ಈಗೀಗ ತಂದೆ ತಾಯಂದಿರು L.K.G.ಯಿಂದಲೇ ತಮ್ಮ ಮಕ್ಕಳ RANK ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ !!!!! ಎಲ್ಲಾ ಮಕ್ಕಳೂ ಫಸ್ಟ್ RANKಏ ಬರಬೇಕೆಂದರೆ ಹೇಗೆ ಸಾಧ್ಯ!!!!?
ಇದು ಸುಮಾರು ಇಪ್ಪತ್ತು ವರುಷಗಳ ಕೆಳಗೆ ನಡೆದ ಘಟನೆ. ನಾನು ನನ್ನ ಸ್ನೇಹಿತನ ಮನೆಗೆ ಹೋಗಿದ್ದೆ. ಅವರ ಮಗ ಆರನೇ ತರಗತಿಯಲ್ಲಿ ಓದುತ್ತಿದ್ದ . ಸಂಜೆ ಶಾಲೆಯಿಂದ ಕುಣಿಯುತ್ತಾ ಬಂದ .ಅವನ ತಂದೆ ಅವನನ್ನು "ಏನೋ ,ಇಷ್ಟೊಂದು ಖುಷಿಯಾಗಿದ್ದೀಯಾ ? " ಎಂದು ವಿಚಾರಿದರು. ಅದಕ್ಕವನು ಖುಷಿಯಿಂದ " ಅಪ್ಪಾ ...... ನಾನು ಹದಿನೇಳನೇ RANKಉ !!!!" ಎಂದ . ಅದಕ್ಕೆ ಅವರಪ್ಪ " ಅಲ್ಲಪ್ಪಾ ಮಗನೇ ......... ಹದಿನೇಳನೇ RANK ಬಂದರೆ ಯಾರಾದರೂ ಇಷ್ಟೊಂದು ಖುಷಿ ಪಡುತ್ತಾರೆಯೇ !!!!?"ಎಂದು ಆಶ್ಚರ್ಯದಿಂದ ಕೇಳಿದರು. "ನನ್ನ ಬೆಸ್ಟ್ ಫ್ರೆಂಡ್ ಗಿಂತ ಮುಂದೆ ಇದ್ದೀನಿ. ಅವನು ಹದಿನೆಂಟನೇ RANKಉ " ಎಂದ !!!! ಸಾಹೇಬರ ಭಾರೀ ಖುಷಿಗೆ ಕಾರಣ ತಿಳಿಯಿತು!!!! ಅದಕ್ಕೆ ಅವರ ತಂದೆ "ನಿಮ್ಮ ಕ್ಲಾಸಲ್ಲಿ ಎಷ್ಟು ಜನ ಹುಡುಗರಿದ್ದಾರೆ ?"ಎಂದು ಕೇಳಿದರು. "ಹದಿನೆಂಟು"ಎಂದು ಉತ್ತರ ಬಂತು. ಉತ್ತರ ಕೇಳಿ ನಾನು ದಂಗಾದೆ !!!! ಇರುವ ಹದಿನೆಂಟು ಜನರಲ್ಲಿ ಹದಿನೇಳನೇ RANK ಬಂದು,ಮೊದಲು ಬಂದವನ ಹಾಗೆ ಕುಣಿದು ಕುಪ್ಪಳಿಸುತ್ತಿದ್ದಾನೆ !!!! ಅವನ ತಂದೆಯೂ ಯಾವುದಕ್ಕೂ ತಲೆ ಕೆಡಿಸಿ ಕೊಳ್ಳದೇ ಸದಾ ಖುಷಿಯಿಂದ ರುತ್ತಿದ್ದ ದಿಲ್ದಾರ್ ಮನುಷ್ಯ . "ಆಯ್ತು ಹೋಗು ,ಮುಂದಿನ ಸಲ ಹದಿನಾರನೇ RANK ಬರೋಕೆ ಟ್ರೈ ಮಾಡು"ಎಂದ. "ಆಯ್ತಪ್ಪಾ " ಎನ್ನುತ್ತಾ ,ಮಗರಾಯ ಕುಣಿಯುತ್ತಾ ಆಟಕ್ಕೆ ಓಡಿದ !!!! ಇಂದು ಅವನು ಅಮೆರಿಕಾದಲ್ಲಿ ದೊಡ್ಡದೊಂದು ಹುದ್ದೆಯಲ್ಲಿದ್ದಾನೆ. ಕೈ ತುಂಬಾ ಸಂಬಳ ತೆಗೆದು ಕೊಂಡು ಸುಖವಾಗಿದ್ದಾನೆ. ಮಕ್ಕಳ RANK ಬಗ್ಗೆ ಬಹಳ ತಲೆ ಕಡಿಸಿ ಕೊಳ್ಳುವವರು ಸ್ವಲ್ಪ ಯೋಚಿಸಬೇಕಾದ ವಿಷಯವಿದು.

ತೀರಾ ರೇಸು ಕುದುರೆಗಳನ್ನು ತಯಾರಿ ಮಾಡುವಂತೆ ಇಂದಿನ ಮಕ್ಕಳನ್ನು ಪೋಷಕರು ನೋಡುತ್ತಿದ್ದಾರೆ. ಉತ್ತಮ ಶಾಲೆಯೇ ಆಗಬೇಕು, ಮಕ್ಕಳು ನೂರಕ್ಕೆ ನೂರು ಅಂಕ ಪಡೆಯಬೇಕೆಂದು ಒತ್ತಡ ಹಾಕುತ್ತಿದ್ದಾರೆ ಅನಿಸುತ್ತದೆ.
ReplyDeleteಎಲ್ಲರೂ ವೈದ್ಯಕೀಯ, ತಾಂತ್ರಿಕ ಅಥವಾ ಬಯೋ ಆಯ್ಕೆಗಳನ್ನೇ ಹೇರುತ್ತಾರೆ. ಅಂತೆಯೇ ಮಕ್ಕಳನ್ನು ಸಜ್ಜುಗೊಳಿಸುತ್ತಿದ್ದಾರೆ ಅನಿಸುತ್ತದೆ.
Rank. ಕೊಡುವ ಪರೀಕ್ಷಾ ವಿಧನಾದಲ್ಲೇ ಲೋಪವಿದೆ. ಮೊದಲು ಪರೀಕ್ಷಾ ವಿಧಾನವನ್ನು ಪರಿಷ್ಕರಣ ಮಾಡದೇ, ಬರೀ ಮಕ್ಕಳನ್ನು rank ಮಾನದಂಡದಿಂದ ತೂಗುವುದು ಅಕ್ಷಮ್ಯ.
ತಮ್ಮ ಈ ಕಿರು ಬರಹವು ಕಣ್ಣು ತೆರೆಸುವಂತಿದೆ.
ನಿಮ್ಮ ಅಭಿಪ್ರಾಯವನ್ನು ನಮ್ಮ ಶಿಕ್ಷಣತಜ್ಞರು ಗಮನಿಸುವುದು ಒಳಿತು.
ReplyDeleteಓದುವ ಮಕ್ಕಗಳಿಗಷ್ಟೇ.... ತರಬೇತಿ ನೀಡಿ, ಸಜ್ಜುಗೂಳಿಸಿ ವಿದ್ಯಾವಂತರನ್ನಾಗಿಸಿದರೆ ಸಾಲದು, ಓದಿನಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚು ಪ್ರೋತ್ಸಾಹಿಸಿ; ಜ್ಞಾನದಾಹ ಹೆಚ್ಚಾಗುವಂತೆ ಮಾಡುವುದೇ ಇಂದಿನ ಶಿಕ್ಷಕರು ಮಾಡಬೇಕಿದೆ.
ReplyDeleteRANKGINTALOO TILUVALIKE MELU
ReplyDeleteನಮ್ಮ ತಂದೆ ಉಪಾಧ್ಯಾಯರಾಗಿದ್ದರು. ಸುಮ್ಮನೆ ಪಾಠ ಮಾಡುವುದ ಅವರ ಪ್ರವೃತ್ತಿಯಾಗಿರಲಿಲ್ಲ. ಮಕ್ಕಳಿಗೆ ಹೇಗಾದರೂ ಕಲಿಸಬೇಕೆಂಬ ಹಂಬಲ ಅವರಲ್ಲಿ ತುಂಬಿತ್ತು. ಇಡೀ ತರಗತಿಯಲ್ಲಿ ಅತೀ ದಡ್ಡ ಹುಡುಗನ ಕಡೆ ಅವರ ಗಮನ ಹೆಚ್ಚಾಗಿರುತ್ತಿತ್ತು. ಅಂತಹವನನ್ನು ಓದಿನಲ್ಲಿ ಮೇಲಕ್ಕೆ ತಂದರೆ ಮಿಕ್ಕವರೆಲ್ಲರೂ ಚೆನ್ನಾಗಿ ಓದಿಯೇ ಓದುತ್ತಾರೆ ಎನ್ನುವ ತರ್ಕ ಅವರದು. ನನ್ನಂತಹ ದಡ್ಡನಿಗೆ ಅಂತಹ ಅಧ್ಯಾಪಕರೇ ಬೇಕಿತ್ತು. ಅವರು ಕಳಿಸಿದ ಪಾಠ ನಾ ಇಂದಿಗೂ ಮರೆಯಲಾಗುವುದಿಲ್ಲ ಅವರು ನನಗೆ ಪಿತೃವೂ ಮತ್ತು ಗುರುವೂ ಆಗಿದ್ದರು. ಆದರೆ ಇಂದಿನ ಮಕ್ಕಳ ಮೇಲಿನ ಒತ್ತಡದ ಪ್ರಮಾಣ ನೋಡಿದರೆ 'ಅಯ್ಯೋ'ಎನಿಸುತ್ತದೆ. ವಿದ್ಯಾವಂತರೆಲ್ಲರೂ ಯೋಗ್ಯರಾಗುವುದಿಲ್ಲ. ಯೋಗ್ಯರನ್ನು ತಯಾರುಮಾದುವುದೇ ಸರಿಯಾದ ವಿದ್ಯಾಭ್ಯಾಸ ಕ್ರಮ.
ReplyDeleteಪುಸ್ತಕದ ಜ್ಞಾನ ಮತ್ತು ಮಸ್ತಕದ ಜ್ಞಾನ ಎರಡೂ ಬೇರೆ ಬೇರೆ ಎನ್ನುವುದನ್ನು ಪರಿಣಾಮಕಾರಿಯಾಗಿ ರೂಪಿಸುತ್ತದೆ ಈ ಲೇಖನ ಸೂಪರ್ ಡಾಕ್ತ್ರ್ರೆ
ReplyDelete