Wednesday, March 6, 2013

"ಮಹಿಳೆ"

ಮಹಿಳೆ..........!!!
ಅವಳಲ್ಲೇ ಇದೆ 'ಇಳೆ'!!!
ಇಳೆಯ ತಾಳ್ಮೆ,ಸಹನೆ
ಧೈರ್ಯ ಸ್ಥೈರ್ಯ
ಪ್ರೀತಿ,ವಾತ್ಸಲ್ಯ 
ಕ್ಷಮೆ ,ದಮೆ !!!
ಕರುಣಾಮಯಿ  ಭೂರಮೆ!!!
ಇಳೆಯನ್ನೂ,
ಮಹಿಳೆಯನ್ನೂ,
ಗೌರವಿಸದ
ಬಾಳೂ
ಒಂದು ಬಾಳೆ?!!!
ದೌರ್ಜನ್ಯಗಳ  ಮೆಟ್ಟಿ ನಿಂತು
ದನಿ ಎತ್ತರಿಸಿ
ಕೇಳುವ ಸಮಯವಿದೀಗ ತಾಯಿ
ನೀನೇ .........,
ಈ ಪ್ರಶ್ನೆ ಕೇಳೆ.

(ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನ ಜಗತ್ತಿನ ಎಲ್ಲಾ ಮಹಿಳೆಯರಿಗೂ ನನ್ನ ವಂದನೆಗಳು.ನಮ್ಮ ಮಕ್ಕಳಿಗೆ ಮಹಿಳೆಯರನ್ನು ಗೌರವಿಸುವುದನ್ನು ಚಿಕ್ಕಂದಿನಿದಲೇ ಕಲಿಸೋಣ."ಎಲ್ಲಿ ಹೆಣ್ಣನ್ನು ಪೂಜನೀಯ ಭಾವನೆಯಿಂದ ಕಾಣುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆ "ಎನ್ನುವುದನ್ನು ಹೇಳಿ ಕೊಡೋಣ .ನಮಸ್ಕಾರ.)

7 comments:

  1. ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ನೀವು ಬರೆದಿರುವ ನಾಲ್ಕೇ ಸಾಲೂಗಳಲ್ಲೂ ಇಂದಿನ ಜಗತ್ತು ಅನಾವರಣವಾಗಿದೆ. ಇಂದು ಸಮಾನ ಬಾಳ್ವೆ ಎಂದು ಮಾತನಾಡಿದರೂ ನಿಲ್ಲದ ಅತ್ಯಾಚಾರ ಮತ್ತು ಭ್ರೂಣ ಹತ್ಯಾ ಪ್ರಕರಣಗಳು ನಮ್ಮೊಳಗಿನ ಹುಳುಕುಗಳ ನಿಜ ಆವರಣ. ಮಹಿಳೆ ಅಬಲೆಯಲ್ಲ ಆಕೆಯೇ ಜಗದ ನಿಜ ಸಬಲೆ ಎನ್ನುವುದು ಅರಿವಾಗುವುದು ಯಾವಾಗಲೋ?

    ReplyDelete
  2. ಸಾಂದರ್ಭಿಕ ಲೇಖನ ಸರ್ ಮತ್ತು ನಿಮ್ಮ ಅಭಿಪ್ರಾಯ ಒಪ್ಪುವಂತದ್ದು ... ಯತ್ರ ನಾರ್ಯಸ್ತು ಪೂಜ್ಯಂತೆ,ರಮಂತೆ ತತ್ರ ದೇವತಃ ...

    ReplyDelete
  3. ಹೆಣ್ಣಿಲ್ಲದ ಇಳೆ ಮಳೆಯಿಲ್ಲದ ಇಳೆ ಎನ್ನುವಂತೆ ಮಮಕಾರಮಯಿಯಾದ ಹೆಣ್ಣನ್ನು ಗೌರವಿಸುವ ಸಾಲುಗಳು ಸುಂದರವಾಗಿವೆ ಡಾಕ್ಟ್ರೆ. ಮನೆಯಿಂದಲೇ ಶುರುವಾಗಬೇಕಾದ ಪಾಠ ಬೀದಿಯ ಗೋಡೆ ಚಿತ್ರದಲ್ಲಿ ಕಾಣಬಾರದು ಎನ್ನುವ ಆಶಯ ಎಲ್ಲರಲ್ಲೂ ಇರಬೇಕು.

    ReplyDelete
  4. ನಮ್ಮ ಪರವಾಗಿ ಧನ್ಯವಾದಗಳು :)
    ಚೆನ್ನಾಗಿದೆ, ಖುಷಿಯಾಯ್ತು

    ReplyDelete
  5. ಆಕೆ ದನಿಗೆ ನಮ್ಮದೂ ದನಿ ಇದೆ.

    ReplyDelete
  6. ಮಹಿಳಾದಿನಕ್ಕೆ ಒಂದೊಳ್ಳೆ ಲೇಖನ ಸರ್.
    ಹೆತ್ತು, ಹೊತ್ತು, ತುತ್ತಿತ್ತ ತಾಯಿಗೆ, ವಿದ್ಯೆಯಿತ್ತ ಮೇಡಮ್ಮುಗಳಿಗೊಂದು ನಮನ.
    ಮಾ ತುಜೇ ಸಲಾಂ..

    ReplyDelete
  7. ಪ್ರತಿಕ್ರಿಯಿಸದ ಎಲ್ಲರಿಗೂ ನಮನಗಳು.ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಮುಂದುವರೆಯಲಿ.ಬ್ಲಾಗಿಗೆ ಬರುತ್ತಿರಿ.ನಮಸ್ಕಾರ

    ReplyDelete

Note: Only a member of this blog may post a comment.