Tuesday, April 7, 2015

"ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ !!!! "

 ಇಂದು ವಿಶ್ವ ಆರೋಗ್ಯ ದಿನ.ಆರೋಗ್ಯವೆನ್ನುವುದು ನಮ್ಮ ಸಹಜ ಸ್ಥಿತಿ.ಅನಾರೋಗ್ಯ ನಮ್ಮ ತಪ್ಪು ಜೀವನ ಶೈಲಿಯಿಂದ,ಸರಿ ಇಲ್ಲದ ಆಹಾರ ಪದ್ಧತಿಯಿಂದ ಹಾಗೂ ಸಾಕಷ್ಟು ದೈಹಿಕ ವ್ಯಾಯಾಮ ಇಲ್ಲದಿರುವುದರಿಂದ ಬರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.ಸಾಕಷ್ಟು ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಬಳಸಬೇಕು.ಎಷ್ಟೇ ಕಷ್ಟವಾದರೂ ಕನಿಷ್ಠ ಅರ್ಧ ಗಂಟೆ ನಡೆಯುವುದೋ ಅಥವಾ ಇನ್ನಿತರ ದೈಹಿಕ ವ್ಯಾಯಾಮದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು.


ಹೋದ ವರ್ಷ ಜೂನ್ ತಿಂಗಳಲ್ಲಿ ,ಹೊಸದಾಗಿ ಡಯಾಬಿಟಿಸ್ ಬಂದವರೊಬ್ಬರಿಗೆ ದಿನಕ್ಕೆ ಕನಿಷ್ಠ ಅರ್ಧ ಗಂಟೆ ವಾಕಿಂಗ್ ಮಾಡುವಂತೆ ಹೇಳಿದೆ.'ಅಯ್ಯೋ ಈ ಮಳೆಯಲ್ಲಿ ಎಲ್ಲಿ ವಾಕಿಂಗ್ ಹೋಗೋದು ಸರ್?'ಎಂದರು.'ಅದಕ್ಕೆಲ್ಲಾ ಟೈಮ್ ಇಲ್ಲಾ ಸರ್' ಎಂದೂ ಸೇರಿಸಿದರು!ಅವರ ಗುಡಾಣ ಹೊಟ್ಟೆಯನ್ನೇ ನೋಡುತ್ತಾ 'ತಿನ್ನುವುದನ್ನು ಕಮ್ಮಿ ಮಾಡಿ' ಎಂದೆ.'ಅಯ್ಯೋ ನಾನು ಏನೂ ತಿನ್ನೋದೇ ಇಲ್ಲಾ ಸರ್,ಟೆನ್ಶನ್ ಇಂದ ಏನೂ ಸೇರೋದೇ ಇಲ್ಲಾ 'ಎಂದರು.'ಹೋಗಲಿ ಟೆನ್ಶನ್ ಅನ್ನಾದರೂ ಕಮ್ಮಿ ಮಾಡಿಕೊಳ್ಳಿ'ಎಂದೆ.'ಟೆನ್ಶನ್ ಎಲ್ಲಾರಿಗೂ ಇರೋದೇ ಬಿಡಿ ಸರ್'ಎಂದರು.
ನಾನು ಹೇಳಿದ ಸಲಹೆಗಳನ್ನೆಲ್ಲಾ ಸಾರಾ ಸಗಟಾಗಿ ತಿರಸ್ಕರಿಸಿ 'ಅವೆಲ್ಲಾ ನನ್ನ ಕೈಲಿ ಆಗೋಲ್ಲಾ ಸರ್,ಚೆನ್ನಾಗಿ ಕಂಟ್ರೋಲ್ ಆಗೋ ಹಾಗೆ ಯಾವುದಾದರೂ ಒಳ್ಳೆ ಮಾತ್ರೆ ಬರೆದು ಕೊಡಿ'ಎಂದರು.
ಅವರ ಈ ಮಾತುಗಳು ನನ್ನನ್ನು ಯೋಚಿಸುವಂತೆ ಮಾಡಿತು.'ನಾವು ಯಾವ ಸ್ಥಿತಿಗೆ ಬಂದು ನಿಂತಿದ್ದೇವೆ!'ಎನಿಸಿತು.ಔಷದ ವಿಲ್ಲದೆ ಆರೋಗ್ಯವಾಗಿ ಬದುಕೊದಿಕ್ಕೆ ಸಾಧ್ಯವಿಲ್ಲವೇ?'ಎನಿಸಿತು.ಕೈ ಕಾಲುಗಳಿಗೆ ಅವುಗಳ ಕೆಲಸ ಕೊಡದಿದ್ದರೆ ಸಮಗ್ರ ಆರೋಗ್ಯ ಹೇಗೆ ಸಾಧ್ಯ?
'what is used less and less ultimately becomes useless' ಅನ್ನುವ ಮಾತೊಂದಿದೆ.ಮೊದಲಿಂದಲೂ ಕನಿಷ್ಟ ಅರ್ಧದಿಂದ ಒಂದು ಗಂಟೆ ನಡೆದರೆ ಈಗ ದಿನನಿತ್ಯ ಕಾಣುತ್ತಿರುವ ಅರ್ಧಕ್ಕಿಂತ ಹೆಚ್ಚು ಕಾಯಿಲೆಗಳನ್ನು ದೂರವಿಡಬಹುದೆನಿಸುತ್ತದೆ.ಯಾವುದೇ ಕಾರಣಕ್ಕಾದರೂ ಮನೆಯಿಂದ ಹೊರಗೆ ಹೋಗಲು ಆಗದೆ ಇದ್ದ ಪಕ್ಷದಲ್ಲಿ,ಮನೆಯಲ್ಲೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅರ್ಧ ಗಂಟೆ ನಡೆಯಬಹುದು.ಬೋನಿನಲ್ಲಿ ಇರುವ ಹುಲಿ,ಚಿರತೆಯಂತಹ ಪ್ರಾಣಿಗಳೇ ಆ ಸ್ವಲ್ಪ ಜಾಗದಲ್ಲೇ ಒಂದುಕಡೆಯಿಂದ ಇನ್ನೊದು ಕಡೆ ಓಡಾಡುವುದನ್ನು ನೋಡಿದ್ದೇವೆ. Exercising is a necessity ಎನ್ನುವುದನ್ನು ನಾವು ಇದರಿಂದಲಾದರೂ ಕಲಿಯಬಹುದಲ್ಲವೇ?ಅನುಕೂಲವಿದ್ದವರು ಮನೆಯಲ್ಲೇ ಒಂದು ಟ್ರೆಡ್ ಮಿಲ್ ಇಟ್ಟುಕೊಳ್ಳಬಹುದು.
ಬಿ.ಪಿ,ಶುಗರ್,ಮತ್ತು ಹಾರ್ಟ್ ಪ್ರಾಬ್ಲಂ ಇಲ್ಲದವರು ಮೆಟ್ಟಿಲು ಹತ್ತಿ ಇಳಿಯುವುದನ್ನೇ ಒಂದು ವ್ಯಾಯಾಮ ವಾಗಿ ಅಳವಡಿಸಿಕೊಳ್ಳ ಬಹುದು.ಹತ್ತು ನಿಮಿಷದಿಂದ ಶುರು ಮಾಡಿ, ಬರ ಬರುತ್ತಾ ಮೂವತ್ತು ನಿಮಿಷದವರೆಗೆ ಮೆಟ್ಟಿಲು ಹತ್ತಿ ಇಳಿದರೆ ಅದ್ಭುತ ವ್ಯಾಯಾಮವಾಗುತ್ತದೆ.ಇದರ ಜೊತೆ ಸ್ವಲ್ಪ ಯೋಗ ಮತ್ತು ಪ್ರಾಣಾಯಾಮವನ್ನು ಕಲಿತರೆ ಆರೋಗ್ಯಕ್ಕೆ ಇನ್ನೂ ಒಳಿತು.ಸರಿಯಾದ ಆಹಾರ,ಆರೋಗ್ಯಕರ ವಿಚಾರಗಳು  ಮತ್ತು ಸರಿಯಾದ ವ್ಯಾಯಾಮದದಿಂದ ಔಷಧವಿಲ್ಲದೆಯೂ ಆರೋಗ್ಯವಾಗಿರಬಹುದಲ್ಲವೇ ?

ಆರೋಗ್ಯವೆನ್ನುವುದು  ನಮ್ಮೆಲ್ಲರ ಸಹಜ ಸ್ಥಿತಿ.ಅದು ನಮ್ಮೆಲ್ಲರ ಜನ್ಮಸಿದ್ಧ ಹಕ್ಕು. ಈ ವಿಶ್ವ ಆರೋಗ್ಯ ದಿನದಂದು ಎಲ್ಲರಿಗೂ ಸಮೃದ್ಧಿಯಾಗಿ ಆರೋಗ್ಯ ಭಾಗ್ಯ ಲಭ್ಯವಾಗಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.ನಮಸ್ಕಾರ.

7 comments:

  1. ಒಳ್ಳೆ ಲೇಖನ.
    ಒಂದು ತಾಯತ ಕಟ್ಟಿಕೊಳ್ಳಿ. ಎಲ್ಲಾ ಸರಿಯಾಗುತ್ತೆ !!!!
    http://machikoppa.blogspot.in/2011/05/blog-post.html

    ReplyDelete
  2. ವಿಶ್ವ ಆರೋಗ್ಯ ದಿನದ ಹಾರ್ದಿಕ ಶುಭಾಶಯಗಳು ವೈದ್ಯೋ ನಾರಾಯಣೋ ಹರಿಃ ಗಳೇ.

    ತುಸುವಾದರೂ ವ್ಯಾಯಾಮವಿಲ್ಲದೆ, ತಿಂದ ಅನ್ನವಾದರೂ ಕರಗುವುದು ಹೇಗೇ ಮತ್ತು ಔಷಧವೂ ಮೈ ಹತ್ತುವುದಾದರೂ ಹೇಗೆ?

    ತಮ್ಮ ಬ್ಲಾಗ್ ಮುಖೇನ ದಯಮಾಡಿ, ಸರಳ ವ್ಯಾಯಾಮ, ಪ್ರಾಣಾಯಾಮ, ನೆಮ್ಮದಿಗೆ ಸಲಹೆಗಳು ಮತ್ತು ಔಷದಿ ಮುಕ್ತ ಜೀವನ ಕ್ರಮದ ಬಗ್ಗೆ ಜಾಗೃತಿ ಮೂಡಿಸಿರಿ.

    ReplyDelete
  3. ಉತ್ತಮ ಸಲಹೆಗಾಗಿ ಧನ್ಯವಾದಗಳು.

    ReplyDelete
  4. ಕೃಷ್ಣಮೂರ್ತಿ ಸರ್...
    ಆರೋಗ್ಯಕ್ಕೆ ಆರೋಗ್ಯವಂತ ಸಲಹೆ ಕೊಟ್ಟರೆ ಅದು
    ಖಂಡಿತವಾಗಿಯೂ ಜೀರ್ಣವಾಗೋದಿಲ್ಲಾ...
    ಎಲ್ಲರಿಗೂ ಈಗ ತಾಳ್ಮೆ ಮತ್ತೆ ಸಮಯ ಕಡಿಮೆ.....
    ಕೇಳಿ ನೋಡಿ ಸುಮ್ನೇ ಟಿ.ವಿ ನೋಡೋರನ್ನು ಅವರಿಗೂ
    ಕೂಡಾ ಸಮಯವಿರೋದಿಲ್ಲಾ....

    ಬದಲಾಗಬೇಕಿದೆ ನಾವು....
    ಮಾತ್ರೆಗಳ ಜೊತೆಯೇ ಹಬ್ಬಿಕೊಂಡ ಬದುಕಾಗಿಬಿಟ್ಟಿದೆ....

    ಒಳ್ಳೆಯ ಬರಹ....

    ReplyDelete
  5. ಚಿಕ್ಕ ಚೊಕ್ಕ ಮಾಹಿತಿಗಳು ತಿಳಿವು ಎಷ್ಟೋ ಉಪಯೋಗವಾಗುತ್ತದೆ. ಉಪಯುಕ್ತ ಸಲಹೆಗಳು ಸುಂದರ ಆರೋಗ್ಯಕ್ಕೆ
    ಧನ್ಯವಾದಗಳು ಡಾಕ್ಟ್ರೆ

    ReplyDelete
  6. ಬಹುಷಃ ಇರೋ ಸಮಸ್ಯೆನಾ ಇರೋ ಹಾಗೆ ಸ್ವೀಕರಿಸಿದ್ರೆ ನಾವು ಸಮಾಧಾನವಾಗಿರಬುದೇನೋ. ಹಾಗಾಂತ ಮನಸ್ಸೆಲ್ಲಿ ಸುಮ್ಮನಿರುತ್ತೆ. ಗಾಯ ಕೆರೆದು ದೊಡ್ಡದು ಮಾಡೋದೇ ಅದರ ಕೆಲಸ. ರಮಣರು ಕ್ಯಾನ್ಸರ್ ಇದ್ದೂ ಎಲ್ಲದ ಹಾಗಿದ್ದದ್ದು ನನ್ನಂತಹ ಮೂಢನಿಗೆ ಭಾರೀ ಆಶ್ಚರ್ಯ.

    ReplyDelete
  7. This way my partner Wesley Virgin's tale launches in this SHOCKING and controversial video.

    Wesley was in the military-and soon after leaving-he found hidden, "self mind control" tactics that the government and others used to get everything they want.

    THESE are the EXACT same secrets tons of famous people (especially those who "became famous out of nowhere") and the greatest business people used to become rich and successful.

    You probably know that you use less than 10% of your brain.

    That's because most of your brain's power is UNCONSCIOUS.

    Perhaps that thought has even taken place INSIDE OF YOUR own head... as it did in my good friend Wesley Virgin's head seven years back, while driving an unregistered, beat-up bucket of a car with a suspended license and $3 on his debit card.

    "I'm absolutely frustrated with living check to check! Why can't I turn myself successful?"

    You took part in those conversations, ain't it so?

    Your success story is waiting to start. You just need to take a leap of faith in YOURSELF.

    UNLOCK YOUR SECRET BRAINPOWER

    ReplyDelete

Note: Only a member of this blog may post a comment.