Thursday, January 27, 2011

"ಆಲೋಚನೆಗಳ ಸಂಕೋಲೆಗಳಿಂದ ಬಿಡುಗಡೆ!"

ನಾನು ಮಾತನಾಡುತ್ತಲಿದ್ದೆ.ಎದುರಿಗಿದ್ದ ವ್ಯಕ್ತಿ  ಕೇಳಿಸಿ ಕೊಳ್ಳುವಂತೆ ಆಗೊಮ್ಮೆ ಈಗೊಮ್ಮೆ ಹಾಂ,ಹೂಂ .......,ಎನ್ನುತ್ತಿದ್ದ.ಯಾವುದೋ ಆಲೋಚನೆಯಲ್ಲಿ ಮುಳುಗಿ ಹೋಗಿದ್ದ.ನಾನು ಹೇಳಿದ್ದು ಒಂದೂ ಅರ್ಥವಾಗಿರಲಿಲ್ಲ!ನಮ್ಮಲ್ಲಿ ಬಹಳಷ್ಟು ಜನ ಹೀಗೆಯೇ ಅಲ್ಲವೇ?ಹಿಂದೆಂದೋ ನಡೆದ ಘಟನೆಯೋ,ಯಾರೋ ನಮ್ಮನ್ನು ಇಪ್ಪತ್ತು ವರುಷಗಳ ಕೆಳಗೆ ಕುಟಕಿ ಆಡಿದ ಮಾತೋ,ಹೀಯಾಳಿಸಿ ಅವಮಾನ ಮಾಡಿದ್ದೋ,ಬೇಡವೆಂದರೂ ಮತ್ತೆ ,ಮತ್ತೆ ಮರುಕಳಿಸಿ ನಮಗೇ ಗೊತ್ತಿಲ್ಲದಂತೆ ನಮ್ಮ ನೆಮ್ಮದಿಯನ್ನು ಹಾಳು ಮಾಡುತ್ತಿರುತ್ತದೆ.ಅಥವಾ ಭವಿಷ್ಯದಲ್ಲಿ ನನಗೆ ಕ್ಯಾನ್ಸರ್ ಬಂದರೆ ಏನು ಮಾಡುವುದು !?ಹಾರ್ಟ್ ಅಟ್ಯಾಕ್ ಆದರೆ ಏನು ಗತಿ ಎನ್ನುವ ಚಿಂತೆಗಳು ಕಾಡುತ್ತವೆ.ಭೂತಕಾಲದ ಭೂತವೋ,ಭವಿಷ್ಯದ ಭಯವೋ ,ಯಾವುದೋ ಒಂದು ,ಒಟ್ಟಿನಲ್ಲಿ ಮನುಷ್ಯನನ್ನು ನೆಮ್ಮದಿಯಾಗಿರಲು ಬಿಡುವುದಿಲ್ಲ.ಈ ಘಳಿಗೆಯಲ್ಲಿ ಅರ್ಥ ಪೂರ್ಣವಾಗಿ ಬದುಕುವುದನ್ನು ನಾವಿನ್ನೂ ಕಲಿತೇ ಇಲ್ಲ !ನಾವು ಬದುಕಿರುವುದೇ ಈ ಘಳಿಗೆಯಲ್ಲಿ ಅಲ್ಲವೇ?ಅದರಲ್ಲೇ ಸಂಪೂರ್ಣವಾಗಿ ,ನಿರಾಳವಾಗಿ ಬದುಕಲು ಸಾಧ್ಯವಿಲ್ಲವೇ?
ECKHART TOLLE ಯವರ ' THE POWER OF NOW ' ಮತ್ತು 'STILLNESS SPEAKS' ಎನ್ನುವ ಎರಡು ಅದ್ಭುತ ಪುಸ್ತಕಗಳು ಈ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುತ್ತವೆ.STILLNESS SPEAKS ನಿಂದ ಕೆಲವು ಆಯ್ದ ಸಾಲುಗಳು ನಿಮಗಾಗಿ;
1)The human condition: lost in thought .

2)Most people spend their entire life imprisoned with in the confines of their own thoughts. They never go beyond a narrow,mind-made,personalized sense that is conditioned by the past.
In you,as in each human being,there is a dimension of consciousness,far  deeper than thought.It is the very essence of who you are.We may call it presence or awareness.

3)Love,joy,creative ideas,and lasting inner peace cannot come in to your life except through that awareness or that unconditioned dimension of conciousness.

4)Recognize your thoughts as only thoughts.Be just a witness without any judgment or reaction.

5)Here is a new spiritual practice for you:don't take your thoughts too seriously.Just be watchful.

6)Thinking was given to us as an instrument to be used.But the instrument is using most of us!

7)Whenever you are immersed in compulsive thinking,you are avoiding the present.you don't want to be  where you are .Here ,now. 

 8)Our basic delusion is our identification with the thought.

9)Spiritual awakening is awakening from the dream of thought.

10)The realm of conciousness is much vaster than thought can grasp.when you no longer believe everything you think ,you step out of thought and see clearely that the thinker is not who you are.

ಆಲೋಚನೆಗಳ ಸಂಕೋಲೆಯಿಂದ ಬಿಡುಗಡೆ ಹೊಂದಿ ,ನಾವೆಲ್ಲಾ ನೆಮ್ಮದಿಯಿಂದ ,ನಿರಾಳವಾಗಿ ಇರುವಂತಿದ್ದರೆ ಬದುಕು ಎಷ್ಟು ಸುಂದರ !.........ಅಲ್ಲವೇ? ಇನ್ನಷ್ಟು ಆಧ್ಯಾತ್ಮಿಕ ಲೇಖನಗಳನ್ನೂ,ಮನಸ್ಸಿನ ಅದ್ಭುತ ಜಗತ್ತಿನ ಬಗ್ಗೆಯೂ ಬರೆಯಬೇಕೆಂದು ಕೊಡಿದ್ದೇನೆ.ಇಂಗ್ಲೀಷಿನಲ್ಲಿ ಇದೇ ಬ್ಲಾಗಿನಲ್ಲಿ ಬರೆದರೆ ಪರವಾಗಿಲ್ಲವೇ?ಇನ್ನೊಂದು ಬೇರೆ ಬ್ಲಾಗ್ ತೆರೆಯ ಬೇಕೇ? ಲೇಖನ ಇಷ್ಟವಾಯಿತೇ?ನಿಮ್ಮ ಅಭಿಪ್ರಾಯ ತಿಳಿಸಿ.ನಮಸ್ಕಾರ.
 

31 comments:

  1. ಕೃಷ್ಣಮೂರ್ತಿಯವರೆ,
    ಲೇಖನ ತುಂಬ ಇಷ್ಟವಾಯ್ತು. ನೀವು ಇಂಗ್ಲೀಶಿನಲ್ಲಿ ಬೇರೊಂದು ಬ್ಲಾಗ್ ತೆಗೆದರೆ ನಾವು ಓದಿಯೆ ಓದುತ್ತೇವೆ. ಅಲ್ಲದೆ ಕನ್ನಡ ಬಾರದ ಅನೇಕರೂ ಆ ಆಂಗ್ಲ ಬ್ಲಾಗನ್ನು ಓದಬಹುದು. ಇದೇ ಬ್ಲಾಗಿನಲ್ಲಿ ನೀವು ಇಂಗ್ಲೀಶಿನಲ್ಲಿ ಬರೆದರೆ, ನಾವಂತೂ ಓದುತ್ತೇವೆ. ಆದರೆ ಕನ್ನಡ ಬಾರದವರಿಗೆ ಅದು ತಲುಪಲಿಕ್ಕಿಲ್ಲ.

    ReplyDelete
  2. ಮೂರ್ತಿ ಸರ್,
    ಲೇಖನ ತುಂಬಾ ಇಷ್ಟ ಆಯ್ತು.
    ವಯಕ್ತಿಕವಾಗಿ ನಾನು, ಈ ಆಲೋಚನೆಗಳ ಅಲೆಯಲ್ಲಿ ಹಲವು ಸಾರಿ ಸಿಲುಕಿದ್ದಿನಿ.
    ಮನಸ್ಸು, ಕೆಲವು ಸಾರಿ ಅತೀವ ಆನಂದದಲ್ಲಿ ತೆಲಾಡಿಸಿದೆ.. ನೋವಿನ ಸುಳಿಯಲ್ಲಿ ಮುಳುಗಿಸಿದೆ.
    ಕೆಲವು ಸಾರಿ ಹೇಳಲಾಗದ, ಅನುಭವಿಸಲಾಗದ.. ಗೊಂದಲ, ಸಂಕಟ..!
    ಆತ್ಮಿಯರ ಹತ್ತಿರ ಹೇಳಲು ಹಿಂಜರಿಕೆ ಆಗಿದ್ದು ಇದೆ..

    ದಯವಿಟ್ಟು, ಲೇಖನ ಮುಂದುವರೆಯಲಿ.
    ಬೇರೆ ಬ್ಲಾಗ್ ಯಾಕೆ, ಇಲ್ಲೇ ಬರೆಯಬಹುದಲ್ವಾ,? ಅಂತ ನನ್ನನಿಸಿಕೆ.
    ಆದರೇ , ಸುನಾಥ್ ಸರ್ ಹೇಳಿದ ಹಾಗೆ ಕನ್ನಡ ಬಾರದವರಿಗೆ ಲೇಖನ ಮುಟ್ಟುವುದು ಕಷ್ಟ.
    ನಮಗೆ ಎಲ್ಲಿದ್ದರು ಓಕೆ.
    ಇಲ್ಲೇ ಇರಲಿ ಅನ್ನುವುದು ಆಸೆ :) :)

    ನಿಮ್ಮ ಬರಹ, "ಮನದ ನೋವಿಗೆ ಮದ್ದು" ಆಗಬಹುದಲ್ವಾ..

    ಪ್ರೀತಿಯಿಂದ
    -ಅನಿಲ್

    ReplyDelete
  3. ಲೇಖನ ತುಂಬಾ ಇಷ್ಟವಾಯ್ತು. ನೀವು ಆಂಗ್ಲ ಭಾಷೆಯಲ್ಲಿ ಬರೆಯುವದಾಕ್ಕಾಗಿ ಇನ್ನೊಂದು ಬ್ಲಾಗ್ ತೆರೆಯುವದೇ ಉತ್ತಮವೆಂದೆನಿಸುತ್ತದೆ. ಸುನಾಥ್ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಜೈ ಹೋ.

    ReplyDelete
  4. ಡಿ.ಟಿ.ಕೆ .ಸರ್ ನಿಮ್ಮ ಲೇಖನ ಹಲವರಿಗೆ ಉಪಯೋಗವಾಗುವಂತದು, ಮಾಹಿತಿ ಪೂರ್ಣವಾಗಿದೆ. ಒಳ್ಳೆಯ ವಿಚಾರಗಳನ್ನು ಮಾತೃಭಾಷೆಯಲ್ಲಿ ತಿಳಿಸಿದರೆ ಒಳ್ಳೆಯದು,ಆ ಕಾರ್ಯ ಕನ್ನದಲ್ಲಿ ಈ ಬ್ಲಾಗಿನಲ್ಲಿ ಮುಂದುವರೆಸಿ.ನನಗೆ ತಿಳಿದಂತೆ ಇಂತಹ ಲೇಖನಗಳು ಇಂಗ್ಲೀಶ್ ನಲ್ಲಿ ಹಲವಷ್ಟು ಸಿಗುವ ಸಾಧ್ಯತೆ ಇರುತ್ತದೆ .ಹಾಗೊಂದು ವೇಳೆ ಈ ವಿಚಾರಗಳನ್ನು ಇಂಗ್ಲೀಶ್ ನಲ್ಲಿ ಪ್ರಕಟಿಸಲೇ ಬೇಕೆಂಬ ಅನಿವಾರ್ಯತೆ ಬಂದಲ್ಲಿ ಬೇರೆ ಬ್ಲಾಗ್ ಬಗ್ಗೆ ಯೋಚಿಸಿ. ಈ ವಿಷಯದಲ್ಲಿ ಸುನಾತ್ ರವರ ಕಾಮೆಂಟ್ಸ್ ಸ್ವಲ್ಪ ಗೊಂದಲವಾಗಿದೆ, ಆದರೆ ಅವರ ಉದ್ದೇಶ ಕನ್ನಡ ಬಾರದೆ ಇರುವವರಿಗಾಗಿ ಇಂಗ್ಲೀಶ್ ನಲ್ಲಿ ಬ್ಲಾಗ್ ಮಾಡಲು ತಿಳಿಸಿರಬಹುದು.ಮೊದಲು ನಿಮ್ಮ ಈ ಅಮೋಘ ವಿಚಾರಗಳು ಕನ್ನಡ ಮಾತಾಡುವ ಗ್ರಾಮೀಣ ಜನರಿಗೆ ತಲುಪಲಿ, ಇಂತಹ ವಿಚಾರಗಳು ಹಲವರ ಜೀವನಕ್ಕೆ ಸ್ಫೂರ್ತಿ ತುಂಬುವ ಸಾಧ್ಯತೆ ಹೆಚ್ಚು . ನಿಮ್ಮ ಈ ಕಾರ್ಯ ಯಶಸ್ವಿಯಾಗಲಿ .
    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  5. ನನ್ನ ಕಾಮೆಂಟ್ ನಲ್ಲಿ ಬರೆಯುವಾಗ ನಾಲ್ಕನೇ ಸಾಲಿನಲ್ಲಿ ಕನ್ನಡದಲ್ಲಿ ಎನ್ನುವ ಬದಲಾಗಿ ಕನ್ನದಲ್ಲಿ ಎಂದಾಗಿದೆ ಕ್ಷಮಿಸಿಬಿಡಿ.

    ReplyDelete
  6. ಸುನಾತ್ ಸರ್;ನಿಮ್ಮ ಅನಿಸಿಕೆಗೆ ವಂದನೆಗಳು.ಇಂಗ್ಲೀಶ್ ಬ್ಲಾಗ್ ಬಗ್ಗೆ ಯೋಚನೆ ಮಾಡುತ್ತೇನೆ.ಅಲ್ಲಿಯವರೆಗೆ ಈ ಬ್ಲಾಗಿನಲ್ಲೇ ಬರೆಯುತ್ತೇನೆ.ನಮಸ್ಕಾರ.

    ReplyDelete
  7. ಅನಿಲ್;ನೀವು ಹೇಳುವುದು ಸರಿ.ನಾವೆಲ್ಲಾ ಬಹಳಷ್ಟು ಸಲ ನಮಗೆ ತಿಳಿಯದಂತೆ ಆಲೋಚನೆಗಳ ಸುಳಿಯಲ್ಲಿ ಸಿಲುಕಿ,ಹೊರಬರಲಾಗದೆ ಒದ್ದಾಡುತ್ತಿರುತ್ತೇವೆ.ಹಿಂದೆ ನಡೆದ ಘಟನೆಯ ಬಗ್ಗೆಯೋ,ಮುಂದೆ ನಡೆಯಬಹುದಾದ ಘಟನೆಯ ಬಗ್ಗೆಯೋ ಯೋಚಿಸಿ ಈ ಕ್ಷಣದಲ್ಲಿ ಅರಿವಿನಿಂದ ಇರುವುದನ್ನು ಮರೆತಿರುತ್ತೇವೆ.ನಮ್ಮೆಲ್ಲಾ ತೊಂದರೆಗಳ ಮೂಲ ಇದು.ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

    ReplyDelete
  8. ಭಟ್ ಸರ್;ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ನಿಮ್ಮ ಪ್ರೋತ್ಸಾಹ ಹೀಗೇ ಮುಂದುವರೆಯಲಿ.ನಮಸ್ಕಾರ.

    ReplyDelete
  9. ಬಾಲೂ ಸರ್;ನಿಮ್ಮ ಪ್ರೋತ್ಸಾಹಪೂರ್ವಕ ಅಭಿಪ್ರಾಯಗಳಿಗೆ ವಂದನೆಗಳು.ಇಂಗ್ಲೀಶ್ ಬರಹಗಳನ್ನು ಆದಷ್ಟೂ ಕನ್ನಡದಲ್ಲಿ ಬರೆಯುವ ಪ್ರಯತ್ನ ಮಾಡುತ್ತೇನೆ.

    ReplyDelete
  10. The human condition: lost in thought . ..

    ಅದ್ಭುತ ಪಂಕ್ತಿ .. ಬಹಳ ಇಷ್ಟವಾಯ್ತು ..

    ಮೂರ್ತಿ ಸರ್ .. ನೀವು ಇಲ್ಲಾದರು ಬರೆಯರಿ ಅಥವಾ ಬೇರೆ ಬ್ಲೊಗನಲ್ಲೆ ಬರೆಯಿರಿ .. ನಾವಂತು ಬಂದು ಒದೋದು ಖಂಡಿತ

    ReplyDelete
  11. ಶ್ರೀಧರ್;ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಮುಂದುವರಿಯಲಿ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  12. ಡಾಕ್ಟ್ರೇ, ಚನಾಗಿದೆ ಭಾವನೆಗಳು, ಯೋಚನೆಗಳ ಬೆನ್ನಹತ್ತಿ ಒಳ್ಳೆ ಮಂಥನ ನಡೆಸಿ ಈ ಬ್ಲಾಗ್ ಪೋಸ್ಟ್ ಮೂಡಿಸಿದ್ದೀರಿ, ಹೌದು ಎಲ್ಲದಕ್ಕೂ ಯೋಚನೆಗಳೇ ಮೂಲಕಾರಣ..ನಿಮ್ಮ ಅನಿಸಿಕೆಗಳನ್ನು,,ಖಂಡಿತಾ ಹಾಕಿ...ಬೇರೆ ಬ್ಲಾಗು ಬೇಕಿಲ್ಲ ಅನ್ಸುತ್ತೆ...ಆ ತಪ್ಪು ನಾನು ಮಾಡಿ ಈಗ ಅನುಭವಿಸಿದ್ದೀನಿ...ಇದರಲ್ಲೇ ಕೊಳಲಲ್ಲಿ ಕನ್ನಡ ಇಂಗ್ಲೀಷ ಎರಡರಲ್ಲೂ ಮೂಡಿ ಬರಲಿ...

    ReplyDelete
  13. ಅಜಾದ್ ಸರ್;ಇಂಗ್ಲೀಷಿನಲ್ಲಿ ಓದಿದ್ದನ್ನು ಕನ್ನಡದಲ್ಲೂ ಎಲ್ಲರೊಡನೆ ಹಂಚಿಕೊಳ್ಳಬೇಕೆಂದು ನನ್ನ ಆಸೆ.ಆದರೆ ಎಲ್ಲಾ ಇಂಗ್ಲೀಶ್ ಬರಹಗಳನ್ನೂ ಕನ್ನಡೀ ಕರಿಸುವಷ್ಟು ಪಾಂಡಿತ್ಯ ನನ್ನಲ್ಲಿ ಇದೆಯೇ ಎನ್ನುವ ಅನುಮಾನ.ಕನ್ನಡಕ್ಕೆ ಅನುವಾದಿಸಲು ಆಗದಿದ್ದರೆ ಇಂಗ್ಲೀಷಿನಲ್ಲೇ ಹಾಕುತ್ತೇನೆ.ನಿಮ್ಮ ಅನಿಸಿಕೆಗೆ ಧನ್ಯವಾದಗಳು ಸರ್.ನಮಸ್ಕಾರ.

    ReplyDelete
  14. ಭಾವನೆಗಳು ಇಲ್ಲದಿದ್ದರೆ ಜಗತ್ತೇ ಆಗುತ್ತಿರಲಿಲ್ಲವೇನೋ. ಭಾವನೆಗಳೇ ಬದುಕಿಗೆ ಪೂರಕವೂ ಮಾರಕವೂ ಆಗುತ್ತವೆ. ಗಂಡಹೆಂಡತಿಯ ನಡುವೆ ಸಂಶಯದ ಭಾವನೆಗಳು ಸುಳಿದರೆ ಸಂಸಾರದ ರಾಗ ಬದಲಾಗುತ್ತದೆ, ಅದೇ ಹರೆಯದ ಹುಡುಗ-ಹುಡುಗಿ ನೋಟದಲ್ಲೇ ಭಾವಮಿಳಿತವಾಗಿ ಹೊರ ಆಕರ್ಷಣೆಯಿಂದ ಪ್ರೀತಿಸುತ್ತಾರೆ--ಅಲ್ಲೂ ಭಾವನೆಗಳೇ. ಭಾವನೆಗಳು ಇಲ್ಲದ ಕೆಲವು ಜಾಗಗಳೆಂದರೆ ಬೆಂಗಳೂರಿನ ಕೆಲವು ಆಸ್ಪತ್ರೆಗಳು! ದಯಮಾಡಿ ಕ್ಷಮಿಸಿ, ತಮ್ಮಂತಹ ಪರೋಪಕಾರೀ ವೈದ್ಯರಿದ್ದರೆ ಬೆಂಗಳೂರಿನಲ್ಲಿ ಸಾಯುವವರ ಸಂಖ್ಯೆ ಕಮ್ಮಿಯಾಗುತ್ತಿತ್ತೇನೋ, ಆದರೆ ಇಲ್ಲಿ ಭಾವನಾರಹಿತ ವೈದ್ಯರುಗಳೇ ಹೆಚ್ಚಾಗಿದ್ದಾರೆ, ರೋಗಿ ಸಾಯುವಾಗ ಅವರು ಗಾಲ್ಫ್ ಆಡುತ್ತಿರುತ್ತಾರೆ! ತಮ್ಮ ಭಾವನೆಗಳು ಇಂಗ್ಲೀಷ್ ನಲ್ಲಿ ಬಂದರೂ ಅಡ್ಡಿಯಿಲ್ಲ, ಇದೇ ಬ್ಲಾಗೋ ಮತ್ತೊಂದೂ ಅಂತೂ ಬರಹ ಬರಲಿ, ನಮಸ್ಕಾರ.

    ReplyDelete
  15. ವಿ.ಆರ್.ಭಟ್ ಸರ್;ಭಾವನೆಗಳಿಲ್ಲದೆ,ಆಲೋಚನೆಗಳಿಲ್ಲದೆ ಜೀವನವಿಲ್ಲ.ನಿಜ.ಆದರೆ ನಮ್ಮ ಆಲೋಚನೆಗಳೇ,ನಮ್ಮ ಭಾವನೆಗಳೇ ನಿಜವಾದ ನಾವಲ್ಲ.ನಾವು ನಮ್ಮ ಆಲೋಚನೆಗಳಿಗಿಂತ ಭಿನ್ನವಾದ ಶಕ್ತಿಯ ಸ್ವರೂಪ ಎನ್ನುವ ಸತ್ಯವನ್ನು ತಿಳಿಸುವ ಸಣ್ಣ ಪ್ರಯತ್ನ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  16. ಸರ್,
    ಮನಸ್ಸಿನ ತಳಮಳಗಳಿಗೆ ಬೆಳಕು ಚೆಲ್ಲುವ ಲೇಖನಕ್ಕೆ ವಂದನೆಗಳು.
    ಕನ್ನಡ-ಇಂಗ್ಲೀಷ್-ಹಿಂದಿ ಏನಾದರೂ ಬರೀರಿ..ನಾವಂತು ಓದ್ತೀವಿ :)

    ವೈಯುಕ್ತಿಕ ಅಭಿಪ್ರಾಯ..ಒಂದಕ್ಕಿಂತ ಹೆಚ್ಚು ಬ್ಲಾಗ್ ನಿಭಾಯಿಸುವುದು ಸ್ಪಲ್ಪ ಕಠಿಣ ಕೆಲಸ.

    ReplyDelete
  17. ಡಾಕ್ಟರ್ ಸರ್,
    ಮನ ತಟ್ಟುವ, ಮುಟ್ಟುವ ಮಾತುಗಳು .... ಯೋಚಿಸುವಂತೆ ಮಾಡುವ ಸಾಲುಗಳು....ಇದೇ ಬ್ಲಾಗ್ ನಲ್ಲಿ ಬರೆಯಿರಿ ಸರ್... ಮತ್ತೊಂದು ಬ್ಲಾಗ್ ಬೇಡ....

    ReplyDelete
  18. ಅಪ್ಪ ಅಮ್ಮ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  19. ದಿನಕರ್;ತಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.ನಮಸ್ಕಾರ.

    ReplyDelete
  20. ECKHART TOLLE ಯವರ 'STILLNESS SPEAKS' ನಿಂದ ಆಯ್ದ ಅ೦ಶಗಳು ಬಹಳ ಮಾರ್ಗದರ್ಶಕವಾಗಿವೆ. ಹೀಗೆ ಮು೦ದುವರೆಸಿದರೆ ನಮಗೆ ಓದಲು ಉತ್ತಮ ಮಾಹಿತಿಯನ್ನು ನೀಡಿದ೦ತಾಗುತ್ತದೆ. ಮತ್ತೊ೦ದು ಇ೦ಗ್ಲಿಷ್ ಬ್ಲಾಗ್ ತೆರೆಯುವುದಾದರೆ ಇದರಲ್ಲಿ ಕನ್ನಡಕ್ಕೆ ಭಾಷಾ೦ತರಿಸಿ ಬರೆದರೆ ಒಳ್ಳೆಯದು. ನಿಮಗೆ ಅನುಕೂಲವಾದ೦ತೆ ಮು೦ದುವರಿಸಿ. ನಾವ೦ತೂ ಓದಿ ಅದರ ಪ್ರಯೋಜನವನ್ನು ಪಡೆಯುತ್ತೇವೆ. ECKHART TOLLE ಯವರನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು. ಆಲೋಚನಾ ರಹಿತ ಸ್ಥಿತಿಯೇ ನಮ್ಮ ಗುರಿಯಾಗಬೇಕು ಎ೦ದು ತಿಳಿದವರು ಅಭಿಪ್ರಾಯ ಪಡುತ್ತಾರೆ.

    ReplyDelete
  21. Sir, good article. I request you to translate such a thoughtfull text in Kannada. It will help us easy to digest. Your article guided me to revise my life and bring it back to the right channel. Reforming article Thanks.

    ReplyDelete
  22. ಪ್ರಭಾಮಣಿ ನಾಗರಾಜ್ ಅವರಿಗೆ;ನಮಸ್ಕಾರ.ನಮ್ಮ ಎಲ್ಲಾ ತೊಂದರೆಗಳಿಗೆ ನಾವು ಈ ಕ್ಷಣದಲ್ಲಿ ಬದುಕುವುದನ್ನು ಕಲಿಯದಿರುವುದೇ ಕಾರಣ ಎಂದು ಪ್ರತಿಪಾದಿಸುತ್ತಾರೆ
    EKHARDT TOLLE.ನಾನು ಹೇಳಿದ ಅವರ ಎರಡೂ ಪುಸ್ತಗಳು ಅದ್ಭುತವಾಗಿವೆ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  23. ಬದರಿ ನಾರಾಯಣ್;ನಿಮಗೆ ಈ ಬರಹ ಇಷ್ಟವಾದದ್ದು ಸಂತೋಷ.ಆದಷ್ಟೂ ಕನ್ನಡದಲ್ಲಿ ಬರೆಯಲು ಪ್ರಯತ್ನಿಸುತ್ತೇನೆ.ಆದರೆ ಅನುವಾದಗೊಂಡ ಬರಹಗಳು ಮೂಲ ಬರಹದಷ್ಟು ಚೆನ್ನಾಗಿರದು ಎನ್ನುವುದು ನನ್ನ ಅನಿಸಿಕೆ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  24. ಡಾಕ್ಟ್ರೆ..

    ನಿಮ್ಮ ಲೇಖನ ಬಹಳ ಇಷ್ಟವಾಯಿತು..
    ಇಂಥಹ ವೈದ್ಯಕೀಯಕ್ಕೆ ಸಂಬಂಧಪಟ್ಟ ವಿಷಯಗಳು ಇನ್ನಷ್ಟು ಬರಲಿ...

    ಇಂಗ್ಲೀಷಿನಲ್ಲಿರುವ ವಿಷಯಗಳನ್ನು ಕನ್ನಡಕ್ಕೆ ಭಾವಾನುವಾದ ಮಾಡಿ
    ದಯವಿಟ್ಟು ಕನ್ನಡದಲ್ಲಿ ಬರೆಯಿರಿ...

    ಇದು ನನ್ನ ವಿನಮ್ರ ವಿನಂತಿ..

    ಪ್ರೀತಿಯಿಂದ..

    ನಿಮ್ಮ ಈ ಲೇಖನವನ್ನು ನನ್ನ ಕೆಲವು ಮಿತ್ರರಿಗೆ ಲಿಂಕ್ ಕಳುಹಿಸಿದ್ದೇನೆ..

    ಮತ್ತೊಮ್ಮೆ ಧನ್ಯವಾದಗಳು...

    ReplyDelete
  25. ಪ್ರಕಾಶಣ್ಣ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಭಾವಾನುವಾದ ಮೂಲ ಲೇಖನದಷ್ಟು ಚೆನ್ನಾಗಿ ಬರುವುದಿಲ್ಲವೇನೋ ಎನ್ನುವ ಅಳುಕು ನನ್ನದು.ಆದರೂ ಪ್ರಯತ್ನವನ್ನಂತೂ ಮಾಡುತ್ತೇನೆ.ನಮಸ್ಕಾರ.

    ReplyDelete
  26. ತೇಜಸ್ವಿನಿ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  27. After reading these lines, again "I am lost in thought" :)

    ReplyDelete
  28. ಲೇಖನ ಇಷ್ಟವಾಯಿತು. ಎಲ್ಲಾದರು ಬರೆಯಿರಿ ಒಟ್ಟಿನಲ್ಲಿ ಬರೆಯುತ್ತಿರಿ.

    ReplyDelete

Note: Only a member of this blog may post a comment.