Sunday, January 9, 2011

"ಹೀಗೊಂದು ಮರೆಯದ ರಾತ್ರಿ !"

1972 ರಲ್ಲಿ ಬಳ್ಳಾರಿಯಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ನಡೆದ ಘಟನೆ.ಬಳ್ಳಾರಿಯ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ನಮ್ಮ ಹಾಸ್ಟೆಲ್ ಪಕ್ಕವೇ ಇದ್ದುದರಿಂದ,ಅಪ್ಪ ಅಮ್ಮನನ್ನು ನೋಡಬೇಕು ಎನಿಸಿದಾಗ ಇದ್ದಕ್ಕಿದ್ದಂತೆ ಡಿಸೈಡ್ ಮಾಡಿ ಟ್ರೈನ್ ಹತ್ತಿ ರಾಯಚೂರಿಗೆ ಹೊರಟುಬಿಡುತ್ತಿದ್ದೆ.ಆಗೆಲ್ಲಾ ಫೋನುಗಳ ಸಂಪರ್ಕ ಕೂಡ ಇರಲಿಲ್ಲ.ಈಗ ಮೊಬೈಲ್ ಇಲ್ಲದೆ ಒಂದು ನಿಮಿಷವೂ ಇರಲಾಗುವುದಿಲ್ಲ!ವಾಪಸ್ ಬರುವಾಗ ರಾತ್ರಿ  ಹನ್ನೊಂದು ಗಂಟೆ ಸುಮಾರಿಗೆ ರಾಯಚೂರಿನಲ್ಲಿ  ದಾದರ್ -ಮದ್ರಾಸ್ ಎಕ್ಸ್ಪ್ರೆಸ್ ಟ್ರೈನ್ ಹತ್ತಿ, ಗುಂತಕಲ್ ಸ್ಟೇಷನ್ ನಲ್ಲಿ ಇಳಿದು ಬೇರೆ platform ನಲ್ಲಿ ನಿಂತಿರುತ್ತಿದ್ದ ಗುಂಟೂರ್ -ಹುಬ್ಬಳ್ಳಿ ಪ್ಯಾಸೆಂಜರ್ ಟ್ರೈನಿನಲ್ಲಿ ಯಾವುದಾದರೂ ಖಾಲಿ ಇದ್ದ ಬೋಗಿಯಲ್ಲಿ ಮೇಲಿನ ಲಗೇಜ್ ಇಡುವ ಜಾಗ ಹಿಡಿದು ಮಲಗಿಬಿಟ್ಟರೆ,ಬೆಳಗಿನ ಆರೂವರೆ ಸುಮಾರಿಗೆ ಬಳ್ಳಾರಿ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ ನಲ್ಲಿ ಇಳಿದು ಐದು ನಿಮಿಷದಲ್ಲಿ ಕಾಲೇಜ್ ಹಾಸ್ಟೆಲ್ ನಲ್ಲಿ ಇರುತ್ತಿದ್ದೆ.
ಒಮ್ಮೆ ಹೀಗೇ ಡಿಸೆಂಬರಿನಲ್ಲಿ ರಾಯಚೂರಿಗೆ ಹೋಗಿ,ಟ್ರೈನಿನಲ್ಲಿ ವಾಪಸ್ ಬರುತ್ತಿದ್ದೆ.ಮಾಮೂಲಿನಂತೆ ಗುಂತಕಲ್ಲಿನಲ್ಲಿ ದಾದರ್ ಟ್ರೈನ್ ಇಳಿದು platform ಬದಲಿಸಿ ಆಗಲೇ ಬಂದು ನಿಂತಿದ್ದ ಗುಂಟೂರ್ -ಹುಬ್ಬಳ್ಳಿ ಟ್ರೈನಿನಲ್ಲಿ ಖಾಲಿ ಇದ್ದ ಬೋಗಿಯೊಂದರ ಮೇಲಿನ ಜಾಗ ಹಿಡಿದು ತಲೆಗೆ ಮಫ್ಲರ್ ಸುತ್ತಿಕೊಂಡು ಶಾಲು ಹೊದ್ದು, ಬೆಚ್ಚಗೆ ಮಲಗಿದಾಗ ರಾತ್ರಿ ಸುಮಾರು ಒಂದೂವರೆಯಾಗಿತ್ತು.
ಇದ್ದಕ್ಕಿದ್ದಂತೆ ಎಚ್ಚರವಾದಾಗ ,ಟೈಮ್ ನೋಡಿಕೊಂಡೆ.ಬೆಳಗಿನ ಜಾವ ಸುಮಾರು ಮೂರೂವರೆ ಗಂಟೆಯಾಗಿತ್ತು.ಟ್ರೈನಿನ ಗಡ,ಗಡಾ ಶಬ್ದ ಲಯ ಬದ್ಧವಾಗಿ ಕೇಳುತ್ತಿತ್ತು.ಟ್ರೈನಿನ ಮಂದ ಬೆಳಕಿನಲ್ಲಿ ನಿದ್ದೆ ಕಣ್ಣಿನಲ್ಲೇ ಪಕ್ಕಕ್ಕೆ ತಿರುಗಿ ನೋಡಿದೆ.ಹೆದರಿಕೆಯಿಂದಒಂದು ಕ್ಷಣ ಹೃದಯ ಬಾಯಿಗೆ ಬಂದಂತಾಯಿತು.ನಿದ್ದೆ ಹಾರಿ ಹೋಯಿತು.ನನ್ನ ಪಕ್ಕದಲ್ಲೇ ಕೆಳಗೆ 'ಹೀ'ಎಂದು ಹಲ್ಲು ಕಿರಿಯುತ್ತಾ ,ಬುದ್ಧಿ ವೈಕಲ್ಯಗೊಂಡಿದ್ದ  ಹೆಂಗಸೊಬ್ಬಳು  ನಿಂತಿದ್ದಳು!ಕೂದಲು ಕೆದರಿಕೊಂಡು,ಮಾಸಿ ,ಹರಿದ ಹಸಿರುಸೀರೆಯೊಂದನ್ನು ಉಟ್ಟು ,ಮೇಲೆ ಯಾರೋ ಟಿ.ಟಿ.ಉಪಯೋಗಿಸಿ ಎಸೆದ ಹಳೆಯ ಕರಿಯ ಕೋಟು ತೊಟ್ಟು,ತಲೆಗೆಲ್ಲಾ ಯಾವುದೋ ಹೂವುಗಳನ್ನು ಸಿಗಿಸಿಕೊಂಡು,ಮುಖಕ್ಕೆಲ್ಲಾ ಹರಿಶಿನ ಕುಂಕುಮ ಮೆತ್ತಿಕೊಂಡು,ವಿಚಿತ್ರವಾಗಿ ಕಾಣುತ್ತಿದ್ದ  ಬುದ್ಧಿ ವೈಕಲ್ಯಗೊಂಡ ಆ ಹುಚ್ಚು ಹೆಂಗಸು  ಮತ್ತು ನನ್ನನ್ನು ಬಿಟ್ಟು ಆ ಇಡೀ ಬೋಗಿಯಲ್ಲಿ ಮತ್ತೊಂದು ನರಪಿಳ್ಳೆ ಇರಲಿಲ್ಲ.ನಾನು ನನ್ನ ಬ್ಯಾಗ್ ಹಿಡಿದು ಮೆಲ್ಲಗೆ ಕೆಳಗಿಳಿಯಲು ತೊಡಗಿದ್ದು ನೋಡಿ ಆಕೆ ಜೋರಾಗಿ ಗಹ ಗಹಿಸಿ ನಕ್ಕಳು. ಅಪರಾತ್ರಿಯಲ್ಲಿ ಕೇಳಿದ ಆ ವಿಲಕ್ಷಣ ನಗುವಿನ ಶಬ್ಧದ ಅಲೆಗಳಿಗೆ ನನ್ನ ಮೈಯೆಲ್ಲಾ ಬೆವತು ,ಕೈ ಕಾಲು  ನಡುಗುತ್ತಿತ್ತು.ಕೆಳಗಿಳಿದು ಕೈಯಲ್ಲಿ ಬ್ಯಾಗ್ ಹಿಡಿದು ಟಾಯ್ಲೆಟ್ ಕಡೆ ಹೊರಟೆ.ಅವಳೂ  ಗಹಗಹಿಸಿ ನಗುತ್ತಾ ನನ್ನ ಹಿಂದೆಯೇ ಬಂದಳು.ಏನು ಮಾಡಲೂ ತೋಚದೆ ,ಟಾಯ್ಲೆಟ್ ಹೊಕ್ಕು ಬಾಗಿಲು ಹಾಕಿಕೊಂಡೆ.ಸುಮಾರು ಹೊತ್ತು ಜೋರಾಗಿ ಕೂಗುತ್ತಾ,ಏನೇನೋ ಮಾತುಗಳಾಡುತ್ತಾ,ಆಗಾಗ ವಿಲಕ್ಷಣವಾಗಿ ಗಹಗಹಿಸಿ ನಗುತ್ತಾ ,ಬಾಗಿಲು ಬಡಿಯುತ್ತಿದ್ದಳು.ನಿಜವಾದ ಹೆದರಿಕೆಯೆಂದರೆ ಏನೆಂದು ಆ ದಿನ ಅನುಭವವಾಗಿತ್ತು. ಬೆಳಗಿನ ಜಾವ ಐದೂವರೆ ವರೆಗೆ ಹೊರ ಬರಲು ಧೈರ್ಯ ಸಾಲದೇ ಟಾಯ್ಲೆಟ್ ನಲ್ಲೇ  ಇದ್ದು ,ಬಳ್ಳಾರಿ ರೈಲ್ವೇ ಸ್ಟೇಶನ್ ನಲ್ಲಿ ಟ್ರೈನ್ ನಿಂತಾಗ ಹೆದರುತ್ತಲೇ ಟಾಯ್ಲೆಟ್ ಬಾಗಿಲು ತೆರೆದು ಹೊರ ಬಂದೆ.ಪುಣ್ಯಕ್ಕೆ ಅವಳು ಮತ್ತೆ ಕಾಣಲಿಲ್ಲ.ರಾತ್ರಿಯ ಆ ನೀರವತೆಯಲ್ಲಿ ,ಯಾರೂ ಇಲ್ಲದ ಚಲಿಸುವ ರೈಲಿನಲ್ಲಿ ನಿದ್ದೆಯಿಂದ ಎಚ್ಚರವಾದಾಗ ಪಕ್ಕದಲ್ಲೇ ಕಂಡ ,'ಹೀ'ಎಂದು ಹಲ್ಲು ಕಿಸಿದ  ಆ ವಿಚಿತ್ರ ಮುಖವನ್ನು ನೆನಸಿಕೊಂಡರೆ  ಈಗಲೂ ನಡುಕ ಹುಟ್ಟುತ್ತದೆ. 

37 comments:

  1. ಈ ಎನ್ನುವುದೂ "ಹೀ" ಎಂದರೆ ಚೆನ್ನಾಗಿತ್ತೇನೋ?

    ಹುಚ್ಚರು ನಮಗೆ ಹೆದರುತ್ತಾರೂ ಅಥವಾ ನಾವು ಅವರಿಗೋ...

    ಹೇಗೋ ತಪ್ಪಿಸಿಕೊಡರಲ್ಲ ಸಾಕುಬಿಡಿ.

    ReplyDelete
  2. REFRESH ADA HAGAYITU.GATTIGARU NEEVU

    ReplyDelete
  3. train experiences always wouldn't give us pleasent. ur experience horrifies. by God's grace Indian Railways improved their train services.
    aa huchi matu aa ratri!

    ReplyDelete
  4. ಗುಬ್ಬಚ್ಚಿ ಸತೀಶ್;ನಿಮ್ಮ ಸಲಹೆಯಂತೆ ಬರವಣಿಗೆಯಲ್ಲಿ ಸೂಕ್ತ ಬದಲಾವಣೆ ಮಾಡಿದ್ದೇನೆ .ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  5. ಹೇಮಚಂದ್ರ;ಜೀವನದಲ್ಲಿ ಕೆಲವೇ ಕೆಲವು ಸಲ ವಿಪರೀತ ಹೆದರಿದ್ದುಂಟು.ಅದರಲ್ಲಿ ಈ ಘಟನೆ ಮೊದಲಿಗೆ ನೆನಪಾಗುತ್ತದೆ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  6. Badrinath;this is one of the rarest events where in I was really scared.scared like hell!
    thanks for your kind comments.

    ReplyDelete
  7. ಓದುತ್ತಿದ್ದ ನನಗೇ ಎಷ್ಟು ಹೆದರಿಕೆಯಾಯಿತು! ನಿಮಗೆ ಹೇಗಾಗಿರಬೇಡ?

    ReplyDelete
  8. Sir
    kelavomme neerava raatriyalli kalpanege nilukada mukha gocharisidaaga hedarike aaguvudu sahaja allave

    punyakke nimminda yaavude vastugalannu kadiyalilla avalu

    ReplyDelete
  9. ಸಹಜವಾಗಿ ಹೆದರಿಕೆಯನ್ನುಂಟುಮಾಡುವ ಸನ್ನಿವೇಶ! ಲೇಖನ ಓದಿ ಹಲವು ಇಂತಹ ಅವಿಸ್ಮರಣೀಯ ಘಟನೆಗಳು ನೆನಪಿಗೆ ಬರುತ್ತಿವೆ. ಧನ್ಯವಾದಗಳು

    ReplyDelete
  10. ಸುನಾತ್ ಸರ್;ಅವತ್ತಿನ ಆ ವಿಚಿತ್ರ ಸನ್ನಿವೇಶದಲ್ಲಿ ಹೆದರಿಕೆಯಿಂದ ಕೈಕಾಲು ನಡುಕವುವಂತಾಗುವುದು ಹೇಗೆಂಬ ಅರಿವಾದದ್ದು ಸತ್ಯ.ಇಂತಹ ಬುದ್ಧಿ ವೈಕಲ್ಯ ಹೊಂದಿದವರು ಯಾವುದೊ ಟ್ರೈನ್ ಹತ್ತಿ ಮತ್ತೆಲ್ಲೋ ಇಳಿದು ಪ್ಲಾಟ್ ಫಾರಂಗಳಲ್ಲಿ ಮಲಗುವುದನ್ನು ಕಂಡಿದ್ದೇನೆ.

    ReplyDelete
  11. ಗುರು ಸರ್;ರಾತ್ರಿಯ ಅವೇಳೆಯಲ್ಲಿ ,ಮತ್ಯಾರೂ ಇಲ್ಲದ ಓಡುವ ರೈಲಿನಲ್ಲಿ,ಇದ್ದಕ್ಕಿದ್ದಂತೆ ಎಚ್ಚರವಾದಾಗ ಪಕ್ಕದಲ್ಲಿಯೇ ಕಾಣಿಸಿಕೊಂಡ ಹುಚ್ಚು ಹಿಡಿದ ಹೆಂಗಸಿನ ವಿಲಕ್ಷಣ ನಗುವಿದ್ದ ಮುಖ!ನನ್ನ ಪರಿಸ್ಥಿತಿಯನ್ನು ಊಹಿಸಿಕೊಳ್ಳಿ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  12. ವಿ.ಆರ್.ಭಟ್ ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ ಅನುಭವಗಳೂ ಬ್ಲಾಗಿನಲ್ಲಿ ಬರಲಿ.ನಮಸ್ಕಾರ.

    ReplyDelete
  13. ಚಲಿಸುತ್ತಿರುವ ರೈಲಿನಲ್ಲಿ ಮಧ್ಯ ರಾತ್ರಿ ಎಚ್ಚರಗೊಂಡಾಗ ಈ ರೀತಿ ಆದ್ರೆ !!!!ಅಬ್ಬಬ್ಬ ದೇವ್ರೇ ಗತಿ ,ನಂಗೆ ಆತಂಕಾ ಆಯ್ತು .ನೀವೂ ಅನುಭವಿಸಿದ ಆತಂಕದ ಕ್ಷಣಗಳು ರೋಚಕವಾಗಿವೆ.ಅನುಭವ ವಿಚಿತ್ರವಾದರೂ ವರ್ಣಿಸಿರುವ ಲೇಖನ ಇಷ್ಟವಾಯಿತು.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  14. ಬಾಲೂ ಸರ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಆ ಅಪರ ರಾತ್ರಿಯ ನೀರವತೆಯಲ್ಲಿ, ಚಲಿಸುತ್ತಿರುವ ರೈಲಿನಲ್ಲಿ ನಡೆದ ಆ ಘಟನೆ ನಿಜಕ್ಕೂ ಅಪರೂಪದ್ದು ಅನಿಸಿ ನಿಮ್ಮೊಡನೆ ಹಂಚಿಕೊಳ್ಳಬೇಕಿನಿಸಿತು.ನಮಸ್ಕಾರ.

    ReplyDelete
  15. ಸರ್,

    ನಿಮ್ಮ ಬರಹದ ಶೈಲಿ ಹೇಗಿತ್ತೆಂದರೆ..ನಾನೇ ಮಲಗಿ ಎದ್ದು ಆಕೆಯನ್ನು ನೋಡಿ ಹೆದರಿಕೊಂಡಂತೆ ಆಯ್ತು..ನೇರ ಚಿತ್ರವನ್ನು ಕೊಟ್ಟಿದ್ದೀರಿ. ಇಂಥವು ಅದೆಷ್ಟು ದಿಗಿಲುಪಡಿಸಿಬಿಡುತ್ತವೆ ಅಲ್ವಾ ಸರ್..

    ReplyDelete
  16. ಶಿವು;ನನಗೆ ಅತ್ಯಂತ ಭಯವಾದ ಘಟನೆ ಇದು.ಸುಮಾರು ಮೂವತ್ತೊಂಬತ್ತು ವರ್ಷಗಳಾದರೂ ಇನ್ನೂ ನೆನಪಿನಲ್ಲಿ ಉಳಿದಿದೆ.ಧನ್ಯವಾದಗಳು.

    ReplyDelete
  17. ನಿಮ್ಮ ಅನುಭವ ನಿಜವಾಗಿಯೂ ರೋಮಾಂಚಕ. ನಿರ್ಜನ ಬೋಗಿಯಲ್ಲಿ ನಡುರಾತ್ರಿಯ ಕರಾಳ ಕತ್ತಲಿನಲ್ಲಿ, ವಿಕಾರರೂಪದ ಮಹಿಳೆಯೊ೦ದಿಗೆ ನಿಮ್ಮ ಮುಖಾಮುಖಿ. ಓದಿ ಮೈ ಜುಮ್ ಎ೦ದಿತು.

    ReplyDelete
  18. sir...
    nijakku hedaribitte..... kalpane maadikottare hedarike aagatte.... tumbaa chennaagide nimma vivaraNe...

    ReplyDelete
  19. ಭಯಾನಕ ಅನುಭವ...ನಿಮ್ಮ ಸಹಜ ನಿರೂಪಣೆ ಚೆನ್ನಾಗಿದೆ.

    ReplyDelete
  20. ಪರಾಂಜಪೆ ಸರ್;ಜೀವನ ಎಷ್ಟು ವಿಚಿತ್ರವಲ್ಲವೇ?ಏನೆಲ್ಲಾ ಅನುಭವಗಳನ್ನು ಉಣಬಡಿಸುತ್ತದೆ!ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  21. ದಿನಕರ್;ನಾವು ಏನೂ ನಿರೀಕ್ಷಿಸದಿದ್ದಾಗ ಇದ್ದಕ್ಕಿದ್ದಂತೆ ನಡೆಯುವ ಇಂತಹ ಘಟನೆಗಳು ನಿಜಕ್ಕೂ ಆಘಾತಕರ.ಎಂತಹ ಧೈರ್ಯವಂತರನ್ನೂ ಅಲ್ಲಾಡಿಸಿ ಬಿಡುತ್ತವೆ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  22. ನಾರಾಯಣ್ ಭಟ್ ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  23. ತರುಣ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  24. ಡಾಕ್ಟ್ರೆ...

    ನಿಮ್ಮ ಲೇಖನವನ್ನು ಮನೆಯವರೆಲ್ಲ ಓದಿದ್ವಿ..
    ನಮ್ಮ ಹೆದರಿಕೆಯ ಘಟನೆಗಳನ್ನು ಮೆಲುಕು ಹಾಕಿದ್ವಿ...

    ಬಹಳ ಹೆದರಿಕೆಯ ಸನ್ನಿವೇಶ ಅಲ್ವಾ?
    ನಿಮ್ಮ ಜೀವಮಾನದಲ್ಲಿ ಯಾವಾಗಲೂ ಮರೆಯೋದಿಲ್ಲ.. ಅಬ್ಭಾ !!

    ReplyDelete
  25. ಪ್ರಕಾಶ್;ನೀವು ಹೇಳಿದಂತೆ ಅದು ನಾನು ಜೀವನದಲ್ಲಿ ಅತ್ಯಂತ ಹೆದರಿದ ಸನ್ನಿವೇಶ.ಸದಾ ನೆನಪಿರುವ ಘಟನೆ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  26. ಕೃಷ್ಣಮೂರ್ತಿ ಸರ್,

    ಮೈ ನಡುಗಿಸುವ ಘಟನೆ !
    ನಿಜಕ್ಕೂ ಹೆದರಿಕೆ ಬರುವಂತೆ ಇತ್ತು..

    ReplyDelete
  27. @ಪಾತರಗಿತ್ತಿಯವರಿಗೆ ನಮಸ್ಕಾರ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  28. ನಿಮ್ಮ ಬರಹ ನನ್ನ ಕಣ್ಮು೦ದೆ ಆ ಸನ್ನಿವೇಶವನ್ನು ತ೦ದು ನಿಲ್ಲಿಸುವಷ್ಟು ಸಹಜವಾಗಿದೆ. ನಿಜಕ್ಕೂ ಭಯಾನಕ! ನಿಮಗೆ `ಮಕರ ಸಂಕ್ರಮಣದ ಶುಭಾಶಯಗಳು.'

    ReplyDelete
  29. ಪ್ರಭಾಮಣಿ ನಾಗರಾಜ್;ನಿಮಗೂ ಹಬ್ಬದ ಶುಭಾಶಯಗಳು.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  30. bahusha aa NAAGAVALLI ne irabeku.... :P
    laka laka laka laka laka laka... :D :D

    ReplyDelete
  31. ಶಿವ ಪ್ರಕಾಶ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  32. ಅಯ್ಯಯ್ಯಪ್ಪಾ...ಡಾಕ್ಟ್ರೇ..ನಿಜಕ್ಕೂ ಹೆದರ್ಸಿ ಬಿಟ್ರಿ...ನಾನು ಒಬ್ಬನೇ..ಕೂತು ಬ್ಲಾಗ್ ಓದೋಕೆ ನಿಮ್ಮ ಈ ಪೋಸ್ಟ್ ಓಪನ್ ಮಾಡೋದಾ...ಉಸ್ಸಪ್ಪಾ...ಸ್ಸು..ಸು..ಬರೋದು ಬಾಕಿ...ಅಬ್ಬಾ...ಏನು..ರಾಮ್ ಸೆ ಬ್ರದರ್ಸ್ ನ ಬೀಟ್ ಮಾಡಿಬಿಟ್ರಿ...ಇಂಥದ್ದೇ ನನ್ನದೂ ಒಂದು ನಿಜ ಅನುಭವ ಇದೆ ಬ್ಲಾಗಿಗೆ ಹಾಕ್ತೇನೆ ಮತ್ತೂಮ್ಮೆ...ಹಹಹ ನಿಮ್ಮಿಂದ ಪ್ರೇರಿತ...
    (ನಿಮ್ಮ ಲಾಖೋಂ ಹೈಂ ಎಹಾಂ ಗೆ ಸಾಹಿತ್ಯ ಕಳುಹಿಸ್ತೇನೆ..ಮೈಲ್ ಐಡಿ ಕೊಡಿ)

    ReplyDelete
  33. ಪ್ರೋತ್ಸಾಹಕ್ಕೆ ಧನ್ಯವಾದಗಳು!
    ಶುಭವಾಗಲಿ.
    ಪ್ರೀತಿಯಿಂದ,
    ಅದಮ್ಯಾಯುಷ್ಯ

    ReplyDelete
  34. :-))
    ಬದುಕಿನ ಎಲ್ಲ ಕ್ಷನಗಳನ್ನು ಚೆನ್ನಾಗಿ ಹಿಡಿಯುತ್ತಿರಾ..

    ReplyDelete

Note: Only a member of this blog may post a comment.