Tuesday, February 1, 2011

"ಚಿತ್ರ ಸಂತೆಯ ........ಚಿತ್ರಗಳು"

ಮಧ್ಯಾಹ್ನದ ಉರಿಬಿಸಿಲಿಗೆ ಮೈಒಡ್ಡಿಕೊಂಡು, ಫುಟ್ ಪಾತಿನ ಪಕ್ಕದ ಬೇಲಿಯ ಸರಳುಗಳಿಗೆ ಸಾಲಾಗಿ ಒರಗಿ ಕುಳಿತ ಪೈಂಟಿಂಗ್ ಗಳು ಇನ್ನೂ ತಾವು ಮಾರಾಟ ವಾಗದೆ ಉಳಿದಿರುವುದಕ್ಕೆ ,ಯಾರಿಗೂ ಕೇಳದಂತೆ ಮೆಲ್ಲನೆ ಬಿಕ್ಕಳಿಸುತ್ತವೆ.ಪಕ್ಕದಲ್ಲೇನಿಂತ ಅವುಗಳ ಜನಕ ಗಿರಾಕಿಗಳಿಗಾಗಿ ಕಾದು ಬೇಸತ್ತು,ಹಚ್ಚಿದ ಸಿಗರೇಟು ಒಂದರಿಂದ ಸುದೀರ್ಘವಾಗಿ ದಂಎಳೆದು ಬೇಸರದ ಹೊಗೆಕಾರುತ್ತಾನೆ. ಒಂದೊಂದು ಚಿತ್ರವೂ ಕೈಬೀಸಿ ಕರೆದು, ದಯಮಾಡಿ ನನ್ನ ಸೆರೆಬಿಡಿಸಿ,ನಿಮ್ಮ ಬೆಡ್ ರೂಮಿನಲ್ಲೋ,ಹಾಲಿನಲ್ಲೋ, ಕಡೆಗೆ ಬಾತ್ ರೂಮಿನಲ್ಲೋ ಹ್ಯಾಂಗ್ ಮಾಡಿ ಎಂದು ಆರ್ತರಾಗಿ ಬೇಡಿಕೊಳ್ಳುತ್ತವೆ.ತಮ್ಮ ಡ್ರೆಸ್ ಗಳ ಹಿಡಿತಕ್ಕೆ ಮೀರಿ,ಎಲ್ಲಾ ಕಡೆಯಿಂದಲೂ ಚಿಮ್ಮುತ್ತಿರುವ ಹುಡುಗಿಯರು ,ತಮ್ಮ ತಂಪು ಕನ್ನಡಕದ ಹಿಂದಿನಿಂದಲೇ ನಾಲ್ಕು ಪೈಂಟಿಂಗ್ ಗಳನ್ನು ಅವಲೋಕಿಸಿ ಸುಸ್ತಾಗಿ,ಎರಡೆರಡು ಕೋನ್ ಐಸ್ಕ್ರೀಂ ತಿಂದು ತಮ್ಮ ಧಡೂತಿ ದೇಹಗಳನ್ನು ಮತ್ತಷ್ಟು ಸೊಂಪಾಗಿಸಿಕೊಳ್ಳುತ್ತಾರೆ.ಐಸ್ಕ್ರೀಂ ಮಾರಾಟಗಾರರಿಗೋ ಸುಗ್ಗಿಯೋಸುಗ್ಗಿ .ಚಿತ್ರಗಳಿಗಿಂತ ಅವೇ ಹೆಚ್ಚು ಮಾರಾಟವಾಗುತ್ತಿವೆ .ಮೊಮ್ಮಗಳಪೈಂಟಿಂಗ್ ಅನ್ನು ಕಾಯುತ್ತ ಕುಳಿತ ರಸಗುಲ್ಲಾ ತಿಂದು ಕೆಂಪಾದ ಕಲ್ಕತ್ತಾದ ಅಜ್ಜಿ ಯೊಬ್ಬಳು ಉರಿಬಿಸಿಲಿನ ತಾಪಕ್ಕೆ ಮತ್ತಷ್ಟು ಕೆಂಪಾಗಿ ತಾನೇ ಒಂದು ಪೈಂಟಿಂಗ್ ನಂತೆ ಕಾಣುತ್ತಾಳೆ.ಕಲಾವಿದರ ಗುಂಪೊಂದು ಗಿರಾಕಿಗಳ ಚೌಕಾಸಿಯ ಬಗ್ಗೆ ಬೇಸರದಿಂದ ಮಾತಾಡಿಕೊಂಡು, ಚಿತ್ರಸಂತೆಯವರು ಕೊಟ್ಟ ರೈಸ್ ಬಾತ್ ತಿನ್ನುತ್ತಿದ್ದಾರೆ.ಕೆಲವರು ದೊಡ್ಡ ದೊಡ್ಡ ಕ್ಯಾಮೆರಾ ಗಳಲ್ಲೋ ಮೊಬೈಲ್ ಗಳಲ್ಲೋ ಚಿತ್ರಗಳ ಫೋಟೋ ಕ್ಲಿಕ್ಕಿಸುವುದನ್ನೇ ಒಂದುದೊಡ್ಡ ಕಾಯಕ ಮಾಡಿಕೊಂಡಿದ್ದಾರೆ. ಹುಲ್ಲುಗಾವಲಿನಲ್ಲಿ ಮೇಯಲು ಬಿಟ್ಟ ಕರುವೊಂದು ಏನನ್ನೂ ಮೇಯದೆ ಅತ್ತಿಂದಿತ್ತ ಓಡಾಡುವಂತೆ,ಕೆಲವರು ಯಾವ ಚಿತ್ರವನ್ನೂ ಖರೀದಿಸದೇ, ಬರಿದೇ ಅತ್ತಿಂದಿತ್ತ ತಿರುಗಾಡಿ ಕಾಲು ನೋಯಿಸಿ ಕೊಂಡಿದ್ದಾರೆ.ನೂರಾರು ಹೆಣ್ಣುಗಳನ್ನು ನೋಡಿ ಕಡೆಗೆ ಯಾವುದೋ ಒಂದನ್ನು ಗಂಟು ಹಾಕಿಕೊಳ್ಳುವ ಗಂಡಿನಂತೆ ಕೆಲವರು ಎಷ್ಟೋ ಚಿತ್ರಗಳನ್ನು ನೋಡಿ ಖರೀದಿಸದೇ ಬಿಟ್ಟು ಕಡೆಗೆ ಕಳಪೆಚಿತ್ರ ಒಂದನ್ನು ಖರೀದಿಸಿ, ಕೊಟ್ಟ ಬೆಲೆ ಜಾಸ್ತಿಯಾಯ್ತೇನೋ ಎಂದು ಒದ್ದಾಡುತ್ತಾರೆ.ಕತ್ತಲಾಗುತ್ತಿದ್ದಂತೆ ಮಾರಾಟವಾಗದ ಚಿತ್ರಗಳ ಮೌನ ರೋದನ ಮುಗಿಲು ಮುಟ್ಟುತ್ತದೆ.ಅವುಗಳಿಗೆ ಸಾಂತ್ವನ ಹೇಳುವಂತೆ ಎಲ್ಲಿಂದಲೋ ತಂಗಾಳಿ ಬೀಸಿ ,ಆಶಾಕಿರಣದ ಸಂಕೇತವಾಗಿ ಬೀದಿ ದೀಪಗಳು ಜಗ್ಗನೆ ಹತ್ತಿಕೊಳ್ಳುತ್ತವೆ .ನಾಳೆ ಮತ್ತೆ ಬೆಳಗಾಗುತ್ತದೆ ಎನ್ನುವ ಭರವಸೆಯಲ್ಲಿ ಚಿತ್ರಗಳು ಒಂದೊಂದಾಗಿ ಪೆಟ್ಟಿಗೆ ಸೇರುತ್ತವೆ ----- ಮತ್ತೆ ಯಾವುದೋ ಸಂತೆಗೆ ಪಯಣ ಬೆಳಸಲು.ಜೀವನವೆಂದರೆ ಅದೇ ಅಲ್ಲವೇ?..............ನಿಲ್ಲದ ಪಯಣ!!

38 comments:

 1. ಡಾಕ್ಟ್ರೆ...

  ಹುಟ್ಟು ಹಬ್ಬದ (ಬ್ಲಾಗ್) ಸಂಭ್ರಮಕ್ಕೆ ಅಭಿನಂದನೆಗಳು..

  ಇನ್ನಷ್ಟು ನಿಮ್ಮ ರಸಾನುಭವ ಬ್ಲಾಗಿನಲ್ಲಿ ಬರಲಿ..
  ಕಥೆಗಳು.. ಕವನ.. ಲೇಖನಗಳು ನಮಗೆ ಓದಲು ಸಿಗಲಿ..

  ಮತ್ತೊಮ್ಮೆ ಹೃದಯಪೂರ್ವಕ ಶುಭಾಶಯಗಳು...

  ನಿಮ್ಮಂಥಹ ಸ್ನೇಹಿತರನ್ನು ಕೊಟ್ಟ ಈ ಬ್ಲಾಗ್ ಲೋಕಕ್ಕೂ ನಮನಗಳು... ಜೈ ಹೋ !!

  ReplyDelete
 2. ಪ್ರಕಾಶಣ್ಣ;ನನಗೂ ಬ್ಲಾಗ್ ಲೋಕ ನಿಮ್ಮಂತಹ ಒಳ್ಳೆಯ ಸ್ನೇಹಿತರನ್ನು ಕೊಟ್ಟಿದೆ.ಬ್ಲಾಗ್ ಲೋಕಕ್ಕೆ ನಾನು ಚಿರ ಋಣಿ.ಬ್ಲಾಗ್ ಗೆಳೆಯರ ಸ್ನೇಹ ಹೀಗೇ ಮುಂದುವರೆಯಲಿ.ಎಲ್ಲರ ಬಾಳೂ ಹಸನಾಗಲಿ.ಜೈ ಹೋ .

  ReplyDelete
 3. ಕೊಳಲು ಬ್ಲಾಗ್ ಗೆ ಹುಟ್ಟುಹಬ್ಬದ ಶುಭಾಶಯಗಳು.ಇನ್ನಷ್ಟು ಒಳ್ಳೆಯ ಲೇಖನಗಳು ಬರಲಿ.

  ReplyDelete
 4. ದಿಗ್ವಾಸ್ ಹೆಗ್ಡೆ;ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು.ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಮುಂದುವರೆಯಲಿ ಎನ್ನುವ ಹಾರೈಕೆ.ನಮಸ್ಕಾರ.

  ReplyDelete
 5. Doctor Sir.. We Wish your blog on its first Annivarsary. We wish to see many more articles in coming years :)

  ReplyDelete
 6. Heartly congrats sir. This 110 shall cross 11000. Your every article is attracts us by its variety and simplicity. Each article is so educative.
  Pl. Call me while u r in bangalore.
  I'm in face book:
  Badarinath Palavalli

  ReplyDelete
 7. ಹುಟ್ಟುಹಬ್ಬದ ಶುಭಾಶಯಗಳು

  ReplyDelete
 8. 110 not out..! thats great going sir. in your busy schedule also u devote so much time.its really nice sir.
  plz do visit my new blog www.vartamaana.blogspot.com whenever u r free

  ReplyDelete
 9. ಶುಭಾಶಯಗಳು ವೈದ್ಯ ಮಹಾಶಯರಿಗೆ. ನಿಮ್ಮ೦ತಹ ಮಿತ್ರರನ್ನು ಪಡೆದ ನಾನು ಧನ್ಯ.

  ReplyDelete
 10. ನವೀನ್;ನಿಮ್ಮ ಶುಭ ಹಾರೈಕೆಗೆ ಧನ್ಯವಾದಗಳು.ನಿಮ್ಮ ಪ್ರೋತ್ಸಾಹ ಹೀಗೇ ಮುಂದುವರಿಯಲಿ.

  ReplyDelete
 11. ಬದರಿನಾಥ್;ನಿಮ್ಮ ಸ್ನೇಹಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.ನನ್ನ ಲೇಖನಗಳು ನಿಮಗೆ ಇಷ್ಟವಾಗಿರುವುದು ಸಂತಸ ತಂದಿದೆ.ನಮಸ್ಕಾರ.

  ReplyDelete
 12. ಚುಕ್ಕಿ ಚಿತ್ತಾರ ಮೇಡಂ;ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು.

  ReplyDelete
 13. ಸ್ನೇಹಿತ ಡಾ.ಕೃಷ್ಣ ಮೂರ್ತಿಯವರೆ,

  ಕೊಳಲಿನ ಹುಟ್ಟುಹಬ್ಬದ ಸಂಭ್ರಮದಲ್ಲಿ ನಾವೆಲ್ಲರೂ ಭಾಗಿ.

  ನೀವು ನಮ್ಮನ್ನೆಲ್ಲ
  "ಬನ್ನಿ ಬ್ಲಾಗಿನ ಚಾರಣಿಗರೇ
  ಇಲ್ಲೇ ಸ್ವಲ್ಪ ವಿರಮಿಸಿಕೊಳ್ಳಿ
  ಕೊಳಲನೂದಲೇ?
  ಗಾಳಿ ಬೀಸಲೇ?
  ಬೇಸರವ ಬದಿಗಿರಿಸಿ ನಕ್ಕುಬಿಡಿ ಒಮ್ಮೆ",
  ಎಂದು ಕರೆದು ಉಪಚರಿಸಿದ್ದು
  ಯಾವಾಗಲೂ ಹಸಿರು.

  ನಿಮ್ಮ ಕೊಳಲಿನಿಂದ ನಾದಗಂಗೆ
  ಸದಾ ಹರಿಯುತ್ತಿರಲಿ,
  ಬ್ಲಾಗಿಗರ ಮನ ತಣಿಸುತ್ತಲಿರಲಿ
  ಎಂಬುದೇ ನನ್ನ ಹಾರೈಕೆ.

  ReplyDelete
 14. ಉಮೇಶ್ ದೇಸಾಯಿ ಸರ್;ನಿಮ್ಮ ಶುಭ ಹಾರೈಕೆಗಳಿಗೆ,ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಧನ್ಯವಾದಗಳು.ನಿಮ್ಮ ಹೊಸ ಬ್ಲಾಗಿಗೆ ಖಂಡಿತ ಬರುತ್ತೇನೆ.ನಮಸ್ಕಾರ.

  ReplyDelete
 15. ಡಾಕ್ಟ್ರೆ
  ಹುಟ್ಟು ಹಬ್ಬದ ಶುಭಾಶಯಗಳು
  ರೋಗಿಗಳ ನಾಡಿ ಮಿಡತ ಬಲ್ಲ ನೀವು ಅವರೊಂದಿಗಿನ ಒಡನಾಟದ
  ಅನುಭವಯುಕ್ತ ಬರಹ ನಮಗೆ ನೀಡಿದ್ದಿರಿ
  ಒಂದು ವರ್ಷದಲ್ಲಿ ನಿಮ್ಮ ಬರಹಗಳು ಮನಸ್ಸಿಗೆ ನಾಟಿವೆ
  ಹೀಗೆಯೇ ಮುಂದುವರೆಯಲಿ ನಿಮ್ಮ ಕೊಳಲ ನಾದ

  ReplyDelete
 16. ಪರಾಂಜಪೆ ಸರ್;ನನಗೂ ಸಹ ಬ್ಲಾಗಿನಿಂದ ಉತ್ತಮ ಸ್ನೇಹಿತರು ದೊರಕಿದ್ದಾರೆ.ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಧನ್ಯವಾದಗಳು.ನಮಸ್ಕಾರ.

  ReplyDelete
 17. ನಾರಾಯಣ್ ಭಟ್ ಸರ್;ನಿಜಕ್ಕೂ ನಿಮ್ಮನ್ನು ಹೇಗೆ ಅಭಿನಂದಿಸ ಬೇಕೋ ತಿಳಿಯದು.ಬ್ಲಾಗಿನ ಹೆಸರೇ ಕೇಳದವನಿಗೆ ಬ್ಲಾಗಿನ ಬಗ್ಗೆ ತಿಳಿಸಿ ಕೊಟ್ಟಿರಿ.ಮೊದ ಮೊದಲು ಬ್ಲಾಗಿಗೆ ಯಾರೂ ಬರದಿದ್ದಾಗ,ಪ್ರತಿ ಬರಹಕ್ಕೂ ಕಾಮೆಂಟ್ ಮಾಡಿ ಪ್ರೋತ್ಸಾಹ ನೀಡಿದ್ದೀರಿ.ಬ್ಲಾಗ್ ಬರಹ ನನಗೆ ಬೇರೆಯೇ ಜಗತ್ತನ್ನು ಪರಿಚಯಿಸಿದೆ.ಅನೇಕ ಆತ್ಮೀಯ ಸ್ನೇಹಿತರನ್ನು ಕೊಟ್ಟಿದೆ.ಎಲ್ಲದಕ್ಕೂ ಕಾರಣನಾದ ಆ ನಾರಾಯಣನಿಗೂ ,ನಿಮಗೂ ನಮೋನ್ನಮಃ.ನಮ್ಮೆಲ್ಲರ ಸ್ನೇಹ,ಪ್ರೀತಿ,ವಿಶ್ವಾಸಗಳು ಹೀಗೇ ಮುಂದುವರೆಯಲಿ.ನಮಸ್ಕಾರ.

  ReplyDelete
 18. ಗುರು ಸರ್;ಖುದ್ದಾಗಿ ಭೇಟಿ ಆಗದಿದ್ದರೂ ನೀವೆಲ್ಲಾ ಇಷ್ಟೊಂದು ಆತ್ಮೀಯರಾಗಿದ್ದೀರಿ! ಇದು ನಿಜಕ್ಕೂ ಬ್ಲಾಗಿನ ಮಹಿಮೆ!ನಿಮ್ಮಂತಹ ಒಳ್ಳೆಯ ಸ್ನೇಹಿತರನ್ನು ಕೊಟ್ಟ ಬ್ಲಾಗಿಗೆ ನಾನು ಚಿರ ಋಣಿ.ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು.

  ReplyDelete
 19. ಡಿ.ಟಿ.ಕೆ.ಸರ್ ನೆಚ್ಚಿನ ''ಕೊಳಲು '' ಮೊದಲ ವರ್ಷ ಅರ್ಥ ಪೂರ್ಣವಾಗಿ ಪೂರೈಸಿ ನಿಮ್ಮಂತ ಒಬ್ಬ ಒಳ್ಳೆಯ ಸ್ನೇಹಿತರನ್ನು ನಮಗೆ ಕೊಡುಗೆಯಾಗಿ ನೀಡಿದೆ. ನಿಮ್ಮ ಪ್ರೀತಿಯ ಮಾತುಗಳು ಲೇಖನಗಳು, ವಿಚಾರಗಳು, ಮತ್ತಷ್ಟು ನಿಮ್ಮನ್ನು ನಮ್ಮ ಹೃದಯಕ್ಕೆ ಹತ್ತಿರ ಮಾಡಿವೆ. ನಿಮಗೆ ಶುಭಾಶಯಗಳು ,ಸ್ನೇಹ ಪಯಣ ಮುಂದುವರೆಸೋಣ.
  --
  ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

  ReplyDelete
 20. ಬಾಲೂ ಸರ್;ನಿಮ್ಮ ಹೃದಯಕ್ಕೆ ಹತ್ತಿರವಾಗುವಂತಹ ಮಾತುಗಳಿಂದ ತುಂಬಾ ತುಂಬಾ ಸಂತಸವಾಗಿದೆ.ನಿಮ್ಮಂತಹ ಅದ್ಭುತ ಸ್ನೇಹಿತರನ್ನು ಗಳಿಸಿಕೊಟ್ಟ ಬ್ಲಾಗ್ ಲೋಕಕ್ಕೆ ನೂರೆಂಟು ನಮನಗಳು.ನಮ್ಮೆಲ್ಲರ ಸ್ನೇಹ ಚಿರಾಯುವಾಗಲಿ.ಧನ್ಯವಾದಗಳು ಸರ್.ನಮಸ್ಕಾರ.

  ReplyDelete
 21. ಚಿತ್ರ ಸಂತೆಯ ಚಿತ್ರಣ ಚೆನ್ನಾಗಿದೆ..
  ಬ್ಲಾಗ್ ನ ಸಂಭ್ರಮದ ಹುಟ್ಟುಹಬ್ಬಕ್ಕೆ ಶುಭಾಶಯಗಳು

  ReplyDelete
 22. ದಿಲೀಪ್ ಹೆಗ್ಡೆ;ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು.ಬ್ಲಾಗಿಗರ ಸ್ನೇಹ ,ವಿಶ್ವಾಸಗಳು ಹೀಗೇ ಮುಂದುವರೆಯಲಿ.ಬರುತ್ತಿರಿ.ನಮಸ್ಕಾರ.

  ReplyDelete
 23. sir nanna kadeyindanoo ondu shubhaashayagalu..:)

  ReplyDelete
 24. ಮೊದಲ ವರ್ಷದ ಸಂಭ್ರಮಕ್ಕೆ ಅಭಿನಂದನೆಗಳು.
  ಮತ್ತಷ್ಟು ಅನುಭವ ಲೇಖನ , ಹಾಸ್ಯ ಲೇಖನ ಹಾಗೂ ಉತ್ತಮ ಲೇಖನಗಳು ತಮ್ಮಿಂದ ಬರಲಿ

  ReplyDelete
 25. ಗೌತಮ್ ಹೆಗ್ಡೆಯವರೇ;ನಿಮ್ಮ ಶುಭಾಶಯಗಳಿಗೆ ಅನಂತ ಧನ್ಯವಾದಗಳು.ಬ್ಲಾಗಿಗೆ ಬರುತ್ತಿರಿ.ನಮಸ್ಕಾರ.

  ReplyDelete
 26. ಶ್ರೀಧರ್;ಬ್ಲಾಗಿನ ಮೊದಲ ಹುಟ್ಟು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಧನ್ಯವಾದಗಳು.ಉತ್ತಮ ಲೇಖನಗಳನ್ನು ಬ್ಲಾಗಿಸುವ ಪ್ರಯತ್ನ ಮಾಡುತ್ತೇನೆ.ನಿಮ್ಮೆಲ್ಲರ ಹಾರೈಕೆ ಹೀಗೇ ಇರಲಿ.ಬರುತ್ತಿರಿ.ನಮಸ್ಕಾರ.

  ReplyDelete
 27. ತೇಜಸ್ವಿನಿ ಹೆಗ್ಡೆ ಮೇಡಂ;ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

  ReplyDelete
 28. ಸರ್,
  ಚಿತ್ರಸಂತೆಯ ಬರಹ ಓದಿ, ಈ ಸಾರಿಯ ಚಿತ್ರಸಂತೆಯ ಬಗ್ಗೆ ಅನಿಸಿತು..... ಕೊನೆಯಲ್ಲಿ ಬರೆದ ಸಾಲುಗಳನ್ನು ಓದಿ ಖುಶಿಯಾಯಿತು..... ನೀವು ಕಳೆದ ವರ್ಷ ಚಿತ್ರಸಂತೆಗೆ ಹೋಗದೇ ಇದ್ದಿದ್ದರೆ ನಿಮ್ಮಂಥ ಗೆಳೆಯ , ಡಾಕ್ಟರ್ , ಚಿಂತಕ, ವಿಮರ್ಶಕ ನಮಗೆ ಸಿಗುತ್ತಿರಲಿಲ್ಲ..... ನಿಮ್ಮನ್ನು ಬ್ಲಾಗ್ ಲೋಕಕ್ಕೆ ಕರೆದುತಂದ ನಾರಾಯಣ ಭಟ್ಟರಿಗೆ ನಮ್ಮೆಲ್ಲರ ಅನಂತ ವಂದನೆಗಳು......ಸರ್... ನಿಮ್ಮ ಬರಹ ಹೀಗೆ ಮುಂದುವರಿಯಲಿ.... ನಮಗೆಲ್ಲಾ ಸ್ಪೂರ್ತಿ ತುಂಬಿ....... ಕೊಳಲ ಮೊದಲ ಹೆಜ್ಜೆಗೆ ಶುಭಾಶಯ......ಅಭಿನಂದನೆ..

  ReplyDelete
 29. ದಿನಕರ್;ನಿಮ್ಮೆಲ್ಲರ ಅಭಿಮಾನಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕೋ ತಿಳಿಯುತ್ತಿಲ್ಲ.ಒಂದು ವರ್ಷದ ಕೆಳಗೆ ನಾನೊಬ್ಬ ಅನಾಮಿಕ ಬ್ಲಾಗರ್.ಒಬ್ಬರೋ,ಇಬ್ಬರೋ ಪರಿಚಯಸ್ಥರು,ಸ್ನೇಹಿತರು ಬ್ಲಾಗಿಗೆ ಬಂದು ಪ್ರೋತ್ಸಾಹಕ ಪ್ರತಿಕ್ರಿಯೆ ನೀಡುತ್ತಿದ್ದರು.ಒಂದು ವರ್ಷದ ನಂತರ ಈಗ ನಿಮ್ಮಂತಹ ಹಲವಾರು ಒಳ್ಳೆಯ ಸ್ನೇಹಿತರಿದ್ದಾರೆ.ಇದು ನಿಜಕ್ಕೂ ಬ್ಲಾಗಿನ ಮಹಿಮೆಯೇ ಸರಿ.ಬ್ಲಾಗ್ ಬಳಗ ಇನ್ನಷ್ಟು ಬೆಳೆಯಲಿ ಎನ್ನುವುದು ನನ್ನ ಹಾರೈಕೆ.ನಿಮ್ಮ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ನಮಸ್ಕಾರಗಳು.

  ReplyDelete
 30. ವೈದ್ಯೋತ್ತಮರೇ, ತಮ್ಮಂತಹ ಬ್ಲಾಗಿಗರು ಸಿಕ್ಕಿರುವುದು ನಮ್ಮೆಲ್ಲರ ಸುದೈವ, ತಮ್ಮ ಬ್ಲಾಗ್ ವರ್ಷ ಪೂರೈಸಿರುವುದು ನಮ್ಮೆಲ್ಲರಿಗೂ ಸಂತೋಷದ ವಿಷಯ. ಚಿತ್ರಸಂತೆಯ ಸ್ಥಿತಿ ಸಹಜವಾಗಿ ಬಿಂಬಿತವಾಗಿದೆ. ಹಲವು ಲೇಖನಗಳನ್ನೂ, ಕವನಗಳನ್ನೂ, ಅನುಭವಾಮೃತಗಳನ್ನೂ ಉಣಬಡಿಸಿದ ನಿಮಗೆ ನಮ್ಮೆಲ್ಲರ ಶುಭಹಾರೈಕೆಗಳು. ೧೧೦ ಇರುವುದು ೧೧೦,೦೦೦ ವಾಗಲಿ-ಅನೇಕ ರಸಮಯ ಅನುಭವ ಸನ್ನಿವೇಶಗಳು ಲೇಖನಗಳಾಗಿ ಬ್ಲಾಗಿನಲ್ಲಿ ಹೊಮ್ಮಲಿ ಎಂದಿ ನಿಮ್ಮಲ್ಲಿ ಭಿನ್ನವಿಸಿಕೊಳ್ಳುತ್ತಾ ನನ್ನ ವೈಯ್ಯಕ್ತಿಕ ಹಾರ್ದಿಕ ಶುಭಾಶಂಸನೆಗೈಯ್ಯುತ್ತಿದ್ದೇನೆ: ಸ್ವೀಕರಿಸಿ, ನಮಸ್ಕಾರ.

  ReplyDelete
 31. ವಿ.ಆರ್.ಭಟ್ ಸರ್;ನಿಮ್ಮ ಹಾರ್ದಿಕ ಶುಭಾಶಯಗಳಿಗೆ ಧನ್ಯವಾದಗಳು.ಬ್ಲಾಗಿನ ಅಲ್ಪ ಸ್ವಲ್ಪ ಯಶಸ್ಸೇನಾದರೂ ಇದ್ದರೆ ಅದಕ್ಕೆ ತಮ್ಮೆಲ್ಲರ ಪ್ರೋತ್ಸಾಹ ಪೂರ್ವಕ ಪ್ರತಿಕ್ರಿಯೆಗಳೇ ಕಾರಣ.ಬ್ಲಾಗಿನ ಈ ಬಾಂಧವ್ಯ ಮತ್ತಷ್ಟು ಬಲವಾಗಲಿ ಎನ್ನುವುದೇ ನನ್ನ ಹಾರೈಕೆ.ನಮಸ್ಕಾರ.

  ReplyDelete
 32. EE SALADA CHITRA SANTEYOO BHINNAVAGIRALILLA. NAMMA ANISIKEGALIGE AKSHARA ROOPA NEEDIDA NIMAGE DHANYAVADAGALU

  ReplyDelete
 33. ಹೇಮಚಂದ್ರ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

  ReplyDelete
 34. ಡಾಕ್ಟ್ರೇ,

  ಕಳೆದ ವರ್ಷವೂ ನಾನು ಚಿತ್ರಸಂತೆಯಲ್ಲಿ ಸುತ್ತಾಡುತ್ತಿದೆ. ನಿಮ್ಮ ಪರಿಚಯವಾಗಿರಲಿಲ್ಲವಾದ್ದರಿಂದ ಗುರುತು ಹಿಡಿಯಲಾಗಿರಲಿಲ್ಲ. ನಿಮ್ಮ ಚಿತ್ರಲೇಖನವೂ ಇಷ್ಟವಾಗುತ್ತದೆ. ಮತ್ತೆ ನಿಮ್ಮ ಬ್ಲಾಗಿನ ಮೊದಲ ಹುಟ್ಟುಹಬ್ಬಕ್ಕೆ ಅಭಿನಂದನೆಗಳು.

  ReplyDelete
 35. ಶಿವು;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ ಪ್ರೋತ್ಸಾಹ ಹೀಗೇ ಮುಂದುವರಿಯಲಿ.ನಮಸ್ಕಾರ.

  ReplyDelete
 36. ಹುತ್ತುಬಬ್ಬದ ಹಾರ್ದಿಕ ಶುಭಾಶಯಗಳು. ಕೊಳಲಿನ ನುಡಿ ಹೀಗೆ ಸದಾ ಮನವನ್ನ ತಮ್ಪಾಗಿರಿಸಲಿ. ಚಿತ್ರಸಂತೆಯ ತಮ್ಮ ಪ್ರಭಂಧ ಅದ್ಭುತ. ಧನ್ಯವಾದಗಳು.

  ReplyDelete