Tuesday, May 12, 2015

"ಯಾಕೋ ......,ಸುಸ್ತು !!! "

ಕೆಲವರಿಗೆ ಯಾಕೋ ಸದಾ ಸುಸ್ತು !!!!! ದೈಹಿಕವಾಗಿ ಅಂತಹ ಶ್ರಮ ಇರುವುದಿಲ್ಲ!!!!! ಕೆಲವರ ಕುಡಿದ ನೀರೂ ಅಲ್ಲಾಡಿರುವುದಿಲ್ಲ !!!! ಕೈಗೊಬ್ಬ ಕಾಲಿಗೊಬ್ಬ ಆಳು !!!! ಆದರೂ ಸದಾ ಸುಸ್ತು !!!! ಕಂಡ ಕಂಡ ಡಾಕ್ಟರು ಗಳಿಗೆ ತೋರಿಸಿರುತ್ತಾರೆ !!!! ದುಬಾರಿ ಬೆಲೆಯ ಸಾಕಷ್ಟು ವಿಟಮಿನ್ ಮಾತ್ರೆ ಗಳನ್ನೂ ನುಂಗಿರುತ್ತಾರೆ !!! ಪದೇ ,ಪದೇ ಎಲ್ಲಾ ಟೆಸ್ಟ್ ಮಾಡಿಸಿರುತ್ತಾರೆ !!!ಎಲ್ಲಾ ಟೆಸ್ಟು ನಾರ್ಮಲ್ !!!! ಹೇಳಿಕೊಳ್ಳು ವಂಥ ಯಾವುದೇ ದೈಹಿಕ ಖಾಯಿಲೆಗಳಿರುವುದಿಲ್ಲ!!!ಆದರೆ ಮನಸ್ಸಿನಲ್ಲಿ ಸದಾ ಕಿರಿಕಿರಿ !!! ಮನಸ್ಸಿಗೆ ಸದಾ ,ಯಾವುದೋ ಒಂದು ಅಥವಾ ಯಾರೋ ಒಬ್ಬರು ಸರಿ ಇಲ್ಲ ಅಂತ ಅನಿಸುತ್ತಿರುತ್ತದೆ!!!! 'ಎಲ್ಲವೂ ತಮ್ಮ ಮೂಗಿನ ನೇರಕ್ಕೇ ನಡೆಯುವುದಿಲ್ಲ,ಜಗತ್ತು ಇರುವುದೇ ಹೀಗೆ ' ಎಂದು ಮನಸ್ಸು ಒಪ್ಪಿಕೊಳ್ಳಲು ತಯಾರಿರುವುದಿಲ್ಲ!!!! ಇಂಥವರು ಮನಸ್ಸಿನಿಂದ ಇಲ್ಲ ಸಲ್ಲದ ನೆಗೆಟಿವ್ ಆಲೋಚನೆಗಳನ್ನು Delete ಮಾಡಿ, ಧ್ಯಾನ,ಪ್ರಾಣಾಯಾಮಗಳಿಂದ ಮನಸ್ಸನ್ನು ಶಾಂತವಾಗಿ, ಸಮಾಧಾನದಿಂದ ಇಟ್ಟುಕೊಳ್ಳುವುದನ್ನು ರೂಢಿ ಮಾಡಿಕೊಂಡರೆ ಸುಸ್ತು ಕಮ್ಮಿ ಆಗಬಹುದು ಅನಿಸುತ್ತದೆ. ಇಲ್ಲದಿದ್ದರೆ ಹುಚ್ಚು ಕುದುರೆಯ ನಾಗಾಲೋಟದ ವೇಗದ ಮನಸ್ಸು ಯಾವುದಾದರೂ ದೊಡ್ಡ ದೈಹಿಕ ಖಾಯಿಲೆಗೆ ಕಾರಣವಾಗಬಹುದು !!!!
MOVE THE BODY AND REST THE MIND !!!!!! ಸರ್ವೇ ಜನಾಹ ಸುಖಿನೋ ಭವಂತು .ನಮಸ್ಕಾರ _/\_


5 comments:

  1. ಅತ್ಯುತ್ತಮ ಸಲಹೆ. ಧನ್ಯವಾದಗಳು.

    ReplyDelete
  2. ಪುಟ್ಟ ಉಸಿರಾಟದ ಸಮಸ್ಯೆಗೆ, GERDಗೋ ಅಸಿಡಿಟಿಗೋ ಎದೆ ನೋವು ಬಂದರೆ ಸಾವೇ ಬಂತೆನ್ನುವಂತೆ ದಿನ ಕೊರಗಿ ಕೂರುವ ನನ್ನಂತ ಮತಿಗೇಡಿಗೆ ಕಿವಿ ಹಿಂಡಿ ಸರಿ ದಾರಿಗೆ ತರಬಲ್ಲ ಬರಹ.

    ReplyDelete
  3. ಚೆನ್ನಾಗಿದೆ ಸರ್.. ಯಾಕೋ ನಿಮ್ಮ ಲೇಖನದ ಮೊದಲ ಭಾಗ ಓದುತ್ತಿದ್ದಂತೆ ಇತ್ತೀಚೆಗೆ ನೋಡಿದ ಹಿಂದಿ ಚಿತ್ರ picu ನೆನ್ಪಾಯ್ತು. ಅದ್ರಲ್ಲಿ ಅಮಿತಾಬ್ ಶುಗರ್, ಬಿಪಿ , ಮಣ್ಣುಮಸಿ ಎಲ್ಲದರ ಟೆಸ್ಟೂ ಮಾಡಿಸಿರ್ತಾರೆ. ಅದೆಲ್ಲಾ ನಾರ್ಮಲ್ ಬಂದಿದೆ ಎಂಬ ದೀಪಿಕಾ ಮಾತಿಗೆ ಏನೂ ಇಲ್ಲವಾ ? ಎಲ್ಲವೂ ಸರಿಯಾಗಿದೆಯಾ ಅಂತ ಬೇಸರದಿಂದ ಕೇಳ್ತಾರೆ ಅಮಿತಾಬ್ ! ಆ ಮಾತುಕತೆ ನಮ್ಮೆಲ್ಲರ ಮನೋಭಾವದ ಅಣಕದಂತೆ ಭಾಸವಾಗುತ್ತೆ. ಕೆಲವರ ಹಾಗೇ ಇರ್ತಾರೆ. ಇವತ್ತು ಎಲ್ಲಿ ಬಿದ್ದೆ ಗೊತ್ತಾ ? ಕೈಯೆಲ್ಲಾ ತರಚಿಕೊಂಡೆ ಗೊತ್ತಾ ? ಕೆಲಸ ಮಾಡೋಕೆ ಆಗಲ್ಲ ಇತ್ತೀಚೆಗೆ ಅಂತ ಯಾವಾಗ್ಲೂ ಹೇಳ್ತಿರ್ತಾರೆ. ಹಂಗಂತ ಅವರು ಸುಳ್ಳು ಹೇಳ್ತಿರಲ್ಲ. ಆದ್ರೆ ಬೇರೆಯವ್ರ ಗಮನ ತಮ್ಮ ಕಡೆಗೇ ಇರ್ಲಿ ಎಂಬ ಆಸೆಯಿಂದ ಅವ್ರು ಈ ತರದ್ದೇನಾದ್ರೂ ಮಾಡ್ಕೊಳ್ತಿರ್ತಾರೆ. ಯಾರೂ ನಮ್ಮ ಬಗ್ಗೆ ಗಮನ ಹರಿಸೋಲ್ಲ ಅನ್ನೋ ಆಲೋಚನೆಯ ಹುಳ ಒಮ್ಮೆ ಮನಸ್ಸನ್ನು ಹೊಕ್ಕು ಬಿಟ್ರೆ ಅದನ್ನು ಹೊರಹಾಕೋದು ತುಂಬಾ ಅಂದ್ರೆ ತುಂಬಾನೇ ಕಷ್ಟ..ಅದೇ ತರ ನಮಗೇನೋ ಆಗೋಗಿದೆ ಎಂಬ ಭಾವದ ಗುಂಗೂ ಕೂಡ.ಎಲ್ಲಾ ಸರಿಯಾಗಿದೆ ಅಂತ ಎಲ್ಲಾ ಮೆಡಿಕಲ್ ರಿಪೋರ್ಟುಗಳು ತೋರಿಸಿದ್ರೂ ಇನ್ನೂ ಸಮಾಧಾನವಿಲ್ಲದ ಭಾವ..

    ReplyDelete
  4. Nice one sir, true. now a days people r very sensitive & addicted to medicines for everything.

    ReplyDelete
  5. Did you hear there's a 12 word phrase you can say to your man... that will induce intense emotions of love and impulsive attraction to you deep within his heart?

    Because hidden in these 12 words is a "secret signal" that triggers a man's impulse to love, worship and look after you with his entire heart...

    12 Words That Fuel A Man's Desire Instinct

    This impulse is so built-in to a man's brain that it will drive him to try harder than ever before to make your relationship the best part of both of your lives.

    As a matter of fact, fueling this influential impulse is so mandatory to having the best possible relationship with your man that once you send your man one of these "Secret Signals"...

    ...You will immediately find him expose his mind and soul for you in such a way he haven't expressed before and he will perceive you as the one and only woman in the world who has ever truly appealed to him.

    ReplyDelete

Note: Only a member of this blog may post a comment.