Wednesday, January 16, 2013

"ಮೋಹನ್ ಲಾಡು ಮತ್ತು ಮಂಗಗಳು!!!"

ಹೋದ ತಿಂಗಳು ನಡೆದ ನನ್ನ ನಾದಿನಿಯ ಮಗಳ ಮದುವೆಗೆ ,ಬಂಧುಗಳಿಗೆ ಕೊಡಲು ಅಡಿಗೆಯವರಿಗೆ ಹೇಳಿ ಹಲವಾರು ತಿಂಡಿಗಳನ್ನು ಮಾಡಿಸಿದ್ದರು.ಅದರಲ್ಲಿ 'ಮೋಹನ್ ಲಾಡು'ವಿಶೇಷವಾಗಿತ್ತು !ಮಾಮೂಲಿಗಿಂತ ಸ್ವಲ್ಪ ಜಾಸ್ತಿಯೇ ಗಡುಸಾಗಿದ್ದ ಅದನ್ನು ಸಲೀಸಾಗಿ ಮುರಿಯಲು ಆಗುತ್ತಿರಲಿಲ್ಲ.
ನನ್ನ ಕಿರಿಯ ನಾದಿನಿಯ ಗಂಡ ಸ್ವಲ್ಪ ಹಾಸ್ಯ ಸ್ವಭಾವದವರು."ಇದರ ಜೊತೆಗೆ ಸುತ್ತಿಗೆಯೊಂದನ್ನು ಫ್ರೀಯಾಗಿ ಕೊಟ್ಟರೆ ಮಾತ್ರ ಇದನ್ನು ತೆಗೆದುಕೊಂಡು ಹೋಗುತ್ತೇನೆ"ಎಂದು ತಮಾಷೆ ಮಾಡಿದರು.ನನ್ನ ಹೆಂಡತಿ "ಇದನ್ನು ತಿಂದರೆ ,ನನ್ನ ಹಲ್ಲಿನ ಕ್ಯಾಪ್ ಗಳೆಲ್ಲಾ ಉದುರಿ ಬೀಳುತ್ತವೆ!ನನಗೆ ಮಾತ್ರ ಇದು ಬೇಡ"ಎಂದಳು.

ನನ್ನ ಹಿರಿಯ ನಾದಿನಿಯ ಮಗಳು "ಏನೂ ಆಗೋಲ್ಲಾ,ಸ್ವಲ್ಪ ಗಟ್ಟಿಯಾಗಿದೆ.ಆದರೆ ರುಚಿ ಚೆನ್ನಾಗಿದೆ"ಎಂದು ಬೇರೆ ತಿಂಡಿಗಳ ಜೊತೆಗೆ ಮೋಹನ್ ಲಾಡುವನ್ನೂ ತೆಗೆದುಕೊಂಡು ಹೋಗಿ ತಮ್ಮ ಮನೆಯ ಡೈನಿಂಗ್ ಟೇಬಲ್ ಮೇಲೆ ಇಟ್ಟಿದ್ದಳು.ಅಷ್ಟರಲ್ಲಿ ಮಂಗಗಳ ಗುಂಪೊಂದು ಮನೆಯೊಳಗೆ ದಾಳಿ ಇಟ್ಟು,ಅಲ್ಲಿದ್ದ ಎಲ್ಲಾ ತಿಂಡಿಗಳನ್ನೂ ಎತ್ತಿಕೊಂಡು ಹೋದವು.ಅಲ್ಲೇ ಮನೆಯ ಹೊರಗಿನ ಕಾಂಪೌಂಡ್ ಮೇಲೇ ಕುಳಿತು, ಎಲ್ಲಾ ತಿಂಡಿಗಳನ್ನೂ ಹಂಚಿ ಕೊಂಡು ತಿಂದು ಮುಗಿಸಿದವು.ಆದರೆ ಅವು ಎಷ್ಟು ಪ್ರಯತ್ನಿಸಿದರೂ ಮೋಹನ್ ಲಾಡುವನ್ನು ಮಾತ್ರ  ಕಡಿದು ತಿನ್ನಲಾಗಲಿಲ್ಲ!ಕಡಿದೂ ಕಡಿದು ದವಡೆ ನೋವು ಬಂದಿರಬೇಕು, ಪಾಪ! ಕಡೆಗೆ ಮಂಗಗಳು ಬೇಸತ್ತು , "ನಿಮ್ಮ ಲಾಡುಗಳು ನಿಮಗೇ ಇರಲಿ"ಎನ್ನುವಂತೆ ಮೋಹನ್ ಲಾಡು ಗಳನ್ನು,ಮನೆಯೊಳಗೇ ಬಿಸುಟು,ಸಿಟ್ಟಿನಿಂದ 'ಗುರ್ರೆನ್ನುತ್ತಾ' ಅಲ್ಲಿಂದ ಕಾಲ್ಕಿತ್ತವಂತೆ!!!

7 comments:

 1. ವಾನರ ಸೇನೆ ರಾಮಾಯಣದಲ್ಲಿ ಯಾರಿಗೂ ಜಗ್ಗದೆ ರಾಮನಿಗೆ ಸಹಾಯ ಮಾಡಿದವು..
  ಕಲಿಯುಗದಲ್ಲಿ ಮೋಹನನ ಮುರುಳಿಗೆ ಸೋತು ಲಾಡುವನ್ನು ತಿನ್ನದೇ ಹೋಗಿ...ಬಹುಶಃ ಅವು ಯೋಚಿಸಿದವು ಅನ್ನಿಸುತ್ತೆ.ತ್ರೇತಾಯುಗದಲ್ಲಿ ಈ ಲಾಡುಗಳು ಸಿಕ್ಕಿದ್ದರೆ ಸೇತುವೆ ಕಟ್ಟಲು ಇನ್ನಷ್ಟು ಕಲ್ಲುಗಳು ಆಗುತಿದ್ದವು ಎಂದು...ಸುಂದರ ಅನುಭವ ಡಾಕ್ಟ್ರೆ...ಸೊಗಸಾಗಿದೆ..

  ReplyDelete
 2. ಅಂತೂ ಮಂಗಗಳಿಗೂ ಪಜೀತಿ ಇಟ್ಟಿತು ಲಾಡು. ಹಹ್ಹಹ್ಹಾ...

  ಬಹಳ ದಿನಗಳ ನಂತರ ಬಲ್ಲಾಗ್ ಬರಹ ಬರೆಯುತ್ತಿದ್ದೀರ ಸಾರ್. ಕೊಳಲು ನನಗೆ ತುಂಬಾ ಸ್ಪೂರ್ತಿ ಇತ್ತ ತಾಣ. ಅದನ್ನು ತಾವು ಖಾಲೀ ಬಿಟ್ಟರೆ ನಾವು ನೊಂದುಕೊಳ್ಳುತ್ತೇವೆ.

  ಬರೆಯುತ್ತಲೇ ಇರಿ. ಅನವರತ...

  ReplyDelete
 3. ಮಂಗಗಳು ಮನ ಮೋಹಕವಾಗಿ
  ಮೋಹನ ಲಾಡು ಗಳನ್ನು ಮೋಹಿಸಿ
  ತಿರುಗೆಸೆದು ಓಡಿಹೋದ ಈ ಕಥೆ
  ಬಹಳ ಚನ್ನಾಗಿದೆ.

  ReplyDelete
 4. MOHAN LADOO SAHAA HESARIGE VIRUDHAVAGI KALLINA LADOO AAYITALLA-ENTHA KALIGALA!-HEMCHANDRA

  ReplyDelete
 5. ಹಹ್ಹ, ಮೋಹನ್ ಲಾಡು ನಾನೂ ತಿನ್ನಲ್ಲ :) ಚಂದದ ನರೇಶನ್.

  ReplyDelete
  Replies
  1. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.ಒಂದು ಸಣ್ಣ ಕರೆಕ್ಷನ್.ಲಾದುವಿನ ಹೆಸರು "ಮನೋಹರ ಲಾಡು".ನಾನು ಬರೆದಂತೆ 'ಮೋಹನ್ ಲಾಡು'ಅಲ್ಲ.ಹಾಂ ......ಇದರ ಮುಂದಿನ ಭಾಗ ಮೊನ್ನೆ ಬೆಂಗಳೂರಿಗೆ ಹೋದಾಗ ತಿಳಿದದ್ದು.ಎಲ್ಲರಿಗೂ ಕೊಟ್ಟು ಉಳಿದ ಲಾಡುಗಳನ್ನು ಕೆಲಸದವಳಿಗೆ ಕೊಟ್ಟಿದ್ದರಂತೆ.ಮಾರನೆ ದಿನ ಕೆಲಸದವಳು ಬಂದು "ಅಮ್ಮಾ ಬೇಜಾರು ಮಾಡಿಕೋಬೇಡಿ......ಅದ್ಯಾಕಮ್ಮ ಲಾಡುಗಳನ್ನು ಅಷ್ಟು ಗಟ್ಟಿಯಾಗಿ ಮಾಡಿಸಿದಿರಿ? ನಾವು ದೊಡ್ಡೋರು ಯಾರೂ ತಿನ್ನೋಕಾಗದೆ ಓಣಿಯ ಮಕ್ಕಳಿಗೆ ಕೊಟ್ವಿ.ಅವರೆಲ್ಲಾ ಕಲ್ಲಲ್ಲಿ ಜಜ್ಜಿಕೊಂಡು ತಿಂದು ಮುಗಿಸಿದರು"ಎಂದಳಂತೆ !!!

   Delete
 6. ಡಾಕ್ಟ್ರೇ. ಈ ಕಥೆ ಕೇಳಿದ ಮೇಲೆ ನನಗೇಕೋ ಅನುಮಾನ...ನೀವು ಡೆಂಟಲ್ ಡಾಕ್ಟ್ರಲ್ಲ ತಾನೇ???ಹಂಗಿದ್ದರೆ ಕಥೆಯೇ ಬೇರೆ :)P/... ಹಾ ಹಾ....
  ಚೆನಾಗಿತ್ತು...ಲಾಡಿನ ಕಥೆ...

  ReplyDelete