" ಇಂಥವರು ಈಗಲೂ ಇದ್ದಾರೆ !!!!! "
----------------------------------------
ಮೊನ್ನೆ ಯುಗಾದಿ ಹಬ್ಬದ ಹಿಂದಿನ ದಿನ ರಾತ್ರಿ ಆರ್. ಟಿ. ನಗರದ ಮಾರ್ಕೆಟ್ಟಿನ ಅಂಗಡಿಯೊಂದರಲ್ಲಿ ವಿಜಯವಾಣಿಯ ಯುಗಾದಿ ವಿಶೇಷಾಂಕವನ್ನು ಖರೀದಿಸಿದೆ. ಅದರ ಬೆಲೆ 50 ರೂಪಾಯಿ. ನಾನು ಅಂಗಡಿಯವನಿಗೆ ನೂರು ರೂಪಾಯಿ ಕೊಟ್ಟು , ಪುಸ್ತಕ ತೆಗೆದು ಕೊಂಡು ,ಬಾಕಿ ಐವತ್ತು ರೂಪಾಯಿಗಳನ್ನು ತೆಗೆದು ಕೊಳ್ಳುವುದನ್ನು ಮರೆತು ಮುಂದೆ ಹೋದೆ. ಬಾಕಿ ಹಣದ ವಿಷಯ ಮರೆತೇ ಹೋಗಿತ್ತು . ಸುಮಾರು ದೂರ ಹೋಗಿ ಮತ್ಯಾವುದೋ ಅಂಗಡಿಯಲ್ಲಿ ಇನ್ನೇನೋ ಖರೀದಿಸುತ್ತಿದ್ದೆ.ಹಿಂದಿನಿದ ಯಾರೋ ಬೆನ್ನು ತಟ್ಟುತ್ತಿದ್ದರು. ಹಿಂದಿರುಗಿ ನೋಡಿದರೆ ಪುಸ್ತಕದ ಅಂಗಡಿಯವನು !!!!! ನನ್ನ ಬಾಕಿ ಐವತ್ತು ರೂಪಾಯಿಗಳನ್ನು ಹಿಂದಿರುಗಿಸಲು ನನ್ನನ್ನು ಹುಡುಕಿಕೊಂಡು ಸುಮಾರು ದೂರ ಬಂದಿದ್ದ.!!!! "ಅಲ್ಲಪ್ಪಾ , ಈಗಿನ ಕಾಲದಲ್ಲೂ ನಿಮ್ಮಂಥಾ ಪ್ರಾಮಾಣಿಕರು ಇದ್ದಾರಲ್ಲಾ !!!! " ಎಂದು ಆಶ್ಚರ್ಯದಿಂದ ಉದ್ಗರಿಸಿದೆ. ಅಂಗಡಿಯವನು ಏನೂ ಹೇಳದೆ ನಕ್ಕು ಹಣ ಕೊಟ್ಟು ಹೋದ. ಇಂಥವರ ಸಂಖ್ಯೆ ಸಾವಿರವಾಗಲಿ ಎಂದು ಹಾರೈಸಿ ಎಂದು ಅವನಿಗೆ ಕೈ ಮುಗಿದೆ!!!!!!