ಕೆಲವರಿಗೆ ಯಾಕೋ ಸದಾ ಸುಸ್ತು !!!!! ದೈಹಿಕವಾಗಿ ಅಂತಹ ಶ್ರಮ ಇರುವುದಿಲ್ಲ!!!!! ಕೆಲವರ ಕುಡಿದ ನೀರೂ ಅಲ್ಲಾಡಿರುವುದಿಲ್ಲ !!!! ಕೈಗೊಬ್ಬ ಕಾಲಿಗೊಬ್ಬ ಆಳು !!!! ಆದರೂ ಸದಾ ಸುಸ್ತು !!!! ಕಂಡ ಕಂಡ ಡಾಕ್ಟರು ಗಳಿಗೆ ತೋರಿಸಿರುತ್ತಾರೆ !!!! ದುಬಾರಿ ಬೆಲೆಯ ಸಾಕಷ್ಟು ವಿಟಮಿನ್ ಮಾತ್ರೆ ಗಳನ್ನೂ ನುಂಗಿರುತ್ತಾರೆ !!! ಪದೇ ,ಪದೇ ಎಲ್ಲಾ ಟೆಸ್ಟ್ ಮಾಡಿಸಿರುತ್ತಾರೆ !!!ಎಲ್ಲಾ ಟೆಸ್ಟು ನಾರ್ಮಲ್ !!!! ಹೇಳಿಕೊಳ್ಳು ವಂಥ ಯಾವುದೇ ದೈಹಿಕ ಖಾಯಿಲೆಗಳಿರುವುದಿಲ್ಲ!!!ಆದರೆ ಮನಸ್ಸಿನಲ್ಲಿ ಸದಾ ಕಿರಿಕಿರಿ !!! ಮನಸ್ಸಿಗೆ ಸದಾ ,ಯಾವುದೋ ಒಂದು ಅಥವಾ ಯಾರೋ ಒಬ್ಬರು ಸರಿ ಇಲ್ಲ ಅಂತ ಅನಿಸುತ್ತಿರುತ್ತದೆ!!!! 'ಎಲ್ಲವೂ ತಮ್ಮ ಮೂಗಿನ ನೇರಕ್ಕೇ ನಡೆಯುವುದಿಲ್ಲ,ಜಗತ್ತು ಇರುವುದೇ ಹೀಗೆ ' ಎಂದು ಮನಸ್ಸು ಒಪ್ಪಿಕೊಳ್ಳಲು ತಯಾರಿರುವುದಿಲ್ಲ!!!! ಇಂಥವರು ಮನಸ್ಸಿನಿಂದ ಇಲ್ಲ ಸಲ್ಲದ ನೆಗೆಟಿವ್ ಆಲೋಚನೆಗಳನ್ನು Delete ಮಾಡಿ, ಧ್ಯಾನ,ಪ್ರಾಣಾಯಾಮಗಳಿಂದ ಮನಸ್ಸನ್ನು ಶಾಂತವಾಗಿ, ಸಮಾಧಾನದಿಂದ ಇಟ್ಟುಕೊಳ್ಳುವುದನ್ನು ರೂಢಿ ಮಾಡಿಕೊಂಡರೆ ಸುಸ್ತು ಕಮ್ಮಿ ಆಗಬಹುದು ಅನಿಸುತ್ತದೆ. ಇಲ್ಲದಿದ್ದರೆ ಹುಚ್ಚು ಕುದುರೆಯ ನಾಗಾಲೋಟದ ವೇಗದ ಮನಸ್ಸು ಯಾವುದಾದರೂ ದೊಡ್ಡ ದೈಹಿಕ ಖಾಯಿಲೆಗೆ ಕಾರಣವಾಗಬಹುದು !!!!
MOVE THE BODY AND REST THE MIND !!!!!! ಸರ್ವೇ ಜನಾಹ ಸುಖಿನೋ ಭವಂತು .ನಮಸ್ಕಾರ _/\_
MOVE THE BODY AND REST THE MIND !!!!!! ಸರ್ವೇ ಜನಾಹ ಸುಖಿನೋ ಭವಂತು .ನಮಸ್ಕಾರ _/\_