ ನೀರು !
3} ಮದುವೆ ಮಂಟಪದಲ್ಲಿ
ಧರ್ಮೇಚ ,ಅರ್ಥೆಚ ----
ಅನ್ನುತ್ತಾ ಹೆಜ್ಜೆ ಹಾಕುವುದು
ಸಪ್ತ ಪದಿ
ಆಮೇಲೆ ಇನ್ನಾರದೋ ಜತೆ
ಗುಟ್ಟಾಗಿ ತಿರುಗುವುದು
ಸುಪ್ತಪದಿ !
4} ಒಳ್ಳೆ ಗುಣ
ಎಲ್ಲೇ ಇದ್ದರೂ
ಬದಲಾಗುವುದಿಲ್ಲ .
ಬೇವಿನ ಕಹಿ ಮರೆಸಿ
ಅದಕ್ಕೂ ಸಿಹಿ ಬೆರಸಿ
ನಗುತ್ತದೆ ಬೆಲ್ಲ !
5}ಆಚಾರಕ್ಕೂ ವಿಚಾರಕ್ಕೂ
ಅತ್ಯಲ್ಪ ಅಂತರ
ಆಚಾರದಲ್ಲಿ 'ಆ 'ಕಾರವಿದ್ದರೆ
ವಿಚಾರದಲ್ಲಿ ವಿಕಾರ !
6}ಇಂಗಿ ಹೋದಳು
ಸರಸ್ವತಿ ನದಿ
ಮಣ್ಣಲ್ಲಿ .
ಸೇರಿಕೊಂಡಳು
ಹೆಂಗಸರ
ಕಣ್ಣಲ್ಲಿ !
7}ಬದುಕಿನ ಬಂಡಿಯಲ್ಲಿ
ಗಂಡನ ಕೈಯಲ್ಲಿ
ವೇಗ ವರ್ಧಕ
ಇದ್ದರೆ ಸಾಕಾ?
ಹೆಂಡತಿಯೂ ಬೇಕು
ಏಕೆಂದರೆ
ಅವಳು ಬ್ರೇಕು !
8}ಸುತ್ತುತ್ತಾರೆ ಹುಡುಗರು
ಸದಾ ಹುಡುಗಿಯರ ಹಿಂದೆ .
ಆದ್ದರಿಂದಲೇ
ಫಲಿತಾಂಶದಲ್ಲಿ
ಹುಡುಗಿಯರೇ
ಮುಂದೆ .
9}ಗಾಂಧಿ ತತ್ವವನ್ನು
ಮರೆತಿಲ್ಲ ನಾವು
ಕೊಂಚ ಬದಲಾವಣೆ ಆಗಿದೆ .
ಅಹಿಂಸೆಯಿಂದ
'ಅ 'ತೆಗೆದು
ಸತ್ಯಕ್ಕೆ ಅಂಟಿಸಲಾಗಿದೆ !
Wednesday, April 7, 2010
ನಾವು -------ಮಧ್ಯಮ ವರ್ಗ!
ನಾವು ಮಧ್ಯಮ ವರ್ಗ !
ಆರಕ್ಕೇರದೆ ,ಮೂರಕ್ಕಿಳಿಯದೆ
ನಾಲಕ್ಕರಲ್ಲೇ ನಮ್ಮ ಸರ್ಕಸ್ !
ಯಾರೋ ಕೊಂಡ ------,
ನಲವತ್ತು ಲಕ್ಷದ ಫ್ಲಾಟ್
ನಮಗೆ ------- ದುಬಾರಿ !
ಆದರೇನು ಮಾಡೋಣ ?
ಅದೇ ನೆನಪಿಗೆ ಬರುತ್ತಲ್ಲ ಹಾಳು,
ಮತ್ತೆ ಮತ್ತೆ ,ಬಾರಿ ಬಾರಿ !
ಮತ್ತೆ ಮತ್ತೆ ರಿಪೀಟ್ ಆಯಿತೇ?
ಕ್ಷಮಿಸಿ ,ನಮ್ಮ ತೊಂದರೆಗಳೂ ಹಾಗೇ!
ಮತ್ತೆ ,ಮತ್ತೆ ಮರುಕಳಿಸುತ್ತವೆ !
ಕಷ್ಟಗಳು ನಮ್ಮನ್ನು ಮುಕ್ಕಳಿಸುತ್ತವೆ!
ನಾವು ಮಧ್ಯಮ ವರ್ಗ !
ನಮ್ಮ ಬಾಳೋ --------,
ತ್ರಿಶಂಕು -------ಸ್ವರ್ಗ !
ಆರಕ್ಕೇರದೆ ,ಮೂರಕ್ಕಿಳಿಯದೆ
ನಾಲಕ್ಕರಲ್ಲೇ ನಮ್ಮ ಸರ್ಕಸ್ !
ಯಾರೋ ಕೊಂಡ ------,
ನಲವತ್ತು ಲಕ್ಷದ ಫ್ಲಾಟ್
ನಮಗೆ ------- ದುಬಾರಿ !
ಆದರೇನು ಮಾಡೋಣ ?
ಅದೇ ನೆನಪಿಗೆ ಬರುತ್ತಲ್ಲ ಹಾಳು,
ಮತ್ತೆ ಮತ್ತೆ ,ಬಾರಿ ಬಾರಿ !
ಮತ್ತೆ ಮತ್ತೆ ರಿಪೀಟ್ ಆಯಿತೇ?
ಕ್ಷಮಿಸಿ ,ನಮ್ಮ ತೊಂದರೆಗಳೂ ಹಾಗೇ!
ಮತ್ತೆ ,ಮತ್ತೆ ಮರುಕಳಿಸುತ್ತವೆ !
ಕಷ್ಟಗಳು ನಮ್ಮನ್ನು ಮುಕ್ಕಳಿಸುತ್ತವೆ!
ನಾವು ಮಧ್ಯಮ ವರ್ಗ !
ನಮ್ಮ ಬಾಳೋ --------,
ತ್ರಿಶಂಕು -------ಸ್ವರ್ಗ !
Tuesday, April 6, 2010
ಕನ್ನಡಮ್ಮನ -------ಅಳಲು!
ಮೊನ್ನೆ ವಿ .ಆರ್.ಭಟ್ ಅವರ ಬ್ಲಾಗಿನಲ್ಲಿ 'ಕನ್ನಡಮ್ಮನ ಕೈ ತುತ್ತು' ಎನ್ನುವ ಕವಿತೆ ಓದಿ ,ಕೆಲ ವರ್ಷಗಳ ಹಿಂದೆ ನಡೆದ ಮನ ಮಿಡಿಯುವ ಘಟನೆ ನೆನಪಿಗೆ ಬಂತು.ಬೆಂಗಳೂರಿನ ಸಿಟಿ ರೈಲ್ವೆ ನಿಲ್ದಾಣದಲ್ಲಿ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ನನ್ನ ಟ್ರೈನಿಗಾಗಿ ಕಾಯುತ್ತಿದ್ದೆ.ಹಳ್ಳಿಹೆಂಗಸೊಬ್ಬಳುತನ್ನಎರಡುಮಕ್ಕಳನ್ನುಕಟ್ಟಿಕೊಂಡು, ಕಂಡ ಕಂಡವರನ್ನು ,'ಯಪ್ಪಾ ನಿಮಗೆ ಕನ್ನಡ ತಿಳೀತೈತೆನ್ರಿ'ಎಂದು ದೈನ್ಯದಿಂದ ಕೇಳುತ್ತಿದ್ದಳು.ನಾನು ಅವಳನ್ನು ಕನ್ನಡದಲ್ಲಿ ಮಾತಾಡಿಸಿದಾಗ ಅವಳ ಮುಖ ನಿಧಿ ಸಿಕ್ಕಂತೆ ಅರಳಿತು.'ಏನ್ಮಾಡೋದ್ರೀ ಯಪ್ಪಾ ,ಇಲ್ಲಿ ಯಾರಿಗೂ ಕನ್ನಡ ತಿಳೀವಲ್ತು!ಹೊಸಪೇಟಿ ಬಂಡಿ ಎಲ್ಲಿ ಬರತೈತ್ರೀ ?'ಎಂದಳು.ಅವಳಿಗೆ ಅವಳು ಹೋಗಬೇಕಾದ ಪ್ಲಾಟ್ ಫಾರಂ ತೋರಿಸಿ ಬಂದೆ. 'ನಿನ್ನ ಮಕ್ಳಿಗೆ ಪುಣ್ಯ ಬರಲಿರೀ ಯಪ್ಪಾ 'ಎಂದು ಬೀಳ್ಕೊಟ್ಟಳು.ಈ ಘಟನೆ ನಡೆದದ್ದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ!ಇದನ್ನು' ಕನ್ನಡಮ್ಮನ ಅಳಲು ಎನ್ನೋಣವೇ?
Monday, April 5, 2010
ಮಾತಿನ ಕಲ್ಲು --------ಬೀರುವ ಮುನ್ನ!
ಒಡೆದ ಮನಸ್ಸಿನ ,
ಕನ್ನಡಿಯೊಳಗಿರುವ ,
ಬಿರುಕುಗಳ ಗಡಿಯಾಚೆ
ಕಂಡ ಸಂಬಧಗಳು
ಛಿನ್ನಾ------- ಛಿದ್ರ!
ಕನ್ನಡಿ ಒಡೆದರೆ
ಬಿಂಬಗಳೂ ಚೂರು ಚೂರು !
ಒಡೆದು ವಿಕೃತ ಗೊಂಡ
ಮನಕ್ಕೆ -------------,
ಕಂಡಿದ್ದೆಲ್ಲಾ ------ವಿಕೃತ !
ಆದ್ದರಿಂದ------------,
ಮಾತಿನ ಕಲ್ಲು ಬೀರುವ ಮುನ್ನ ,
ಮನಸ್ಸು ಕನ್ನಡಿಯಂತೆ
ಎಂಬ ------------,
ಎಚ್ಚರವಿರಲಿ ----------!
ಕನ್ನಡಿಯೊಳಗಿರುವ ,
ಬಿರುಕುಗಳ ಗಡಿಯಾಚೆ
ಕಂಡ ಸಂಬಧಗಳು
ಛಿನ್ನಾ------- ಛಿದ್ರ!
ಕನ್ನಡಿ ಒಡೆದರೆ
ಬಿಂಬಗಳೂ ಚೂರು ಚೂರು !
ಒಡೆದು ವಿಕೃತ ಗೊಂಡ
ಮನಕ್ಕೆ -------------,
ಕಂಡಿದ್ದೆಲ್ಲಾ ------ವಿಕೃತ !
ಆದ್ದರಿಂದ------------,
ಮಾತಿನ ಕಲ್ಲು ಬೀರುವ ಮುನ್ನ ,
ಮನಸ್ಸು ಕನ್ನಡಿಯಂತೆ
ಎಂಬ ------------,
ಎಚ್ಚರವಿರಲಿ ----------!
Saturday, April 3, 2010
ಎದ್ದು ಹೋದಿರಿ -------ಎಲ್ಲಿಗೆ ?
ಅಸಂಬದ್ಧ ಮಾತುಗಳ
ಬಡಬಡಿಸುತ್ತಲೇ ಇತ್ತು ಬಾಯಿ !
ನೋಟ ನೆಟ್ಟಿತ್ತು ಮೇಲಕ್ಕೆ ,
ದಾರಿ ಯಾವುದಯ್ಯಾ ವೈಕುಂಠಕ್ಕೆ ?
ಯುದ್ಧದಲ್ಲಿ ಸೋತು ಶರಣಾಗಿ ,
ಬಿಳಿಯ ಬಾವುಟ ಹಾರಿಸಿದಂತೆ,
ಕಣ್ಣುಗಳ ಬಿಳಿಯ ಬಣ್ಣ
ಮಾತ್ರ ---------ಕಾಣುತಿತ್ತು !
ಜೋಕಾಲೆಯಾಡಿತ್ತು ಜೀವ,
ಒಳಕ್ಕೂ ----,ಹೊರಕ್ಕೂ.
'ಕಣ್ಣಾ ಮುಚ್ಚೆ 'ಆಟ ಮುಗಿದಿತ್ತು !
ಒಳಗಿಂದಲೇ ಬಾಯಿಯ ಬಾಗಿಲು ,
ಕಣ್ಣುಗಳ ಕಿಟಕಿಗಳ ಮುಚ್ಚಿ ,
ಸಂತೆ ಮುಗಿಸಿ ,ಕಂತೆ ಒಗೆದು ,
ನಡೆದೇ ಬಿಟ್ಟಿರಿ ನಮ್ಮೆದುರೇ ,
ಉಸಿರ ಹಾದಿ ಹಿಡಿದು ,
ನಮಗೆ -------ಕಾಣದಂತೆ ,
ಮರಳಿ ---------ಬಾರದಂತೆ .
ಬಡಬಡಿಸುತ್ತಲೇ ಇತ್ತು ಬಾಯಿ !
ನೋಟ ನೆಟ್ಟಿತ್ತು ಮೇಲಕ್ಕೆ ,
ದಾರಿ ಯಾವುದಯ್ಯಾ ವೈಕುಂಠಕ್ಕೆ ?
ಯುದ್ಧದಲ್ಲಿ ಸೋತು ಶರಣಾಗಿ ,
ಬಿಳಿಯ ಬಾವುಟ ಹಾರಿಸಿದಂತೆ,
ಕಣ್ಣುಗಳ ಬಿಳಿಯ ಬಣ್ಣ
ಮಾತ್ರ ---------ಕಾಣುತಿತ್ತು !
ಜೋಕಾಲೆಯಾಡಿತ್ತು ಜೀವ,
ಒಳಕ್ಕೂ ----,ಹೊರಕ್ಕೂ.
'ಕಣ್ಣಾ ಮುಚ್ಚೆ 'ಆಟ ಮುಗಿದಿತ್ತು !
ಒಳಗಿಂದಲೇ ಬಾಯಿಯ ಬಾಗಿಲು ,
ಕಣ್ಣುಗಳ ಕಿಟಕಿಗಳ ಮುಚ್ಚಿ ,
ಸಂತೆ ಮುಗಿಸಿ ,ಕಂತೆ ಒಗೆದು ,
ನಡೆದೇ ಬಿಟ್ಟಿರಿ ನಮ್ಮೆದುರೇ ,
ಉಸಿರ ಹಾದಿ ಹಿಡಿದು ,
ನಮಗೆ -------ಕಾಣದಂತೆ ,
ಮರಳಿ ---------ಬಾರದಂತೆ .
Friday, April 2, 2010
ನೀನು----- ದೂರ್ವಾಸನೇ ಹೌದು!
ಸಾಕಪ್ಪಾ ನಿನ್ನ ಸಹವಾಸ !
ಸಿಟ್ಟಿನಲ್ಲಿ ನೀ ಥೇಟ್ ದೂರ್ವಾಸನೇ!
ರಾತ್ರಿ-----------,
ಬಾಯಲ್ಲಿ ---ಮಿಂಟು ,
ಮೈಗೆಲ್ಲಾ ---ಸೆಂಟು ,
ಏನು ಹಾಕಿದರೂ ನೂರೆಂಟು ,
ತೂರಿ ಬರುವ ಹಾಳು ಘಾಟು !
ತೂರಾಡುತ್ತಾ ನೀ ಬರುವ ಮುನ್ನವೇ ,
ತಲಪುವ ಆ ನಿನ್ನ ---,
ಉಸಿರಿನ -----ದುರ್ವಾಸನೆ,
ಸಹಿಸಲು ಅಸಾಧ್ಯ ------!
ನೀ --------------ನಿಜಕ್ಕೂ ,
ದೂರ್----------ವಾಸನೆ !
ದೂರದಿಂದಲೇ ----------ವಾಸನೆ!
ಸಿಟ್ಟಿನಲ್ಲಿ ನೀ ಥೇಟ್ ದೂರ್ವಾಸನೇ!
ರಾತ್ರಿ-----------,
ಬಾಯಲ್ಲಿ ---ಮಿಂಟು ,
ಮೈಗೆಲ್ಲಾ ---ಸೆಂಟು ,
ಏನು ಹಾಕಿದರೂ ನೂರೆಂಟು ,
ತೂರಿ ಬರುವ ಹಾಳು ಘಾಟು !
ತೂರಾಡುತ್ತಾ ನೀ ಬರುವ ಮುನ್ನವೇ ,
ತಲಪುವ ಆ ನಿನ್ನ ---,
ಉಸಿರಿನ -----ದುರ್ವಾಸನೆ,
ಸಹಿಸಲು ಅಸಾಧ್ಯ ------!
ನೀ --------------ನಿಜಕ್ಕೂ ,
ದೂರ್----------ವಾಸನೆ !
ದೂರದಿಂದಲೇ ----------ವಾಸನೆ!
Tuesday, March 30, 2010
ಪ್ರೇಯಸಿಗಾಗಿ-------!
ಬೆರಳಷ್ಟೇ ಗಾತ್ರದ ,
ಹಸಿರು ಪುಟ್ಟ ಹಕ್ಕಿ,
ನುಗ್ಗೆ ಮರದ ಹೂವಿಗೆ
ಲಗ್ಗೆ ------ಹಾಕಿದೆ!
ನುಗ್ಗೆ ಮರಕ್ಕೋ ರೋಮಾಂಚನ!
ರೆಂಬೆ ರೆಂಬೆಗೂ ಹಸಿರು ಹುಚ್ಚು!
ಪಕ್ಕದ ಗುಲ್ಮೊಹರಿಗೆ ,
ಮೈ ತುಂಬಾ ಕೆಂಪು ಕಿಚ್ಚು!
ಗಾಳಿಯಲ್ಲೆ ರೆಕ್ಕೆ ಬಡಿದು ,
ಮಧುವ ಹೀರಿದ ಮತ್ತಿನಲ್ಲಿ ,
ಅಲ್ಲೇ ಒಂದರೆ ಕ್ಷಣ ,
ತೇಲಾಡುವ ತ್ರಿಶಂಕು!!
ಮತ್ತೆ ಮರದ ಮೇಲೆ ಕುಳಿತು ,
ಸ್ವಲ್ಪ -----ವಿಶ್ರಮಿಸಿ ,
ಗತ್ತಿನಿಂದ ಕತ್ತು ಕೊಂಕಿಸಿ ,
ಪುಚ್ಚಗಳ ತಿದ್ದಿ ತೀಡಿ ,
ಅತ್ತಿತ್ತ -----ತಿರುಗಿ ,
ಚುಂಚದಲ್ಲೊಂದು ಹೂವ ಹಿಡಿದು ,
ಪುರ್ರನೆ ------ಹಾರಿತ್ತು ,
ಪ್ರೇಯಸಿಯ ಹುಡುಕುತ್ತಾ !!
ಹಸಿರು ಪುಟ್ಟ ಹಕ್ಕಿ,
ನುಗ್ಗೆ ಮರದ ಹೂವಿಗೆ
ಲಗ್ಗೆ ------ಹಾಕಿದೆ!
ನುಗ್ಗೆ ಮರಕ್ಕೋ ರೋಮಾಂಚನ!
ರೆಂಬೆ ರೆಂಬೆಗೂ ಹಸಿರು ಹುಚ್ಚು!
ಪಕ್ಕದ ಗುಲ್ಮೊಹರಿಗೆ ,
ಮೈ ತುಂಬಾ ಕೆಂಪು ಕಿಚ್ಚು!
ಗಾಳಿಯಲ್ಲೆ ರೆಕ್ಕೆ ಬಡಿದು ,
ಮಧುವ ಹೀರಿದ ಮತ್ತಿನಲ್ಲಿ ,
ಅಲ್ಲೇ ಒಂದರೆ ಕ್ಷಣ ,
ತೇಲಾಡುವ ತ್ರಿಶಂಕು!!
ಮತ್ತೆ ಮರದ ಮೇಲೆ ಕುಳಿತು ,
ಸ್ವಲ್ಪ -----ವಿಶ್ರಮಿಸಿ ,
ಗತ್ತಿನಿಂದ ಕತ್ತು ಕೊಂಕಿಸಿ ,
ಪುಚ್ಚಗಳ ತಿದ್ದಿ ತೀಡಿ ,
ಅತ್ತಿತ್ತ -----ತಿರುಗಿ ,
ಚುಂಚದಲ್ಲೊಂದು ಹೂವ ಹಿಡಿದು ,
ಪುರ್ರನೆ ------ಹಾರಿತ್ತು ,
ಪ್ರೇಯಸಿಯ ಹುಡುಕುತ್ತಾ !!
Thursday, March 25, 2010
ಬಯಲು
ಒಮ್ಮೆಯಾದರೂ ----------,
ಅಹಂಕಾರದ ಆಭರಣಗಳ
ಕಿತ್ತೆಸೆದು ------------,
ಡಂಭಗಳ------- ಬದಿಗಿಟ್ಟು ,
ಕಿಚ್ಚುಗಳ ------ತಣಿಸಿ ,
ರೋಷಗಳ ------ಮಣಿಸಿ ,
ಕೀರ್ತಿ ಕಿರೀಟವ----ಕೆಳಗಿಳಿಸಿ ,
ಭೇದ ಭಾವಗಳ ---ಗೋಡೆಗಳ ಉರುಳಿಸಿ ,
ಮನವ---------ಬಯಲಾಗಿಸಬೇಕು!
ತನುವು ----ಕಳೆದು,
ಮನವು ----ಕಳೆದು,
ಎಲ್ಲಾ ----ಮುಗಿದು,
ಬಯಲೇ----- ಆಗುವ ಮುನ್ನ!
ಅಹಂಕಾರದ ಆಭರಣಗಳ
ಕಿತ್ತೆಸೆದು ------------,
ಡಂಭಗಳ------- ಬದಿಗಿಟ್ಟು ,
ಕಿಚ್ಚುಗಳ ------ತಣಿಸಿ ,
ರೋಷಗಳ ------ಮಣಿಸಿ ,
ಕೀರ್ತಿ ಕಿರೀಟವ----ಕೆಳಗಿಳಿಸಿ ,
ಭೇದ ಭಾವಗಳ ---ಗೋಡೆಗಳ ಉರುಳಿಸಿ ,
ಮನವ---------ಬಯಲಾಗಿಸಬೇಕು!
ತನುವು ----ಕಳೆದು,
ಮನವು ----ಕಳೆದು,
ಎಲ್ಲಾ ----ಮುಗಿದು,
ಬಯಲೇ----- ಆಗುವ ಮುನ್ನ!
Tuesday, March 23, 2010
ನಿರಂತರ ----ಹುಡುಕಾಟ
ಹೇಗೆ ಬೆಳೆಯಿತೋ ಕಾಣೆ !
ಗೊತ್ತೇ ಆಗದ ಹಾಗೆ,
ಕೆಲ ಸಂಬಂಧಗಳ ಸುತ್ತ ,
ಕಣ್ಣಿಗೆ ಕಾಣದ ----------,
ಶೀತಲ ಸಮರಗಳ ಹುತ್ತ !
ಅದರೊಳಗೆ ಹೇಗೆ ಸೇರಿಕೊಂಡವೋ
ಹಾಲಾಹಲ ತುಂಬಿದ ಹಾವುಗಳು!
ಆ ಹಾವುಗಳ ಹೊರಬರಿಸಿ ,
ಪ್ರೀತಿ ಪುಂಗಿಯ ನಾದಕ್ಕೆ
ಮೈ ಮರೆಸಿ -----,
ಸ್ನೇಹದ ಬುಟ್ಟಿಯಲಿ,
ಹಾಕಿಕೊಂಡು ಹೋಗುವ ,
ಗಾರುಡಿಗನಿಗಾಗಿ-------,
ನನ್ನ -----ನಿರಂತರ ,
ಹುಡುಕಾಟ.!
ಗೊತ್ತೇ ಆಗದ ಹಾಗೆ,
ಕೆಲ ಸಂಬಂಧಗಳ ಸುತ್ತ ,
ಕಣ್ಣಿಗೆ ಕಾಣದ ----------,
ಶೀತಲ ಸಮರಗಳ ಹುತ್ತ !
ಅದರೊಳಗೆ ಹೇಗೆ ಸೇರಿಕೊಂಡವೋ
ಹಾಲಾಹಲ ತುಂಬಿದ ಹಾವುಗಳು!
ಆ ಹಾವುಗಳ ಹೊರಬರಿಸಿ ,
ಪ್ರೀತಿ ಪುಂಗಿಯ ನಾದಕ್ಕೆ
ಮೈ ಮರೆಸಿ -----,
ಸ್ನೇಹದ ಬುಟ್ಟಿಯಲಿ,
ಹಾಕಿಕೊಂಡು ಹೋಗುವ ,
ಗಾರುಡಿಗನಿಗಾಗಿ-------,
ನನ್ನ -----ನಿರಂತರ ,
ಹುಡುಕಾಟ.!
Sunday, March 21, 2010
VIRAL----------INFECTION
ನಾಲ್ಕು ದಿನಗಳಿಂದ viral infection! ಹುಷಾರಿರಲಿಲ್ಲ.ನನಗಲ್ಲ,ನಮ್ಮ computer ಗೆ.ಯಾವುದೋ ಮಾಯದಲ್ಲಿ ವೈರಸ್ ಒಂದು ಒಳ ಸೇರಿದೆ .ಸ್ಕ್ಯಾನ್ ಮಾಡಿದರಿಲ್ಲ,ಅಪ್ ಡೇಟ್ ಮಾಡಿದರಿಲ್ಲ!ಏನು ಮಾಡಿದರೂ ವೈರಸ್ ಕಾಟ ತಪ್ಪಲಿಲ್ಲ.ನಾನು doctor ಆಗಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.ಅದಕ್ಕೆ ಅದರ doctor ಬಂದು injection ಕೊಡಬೇಕಾಯಿತು.ಈಗ ನೋಡಿ!ಹೇಗೆ ಚಿಗಿತು ಕೊಂಡಿದೆ.!ಆನ್ ಮಾಡಿದರೆ ನನ್ನ ಬೆಲೆ ಈಗ ಗೊತ್ತಾಯಿತೆ,ಎಂದು ಕಿಸಕ್ಕನೆ ನಕ್ಕ ಹಾಗಾಗುತ್ತದೆ.'ಆದದ್ದೆಲ್ಲಾ ಒಳಿತೇ ಆಯಿತು',ಎನ್ನುವ ದಾಸರ ಪದ ಜ್ಞಾಪಕಕ್ಕೆ ಬಂತು .ಈ computer ನ ಹಾವಳಿ ಯಿಂದ ಓದುವ ಹವ್ಯಾಸ ಕಮ್ಮಿಯಾಗಿತ್ತು.ನಾಲಕ್ಕು ದಿನ ಜೋಗಿಯವರ ಅದ್ಭುತ ಬರವಣಿಗೆಗಳ ಬೆನ್ನೇರಿ ಸಾಹಿತ್ಯ ಲೋಕದ ಒಂದು ಸುತ್ತು ಹಾಕಿ ಬಂದಿದ್ದಾಯಿತು.!ಜೊತೆಗೆ ವೈದೇಹಿ ಯವರ ಕ್ರೌಂಚ ಪಕ್ಷಿಗಳು ಕಥಾ ಸಂಕಲನವನ್ನೂ ಓದಿದ್ದಾಯಿತು.ನಿಜಕ್ಕೂ ಆದದ್ದೆಲ್ಲಾ ಒಳಿತೇ ಆಯಿತು.ಬ್ಲಾಗ್ ಶುರು ಮಾಡಿದಾಗಿಂದ ಅದೂ ಒಂದು ರೀತಿಯ addiction ಆಗಿಬಿಟ್ಟಿದೆಯೇನೋ ಎಂದು ಅನುಮಾನ ಬರುತ್ತಿದೆ.ದಿನಕ್ಕೆ ನಾಲಕ್ಕು ಸಲ ಬ್ಲಾಗ್ ಓಪನ್ ಮಾಡುವುದು.ಕಾಮೆಂಟ್ಸ್ ಏನಾದರೂ ಬಂದಿದೆಯಾ ಎಂದು ನೋಡಿ ಅದಕ್ಕೆ ಉತ್ತರ ಕೊಡುವುದು .ಬೇರೆ ಬ್ಲಾಗಿಗೆ ಹೋಗುವುದು.ಯಾವಾಗ ನೋಡಿದರೂ ಬ್ಲಾಗಿನಲ್ಲೇ ಇರುತ್ತೀರ,ನಿಮ್ಮದ್ಯಾಕೋ ಅತಿ ಆಯ್ತು ಎಂದು ಹೆಂಡತಿ ಹತ್ತಿರ ಅನ್ನಿಸಿಕೊಂಡಿದ್ದೂ ಆಯಿತು .ಹೀಗೇ ನಡೆದಿತ್ತು ಬ್ಲಾಗಾಯಣ.ಆದರೆ ನಾಲಕ್ಕು ದಿನ computer ಸಂಪು ಹೂಡಿ ಮನಸ್ಸೆಲ್ಲಾ ಭಣ ಭಣ ಅನಿಸಿದ್ದಂತೂ ನಿಜ!ಬ್ಲಾಗ್ ನ ಮುಖಾಂತರ ನಿಮ್ಮೆಲ್ಲರ ಹತ್ತಿರ ನನ್ನ ಅನಿಸಿಕೆಗಳನ್ನು ಹಂಚಿಕೊಂಡಾಗ ಮನಸ್ಸು ಎಷ್ಟೋ ಹಗುರಾಗುತ್ತದೆ!ಕಾಣದ ನಾನೂ ನೀವೂ ಬ್ಲಾಗಿನ ಬೆಳಕಿನಲ್ಲಿ ಮುಖಾ ಮುಖಿ ಯಾಗುವುದು ಎಷ್ಟು ಛಂದ!-------ಅಲ್ಲವೇ?
Monday, March 15, 2010
'ವಿಕೃತಿ'ಗೂ------ ಸ್ವಾಗತ
ಬೆಲೆ ಏರಿಕೆಯ ಬಿಸಿಗಾಳಿ,
ಈ ಬೇಸಿಗೆಯ ಜೊತೆ, ಜೊತೆಯಲಿ,
ಬಂದು -------, ಒಳಸೇರಿ,
ನಮ್ಮೆದೆಯ -------ಬೇಗೆಗೆ,
ತಿದಿಯನೊತ್ತುತಿದೆ ----------!
ಇರುವ ಎಲ್ಲಾ ತಗಾದಿಯ ನಡುವೆ,
ಮತ್ತೆ ಬಂದಿದೆ ಯುಗಾದಿ!
ವಿರೋಧಿಯ ನಂತರದ ವಿಕೃತ!
ಯಾರನ್ನೂ ದೂರುವಂತಿಲ್ಲ,
ಇದು ------------ಸ್ವಯಂಕೃತ!
ಪ್ರಕೃತಿಯ ವಿಕೃತಗೊಳಿಸಿದ ಫಲಶ್ರುತಿ,
ಬರಗಾಲದ ಬೆನ್ನೇರಿ ಬಂದ ವಿಕೃತಿ.
ಸಧ್ಯದ ಪರಿಸ್ಥಿಯ ಕನ್ನಡಿಯಂತೆ,
ಎಲ್ಲೆಡೆಯ ಗೊಂದಲಗಳ ಪ್ರತೀಕದಂತೆ!
ಮರಳಿ ಬಂದಿದೆ ಯುಗಾದಿ,
ಎಲ್ಲಾ ವೈರುಧ್ಯದ ನಡುವೆ,
ಪ್ರತಿ ವರುಷದಂತೆ ----------------,
ಸಮೃದ್ಧಿಯ -------ಕನಸುಗಳ ಹೊತ್ತು !
ಈ ಬೇಸಿಗೆಯ ಜೊತೆ, ಜೊತೆಯಲಿ,
ಬಂದು -------, ಒಳಸೇರಿ,
ನಮ್ಮೆದೆಯ -------ಬೇಗೆಗೆ,
ತಿದಿಯನೊತ್ತುತಿದೆ ----------!
ಇರುವ ಎಲ್ಲಾ ತಗಾದಿಯ ನಡುವೆ,
ಮತ್ತೆ ಬಂದಿದೆ ಯುಗಾದಿ!
ವಿರೋಧಿಯ ನಂತರದ ವಿಕೃತ!
ಯಾರನ್ನೂ ದೂರುವಂತಿಲ್ಲ,
ಇದು ------------ಸ್ವಯಂಕೃತ!
ಪ್ರಕೃತಿಯ ವಿಕೃತಗೊಳಿಸಿದ ಫಲಶ್ರುತಿ,
ಬರಗಾಲದ ಬೆನ್ನೇರಿ ಬಂದ ವಿಕೃತಿ.
ಸಧ್ಯದ ಪರಿಸ್ಥಿಯ ಕನ್ನಡಿಯಂತೆ,
ಎಲ್ಲೆಡೆಯ ಗೊಂದಲಗಳ ಪ್ರತೀಕದಂತೆ!
ಮರಳಿ ಬಂದಿದೆ ಯುಗಾದಿ,
ಎಲ್ಲಾ ವೈರುಧ್ಯದ ನಡುವೆ,
ಪ್ರತಿ ವರುಷದಂತೆ ----------------,
ಸಮೃದ್ಧಿಯ -------ಕನಸುಗಳ ಹೊತ್ತು !
Saturday, March 13, 2010
ಹಗ್ಗ ---------ಜಗ್ಗಾಟ
ಇಲ್ಲಿ ಕೆಳಗೆ ,ಆಸ್ಪತ್ರೆಯ
ಬೆಡ್ದೊಂದರ ಮೇಲೆ ಮಲಗಿದ್ದಾನೆ,
ಜೀವ ಜಲ ಬತ್ತಿದ ರೋಗಿ.
ನರಳುತ್ತಾ ,ಆಚೀಚೆ ಹೊರಳುತ್ತಾ.
ಒಮ್ಮೆ ಸಾವಿನತ್ತ ,ಒಮ್ಮೆ ಬದುಕಿನತ್ತ,
ಮಗ್ಗುಲು ------------ಬದಲಿಸುತ್ತಾ !
ಅಲ್ಲಿ ಮೇಲೆ ಶಿರಸ್ಸಾಸನ ಹಾಕಿ,
ತಲೆ ಕೆಳಗಾಗಿ ನೇತಾಡಿ ,
ಶತಾಯು ಗತಾಯು ಇವನ ಬದುಕಿಸುವ
ಪಣತೊಟ್ಟ ಸಲೈನ್ ಬಾಟಲ್ !
ಮಧ್ಯೆ ಜೀವ ಸೆಲೆಯ ಕೊಂಡಿಯಂತೆ ,
ಡ್ರಿಪ್ ಸೆಟ್ಟಿನ ಪ್ಲಾಸ್ಟಿಕ್ ನಳಿಕೆ !
ಮೂಗಿಗೆ ಹಾಕಿದ ಟ್ಯೂಬಿನಿಂದ
ಪ್ರಾಣ ವಾಯು ----------ಸಾಲ.!
ಅದನ್ನೂ ಕದಿಯಲು ಸಂಚು ಹೂಡಿದೆ ,
ಕಾಣದ ನಿಗೂಢ ಜಾಲ !
ವ್ಯಕ್ತ --------------,ಅವ್ಯಕ್ತಗಳ ನಡುವೆ
ನಡೆದಂತಿದೆ ------------ನಿರಂತರ ,
ಹಗ್ಗ ------------------ಜಗ್ಗಾಟ !
ಬೆಡ್ದೊಂದರ ಮೇಲೆ ಮಲಗಿದ್ದಾನೆ,
ಜೀವ ಜಲ ಬತ್ತಿದ ರೋಗಿ.
ನರಳುತ್ತಾ ,ಆಚೀಚೆ ಹೊರಳುತ್ತಾ.
ಒಮ್ಮೆ ಸಾವಿನತ್ತ ,ಒಮ್ಮೆ ಬದುಕಿನತ್ತ,
ಮಗ್ಗುಲು ------------ಬದಲಿಸುತ್ತಾ !
ಅಲ್ಲಿ ಮೇಲೆ ಶಿರಸ್ಸಾಸನ ಹಾಕಿ,
ತಲೆ ಕೆಳಗಾಗಿ ನೇತಾಡಿ ,
ಶತಾಯು ಗತಾಯು ಇವನ ಬದುಕಿಸುವ
ಪಣತೊಟ್ಟ ಸಲೈನ್ ಬಾಟಲ್ !
ಮಧ್ಯೆ ಜೀವ ಸೆಲೆಯ ಕೊಂಡಿಯಂತೆ ,
ಡ್ರಿಪ್ ಸೆಟ್ಟಿನ ಪ್ಲಾಸ್ಟಿಕ್ ನಳಿಕೆ !
ಮೂಗಿಗೆ ಹಾಕಿದ ಟ್ಯೂಬಿನಿಂದ
ಪ್ರಾಣ ವಾಯು ----------ಸಾಲ.!
ಅದನ್ನೂ ಕದಿಯಲು ಸಂಚು ಹೂಡಿದೆ ,
ಕಾಣದ ನಿಗೂಢ ಜಾಲ !
ವ್ಯಕ್ತ --------------,ಅವ್ಯಕ್ತಗಳ ನಡುವೆ
ನಡೆದಂತಿದೆ ------------ನಿರಂತರ ,
ಹಗ್ಗ ------------------ಜಗ್ಗಾಟ !
Wednesday, March 10, 2010
ಕವಿತೆ -------ಲಾಭ,ನಷ್ಟ----ಒಂದು ಲಹರಿ
ಭಾವನೆಗಳಿಗೆ ಮಾತಿನ ಕುಂಚದಲ್ಲಿ ಬಣ್ಣ ಬಳಿದು ,ಕಾಗದದ ಮೇಲೆ ಅಕ್ಷರಗಳಲ್ಲಿ ಮೂಡಿಸುವುದಿದೆಯಲ್ಲ ,ಅದೊಂದು ಅದ್ಭುತ ಅನುಭಾವವೀಯುವ ಶಬ್ದ ಚಿತ್ರ! ಕವಿತೆಗಳಲ್ಲಿ ಅವಿತಿರುವ ಶಬ್ಧಗಳನ್ನು ಹೊರ ತೆಗೆದು ,ಒರೆಗೆ ಹಚ್ಚಿ ನೋಡಿದಾಗ ಹೊಸ ಅರ್ಥವೊಂದು ಹೊಳೆದು ಖುಷಿ ಕೊಡುತ್ತದೆ .ಬರೆದವರಿಗೋ ಬರೆದ ಸಂತೋಷ !ಓದುವ ನೂರಾರು ಮಂದಿಗೆ ಅವರವರ ಭಾವಕ್ಕೆ ತಕ್ಕಂತೆ ನೂರಾರು ಅರ್ಥಗಳ ಹೊಳಹು !ಒಟ್ಟಿನಲ್ಲಿ ಇದೂ ಒಂದು ಸೌಂದರ್ಯೋಪಾಸನೆ. ಪ್ರತಿಯೊಂದರಲ್ಲಿಯೂ ಬೆಡಗು ಕಾಣುವ ಮಗುವಿನ ಬೆರಗುಗಣ್ಣು ಇಲ್ಲದಿದ್ದರೆ ಬದುಕು ಸಪ್ಪೆ ಎನಿಸುತ್ತದೆ. ಯಾಂತ್ರಿಕತೆ ಕಾಡುತ್ತದೆ.ಯಾವುದರಲ್ಲಿಯೂ ಆಸಕ್ತಿ ಇಲ್ಲದೆ ಬದುಕು ಬೋರ್ ಎನಿಸುತ್ತದೆ .ಎಲ್ಲರೂ ಒಂದಲ್ಲ ಒಂದು ಸಲ ಇದನ್ನು ಅನುಭವಿಸಿದವರೇ .ಕವಿತೆ ಬರೆಯುವುದರಿಂದ ಅಥವಾ ಓದುವುದರಿಂದ ಏನು ಲಾಭ ?ಅದರಿಂದೇನು ಹೊಟ್ಟೆ ತುಂಬುತ್ತದೆಯೇ ?ಎಂದು ಕೇಳುವವರಿದ್ದಾರೆ .ಅವರಿಗೆ ಹೊಟ್ಟೆಯೊಂದರ ಚಿಂತೆ ಬಿಟ್ಟು ಬೇರಾವಚಿಂತೆಯಿಲ್ಲ.
ಆದರೆ ನನ್ನಂತಹ ನೂರಾರು ಮಂದಿಯ ಸ್ಥಿತಿ ಹಾಗಿಲ್ಲವಲ್ಲ !ಹೊಟ್ಟೆ ತುಂಬಿಸಿ ಕೊಂಡರೆ ಆಯಿತೆ ?ಮನಸ್ಸಿಗೆ ಆಹಾರ ಬೇಡವೇ?ಸಂಗೀತ ,ಸಾಹಿತ್ಯ ,ಚಿತ್ರಕಲೆ ಇವೆಲ್ಲಾ ಮನಸ್ಸಿಗೆ ಮುದ ನೀಡುವಂತವು .ಮಾನಸಿಕ ಸ್ವಾಸ್ತ್ಯ ಕಾಪಾಡು ವಂತವು.ನಮ್ಮ ಇಂದಿನ ಒತ್ತಡ ತುಂಬಿದ ಜೀವನಕ್ಕೆ ಇವೆ ಮದ್ದು .ಬದುಕಿನ ಏರಿಳಿತಗಳ ,ಹೊಂಡಗಳು ತುಂಬಿದ ಹಾದಿಯಲ್ಲಿ ,ಜೀವನದ ಪಯಣವನ್ನು ಸುಗಮವಾಗಿಸುವ shock absorbers ಇದ್ದ ಹಾಗೆ.ಇದರಲ್ಲಿ ವ್ಯಾವಹಾರಿಕ ಲಾಭ ಅಥವಾ ನಷ್ಟದ ಪ್ರಶ್ನೆಯೇ ಬರುವುದಿಲ್ಲ .ಸದಾ ಸ್ಪಂದಿಸುತ್ತಿರುವ ಮುದಗೊಂಡ ಚೈತನ್ಯ ತುಂಬಿದ ಮನಸ್ಸೇ ಇದರ ಲಾಭ.!
ಆದರೆ ನನ್ನಂತಹ ನೂರಾರು ಮಂದಿಯ ಸ್ಥಿತಿ ಹಾಗಿಲ್ಲವಲ್ಲ !ಹೊಟ್ಟೆ ತುಂಬಿಸಿ ಕೊಂಡರೆ ಆಯಿತೆ ?ಮನಸ್ಸಿಗೆ ಆಹಾರ ಬೇಡವೇ?ಸಂಗೀತ ,ಸಾಹಿತ್ಯ ,ಚಿತ್ರಕಲೆ ಇವೆಲ್ಲಾ ಮನಸ್ಸಿಗೆ ಮುದ ನೀಡುವಂತವು .ಮಾನಸಿಕ ಸ್ವಾಸ್ತ್ಯ ಕಾಪಾಡು ವಂತವು.ನಮ್ಮ ಇಂದಿನ ಒತ್ತಡ ತುಂಬಿದ ಜೀವನಕ್ಕೆ ಇವೆ ಮದ್ದು .ಬದುಕಿನ ಏರಿಳಿತಗಳ ,ಹೊಂಡಗಳು ತುಂಬಿದ ಹಾದಿಯಲ್ಲಿ ,ಜೀವನದ ಪಯಣವನ್ನು ಸುಗಮವಾಗಿಸುವ shock absorbers ಇದ್ದ ಹಾಗೆ.ಇದರಲ್ಲಿ ವ್ಯಾವಹಾರಿಕ ಲಾಭ ಅಥವಾ ನಷ್ಟದ ಪ್ರಶ್ನೆಯೇ ಬರುವುದಿಲ್ಲ .ಸದಾ ಸ್ಪಂದಿಸುತ್ತಿರುವ ಮುದಗೊಂಡ ಚೈತನ್ಯ ತುಂಬಿದ ಮನಸ್ಸೇ ಇದರ ಲಾಭ.!
Tuesday, March 2, 2010
ಈ ಕಹಿ ನೆನಪುಗಳೇ------ಹಾಗೆ
ಈ ಕಹಿ ನೆನಪುಗಳೇ------ಹಾಗೆ!
ಕಿವಿಯ ಬಳಿ ಗುಂಯ್ ಗುಡುವ ,
ಸೊಳ್ಳೆಗಳಂತೆ---------!
ಸೊಳ್ಳೆಗಳಂತೆ---------!
ಯಾವ ಮಾಯದಲ್ಲೋ ----,
ಒಮ್ಮೆ ಕಚ್ಹಿ------------,
ರಪ್ಪೆಂದು ಅಪ್ಪಳಿಸಿದ ಕೈಗೆ ಸಿಗದೇ ,
ಎಲ್ಲೋ --------------ಪರಾರಿ!
ಕಚ್ಚಿಸಿಕೊಂಡ ಉರಿಯ ಜೊತೆ,
ನಮಗೆ ನಾವೇ ಹೊಡೆದುಕೊಂಡ ಯಾತನೆ!
ಸಾದ್ಯವಾದರೆ ---------------,
ಕೊಲ್ಲು ಹುಡಕಿ ನನ್ನ ನೀನು,
ಹಾಗೇ-------------ಸುಮ್ಮನೆ,
ಎಂದು---------- ಛೇಡಿಸುತ್ತವೆ !
ಮತ್ತೆ ,ಮತ್ತೆ, ಬಂದು----------------ಕಾಡಿ!
Monday, March 1, 2010
ಎನ್ನ --------ಕಿವುಡನ ಮಾಡಯ್ಯ
ರಾತ್ರಿಯ ಸ್ಲೀಪರ್ ಕೋಚ್ ಬಸ್ಸು
ಹೊರಟು ಗಂಟೆ ಒಂದಾಗಿದೆ-----------,
ನನ್ನ ಬಳಿ ನಿದ್ದೆಯ ಸುಳಿವಿಲ್ಲ -------!
ಪಕ್ಕದ ಬರ್ತಿನ ಭೂಪ -------,
ನಡುರಾತ್ರಿ ಹನ್ನೆರಡಕ್ಕೆ ಎದ್ದು ,
ತನ್ನ ಮೊಬೈಲಿನಲ್ಲಿ ಯಾರ ಜೊತೆಯೋ,
ಎಡೆ ಬಿಡದೆ ಜೋರು ದನಿಯಲ್ಲಿ,
ಸಂ ---------ವಾದ ,ನಡೆಸಿದ್ದಾನೆ .
ತಾನೂ ನಿದ್ರಿಸಲೊಲ್ಲ ನಮ್ಮನ್ನೂ ಬಿಡಲೊಲ್ಲ.
ನಿಲ್ಲಿಸಲೊಲ್ಲ-------ತನ್ನ ಸೊಲ್ಲ !
ಆಕ್ಸ್ಹೇಪಿಸಲು-------------,
ಬರ್ತ್ ನನ್ನದು ,ಮೊಬೈಲ್ ನನ್ನದು ,
ಮಾತು ನನ್ನ ಬರ್ತ್ ರೈಟು ಎಂದ!
ಎಲ್ಲವೂ ನಿನ್ನದೇ ಹೌದು ತಂದೆ ,
ಆದರೆ ಕಿವಿ ನನ್ನದಲ್ಲವೇ ಎಂದೆ.
ಸಧ್ಯ ---------ಸುಮ್ಮನಾದ !
ಮಾತನಾಡಲಿಲ್ಲ -----ಮುಂದೆ !
ಹೊರಟು ಗಂಟೆ ಒಂದಾಗಿದೆ-----------,
ನಿಶೆಯ ಮಡಿಲಲ್ಲಿ ರಸ್ತೆ ತಣ್ಣಗೆ ಮಲಗಿದೆ!
ಬಸ್ಸಿನದೋ ಜೋರು ಗೊರಕೆ --------!ನನ್ನ ಬಳಿ ನಿದ್ದೆಯ ಸುಳಿವಿಲ್ಲ -------!
ಪಕ್ಕದ ಬರ್ತಿನ ಭೂಪ -------,
ನಡುರಾತ್ರಿ ಹನ್ನೆರಡಕ್ಕೆ ಎದ್ದು ,
ತನ್ನ ಮೊಬೈಲಿನಲ್ಲಿ ಯಾರ ಜೊತೆಯೋ,
ಎಡೆ ಬಿಡದೆ ಜೋರು ದನಿಯಲ್ಲಿ,
ಸಂ ---------ವಾದ ,ನಡೆಸಿದ್ದಾನೆ .
ತಾನೂ ನಿದ್ರಿಸಲೊಲ್ಲ ನಮ್ಮನ್ನೂ ಬಿಡಲೊಲ್ಲ.
ನಿಲ್ಲಿಸಲೊಲ್ಲ-------ತನ್ನ ಸೊಲ್ಲ !
ಆಕ್ಸ್ಹೇಪಿಸಲು-------------,
ಬರ್ತ್ ನನ್ನದು ,ಮೊಬೈಲ್ ನನ್ನದು ,
ಮಾತು ನನ್ನ ಬರ್ತ್ ರೈಟು ಎಂದ!
ಎಲ್ಲವೂ ನಿನ್ನದೇ ಹೌದು ತಂದೆ ,
ಆದರೆ ಕಿವಿ ನನ್ನದಲ್ಲವೇ ಎಂದೆ.
ಸಧ್ಯ ---------ಸುಮ್ಮನಾದ !
ಮಾತನಾಡಲಿಲ್ಲ -----ಮುಂದೆ !
Thursday, February 25, 2010
ಮೌನ -----------------ಬಂಗಾರ
ಎಲ್ಲೋ --------------ಕೆಲವರ ಮಾತು ,
ಬೆಳ್ಳಿಯಂತೆ ------- ಕಿಮ್ಮತ್ತಿನದು!
ಕೆಲವರದು, ಒನ್ ಗ್ರಾಂ ಗೋಲ್ಡು !
ಹೊರಗೆ ಥಳುಕು, ಒಳಗೆ ಹುಳುಕು,
ಬರೀ ಒಂದಿಷ್ಟು ಗಮ್ಮತ್ತಿನದು!
ಹೆಚ್ಚಿನವರ ಮಾತು,
ಖಾಲಿ ಡಬ್ಬಿಯೊಳಗಿನ ಕಲ್ಲೊಂದರ ,
ಗಲ,ಗಲ ---------ಶಬ್ದ,
ಬರೀ--------ಹಿತ್ತಾಳೆ!
ಇನ್ನು ಕೆಲವರದು -----ಚುಚ್ಚುವ,
ಮೈಯೆಲ್ಲಾ ಮುಳ್ಳಿರುವ ಕತ್ತಾಳೆ!
ಆದ್ದರಿಂದ ---------ಮಾತಿಗಿಂತ,
ಮೌನವೇ---------------ಲೇಸು!
ಅದು ಎಂದೆಂದಿಗೂ ------------------,
ಅಪ್ಪಟ -------------------ಬಂಗಾರ!
ಬೆಳ್ಳಿಯಂತೆ ------- ಕಿಮ್ಮತ್ತಿನದು!
ಕೆಲವರದು, ಒನ್ ಗ್ರಾಂ ಗೋಲ್ಡು !
ಹೊರಗೆ ಥಳುಕು, ಒಳಗೆ ಹುಳುಕು,
ಬರೀ ಒಂದಿಷ್ಟು ಗಮ್ಮತ್ತಿನದು!
ಹೆಚ್ಚಿನವರ ಮಾತು,
ಖಾಲಿ ಡಬ್ಬಿಯೊಳಗಿನ ಕಲ್ಲೊಂದರ ,
ಗಲ,ಗಲ ---------ಶಬ್ದ,
ಬರೀ--------ಹಿತ್ತಾಳೆ!
ಇನ್ನು ಕೆಲವರದು -----ಚುಚ್ಚುವ,
ಮೈಯೆಲ್ಲಾ ಮುಳ್ಳಿರುವ ಕತ್ತಾಳೆ!
ಆದ್ದರಿಂದ ---------ಮಾತಿಗಿಂತ,
ಮೌನವೇ---------------ಲೇಸು!
ಅದು ಎಂದೆಂದಿಗೂ ------------------,
ಅಪ್ಪಟ -------------------ಬಂಗಾರ!
Tuesday, February 23, 2010
ತಿರುಪತಿ ----ಬೆಟ್ಟ
ಸಾಲು ಸಾಲು ---------------,
ಮುಗಿಲಿಗೇ ಏಣಿ ಹಾಕಿದ ಹಾಗೆ ,
ಮೂರು ಸಾವಿರದ ಐದು ನೂರ ಐವತ್ತು ,
ತಿರುಪತಿಯ ಬೆಟ್ಟದ ಮೆಟ್ಟಿಲು !
ಕೋಟಿ ಕೋಟಿ ಹರಕೆಗಳ ತೊಟ್ಟಿಲು !
ಹತ್ತಿದವರಿಗೆ ಗೊತ್ತು -------,
ಹತ್ತುವುದರ ಕಷ್ಟ -----------!
ತೀರದ ಮುಗಿಯದ ಕಷ್ಟಗಳಂತೆ ,
ಒಂದಾದ ಮೇಲೊಂದರಂತೆ ---,
ಮೆಟ್ಟಿಲುಗಳ -----------ಸಂತೆ !
ನಾವು ಮೆಟ್ಟಿಲು ಏರಿದಂತೆ ---------,
ಅವೂ ಏರುತ್ತವೆ ಮೇಲೆ ಮೇಲೆ -----!
ಸುಖದ ಮೂಟೆ ಹೊತ್ತ ಕತ್ತೆ ಶರೀರಕ್ಕೆ ,
ಕ್ಷಣ ಕ್ಷಣಕ್ಕೂ ಉಬ್ಬಸ, ಬೆವರು !
ಕಷ್ಟವೇನು ಎಂಬುದ ಅರಿಯದ ಶರೀರಕ್ಕೆ ,
ಕಷ್ಟವೋ ಕಷ್ಹ್ತ ----------------!
ನಮ್ಮ ದೇಹದ ಪೆಟ್ರೋಲು ಬೇಗನೆ ತೀರಿ,
ಮುಂದೆ ಮೆಟ್ಟಿಲು ಹತ್ತಿಸುವುದು -------,
ಗೋವಿಂದ ನಾಮ ಸ್ಮರಣೆಯ ಪೆಟ್ರೋಲು !
ಭವ ಸಾಗರವ ದಾಟಿಸುವ ---------,
ಭಗವನ್ನಾಮ ಸ್ಮರಣೆಯ-----,
---------ಹರಿಗೋಲು !!!
ಮುಗಿಲಿಗೇ ಏಣಿ ಹಾಕಿದ ಹಾಗೆ ,
ಮೂರು ಸಾವಿರದ ಐದು ನೂರ ಐವತ್ತು ,
ತಿರುಪತಿಯ ಬೆಟ್ಟದ ಮೆಟ್ಟಿಲು !
ಕೋಟಿ ಕೋಟಿ ಹರಕೆಗಳ ತೊಟ್ಟಿಲು !
ಹತ್ತಿದವರಿಗೆ ಗೊತ್ತು -------,
ಹತ್ತುವುದರ ಕಷ್ಟ -----------!
ತೀರದ ಮುಗಿಯದ ಕಷ್ಟಗಳಂತೆ ,
ಒಂದಾದ ಮೇಲೊಂದರಂತೆ ---,
ಮೆಟ್ಟಿಲುಗಳ -----------ಸಂತೆ !
ನಾವು ಮೆಟ್ಟಿಲು ಏರಿದಂತೆ ---------,
ಅವೂ ಏರುತ್ತವೆ ಮೇಲೆ ಮೇಲೆ -----!
ಸುಖದ ಮೂಟೆ ಹೊತ್ತ ಕತ್ತೆ ಶರೀರಕ್ಕೆ ,
ಕ್ಷಣ ಕ್ಷಣಕ್ಕೂ ಉಬ್ಬಸ, ಬೆವರು !
ಕಷ್ಟವೇನು ಎಂಬುದ ಅರಿಯದ ಶರೀರಕ್ಕೆ ,
ಕಷ್ಟವೋ ಕಷ್ಹ್ತ ----------------!
ನಮ್ಮ ದೇಹದ ಪೆಟ್ರೋಲು ಬೇಗನೆ ತೀರಿ,
ಮುಂದೆ ಮೆಟ್ಟಿಲು ಹತ್ತಿಸುವುದು -------,
ಗೋವಿಂದ ನಾಮ ಸ್ಮರಣೆಯ ಪೆಟ್ರೋಲು !
ಭವ ಸಾಗರವ ದಾಟಿಸುವ ---------,
ಭಗವನ್ನಾಮ ಸ್ಮರಣೆಯ-----,
---------ಹರಿಗೋಲು !!!
Subscribe to:
Posts (Atom)