ಹೋದ ತಿಂಗಳು ನಡೆದ ನನ್ನ ನಾದಿನಿಯ ಮಗಳ ಮದುವೆಗೆ ,ಬಂಧುಗಳಿಗೆ ಕೊಡಲು ಅಡಿಗೆಯವರಿಗೆ ಹೇಳಿ ಹಲವಾರು ತಿಂಡಿಗಳನ್ನು ಮಾಡಿಸಿದ್ದರು.ಅದರಲ್ಲಿ 'ಮೋಹನ್ ಲಾಡು'ವಿಶೇಷವಾಗಿತ್ತು !ಮಾಮೂಲಿಗಿಂತ ಸ್ವಲ್ಪ ಜಾಸ್ತಿಯೇ ಗಡುಸಾಗಿದ್ದ ಅದನ್ನು ಸಲೀಸಾಗಿ ಮುರಿಯಲು ಆಗುತ್ತಿರಲಿಲ್ಲ.
ನನ್ನ ಕಿರಿಯ ನಾದಿನಿಯ ಗಂಡ ಸ್ವಲ್ಪ ಹಾಸ್ಯ ಸ್ವಭಾವದವರು."ಇದರ ಜೊತೆಗೆ ಸುತ್ತಿಗೆಯೊಂದನ್ನು ಫ್ರೀಯಾಗಿ ಕೊಟ್ಟರೆ ಮಾತ್ರ ಇದನ್ನು ತೆಗೆದುಕೊಂಡು ಹೋಗುತ್ತೇನೆ"ಎಂದು ತಮಾಷೆ ಮಾಡಿದರು.ನನ್ನ ಹೆಂಡತಿ "ಇದನ್ನು ತಿಂದರೆ ,ನನ್ನ ಹಲ್ಲಿನ ಕ್ಯಾಪ್ ಗಳೆಲ್ಲಾ ಉದುರಿ ಬೀಳುತ್ತವೆ!ನನಗೆ ಮಾತ್ರ ಇದು ಬೇಡ"ಎಂದಳು.
ನನ್ನ ಹಿರಿಯ ನಾದಿನಿಯ ಮಗಳು "ಏನೂ ಆಗೋಲ್ಲಾ,ಸ್ವಲ್ಪ ಗಟ್ಟಿಯಾಗಿದೆ.ಆದರೆ ರುಚಿ ಚೆನ್ನಾಗಿದೆ"ಎಂದು ಬೇರೆ ತಿಂಡಿಗಳ ಜೊತೆಗೆ ಮೋಹನ್ ಲಾಡುವನ್ನೂ ತೆಗೆದುಕೊಂಡು ಹೋಗಿ ತಮ್ಮ ಮನೆಯ ಡೈನಿಂಗ್ ಟೇಬಲ್ ಮೇಲೆ ಇಟ್ಟಿದ್ದಳು.ಅಷ್ಟರಲ್ಲಿ ಮಂಗಗಳ ಗುಂಪೊಂದು ಮನೆಯೊಳಗೆ ದಾಳಿ ಇಟ್ಟು,ಅಲ್ಲಿದ್ದ ಎಲ್ಲಾ ತಿಂಡಿಗಳನ್ನೂ ಎತ್ತಿಕೊಂಡು ಹೋದವು.ಅಲ್ಲೇ ಮನೆಯ ಹೊರಗಿನ ಕಾಂಪೌಂಡ್ ಮೇಲೇ ಕುಳಿತು, ಎಲ್ಲಾ ತಿಂಡಿಗಳನ್ನೂ ಹಂಚಿ ಕೊಂಡು ತಿಂದು ಮುಗಿಸಿದವು.ಆದರೆ ಅವು ಎಷ್ಟು ಪ್ರಯತ್ನಿಸಿದರೂ ಮೋಹನ್ ಲಾಡುವನ್ನು ಮಾತ್ರ ಕಡಿದು ತಿನ್ನಲಾಗಲಿಲ್ಲ!ಕಡಿದೂ ಕಡಿದು ದವಡೆ ನೋವು ಬಂದಿರಬೇಕು, ಪಾಪ! ಕಡೆಗೆ ಮಂಗಗಳು ಬೇಸತ್ತು , "ನಿಮ್ಮ ಲಾಡುಗಳು ನಿಮಗೇ ಇರಲಿ"ಎನ್ನುವಂತೆ ಮೋಹನ್ ಲಾಡು ಗಳನ್ನು,ಮನೆಯೊಳಗೇ ಬಿಸುಟು,ಸಿಟ್ಟಿನಿಂದ 'ಗುರ್ರೆನ್ನುತ್ತಾ' ಅಲ್ಲಿಂದ ಕಾಲ್ಕಿತ್ತವಂತೆ!!!