ಬದರಿಯ ಕವನ ಹೀಗೇ
ಎಂದು ಹೇಳುವುದು ಹ್ಯಾಗೆ!!?
ಕತ್ತಲಲ್ಲೊಂದು ಮತಾಪು
ಝಾಗ್ಗನೆ ಬೆಳಗಿದ
ಮಗುವಿನ ಕೆಂಪಗಿನ ನಗು !!!
ಮನಸ್ಸು ?ಅದೂ ಹಾಗೇ !!!
ನಡೆ ನುಡಿ,ನೇರ!!!
ಅದರದೇ ಒಂದು ಮುಗ್ಧ ಛಾಪು !!
ಕಾರ್ಗತ್ತಲ ರಾಶಿಯಲ್ಲಿ
ಮಿಂಚು ಹುಳುಗಳ ಜಾತ್ರೆ!!!
ಬದರಿಯ ಕವನಗಳ ಯಾತ್ರೆ
ಎಂದೂ ಬರಿದಾಗದ
ಇಂದ್ರಜಾಲ ಪಾತ್ರೆ!!!
ಬದರಿಯ ಕವನ
ಗಮ ಗಮಿಸುವ ದವನ!!!
ಹೀಗೇ ಎಂದು ...............,
ವ್ಯಾಖ್ಯಾನಿಸುವುದು ಹೇಗೆ ಅದನ್ನ ?
ಬಣ್ಣಿಸ ಬಹುದೇ
ಕವನದ ಆತ್ಮವನ್ನ!!!?
ಬದರಿಯ ಕವನ ಇರುವುದೇ ಹಾಗೆ!!!
ಹೀಗೇ ಎಂದು ಹೇಳದ ಹಾಗೆ!!!
(ಸ್ನೇಹಿತ ಬದರಿನಾಥ್ ಪಲವಳ್ಳಿಯವರ ಕವನಗಳ ಬಗ್ಗೆ ಒಂದು ಕವನ)
ಎಂದು ಹೇಳುವುದು ಹ್ಯಾಗೆ!!?
ಕತ್ತಲಲ್ಲೊಂದು ಮತಾಪು
ಝಾಗ್ಗನೆ ಬೆಳಗಿದ
ಮಗುವಿನ ಕೆಂಪಗಿನ ನಗು !!!
ಮನಸ್ಸು ?ಅದೂ ಹಾಗೇ !!!
ನಡೆ ನುಡಿ,ನೇರ!!!
ಅದರದೇ ಒಂದು ಮುಗ್ಧ ಛಾಪು !!
ಕಾರ್ಗತ್ತಲ ರಾಶಿಯಲ್ಲಿ
ಮಿಂಚು ಹುಳುಗಳ ಜಾತ್ರೆ!!!
ಬದರಿಯ ಕವನಗಳ ಯಾತ್ರೆ
ಎಂದೂ ಬರಿದಾಗದ
ಇಂದ್ರಜಾಲ ಪಾತ್ರೆ!!!
ಬದರಿಯ ಕವನ
ಗಮ ಗಮಿಸುವ ದವನ!!!
ಹೀಗೇ ಎಂದು ...............,
ವ್ಯಾಖ್ಯಾನಿಸುವುದು ಹೇಗೆ ಅದನ್ನ ?
ಬಣ್ಣಿಸ ಬಹುದೇ
ಕವನದ ಆತ್ಮವನ್ನ!!!?
ಬದರಿಯ ಕವನ ಇರುವುದೇ ಹಾಗೆ!!!
ಹೀಗೇ ಎಂದು ಹೇಳದ ಹಾಗೆ!!!
(ಸ್ನೇಹಿತ ಬದರಿನಾಥ್ ಪಲವಳ್ಳಿಯವರ ಕವನಗಳ ಬಗ್ಗೆ ಒಂದು ಕವನ)
ಒಂದು ಸುಂದರ ಕವಿ ಹೃದಯಕ್ಕೆ ಇನ್ನೊಂದು ಹೃದಯದ ಕವಿಯ ಮಾತುಗಳು..ಡಾಕ್ಟ್ರೆ..ಬದರಿ ಸರ್ ಅವರ ಕವನ ಸಂಕಲನಕ್ಕೆ ಸುಂದರ ಚೌಕಟ್ಟು ನಿಮ್ಮ ಪದ ಪುಂಜಗಳು...ಸೂಪರ್
ReplyDeleteಚೆನ್ನಾಗ್ ಹೇಳಿದ್ರಿ :)
ReplyDeleteಕೃಷ್ಣ ಮೂರ್ತಿಗಳದು
ReplyDeleteಅಪ್ಪನಂತಹ ಒಲುಮೆ...
ಅವರ ಈ ಪ್ರೋತ್ಸಾಹದ ಕವನ ನನಗೆ ಟಾನಿಕ್ಕಿನಂತೆ...
ಒಂದು ಪದ್ಯ ಬರೆಸಿಕೊಳ್ಳುವಷ್ಟು ನನ್ನ ಕವನಗಳು ಉತ್ತಮವೋ ಇಲ್ಲವೋ ನನಗೋ ಗೊತ್ತಿಲ್ಲ. ಆದರೆ, ನನಗೆ ಅವರು ಒಲುಮೆಯಂತೂ ಸ್ಪೂರ್ತಿ.
ಒಂದೊಮ್ಮೆ ನನ್ನ ಬ್ಲಾಗನ್ನು ಯಾರು ಓದುತ್ತಲೇ ಇರಲಿಲ್ಲ. ಎಷ್ಟೋ ವರ್ಷಗಳು ಶೂನ್ಯ ಸಂಪಾದನೆ - ಸೊನ್ನೆ ಕಮೆಂಟು! ಯಾರೂ ಓದದ ಮೇಲೆ ಏಕೆ ಬರೆಯಬೇಕು ಎಂದು ನೊಂದು ನಾನು ನಿಲ್ಲಿಸಬೇಕೆಂದಿದ್ದಾಗ ನಮ್ಮ ಕೊಳಲಿನ ವೈದ್ಯರೇ, ಮುಂದುವರೆಸುವಂತೆಯೂ ಮತ್ತು ಬರೆಯಲೇ ಬೇಕೆಂದೂ ತಾಕೀತು ಮಾಡಿದವರು. ಇಂದಿನ ನನ್ನ ಯಶಸ್ಸಿಗೆ ಅವರ ಪಾತ್ರವೂ ಬಹಳವಿದೆ. ಅವರಿಗೆ ಕೃತಜ್ಞ.
ತಪ್ಪಿದ್ದಾಗ ತಿದ್ದಿ, ಕವನದ ಹೂರಣವನ್ನು ಆಗಾಗ ಒದಗಿಸಿ ನನ್ನನ್ನು ಬೆಳೆಸುತ್ತಾ ಬಂದ ಮಹಾ ಪೋಷಕ ಡಾ|| ಕೃಷ್ಣಮೂರ್ತಿ ಅವರು. ಅವರು ತಣ್ಣಗಿರಲಿ.
ಅವರ ಆಶಯದಂತೆ "ಕತ್ತಲಲಿ ಮತಾಪು" ಆಗುತ್ತಾ, "ಮಗುವಿನ ಕೆಂಪಗಿನ ನಗು"ವನ್ನು ಉಳಿಸಿಕೊಳ್ಳುವತ್ತ ಮುಂದುವರೆಯಲು ಅವರ ಜೊತೆ ನಿಮ್ಮ ಆಶೀರ್ವಾದವೂ ನನಗೆ ಬೆಳಕೇ.
ಅನಂತ ಧನ್ಯವಾದಗಳು.
ನಿಮ್ಮ ಒಲುಮೆಯ ಜೊತೆಯೇ
ನನಗೆ ಶ್ರೀರಾಮ ರಕ್ಷೆ.
ಡಾಕ್ಟರ್ ಬರೆದದ್ದೆಲ್ಲಾ ಸರಿಯಿದೆ..... ಇದು ಎಲ್ಲರ ಅಭಿಪ್ರಾಯ ಕೂಡ.... ಆದ್ರೆ ಎಲ್ಲರಿಗೂ ಡಾಕ್ಟರ್ ಥರ ಬರೆಯಲು ಆಗಲಿಲ್ಲ ಅಷ್ಟೇ.... ಬರೆಯಲೂ ಆಗಲ್ಲ ಅನಿಸತ್ತೆ...
ReplyDeleteಮೊದಲು ಡಾಕ್ಟ್ರಿಗೆ ಜೈ...
ReplyDeleteಆಮೇಲೆ ದಿನಕರಣ್ಣಂಗೆ ಜೈ...
ಮಸ್ತ್ ಕವನ ಬರದೀರಿ ಡಾಕ್ಟ್ರೆ..... ಜೈ ಹೋ !
ReplyDeleteಪ್ರತಿಕ್ರಿಯಿಸಿದ ಎಲ್ಲರಿಗೂ ನಮನಗಳು.ಸುಮಾರು ಒಂದು ತಿಂಗಳು ಬ್ಲಾಗಿನಿಂದ ವಿಮುಖನಾಗಿದ್ದೆ.ಮೊದಲೆಂದೂ ಹೀಗಾದದ್ದಿಲ್ಲ.ನೊರೆಂಟು ತರಲೆ ತಾಪತ್ರಯಗಳು,ಎಲ್ಲರಂತೆ ನನಗೂ.ಅದೇ ನಿಜವಾದ ಕಾರಣ ಇರಲಿಕ್ಕಿಲ್ಲ.ಬರೆಯುವ ಉಮೆದಿರಲಿಲ್ಲ ಅಷ್ಟೇ.
ReplyDeleteಬದರಿ ನಮ್ಮೊಳಗೊಬ್ಬ ಅಪರೂಪದ ಕವಿ.ಅವರ ಸತ್ವ ಪೂರ್ಣ ಕವಿತೆಗಳ ಆಳ ನನ್ನನ್ನು ನಿಜಕ್ಕೂ ಬಹಳವಾಗಿ ಕಾಡಿವೆ.ಅವರ ಕಲ್ಪನಾ ಸಾಮರ್ಥ್ಯ ಅನೂಹ್ಯ!!!ಅದು ಆ ದೇವರು ಕೊಟ್ಟ ಕೊಡುಗೆ!
ಅವರ ವ್ಯಕ್ತಿತ್ವವೂ ಅದ್ಭುತ.ಅವರು ಮೊದಲು ಬರೆದ ಕವಿತೆಗಳಿಗೆ ಕಾಮೆಂಟುಗಳು ಬರದಿದ್ದಾಗ ಸಹಜವಾಗಿ ಬೇಸರಗೊಂಡು ಬರೆಯುವುದನ್ನೇ ನಿಲ್ಲಿಸಬೇಕು ಎಂದು ಕೊಂಡಿದ್ದರು.
ಹಾಗೇನಾದರೂ ಮಾಡಿದ್ದರೆ ನಮ್ಮಂತಹ ಸಾಹಿತ್ಯ ಆಸಕ್ತರಿಗೆ ಎಂತಹ ನಷ್ಟವಾಗುತ್ತಿತ್ತು!ಅವರಿಗೆ ನಿಮ್ಮೆಲ್ಲರ ಪ್ರೋತ್ಸಾಹ ಸದಾ ಸಿಗಲಿ ಎನ್ನುವುದೇ ನನ್ನ ಹಾರೈಕೆ.
ನೀವಿಬ್ಬರೂ ಅದ್ಭುತರೇ!
ReplyDelete