Monday, March 25, 2013

"ಹೀಗೊಂದು ದೆವ್ವದ ಕಥೆ!"

 ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಮಾತು.ನನಗೆ ಪರಿಚಯವಿದ್ದ ಮಹಿಳಾ ವೈದ್ಯೆಯೊಬ್ಬರು ಹಳ್ಳಿಯೊಂದರ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ  ಕೆಲಸಕ್ಕೆ ಸೇರಿದ ಹೊಸತು.ಅವರಿದ್ದ ಕ್ವಾರ್ಟರ್ ನ ಸುತ್ತ ಮುತ್ತ  ರಾತ್ರಿ ದೆವ್ವಗಳು ಓಡಾಡುತ್ತವೆ ಎಂದು ಪುಕಾರಿತ್ತು.ಒಬ್ಬರ ಬಾಯಿಂದ ಮತ್ತೊಬ್ಬರಿಗೆ ರೆಕ್ಕೆ ಪುಕ್ಕ ಸೇರಿ ದೆವ್ವದ ಕಥೆ 'ಭೂತಾಕಾರವಾಗಿ' ಬೆಳೆದಿತ್ತು.ಸುಮಾರು ಜನ ದೆವ್ವವನ್ನು ತಾವು ಖುದ್ದು ನೋಡಿದುದಾಗಿ ಪ್ರಮಾಣ ಮಾಡಿ ಅದು ಹೇಗಿತ್ತು ಎಂಬುದನ್ನು ರಂಗು ರಂಗಾಗಿ ವರ್ಣಿಸಿದರು.ಒಂದು ರಾತ್ರಿ ಸುಮಾರು ಒಂದು ಗಂಟೆಯ ಹೊತ್ತಿಗೆ ಮಹಿಳಾ ವೈದ್ಯಾಧಿಕಾರಿಗಳ ಮನೆ ಬಾಗಿಲು ಜೋರಾಗಿ ಬಡಿಯತೊಡಗಿತು.ವೈದ್ಯೆ ನಿದ್ದೆಯಿಂದ ಎದ್ದು "ಯಾರು?"ಎಂದು ಕೇಳಿದರು."ನಾನು ಭೂತಯ್ಯ!"ಎಂದು ಗೊಗ್ಗರು ದನಿಯಲ್ಲಿ ಉತ್ತರ ಬಂತು.ಮೊದಲೇ ಭೂತದ ಕಥೆಗಳಿಂದ ಹೆದರಿದ್ದ ವೈದ್ಯೆ"ಭೂತಯ್ಯ"ಎನ್ನುವ ಹೆಸರು ಕೇಳಿ ಕಂಗಾಲಾಗಿ ಬಾಗಿಲು ತೆರೆಯುವ ಧೈರ್ಯ ಮಾಡಲಿಲ್ಲ.ರಾತ್ರಿಯೆಲ್ಲಾ ಹೆದರಿಕೆಯಿಂದ ಗಡ ಗಡ ನಡುಗುತ್ತಾ ,ನಿದ್ದೆ ಇಲ್ಲದೆಯೇ ಕಳೆದರು.ಮಾರನೇ ದಿನ ಭೂತಯ್ಯ ಎನ್ನುವ ವ್ಯಕ್ತಿ ಆಸ್ಪತ್ರೆಗೆ ಬಂದು ತಾನು ರಾತ್ರಿ ಜ್ವರವಿದ್ದ ಕಾರಣ ವೈದ್ಯೆಯ ಮನೆಗೆ ಬಂದಿದ್ದುದಾಗಿಯೂ,ವೈದ್ಯೆ ಬಾಗಿಲು ತೆಗೆಯದೆ ಇದ್ದುದರಿಂದ ತನಗಾದ ತೊಂದರೆಗೆ ಮೇಲಧಿಕಾರಿಗಳಿಗೆ ದೂರನ್ನು ನೀಡುವುದಾಗಿಯೂ, ಕೂಗಾಡಿದ್ದನಂತೆ.ಭೂತದ ಕಥೆ ಹರಡಿದ್ದಕ್ಕೆ ಸರಿಯಾಗಿ ಕಾಕತಾಳೀಯ ವೆಂಬಂತೆ ಆ ವ್ಯಕ್ತಿಯ ಹೆಸರೂ ಭೂತಯ್ಯನೇ   ಆಗಿರಬೇಕೆ!!!!

10 comments:

 1. ಹ ಹ ಹ ಸೂಪರ್.. ಒಂದು ರಾತ್ರಿ ಒಬ್ಬನೇ ನಾನಿನ್ನ ಬಿಡಲಾರೆ ಸಿನಿಮಾ ನೋಡಿ... ಟಿಕ್ ಟಿಕ್ ಅಂದ್ರೆ ಯಾರೋ ಬಂದ್ರು ಅನ್ನುವ ಅಂಜಿಕೆ ಕಾಡುತಿತ್ತು. ನೋಡದವರೇ ಅದರ ಬಗ್ಗೆ ಜಾಸ್ತಿ ವಿವರಣೆ ಕೊಡೋದು. ಸೊಗಸಾದ ಅನುಭವ ಕಥಾನಕ ಡಾಕ್ಟ್ರೆ!!

  ReplyDelete
  Replies
  1. ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಶ್ರೀಕಾಂತ್.ಬರುತ್ತಿರಿ.ನಮಸ್ಕಾರ.

   Delete
 2. Replies
  1. ಪ್ರತಿಕ್ರಿಯೆಗೆ ಧನ್ಯವಾದಗಳು ಸುಬ್ರಮಣ್ಯ.ನಿಮ್ಮ ಅನುಭವಗಳನ್ನೂ ಹಂಚಿಕೊಳ್ಳಿ.:-)

   Delete
 3. ಆಕೆಯ ಜಂಗಾಬಲವೇ ಅಡಗಿಸಿದ ಈ ಕಥೆ ರೋಚಕವಾಗಿದೆ. ಇಡೀ ರಾತ್ರಿ ಪಾಪ ಭೂತದ ಭಯದಲ್ಲೇ ನಿದ್ದೆಯನ್ನು ಹಾಳು ಮಾಡಿಕೊಳ್ಳುವ ಆಕೆಯ ಸ್ಥಿತಿ ಚಿಂತಾಜನಕ. ಒಳ್ಳೆಯ ಅನುಭವ ಬರಹ.

  ReplyDelete
  Replies
  1. ಪ್ರತಿಕ್ರಿಯೆಗೆ ಧನ್ಯವಾದಗಳು ಬದರಿ.ಹೆದರಿ ಕಂಗಾಲಾದ ಪರಿಸ್ಥಿತಿಯನ್ನು ಅವರು ವಿವರಿಸಿದಾಗ ಅವರ ಪರಿಸ್ಥಿತಿಯಲ್ಲಿ ಯಾರೇ ಇದ್ದರೂ ಅದೇ ಅನುಭವವಾಗುತ್ತಿತ್ತು ಅನಿಸಿತು.

   Delete
 4. ನಿಮ್ಮ ಬರಹಗಳು ಯಾವಾಗಲೂ ಸ್ವಾರಸ್ಯಕರವಾಗಿ ಇರುತ್ತವೆ.
  ಇಂತಹ ಸಾಹಿತ್ಯಸುಖವನ್ನು ಕೊಡುತ್ತಿರುವ ನಿಮಗೆ ಧನ್ಯವಾದಗಳು

  ReplyDelete
 5. ಸುನಾತ್ ಸರ್;ಬ್ಲಾಗ್ ಲೋಕದಿಂದ ವಿಮುಖರಾಗುತ್ತಿರುವ ಈ ಸಮಯದಲ್ಲಿ ತಮ್ಮಂತಹ ಹಿರಿಯರ ಪ್ರೋತ್ಸಾಹಕ ನುಡಿಗಳು ಟಾನಿಕ್ ಇದ್ದ ಹಾಗೆ!ಬರುತ್ತಿರಿ ಸರ್.ನಮಸ್ಕಾರ.

  ReplyDelete
 6. BHOOTA SUKHA SAVIDA AA VAIDYEA PAADU NIMMA LEKHANADALLI RANJANEEYAVAGI MOODIBANDIDE

  ReplyDelete