Saturday, July 26, 2014

"ಡೊಂಕು ಬಾಲದ ಮನವೇ ..!!!!! "

ಅಲ್ಲಿ ಸುತ್ತಿ ,ಇಲ್ಲಿ ಸುಳಿದು,
ಮತ್ತೇ ಮರಳಿ ಅಲ್ಲಿಗೇ ...!!
ಬಂದೆಯಲ್ಲ ಮನವೇ ನೀನು
ನೋವ ನೆನಪಿನಲ್ಲಿಗೇ ..... !!!!

ನೋಯ್ವ ಹಲ್ಲಿನಲ್ಲಿಗೇ ..... ,
ಮತ್ತೇ ,ಮತ್ತೇ ,ಮೆಲ್ಲಗೇ ...!!
ಸುಳಿಯುವಂತೆ ನಾಲಿಗೇ ..,
ಮರಳಿ ಬಂದೆ ಅಲ್ಲಿಗೇ !!!!
ನೋವ ನೆನಪಿನಲ್ಲಿಗೇ !!!!

ಸುಳಿಯುವಂತೆ ದೀಪದ ಹುಳು
ಸುಡುವ ಸೊಡರ ಸುತ್ತಲೂ !!
ಗಿರಕಿ ಹೊಡೆದೇ ಮನವೇ ನೀನು
ನೋವ ಸುತ್ತ ಮುತ್ತಲು !!!!

ಬಿಡು ಜೀವವೇ ,ಬಿಡು ಅಲ್ಲೇ
ಸುಡುವ ಹಾಳು ನೆನಪನು !!
ಮನದ ಮರದಿ ಚೈತ್ರ ತರಲಿ
ತಪು ತಂಪು ತಳಿರನು!!!!
ಸುಖದ  ತಂಪು ನೆನಪನು !!!!

9 comments:

  1. ತಾವು ಅದ್ಭುತ ಗಾಯಕರು. ತಮ್ಮ ಈ ಭಾವಗೀತೆಯನ್ನು ತಾವು ಸುಸಂಗೀತಮಯವಾಗಿ ಪ್ರಸ್ತುತಪಡಿಸಿರಿ.

    ಈ ಕೃತಿಯು ಮನುಜನ ಮನೋ ಪರಿವರ್ತನೆಯ ಸೋಪಾನದಂತಿದೆ. ಹಾಳು ಮನವರಿಕೆ ಹಾಗೆ ಅದು ಸುಖದ ಹೊತ್ತಿನಲ್ಲಿ ಸಂತೋಷವನು ಸವಿಯದೆ, ಯಾವುದೋ ವ್ಯಥೆಯನ್ನು ಮೆಲಕು ಹಾಕುತ್ತಾ ನೊಂದುಕೊಳ್ಳುತ್ತದೆ. ಉಂಡ ನೋವಿನ ಎಂಜಲೆಲೆಯನು ತಿಪ್ಪೆಗೆಸೆದು. ಸಂತೋಷದಿಂದ ಎಲೆ ಅಡಿಕೆ ಮೆಲ್ಲುವ ಮನಸ್ಥಿತಿ ನನಗೂ ಸಿದ್ದಿಸಲಿ.

    ReplyDelete
  2. ಪೆಟ್ಟು ಬಿದ್ದಲ್ಲೇ ಕೈ ಸವರುವಂತೆ, ಮನಸ್ಸಿನ ಅಭ್ಯಾಸವಲ್ಲವೇ ಇದು? ನಿಮ್ಮ soothing ಕವನವು ಮನಸ್ಸಿಗೆ ಸಾಂತ್ವನವೀಯುವದರಲ್ಲಿ ಸಂದೇಹವಿಲ್ಲ.

    ReplyDelete
  3. ನಲಿವ ಗೆಲುವಿಗಿಂತಲೂ ಸೋತ ನೋವುಗಳತ್ತಲೇ ಮನದ ಗಿರಕಿ ಯಾವತ್ತೂ.
    ಒಮ್ಮೆ ಗೆದ್ದ ನಗುವಿಗಿಂತ ಸೋತ ನೆನಪುಗಳು ಹಲಬಾರಿ ಬಿಟ್ಟೂ ಬಿಡದೆ ಕಾಡುತ್ತಿರುತ್ತೆ. ಆ ಸೋಲ ನಾವು ಗೆಲುವಾಗಿ ಪರಿವರ್ತಿಸೋವರೆಗೆ, ಮತ್ತೊಂದು ಗೆಲುವು ಆ ನೋವ ಮರೆಸೋವರೆಗೆ. ಚೆನ್ನಾಗಿದೆ ಕವನ. ಮನಸಿನ ಚಿತ್ರಣ.

    ReplyDelete
  4. ಮಾನ್ಯರೇ; ಸಾಮಾನ್ಯವಾಗಿ, ಗೆದ್ದಾಗ ಸಂತೋಷವಾಗುತ್ತದೆ ನಿಜವಾದರೂ ಸೋತಾಗ ಅದ ನೋವುಗಳು ಸದಾ ಕಾಡುತ್ತಿರುತ್ತವೆ.

    ReplyDelete
  5. ಕೃಷ್ಣಮೂರ್ತಿ ಸರ್,

    ಡೊಂಕು ಬಾಲದ ಕವನ ಚೆನ್ನಾಗಿದೆ.

    ನೋಯುವ ಹಲ್ಲು ಮತ್ತು ನಾಲಿಗೆ ...
    ನಿಮ್ಮ ವೃತ್ತಿಯ ಪ್ರಭಾವದಿಂದ ಬಂದ ಸಾಲುಗಳಿವು :)

    ReplyDelete
  6. ಪುನರಪಿ ಜನನಂ ಪುನರಾಪಿ ಉದ್ಧಾರಂ ಇದುವೇ ಜೀವನ ಎನ್ನುವಂತೆ ನಿಮ್ಮ ಕವನದ ಸರಮಾಲೆ ಸೊಗಸಾಗಿದೆ ಡಾಕ್ಟ್ರೆ

    ReplyDelete
  7. According to Stanford Medical, It is indeed the ONLY reason women in this country live 10 years longer and weigh 42 pounds lighter than us.

    (And really, it has NOTHING to do with genetics or some secret-exercise and absolutely EVERYTHING around "how" they eat.)

    BTW, What I said is "HOW", and not "WHAT"...

    Click this link to reveal if this brief questionnaire can help you unlock your true weight loss potential

    ReplyDelete
  8. ತುಂಬ ಸರಳವಾಗಿ ಪ್ರಾಸಬದ್ಧವಾಗಿ ಮೂಡಿ ಬಂದಿದೆ. ಎಡಹಿದ ಕಾಲನ್ನೇ ಎಡಹುವಂತೆ, ಮರುಭೂಮಿಯಲ್ಲಿನ ಒಂಟೆಗಳ ಸಾಲಿನಂತೆ...ಈ ನುಡಿಗಟ್ಟುಗಳ ಸಾಲಿನಲ್ಲಿ ಮತ್ತೆರಡು ಸೇರ್ಪಡೆ. ಸೃಜನ ಶಕ್ತಿಗೆ ಇಗೊ ವಂದನೆಗಳು.

    ReplyDelete

Note: Only a member of this blog may post a comment.