Saturday, February 8, 2020

ಇಗೋ ,ಹಿಂದೆ ಸರಿಯುತ್ತಿದ್ದೇನೆ . ಹೌದಪ್ಪಾ ಮರೀ,ನೀನೆನ್ನುವುದೇ ಸರೀ ಕುಣಿದೂ,ಕುಣಿದೂ ದಣಿದಿದೆಕಾಲು.ಕಿರಿಯರಿಗೆ ಜಾಗಬಿಟ್ಟು,ರಂಗಸ್ಥಳದಿಂದ ಕೆಳಗಿಳಿದು,ಪರದೆ ಹಿಂದೆ ಸರಿಯುವುದೇ ಮೇಲು !ಕರಗಿದೆ ಮುಖಕ್ಕೆ ಹಚ್ಚಿದ ರಂಗು !ಮತ್ತೇಕೆ ನನಗೆ ಥಳಕು ಬೆಳಕಿನಾ ಹಂಗು.?ಕಳಚಿ ಬಿದ್ದಿವೆ, ಭುಜಕೀರ್ತಿ ಕಿರೀಟ.ತಣ್ಣಗಾಗಿವೆ ಕತ್ತಿ ಗಧೆಗಳ ಆರ್ಭಟ! ತಾಳ ತಪ್ಪಿ ಕುಣಿದಿದ್ದೇನೆ !ನಾನೇ ಸರಿ ಎನ್ನುತ್ತಾ,ಅಹಂಕಾರದಲಿ ಮೆರೆದಿದ್ದೇನೆ!ಚಂಡೆ ಮದ್ದಳೆ ದನಿಗೆಕಿವಿ ಕಿವುಡಾಗಿದೆ !ಝಗಮಗಿಸುವ ದೀಪದ ಬೆಳಕಿಗೆ,ಕಣ್ಣು ಕುರುಡಾಗಿದೆ !ಪ್ರಸ್ಥಾನ ಗೀತೆ ಕೇಳಿಬರುತ್ತಿದೆ.ಅಸ್ತಮಿಸುವ ಸೂರ್ಯನೊಡನೆ ನಾನೂ ತೆರಳುತ್ತಿದ್ದೇನೆ !ನಾಳೆ ಮತ್ತೆಲ್ಲೋ....,ಬಾಲ ರವಿಯ ಜೊತೆಮತ್ತೆ ಉದಯಿಸುತ್ತೇನೆ!ಹೊಸ ಬಾಳ ರಂಗಸ್ಥಳದಲ್ಲಿಮತ್ತೊಮ್ಮೆ ಗೆಜ್ಜೆ ಕಟ್ಟಿ,ಹೆಜ್ಜೆ ಹಾಕುತ್ತೇನೆ !!( ಯಾವುದೋ ಹಳೆಯ ಪುಸ್ತಕವೊಂದರಲ್ಲಿ ಬರೆದಿಟ್ಟು ಮರೆತ ನನ್ನ ಕವಿತೆ😊)


4 comments:

  1. ಇದು ಪ್ರಸ್ಥಾನಗೀತೆ ಎಂದು ನೀವು ಹೇಳಿದರೆ ನಾನು ಒಪ್ಪಲಾರೆ. ನಿಮ್ಮ ಯಾವ ಓದುಗರೂ ಒಪ್ಪಲಾರರು. ನಾವು ನೀವು ಮತ್ತೊಮ್ಮೆ ಕೂಡಿ ಉದಯಿಸೋಣ. ಸದ್ಯಕ್ಕಂತೂ ನೀವು ರಂಗದ ಮೇಲೆಯೇ ಇರಿ.

    ReplyDelete
  2. ಸುನಾಥ ಕಾಕಾ ಅಭಿಪ್ರಾಯ ನೂರಕ್ಕೆ ನೂರರಷ್ಟು ನಿಜ.

    ReplyDelete
  3. If you're looking to lose fat then you certainly need to try this brand new personalized keto meal plan diet.

    To create this keto diet service, certified nutritionists, fitness couches, and top chefs united to provide keto meal plans that are useful, decent, price-efficient, and satisfying.

    Since their first launch in January 2019, thousands of individuals have already remodeled their figure and health with the benefits a good keto meal plan diet can offer.

    Speaking of benefits; clicking this link, you'll discover 8 scientifically-confirmed ones provided by the keto meal plan diet.

    ReplyDelete
  4. It’s very well outthought and expressed. Accepting the inevitable, getting prepared to it, and showcasing it - the process is very emulative. Thank you for showing the way.

    ReplyDelete

Note: Only a member of this blog may post a comment.