Saturday, February 5, 2011

"ನಾವೂ......ಸಂತೆಯ ಚಿತ್ರಗಳೇ ! "

ನಾವು ಪ್ರತಿಯೊಬ್ಬರೂ 
ಈ ಜಗವೆಂಬ ಸಂತೆಯಲ್ಲಿ
ಮಾರಾಟಕ್ಕೆ ಇರುವ,
ಕ್ಷಣ ಕ್ಷಣಕ್ಕೂ,
ಬಣ್ಣ ಭಾವ ಬದಲಿಸುವ,
ಚಲಿಸುವ,
ಚಿತ್ರವಿಚಿತ್ರ ಚಿತ್ರಗಳು!
ರಚಿಸಿದವನೆಲ್ಲೋ ನಾಪತ್ತೆ!
ಕಾಣೆಯಾಗಿದ್ದಾನೆ ನಿಗೂಢವಾಗಿ!
(ಚಿತ್ರದೊಳಗೆ ಚಿತ್ರಕಾರನಿದ್ದಾನೆಯೇ? ಗೊತ್ತಿಲ್ಲ)
ನಮ್ಮ ಬೆಲೆಯನ್ನು ನಾವೇ ,
ಕಟ್ಟಿಕೊಳ್ಳಬೇಕು!
ನಮ್ಮ ಮಾರ್ಕೆಟಿಂಗ್
ನಾವೇ ಮಾಡಿಕೊಳ್ಳಬೇಕು!
ಬೆಲೆ ಸಿಕ್ಕದಿದ್ದಲ್ಲಿ,
ಮಾರಾಟ ವಾಗದಿದ್ದಲ್ಲಿ,
ನಮ್ಮ ನಡವಳಿಕೆಯ ಕುಂಚದಲ್ಲಿ,
ನಮ್ಮನ್ನು ನಾವೇ ತಿದ್ದಿಕೊಳ್ಳಬೇಕು!
ಬದಲಾವಣೆ ಮಾಡಿಕೊಳ್ಳಬೇಕು!
ಅಂತೂ, ಇಂತೂ,
ಬದುಕೆಂಬ ಸಂತೆಯಲ್ಲಿ
ನಾವೂ, ಮಾರಾಟ ವಾಗಬೇಕಾದ
ಚಲಿಸುವ ಚಿತ್ರಗಳು!

30 comments:

 1. ಡಾಕ್ಟ್ರೆ..

  ಬಹಳ ಸತ್ಯವಾದ ಮಾತುಗಳು...

  ಇಲ್ಲಿ
  ಪ್ರತಿಯೊಂದೂ ಮಾರಾಟಕ್ಕಿದೆ..
  ಬಣ್ಣ ಬಣ್ಣದ ಮಾತಿಗೆ..
  ಪ್ರಾಮಾಣಿಕತೇಯೂ..
  ಮಾರಾಟಕ್ಕಿದೆ..
  ನಿಯತ್ತೂ ಕೂಡ..

  ಅಭಿನಂದನೆಗಳು ಚಂದದ ಸಾಲುಗಳಿಗೆ.. ಜೈ ಹೋ !

  ReplyDelete
 2. ಡಾಕ್ಟರ್ ಸರ್,
  ಚಿತ್ರಸಂತೆಯ ಗುಂಗಿನಿಂದ ಇನ್ನೂ ಹೊರಬಂದಿಲ್ಲ ಎನಿಸುತ್ತದೆ .... ಹೊರಬರದೇ ಇದ್ದದ್ದೇ ಒಳ್ಳೆಯದಾಯಿತು ಸರ್.... ಇರದೇ ಇದ್ದರೆ ಇಷ್ಟೊಳ್ಳೆ ಕವನ ಸಿಗುತ್ತಿರಲಿಲ್ಲ....
  ತುಂಬಾ ಒಳ್ಳೆಯ ಕವನ ಸರ್....

  ReplyDelete
 3. ನಿಜ ಸರ್.. ನಾವೂ ಕೂಡ ಮಾರಾಟಕ್ಕಿರುವ ಚಿತ್ರಗಳೇ.. ಚೆನ್ನಾಗಿದೆ ಕವಿತೆ..

  ReplyDelete
 4. ಡಾಕ್ಟ್ರೇ,

  ಸತ್ಯವಾದ ಮಾತನ್ನು ಕವನದ ಮೂಲಕ ಹೇಳಿದ್ದೀರಿ...ಇದು ನಿಜಕ್ಕೂ ಅಲೋಚಿಸಬೇಕಾದ ವಿಚಾರ.

  ReplyDelete
 5. ಪ್ರಕಾಶಣ್ಣ ಈ ಜಗದ ಸಂತೆಯಲ್ಲಿ ನಾವು ಕ್ಷಣ ಕ್ಷಕ್ಕೂ ಬಣ್ಣ ಬದಲಾಯಿಸುವ ಚಿತ್ರಗಳಲ್ಲವೇ!?

  ReplyDelete
 6. ದಿನಕರ್;ನೀವೂ ಒಮ್ಮೆ ಚಿತ್ರಸಂತೆಗೆ ಹೋಗಿ.ವರುಷಗಳೇ ಕಳೆದರೂ ಆ ಗುಂಗು ನಿಮ್ಮನ್ನು ಬಿಡುವುದಿಲ್ಲ.

  ReplyDelete
 7. ದಿಲೀಪ್ ಹೆಗ್ಡೆ ;ಬಹಳ ದಿನಗಳ ಮೇಲೆ ಬ್ಲಾಗಿಗೆ ಬಂದಿದ್ದೆರಿ .ಖುಷಿಯಾಯಿತು.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 8. ಶಿವೂ;ಚಿತ್ರ ಸಂತೆಯಲ್ಲಿ ಏನೆಲ್ಲಾ ರೀತಿಯ ಅಭಿವ್ಯಕ್ತಿಗಳು ಕಾಣಿಸಿಕೊಳ್ಳುತ್ತವೆ!ಅಚ್ಚರಿಯಾಗುತ್ತದೆಯಲ್ಲವೇ?

  ReplyDelete
 9. ಸರ್, ಕವನ ತುಂಬಾ ಚೆನ್ನಾಗಿದೆ. ಮಾರಾಟವಾಗಬೇಕಾದವರೂ ನಾವೇ...ದಳ್ಳಾಳಿಗಳೂ ನಾವೇ..ಎಂಥ ನಿಜವಾದ ಮಾತು!

  ReplyDelete
 10. ನಾರಾಯಣ್ ಭಟ್ ಸರ್;ಕವಿತೆಯನ್ನು ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.

  ReplyDelete
 11. uttama concept sir. olle vicharavannu mandisiddakke dhanyavaadagalu.

  ReplyDelete
 12. ನಮ್ಮ ಬೆಲೆಯನ್ನು ನಾವೇ ,
  ಕಟ್ಟಿಕೊಳ್ಳಬೇಕು!
  ಬೆಲೆ ಸಿಕ್ಕದಿದ್ದಲ್ಲಿ,
  ನಮ್ಮ ನಡವಳಿಕೆಯ ಕುಂಚದಲ್ಲಿ,
  ನಮ್ಮನ್ನು ನಾವೇ ತಿದ್ದಿಕೊಳ್ಳಬೇಕು!
  ಬದಲಾವಣೆ ಮಾಡಿಕೊಳ್ಳಬೇಕು..
  ಎಂತಾ ಸಾಲುಗಳು ಮೂರ್ತಿ ಸರ್ ಸೂಪರ್ ...

  ReplyDelete
 13. ಅನಂತ್ ಸರ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

  ReplyDelete
 14. ರಂಜಿತ ಮೇಡಂ;ಕವಿತೆಯನ್ನು ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  ReplyDelete
 15. ಸು೦ದರವಾಗಿದೆ.. ಬದುಕಿನ ಕು೦ಚದ ಕವಿತೆ..

  ReplyDelete
 16. ಬಹಳ ಅರ್ಥಪೂರ್ಣವಾದ ಸಾಲುಗಳು..
  'ಬೆಲೆ ಸಿಕ್ಕದಿದ್ದಲ್ಲಿ,
  ಮಾರಾಟ ವಾಗದಿದ್ದಲ್ಲಿ,
  ನಮ್ಮ ನಡವಳಿಕೆಯ ಕುಂಚದಲ್ಲಿ,
  ನಮ್ಮನ್ನು ನಾವೇ ತಿದ್ದಿಕೊಳ್ಳಬೇಕು!
  ಬದಲಾವಣೆ ಮಾಡಿಕೊಳ್ಳಬೇಕು!'..ಎಂಬ ಸಾಲುಗಳು ಇಷ್ಟವಾದವು.
  ನಿಮ್ಮಬ್ಲಾಗಿನ ಮೂಲಕ ಒಳ್ಳೊಳ್ಳೆಯ ಕವಿತೆ,ಬರಹಗಳನ್ನು ಕೊಡುತ್ತಿರುವುದಕ್ಕೆ ಧನ್ಯವಾದಗಳು.

  ReplyDelete
 17. koneyardha superb. DTK ge matra saadhya.

  ReplyDelete
 18. ಡಿ.ಟಿ.ಕೃಷ್ಣ ಮೂರ್ತಿ ಸರ್ , ನಿಮ್ಮ ಕಲ್ಪನೆಗೆ ಜೈ ಹೋ. ಸುಂದರ ಚಿತ್ರಕ್ಕೆ ಒಪ್ಪುವ ಚಿತ್ತಾರದ ಕವಿತೆ, ಜೀವನದ ಬಣ್ಣದ ಅನಾವರಣ.ಅಂತೂ, ಇಂತೂ,
  ಬದುಕೆಂಬ ಸಂತೆಯಲ್ಲಿ
  ನಾವೂ, ಮಾರಾಟ ವಾಗಬೇಕಾದ
  ಚಲಿಸುವ ಚಿತ್ರಗಳು! ವಾಸ್ತವ ಸತ್ಯದ ತಿವಿದ, ಜೀವನ ಸತ್ಯದ ದರ್ಶನ ಮಾಡಿಸುತ್ತದೆ. ಚೆನ್ನಾಗಿದೆ .

  --
  ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

  ReplyDelete
 19. ಕವನ ಅರ್ಥಪೂರ್ಣವಾಗಿದೆ ಸರ್, ಚಿತ್ರಕಾರ ನಮ್ಮನ್ನು ಚಿತ್ರಿಸಿದ ನ೦ತರ ಎಲ್ಲೋ ಅಡಗಿದ್ದಾನೆ ಎನ್ನುವ ಕಲ್ಪನೆ ಬಹಳ ಚೆನ್ನಾಗಿದೆ. ನನ್ನ ಬ್ಲಾಗ್ ಗೆ ಒಮ್ಮೆ ಬನ್ನಿ.

  ReplyDelete
 20. `ಆಲೋಚನೆ'ಯ ಬಗ್ಗೆ ಜಿಡ್ಡು ಕೃಷ್ಣಮೂರ್ತಿಯವರ ವಿಚಾರಗಳ ಆಧಾರಿತ ಲೇಖನವನ್ನು ನನ್ನ ಬ್ಲಾಗ್ ನಲ್ಲಿ ಬರೆದಿದ್ದೇನೆ. ನನ್ನ ಬ್ಲಾಗ್ ಗೆ ಒಮ್ಮೆ ಬನ್ನಿ

  ReplyDelete
 21. Dr

  tumbaa satyada maatugalu

  naavella santeya maaraatakke itta vastugale

  hana hecchu kottu kampanigalu tagotave

  baduke vichitra

  ReplyDelete
 22. ಕಂಡಿತ ನಿಮ್ಮ ಮಾತಿನಂತೆ ನಾವುಗಳು ಮಾರಾಟವಾಗಬೇಕಾದ
  ಚಲಿಸುವ ವಸ್ತುಗಳೆ ಸರ್ ಕವನ ತುಂಬಾ ಚೆನ್ನಾಗಿದೆ ಧನ್ಯವಾದಗಳು..

  ReplyDelete
 23. ಈ ಭಾರಿ ನಾನೂ ಚಿತ್ರಸಂತೆಗೆ ಹೋಗಿದ್ದೆ, ಇದೇ ಮೊದಲ ಸಲದ್ದು.ಆದ್ದರಿಂದ ನಿಮ್ಮ ಅನುಭವ ಹೆಚ್ಚು ಅರ್ಥವಾಯಿತು, ಚಂದವಾಗಿ ಹರಿಸಿದ್ದೀರಿ ಭಾವನೆಗಳನ್ನ.
  ವರ್ಷ ತುಂಬಿದ ನಿಮ್ಮ ಬ್ಲಾಗಿಗೂ ಶುಭಾಶಯಗಳು.

  ReplyDelete
 24. ವಾಸ್ತವಕ್ಕೆ ಹಿಡಿದ ಕನ್ನಡಿಯಂತಹ ಬರಹ. ಅಸಲೀ ಪ್ರತಿಭೆಯನ್ನು ಸಹಿಸಲಾರದ ಜನರ ನಡುವೆಯೂ ನಮ್ಮ ಇರುವಿಕೆಯನ್ನು ನಾವು ಉಳಿಸಿಕೊಳ್ಳ ಬೇಕು. ಇಂದಿನ ರಾಜಕೀಯಗ್ರಸ್ತ ಕೆಲಸದ ವ್ಯವಸ್ತೆಯಲ್ಲಿ ಬುದ್ದಿಯನ್ನೋ, ಸಿದ್ಧಿಯನ್ನೋ ಅಥವಾ _________ ಹೀಗೆ ಮಾರಿಕೊಂಡೇ ಬದುಕಬೇಕಾದ ಅನಿವಾರ್ಯತೆ. ನಿಮ್ಮ ಬರವಣಿಗೆಯ ಶೈಲಿಯೇ ಸರಳ-ಸುಂದರ-ನಿರಂತರ.

  [ಸರ್, ದಯಮಾಡಿ ನೀವು ಹೊಸ ಪೆಜ್ ಡಿಸೈನ್ ಅನ್ನು Template Designer ಮೂಲಕ ಮಾಡಿ ಸರ್. ನಿಮ್ಮ ಬ್ಲಾಗ್ ಅನ್ನು ನಾವು ಆಗ ಮೊಬೈಲಿನಲ್ಲೇ ಓದಬಹುದು.]

  ReplyDelete
 25. ಸಹಜ ಸುಂದರ-ಎಂದಿನಂತೇ, ನಿಮ್ಮ ಕಲ್ಪನೆಗಳೇ ಅಮೋಘ, ಬರಹವಾಗಲಿ ಓಘ! ಜಯಜಯತು ಶ್ರೀಕೃಷ್ಣಾ ’ಕೊಳಲ’ ಗಾನಕ್ಕೆ ದೀನ ನಾ ಕೃತಜ್ಞ.

  ReplyDelete
 26. ಕೃಷ್ಣಮೂರ್ತಿ ಸರ್,

  ಸುಂದರ ಕವನ !
  ಹಾಗೇ ನಿಮ್ಮ ಬ್ಲಾಗಿಗೆ ಒಂದು ವರ್ಷವಾದ ಸಂತಸದಲ್ಲಿ ನಿಮಗೆ ಅಭಿನಂದನೆಗಳು !

  ReplyDelete