Saturday, April 9, 2016

" ಇಂಥವರು ಈಗಲೂ ಇದ್ದಾರೆ !!!!! "
----------------------------------------

ಮೊನ್ನೆ ಯುಗಾದಿ ಹಬ್ಬದ ಹಿಂದಿನ ದಿನ ರಾತ್ರಿ ಆರ್. ಟಿ. ನಗರದ ಮಾರ್ಕೆಟ್ಟಿನ ಅಂಗಡಿಯೊಂದರಲ್ಲಿ  ವಿಜಯವಾಣಿಯ ಯುಗಾದಿ ವಿಶೇಷಾಂಕವನ್ನು ಖರೀದಿಸಿದೆ. ಅದರ ಬೆಲೆ 50 ರೂಪಾಯಿ. ನಾನು ಅಂಗಡಿಯವನಿಗೆ  ನೂರು ರೂಪಾಯಿ ಕೊಟ್ಟು , ಪುಸ್ತಕ ತೆಗೆದು ಕೊಂಡು ,ಬಾಕಿ ಐವತ್ತು ರೂಪಾಯಿಗಳನ್ನು ತೆಗೆದು ಕೊಳ್ಳುವುದನ್ನು ಮರೆತು ಮುಂದೆ ಹೋದೆ. ಬಾಕಿ ಹಣದ ವಿಷಯ ಮರೆತೇ ಹೋಗಿತ್ತು . ಸುಮಾರು ದೂರ ಹೋಗಿ  ಮತ್ಯಾವುದೋ ಅಂಗಡಿಯಲ್ಲಿ ಇನ್ನೇನೋ ಖರೀದಿಸುತ್ತಿದ್ದೆ.ಹಿಂದಿನಿದ ಯಾರೋ ಬೆನ್ನು ತಟ್ಟುತ್ತಿದ್ದರು. ಹಿಂದಿರುಗಿ ನೋಡಿದರೆ ಪುಸ್ತಕದ ಅಂಗಡಿಯವನು !!!!! ನನ್ನ ಬಾಕಿ ಐವತ್ತು ರೂಪಾಯಿಗಳನ್ನು ಹಿಂದಿರುಗಿಸಲು ನನ್ನನ್ನು ಹುಡುಕಿಕೊಂಡು ಸುಮಾರು ದೂರ ಬಂದಿದ್ದ.!!!! "ಅಲ್ಲಪ್ಪಾ , ಈಗಿನ ಕಾಲದಲ್ಲೂ  ನಿಮ್ಮಂಥಾ  ಪ್ರಾಮಾಣಿಕರು ಇದ್ದಾರಲ್ಲಾ !!!! " ಎಂದು ಆಶ್ಚರ್ಯದಿಂದ ಉದ್ಗರಿಸಿದೆ. ಅಂಗಡಿಯವನು ಏನೂ ಹೇಳದೆ ನಕ್ಕು  ಹಣ ಕೊಟ್ಟು ಹೋದ. ಇಂಥವರ ಸಂಖ್ಯೆ ಸಾವಿರವಾಗಲಿ ಎಂದು ಹಾರೈಸಿ ಎಂದು ಅವನಿಗೆ ಕೈ ಮುಗಿದೆ!!!!!!

5 comments:

 1. ದುಡ್ಡಿನ ಹಿಂದೆ ಎಲ್ಲರೂ ಓಡುವುದಿಲ್ಲ ಬದಲಿಗೆ ಒಳ್ಳೆಯ ಮನಸ್ಸಿನ ಹಿಂದೆ ಓಡುತ್ತಾರೆ ಎನ್ನುವ ಸುಂದರ ಸನ್ನಿವೇಶದಲ್ಲಿ ನೀವು ಭಾಗಿ ಆಗಿದೀರ ಡಾಕ್ಟ್ರೆ..

  ಸುಂದರ ಮನಸ್ಸಿಗೆ ಸುಂದರ ಮನಸ್ಸಿನ ಅಲೆಗಳು ತಟ್ಟುತ್ತವೆ ಎನ್ನುವುದಕ್ಕೆ ಉದಾಹರಣೆ

  ಸುಂದರ ಘಟನೆ ಸುಂದರ ವಿವರ

  ಹೊಸವರ್ಷಕ್ಕೆ ಸುಮಧುರ ಘಟನೆ

  ReplyDelete
  Replies
  1. ಧನ್ಯವಾದಗಳು ಶ್ರೀ ಸರ್ . ಹೊಸವರ್ಷಕ್ಕೆ ರಿ ಎಂಟ್ರಿ :-)

   Delete
 2. ಇಂತಹ ಘಟನೆಗಳನ್ನು ಓದಿದಾಗ ಮನಸ್ಸು ಮುದಗೊಳ್ಳುತ್ತದೆ. ಆ ಅಂಗಡಿಕಾರನಿಗೆ ಹಾಗು ನಮ್ಮೊಡನೆ ಹಂಚಿಕೊಂಡ ನಿಮಗೆ ಧನ್ಯವಾದಗಳು.

  ReplyDelete
 3. the same thing happened with my son who is a young consultant in jaslok hospital mumbai but only difference was the role were reversed. it so happened my son went to a florist to buy a bouquet and was in a hurry, he gave the florist rs100 note and took the change and rushed. in the signal he saw the change that the florist had given, there were 400 plus rupees. probably the florist thought the note that my son gave was 500 note. my son immediately turned back gave the florist the excess money back. the florist was shocked and told him that this has happened for the first time in his life...... proud of my son.

  ReplyDelete
 4. THINGS LIKE THAT DO HAPPEN !!!!! PEOPLE ARE WONDERFUL !!!!! MAY THEIR TRIBE INCREASE !!!!!

  ReplyDelete