ನಲವತ್ತು ವರ್ಷಗಳ ಹಿಂದಿನ ಮಾತು.ರಾತ್ರಿ ಸುಮಾರು ಹತ್ತು ಗಂಟೆ ಸಮಯ. ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಅಕ್ಕಪಕ್ಕದಲ್ಲೇ ಇದ್ದ ಆರನೇ ಮತ್ತು ಏಳನೆ ಪ್ಲಾಟ್ ಫಾರಮ್ಮುಗಳಲ್ಲಿ ವಿಪರೀತ ಜನ ಸಂದಣಿ. ಆರನೇ ಪ್ಲಾಟ್ ಫಾರಮ್ಮಿನ ಗಾಡಿ ಮೈಸೂರಿನ ಕಡೆ ಹೊರಟಿತ್ತು .ಏಳನೇ ಪ್ಲಾಟ್ ಫಾರಮ್ಮಿನ ಗಾಡಿ ಅರಸೀಕೆರೆ ಕಡೆ ಕಡೆ ಹೊರಟಿತ್ತು.ಆ ಗಡಿಬಿಡಿಯಲ್ಲಿ ಹಾಸಿಗೆ ,ಟ್ರಂಕು ,ಕೈಚೀಲ ಹಿಡಿದಿದ್ದ ಮಧ್ಯ ವಯಸ್ಕನೊಬ್ಬ ಆತುರಾತುರವಾಗಿ ಮೈಸೂರಿನ ಕಡೆ ಹೊರಟಿದ್ದ ಗಾಡಿ ಹತ್ತಿ ಧಾರಾಕಾರವಾಗಿ ಸುರಿಯುತ್ತಿದ್ದ ಬೆವರನ್ನು ಒರೆಸಿಕೊಂಡು, ಜನಗಳ ಮಧ್ಯೆ ಜಾಗ ಮಾಡಿಕೊಂಡು ಕುಳಿತ.ಅವನ ತಲೆಯಲ್ಲಿ ಚಿಂತೆಗಳ ಸಂತೆ ನೆರದಿತ್ತು.ಮಗಳ ಮದುವೆ ತಪ್ಪಿಹೊಗುವುದರಲ್ಲಿತ್ತು.ತೀವ್ರವಾದ ಆತಂಕದಿಂದ ತಲೆಗೆ ಮಂಕು ಬಡಿದಂತಾಗಿತ್ತು.ರೈಲು ಹೊರಟಿತು .ಪ್ಲಾಟ್ ಫಾರಂ ಬಿಟ್ಟು ಊರಾಚೆ ಓಡುತ್ತಿತ್ತು.ಅವನ ಎದುರಿಗೆ ಹೊಸದಾಗಿ ಮದುವೆಯಾದ ಜೋಡಿಯೊಂದು ಕುಳಿತಿತ್ತು.ಗಂಡು ತುಂಬಾ ಸಂತೋಷದಲ್ಲಿದ್ದ.ಸ್ನೇಹಿತರೊಡನೆ ಮಾತನಾಡುತ್ತಾ ಜೋರಾಗಿ ನಗುತ್ತಿದ್ದ..ಆದರೆ ಹೆಣ್ಣಿನ ಮುಖದಲ್ಲಿ ಸಂತೋಷವಿರಲಿಲ್ಲ.ಮ್ಲಾನ ವದನಳಾಗಿ ಮುಖ ತಗ್ಗಿಸಿ ಕುಳಿ ತಿದ್ದಳು .ಮಧ್ಯವಸ್ಕನ ಪಕ್ಕದಲ್ಲಿ ಆ ಮದುವೆ ಗಂಡಿನ ತಂದೆ ,ತಾಯಿಗಳೂ ,ಕೆಲ ಬಂಧುಗಳೂ ಕುಳಿತಿದ್ದರು.ಒಂದು ಮೂಲೆಯಲ್ಲಿ ಸುಂದರ ಯುವಕನೊಬ್ಬ ಟ್ರೈನಿನಿಂದ ಮುಖ ಹೊರಹಾಕಿ ಆ ಕತ್ತಲಿನ ಶೂನ್ಯದಲ್ಲಿ ದೃಷ್ಟಿ ನೆಟ್ಟಿದ್ದ.'ಈ ಟ್ರೈನು ಅರಸೀಕರೆಗೆ ಎಷ್ಟು ಹೊತ್ತಿಗೆ ತಲುಪುತ್ತೆ ಸ್ವಾಮಿ ? 'ಎಂದು ಮಧ್ಯ ವಯಸ್ಕ ಎದುರಿಗೆ ಕುಳಿತಿದ್ದ ಮದುವೆ ಗಂಡನ್ನು ಕೇಳಿದ.ಆ ಮಾತಿಗೆ ಅಲ್ಲಿದ್ದವರೆಲ್ಲಾ ಜೋರಾಗಿ ನಗತೊಡಗಿದರು.'ರೀ ಸ್ವಾಮಿ, ಇದು ಮೈಸೂರಿಗೆ ಹೋಗುವ ಟ್ರೈನು.ಅರಸೀಕೆರೆಗೆ ಹೋಗುವ ರೈಲು ಪಕ್ಕದ ಪ್ಲಾಟ್ ಫಾರಮ್ಮಿನಲ್ಲಿ ನಿಂತಿತ್ತು.ಸರಿಯಾಗಿ ಕೇಳಿ ಕೊಂಡು ಹತ್ತೋದು ಬ್ಯಾಡ್ವಾ?'ಎಂದ ಮದುವೆ ಗಂಡು .ಇಷ್ಟು ಹೊತ್ತು ಮೂಲೆಯಲ್ಲಿ ಮೌನವಾಗಿ ಕುಳಿತು ಕಿಟಕಿಯಾಚೆ ನೋಡುತ್ತಿದ್ದ ಸುಂದರ ಯುವಕನ ಮುಖದಲ್ಲಿ ಮಿಂಚು ಹೊಳೆದಂತಾಯಿತು.
ಅವನು ಮದುವೆ ಗಂಡನ್ನು ಉದ್ದೇಶಿಸಿ 'ಯಾರ್ರೀ ಹೇಳಿದ್ದು ಇದು ಮೈಸೂರಿಗೆ ಹೋಗುತ್ತೆ ಅಂತ ?ಇದು ಅರಸೀಕೆರೆಗೇ ಹೋಗೋದು.ನಾನೂ ಅಲ್ಲಿಗೇ ಹೋಗ ಬೇಕು'ಎಂದ.ಇಬ್ಬರಲ್ಲೂ ಮಾತಿಗೆ ಮಾತು ಬೆಳೆಯಿತು.ಮದುವೆ ಗಂಡಿಗೆ ಸಿಟ್ಟು ಜಾಸ್ತಿ.ಹೊಸ ಹೆಂಡತಿಯ ಮುಂದೆ ತನ್ನ ಪ್ರತಾಪ ತೋರಿಸ ಬೇಕಿತ್ತು.'ರೀ ಸ್ವಾಮಿ .....ಮುಂದೆ ಬರುವ ಸ್ಟೇಶನ್ ಯಶವಂತ ಪುರವಾಗಿದ್ದರೆ,ಇದು ಅರಸೀಕೆರೆ ರೈಲು ಅಂತ.ಹಾಗೇನಾದರೂ ಆದರೆ ನನ್ನ ಕತ್ತಿನಲ್ಲಿರುವ ಮೂರು ತೊಲ ಬಂಗಾರದ ಚೈನು ನಿಮಗೆ ಕೊಡುತ್ತೇನೆ ,ಆದರೆ ಮುಂದಿನ ಸ್ಟೇಶನ್ ಕೆಂಗೇರಿ ಬಂದರೆ ನೀವೇನು ಕೊಡುತ್ತೀರಿ ?'ಎಂದು ಸವಾಲು ಹಾಕಿದ.ಆ ಸುಂದರ ಯುವಕ ತನ್ನ ಜೇಬಿನಲ್ಲಿದ್ದ ಮೂರು ತೊಲ ಹೊಸ ಬಂಗಾರದ ಸರವನ್ನು ಕೊಡುವುದಾಗಿ ಒಪ್ಪಿಕೊಂಡ .ಅಲ್ಲಿದ್ದವರೆಲ್ಲಾ ಮಾತು ಹೊರಡದೆ ಅವಾಕ್ಕಾಗಿ ,ಈ ಹೊಸ ನಾಟಕದ ಬೆಳವಣಿಗೆ ಏನಾಗುತ್ತೋ ಎಂದು ಕುತೂಹಲದಿಂದ ನೋಡುತ್ತಾ ಕುಳಿತಿದ್ದರು. ಮುಂದೆ ,ಕೆಂಗೇರಿ ಸ್ಟೇಶನ್ ಬಂತು .ಆ ಸುಂದರ ಯುವಕ ಮರು ಮಾತನಾಡದೆ ತನ್ನಲ್ಲಿದ್ದ ಮೂರು ತೊಲ ಹೊಸದಾಗಿ ಮಾಡಿಸಿದ್ದ ಬಂಗಾರದ ಚೈನನ್ನು ಆ ಮದುವೆ ಗಂಡಿಗೆ ಕೊಟ್ಟು , ರೈಲಿನಿಂದ ಇಳಿದ.ಇಳಿಯುವಾಗ ಒಮ್ಮೆ ಮದುವೆ ಗಂಡಿನ ಕಡೆ ತಿರುಗಿ ನೋಡಿದ.ಮದುವೆ ಗಂಡು ಆ ಚಿನ್ನದ ಸರವನ್ನು ತನ್ನ ಹೊಸ ಹೆಂಡತಿಗೆ ಉಡುಗೊರೆಯಾಗಿ ಕೊಟ್ಟ.ಅದನ್ನವಳು ನಡುಗುವ ಕೈಗಳಿಂದ ತೆಗೆದುಕೊಂಡಳು.ಯುವಕನ ಮುಖದಲ್ಲಿ ಕಂಡೂ ಕಾಣದಂತೆ ವಿಷಾದದ ನಗೆಯೊಂದು ಮಿಂಚಿ ಮಾಯವಾಯಿತು!ಅರಸೀಕೆರೆಗೆ ಹೋಗಬೇಕಾಗಿದ್ದ ಮಧ್ಯವಯಸ್ಕನೂ ವಿಧಿ ಇಲ್ಲದೆ ತನ್ನ ಲಗೇಜಿನೊಂದಿಗೆ ಯುವಕನ ಜೊತೆ ಕೆಂಗೇರಿಯಲ್ಲಿ ಇಳಿದ.ಟ್ರೈನು ಮುಂದೆ ಹೋಯಿತು.ಟ್ರೈನಿನ ಕಿಟಕಿಯಲ್ಲಿ ಮುಖವಿಟ್ಟು,ಕತ್ತಲಲ್ಲಿ ಏನನ್ನೋ ಹುಡುಕುತ್ತಾ ಮದುವೆ ಹೆಣ್ಣು ಕಿಟಕಿಯಿಂದ ಕೈ ಬೀಸಿದಳು.ಕೆಂಗೇರಿಯಲ್ಲಿ ಇಳಿದ ಯುವಕ ಬಿಕ್ಕಿ,ಬಿಕ್ಕಿ, ಅಳುತ್ತಿದ್ದ. ಮಧ್ಯವಸ್ಕನಿಗೆ ಏನೋ ಅನುಮಾನ ಬಂತು.'ಇದು ಮೈಸೂರಿಗೆ ಹೋಗುವ ಗಾಡಿ ಎಂದು ನಿನಗೆ ಮೊದಲೇ ಗೊತ್ತಿತ್ತಾ?'ಎಂದ.ಯುವಕ ಅಳುತ್ತಲೇ ಹೌದೆಂದು ಒಪ್ಪಿಕೊಂಡ.'.ಮತ್ತೆ ಯಾಕೆ ಬೆಟ್ ಕಟ್ಟಿ ಬಂಗಾರದ ಚೈನು ಕಳೆದುಕೊಂಡಿರಿ?' ಎಂದ.'ಸರ್ ಅದೊಂದು ದೊಡ್ಡ ಕಥೆ.ಆ ಹುಡುಗಿಯನ್ನು ನಾನು ತುಂಬಾ ಪ್ರೀತಿಸಿದ್ದೆ .ಅವಳೂ ನನ್ನನ್ನು ಅಷ್ಟೇ ಪ್ರೀತಿಸುತ್ತಿದ್ದಳು.ನಮ್ಮ ಮದುವೆಗೆ ಜಾತಿ ಅಡ್ಡಿ ಬಂತು.ನಾನು ಕೊಟ್ಟ ಚಿನ್ನದ ಸರ ಅವಳಿಗಾಗಿ ಮಾಡಿಸಿದ್ದು .ಅದನ್ನು ಅವಳಿಗೆ ಹೇಗೆ ತಲುಪಿಸಬೇಕೋ ತಿಳಿದಿರಲಿಲ್ಲ.ಏನಾದರೂ ಉಪಾಯ ಹೊಳೆಯಬಹುದೆಂದು ಅವಳ ಬೋಗಿಯಲ್ಲಿ ಬಂದು ಕುಳಿತೆ.ನಿಮ್ಮಿಂದ ಅದು ಸಾಧ್ಯವಾಯಿತು.ತುಂಬಾ ಧನ್ಯವಾದಗಳು ಸರ್.ನಿಮಗೆ ದಾರಿ ತಪ್ಪಿಸಿದ್ದಕ್ಕೆ ಕ್ಷಮೆ ಇರಲಿ'ಎಂದು ಕಣ್ಣೀರು ಒರೆಸಿ ಕೊಳ್ಳುತ್ತಾ, ಕತ್ತಲಲ್ಲಿ ಮರೆಯಾದ.ಮಧವಯಸ್ಕ 'ತಾನು ಎಂತಹ ನಾಟಕ ಒಂದಕ್ಕೆ ಸೂತ್ರಧಾರಿ ಯಾದೆನಲ್ಲಾ !'ಎಂದುಕೊಳ್ಳುತ್ತಾ, ಬೆಂಗಳೂರಿನ ಕಡೆ ಹೋಗುವ ಮುಂದಿನ ರೈಲಿಗಾಗಿ ಕಾಯ ತೊಡಗಿದ.
(ಇದು ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ 'ತಪ್ಪು ರೈಲಿನಲ್ಲಿ' ಕಥೆ.1970 ರಲ್ಲಿ ಪಿ.ಯು.ಸಿ.ಯಲ್ಲಿ ನಾನ್ ಡೀಟೈಲ್ ಪುಸ್ತಕದಲ್ಲಿ ಇದ್ದ ಕಥೆ.ಇನ್ನೂ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ.ನಿಮಗೆಲ್ಲಾ ಈ ಕಥೆ ಇಷ್ಟವಾಯಿತೆ.ತಿಳಿಸಿ.ನಮಸ್ಕಾರ.)
ತುಂಬಾ ಆಪ್ತವಾದ ಅನುಭವ ನೀಡಿತು ಕಥೆ. ಓದಿದ ನಂತರ ಅದೇಕೋ ಎಂತೋ ಮನಸೆಲ್ಲಾ ಭಾರ ಭಾರ..... ಕಥೆ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು.
ReplyDeleteಕತೆ ಚೆನ್ನಾಗಿದೆ.ಇಷ್ಟವಾಯಿತು.
ReplyDeleteಗೊರೂರು ರಾಮಸ್ವಾಮಿ ಅಯ್ಯ೦ಗಾರರ ಬರಹವನ್ನು ನಿಮ್ಮ ಬ್ಲಾಗಿನ ಮೂಲಕ ಮತ್ತೆ ನೆನಪಿಸಿದೀರಿ. ತು೦ಬಾ ಚೆನ್ನಾಗಿದೆ.
ReplyDeletekathe tumba ista aytu sir...
ReplyDeleteಗೊರೂರು ಮತ್ತು ಮಾಸ್ತಿಯವರ ಕಥೆಗಳು ಬದುಕಿನಿಂದ ಆಯ್ದವಾಗಿದ್ದು, ಜೀವನಕ್ಕೆ ಹತ್ತಿರವಾಗಿರುವದರಿಂದ ಮತ್ತು ಸರಳ ಭಾಷೆಯಲ್ಲಿ ಇರುವದರಿಂದ ಓದುಗರಿಗೆ ಆಪ್ತವಾಗಿ ಮನದಾಳಕ್ಕೆ ಇಳಿಯುತ್ತವೆ. ಅಂತಹ ಮನದಾಳದ ಕಥೆಗೆ ಭಾಷೆ ನೀಡಿ ಅವರನ್ನು ನೆನಪಿಸಿದ್ದಕ್ಕೆ ತಮಗೆ ವಂದನೆಗಳು.
ReplyDeleteಒಳ್ಳೆಯ ಕಥೆ ಸರ್ , ಇದನ್ನು ನಾನು ಎಲ್ಲಿಯೂ ಓದಿತ್ತಿಲ್ಲ. ವಂದನೆಗಳು
ReplyDeleteನಮಸ್ತೆ ಸರ್,
ReplyDeleteಗೋರೂರ ಅವರ ಕತೆ ಹಾಗು ನೀವು ಹೇಳಿದ ಶೈಲಿ ಎರಡು ಸುಪರ್.. !
ತುಂಬಾ ಇಷ್ಟ ಆಯ್ತು. :)
kathe tumbaa ista aaytu.
ReplyDeletemanikanth
Sir, Kathe ishta aaytu :)
ReplyDeleteliked it very much. thanks, for writing.
ReplyDeleteRajesh Naik.
Murthy Sir...
ReplyDeleteKathe Tumbaa ishta aitu...Prakatisiddakkagi dhanyavdagalu....
ಚೆನ್ನಾಗಿದೆ ಕಥೆ...
ReplyDeleteಡಾಕ್ಟ್ರೆ...
ReplyDeleteಯಾಕೋ ಚೈನು ಕೊಟ್ಟ ಹುಡುಗನ ಮನಸ್ಥಿತಿ ನೆನೆದು ಮನಸ್ಸೆಲ್ಲ ಮುದುಡಿತು..
ತುಂಬಾ ಸೊಗಸಾಗಿ ಹೇಳಿದ್ದೀರಿ ಕಥೆಯನ್ನು..
ನಿಮ್ಮ ಅನುಭವ..
ಓದು...
ಎಲ್ಲಕಡೆಯಿಂದ ಇನ್ನಷ್ಟು ಇಂಥಹ ಲೇಖನಗಳು ಬರಲಿ... ಜೈ ಹೋ !!
ಡಾಕ್ಟರ್ ಟಿಡಿಕೆ..ಸೊಗಸಾದ ಕಥೆ...ಗೋರೂರರ ಕಥೆಗಳ ಫ್ಯಾನ್ ನಾನು,,,ಸ್ಕೂಲಲ್ಲಿದ್ದಾಗ ಅವರ ಕಥೆನ ಡ್ರಾಮಾ ಮಾಡೋಕೆ ಹೋಗಿ ಬೈಸ್ಕೊಂಡಿದ್ದೆ ನಮ್ಮ ಪಂಡಿತರ ಹತ್ರ...ಅವರ ಕಥೆಗಳು ನನಗೇ ಅರಗಿಸ್ಕೊಳ್ಳೋಕೆ ಕಷ್ಟ ಇವ್ನು ಡ್ರಾಮಾ ಮಾಡ್ತಾನಂತೆ ಅಂತ...ಅವರ ಗರುಡಗಂಬದ ದಾಸಯ್ಯ ಈಗ್ಲೂ ನನ್ನ ನೆನಪಲ್ಲಿ ಹಸಿರಾಗಿದೆ...ಉತ್ತಮ ನಿರೂಪಣೆ ನಿಮ್ಮ ನೆನಪಿನಾಳದಿಂದ...
ReplyDeletesir,
ReplyDeletemanassu bhaara aaytu sir............... tumbaa ishTa aaytu sir.......
uttama kathe Dr. sir. gorur avarannu nenapisiddikke dhanyavaadagalu.
ReplyDeleteananth
ಎಂತಹ ಸುಂದರ ನಿರೂಪಣೆ ಗೊರೂರ್ ರಾಮಸ್ವಾಮಿ ಅಯಂಗಾರ್ ರವರದು.ಕಥೆ ಮನ ಮಿಡಿಯುವಂತಿದೆ. ಇದನ್ನು ಬ್ಲಾಗಿಗೆ ತಂದ ನಿಮಗೆ ಧನ್ಯವಾದಗಳು .
ReplyDelete--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]
ಡಾಕ್ಟ್ರೆ,
ReplyDeleteಗೊರೂರರ "ಅಮೇರಿಕದಲ್ಲಿ ಗೊರೂರು" ಓದಿ ಮೆಚ್ಚಿದ್ದೇನೆ. ಅವರ ಕತೆಗಳು ಇಷ್ಟ. ಅದನ್ನು ಇಲ್ಲಿಗೆ ನಮಗಾಗಿ ತಂದಿದ್ದಕ್ಕೆ ಥ್ಯಾಂಕ್ಸ್.
ನಮಗೂ English ನಲ್ಲಿ Wrong part of the train ಅಂತ ಒಂದು ಪಾಠ ಇತ್ತು..
ReplyDeleteಕೃಷ್ಣಮೂರ್ತಿ ಸರ್,
ReplyDeleteಗೊರೂರರ ಅದ್ಭುತ ಕತೆ ಪರಿಚಯಿಸಿದ್ದಕ್ಕೆ ನಿಮಗೆ ವಂದನೆಗಳು.
ಕೃಷ್ಣಮೂರ್ತಿಯವರೆ,
ReplyDeleteಗೊರೂರು ಅವರ ಈ ಕತೆಯನ್ನು ನಮಗೆ ನೀಡಿದ್ದಕ್ಕಾಗಿ ನಿಮಗೆ ಯಾವ ರೀತಿಯಲ್ಲಿ ಕೃತಜ್ಞತೆ ಹೇಳಬೇಕೊ ತಿಳಿಯುತ್ತಿಲ್ಲ. ಧನ್ಯವಾದಗಳು.
kathe -nityanutana.
ReplyDeletekathe chennagide sir
ReplyDeleteಗೊರೂರರ ಈ ಕಥೆ ನಲವತ್ತು ವರುಷಗಳು ಕಳೆದರೂ ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ.ಆಗ ಓದಿದ ಕಥೆಯನ್ನು ನಾನು ಮತ್ತೆ ಓದಿಲ್ಲ.ಕಥೆಯ ಹಂದರ ಮಾತ್ರ ಅವರದೇ.ನಾನು ನಿರೂಪಣೆ ಮಾಡುವಲ್ಲಿಅಲ್ಪಸ್ವಲ್ಪಬದಲಾವಣೆಆಗಿರಬಹುದು.ಕಥೆಯನ್ನು ಓದಿ ಇಷ್ಟಪಟ್ಟು ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.ನಮಸ್ಕಾರ.
ReplyDeleteಕಥೆ ಚನ್ನಾಗಿದೆ.
ReplyDeleteSir, Thats why we love Goruru. His style amazes. His impact of writing visualises us the live. His Urvashi, Americadalli Goruru also notable here. Thankfull to you for re introducing him to my library fetching list.
ReplyDeletevery nice.. its such a sad story.....
ReplyDeletekathe ista aytu.. haage feel kooda aytu... :(
ReplyDelete