Wednesday, March 2, 2011

"ಸುರಕ್ಷತೆಯೇ ಬಾಳಿನ ಶ್ರೀರಕ್ಷೆ"

ಮಾರ್ಚ್ ಮೊದಲ ವಾರ ಸುರಕ್ಷತಾ ಸಪ್ತಾಹ.ಎಲ್ಲಾ ಕಡೆ ಸುರಕ್ಷತೆಯ ಬಗ್ಗೆ ಚರ್ಚೆಗಳು,ಸುರಕ್ಷತಾ ಸಲಕರಣೆಗಳ ಮಹತ್ವ ,ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಕ್ರಮಗಳಾಗುತ್ತವೆ.ಮಾರ್ಚ್ ಮುಗಿಯುತ್ತಿದ್ದಂತೆ ಎಲ್ಲೆಡೆ ಹಾಳು ಮರೆವು ಆಕ್ರಮಿಸಿ,ಸುರಕ್ಷತೆಯ ವಿಷಯ ಮೂಲೆ ಗುಂಪಾಗುತ್ತದೆ.ಮತ್ತೆ ಅದೇ ಹಳೆ ಅಭ್ಯಾಸಗಳು ಮುಂದುವರಿಯುತ್ತವೆ.ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವುದು,ಕುಡಿದು ಗಾಡಿ ಓಡಿಸುವುದು ,ಬಾಯಲ್ಲಿ ಗುಂಡು ಪಿನ್ ಕಚ್ಚಿಕೊಳ್ಳುವುದು ,ಕಿವಿಯಲ್ಲಿ ಹೇರ್ ಪಿನ್ ಹಾಕಿಕೊಳ್ಳುವುದು  ಇತ್ಯಾದಿ ,ಇತ್ಯಾದಿ ಎಡವಟ್ಟುಗಳನ್ನು  ಮಾಡುತ್ತಲೇ ಇರುತ್ತೇವೆ ! ಸುಮಾರು ಅಪಘಾತಗಳಲ್ಲಿ ಪ್ರತಿ ಶತ ಎಂಬತ್ತು ಅಪಘಾತಗಳು ಮನುಷ್ಯನ ತಪ್ಪಿನಿಂದ(Human Error) ಆದಂಥವು. ನಾವು ಮಾಡುವ ಕೆಲಸದಲ್ಲಿ ಎಚ್ಚರಿಕೆ ಇಲ್ಲದಿರುವುದೇ ಪ್ರಮುಖ ಕಾರಣ ಎಂದುಹೇಳಲಾಗುತ್ತದೆ. ಎಚ್ಚರಿಕೆ ಇಲ್ಲದಿರುವುದಕ್ಕೆ  ಈ ಕ್ಷಣದಲ್ಲಿ ನಾವು ಎಚ್ಚರದಿಂದ ಇಲ್ಲದಿರುವುದೇ ಕಾರಣ.WE  ARE NOT IN THE PRESENT.ನಿನ್ನೆ ನಡೆದ್ದನ್ನೋ,ಮೊನ್ನೆ ಯಾರೋ ಜಗಳವಾಡಿದ್ದೋ,ನಾಳೆ ಕಟ್ಟಬೇಕಾದ ಬ್ಯಾಂಕಿನ ಸಾಲವೋ ,ಮಗನ ಕಾಲೇಜಿನ ಫೀಸೋ ,ಒಟ್ಟಿನಲ್ಲಿ ಯಾವುದೋ ಒಂದು ವಿಷಯ ನಮ್ಮ ತಲೆ ತಿನ್ನುತ್ತಿರುತ್ತದೆ.ಮಾಡುತ್ತಿರುವ ಕೆಲಸವನ್ನು  ಯಾಂತ್ರಿಕವಾಗಿ ,ಅದರ ಕಡೆ ಲಕ್ಷ್ಯವಿಲ್ಲದೇ ಮಾಡುತ್ತಿರುತ್ತೇವೆ. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ ಎನ್ನುವ ಮಾತನ್ನು ಎಲ್ಲೆಲ್ಲೂ  ಕೇಳುತ್ತೇವೆ.ಹಾಗಂದರೇನು?ಮಾಡುವ ಕೆಲಸದ ಬಗ್ಗೆ ಸಂಪೂರ್ಣ ಗಮನವಿರಲಿ,ಅರಿವಿರಲಿ ಎಂದಲ್ಲವೇ?ಈ ಕ್ಷಣದಲ್ಲಿ ನಾವು ಯಾವುದೋ ಆಲೋಚನೆಯಲ್ಲಿ ಮುಳುಗದೆ,ಪೂರ್ಣ ಎಚ್ಚರದಲ್ಲಿದ್ದರೆ ಸಾಕಷ್ಟು ಅಪಘಾತಗಳನ್ನು ತಪ್ಪಿಸಬಹುದಲ್ಲವೇ? ತಪ್ಪದೆ ನಿಮ್ಮ ಅನಿಸಿಕೆ ತಿಳಿಸಿ.ನಮಸ್ಕಾರ.

25 comments:

  1. ತು೦ಬಾ ಉತ್ತಮವಾದ ಸಕಾಲಿಕ ಲೇಖನ ಸರ್, ಬಹಳ ಮಾರ್ಗದರ್ಶಕವಾಗಿದೆ. ಅನೇಕಾನೇಕ ಧನ್ಯವಾದಗಳು.

    ReplyDelete
  2. ಮೇಡಂ;ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಸುರಕ್ಷತೆಯ ಬಗ್ಗೆ ಹೆಚ್ಚು ತಿಳುವಳಿಕೆ ಮೂಡಲಿ ಎಂಬುದು ಲೇಖನದ ಆಶಯ.ನಮಸ್ಕಾರ.

    ReplyDelete
  3. ಮೂರ್ತಿ ಸರ್,

    ಸರಿಯಾಗಿ ಹೇಳಿದ್ರಿ, ಅವಸರವೇ ಎಲ್ಲಾ ಅನಾಹುತಗಳಿಗೆ ಕಾರಣ ಅಂತಾರೆ, ಹಾಗೆ ಯಾವುದೇ ಕೆಲಸವನ್ನೂ ಮಾಡುವಾಗ ಸರಿಯಾಗಿ ಆಲೋಚಿಸಿ ಮುಂದೆ ನಡೆಯುವುದರಿಂದ ಆಗುವ ಅನಾಹುತವನ್ನು ತಪ್ಪಿಸಬಹುದು...ಉತ್ತಮ ಲೇಖನ...ಧನ್ಯವಾದಗಳು...

    http://ashokkodlady.blogspot.com/

    ReplyDelete
  4. ಸಾಮಾನ್ಯ ಭಾಷೆಯಲ್ಲಿ ಅದನ್ನು'presence of mind'ಎನ್ನುತ್ತಾರೆ.ಈ ಕ್ಷಣದಲ್ಲಿ ನಾವು ಮಾಡುವ ಕೆಲಸದಲ್ಲಿ ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿ ಕೊಂಡಾಗ ಅಪಘಾತಗಳು ಕಮ್ಮಿಯಾಗಬಹುದು.ತಮ್ಮ ಅನಿಸಿಕೆಗೆ ಧನ್ಯವಾದಗಳು.

    ReplyDelete
  5. ಮೂರ್ತಿ ಸರ್,
    ನೀವು ಹೇಳಿದ್ದು ಸಂಪೂರ್ಣ ಸತ್ಯ.
    ಎಲ್ಲೋ ಓದಿದ್ದ ಸಾಲು ನೆನಪಿಗೆ ಬಂತು:
    "SMALL THINGS MAKES BIG DIFFERENCE".
    - ಅನಿಲ್

    ReplyDelete
  6. HAAGE NODIDARE NAMMA YOCHANA PRAKRIYE BADALAAGABEKU.TALEYALLI TUMBIKONDIDDONDU,MAADUVADU INNONDU AADARE AAGUVADE-APHAGHATA. SURAKSHEYA BAGGE SARIYAAGIYE TILISIDDERA-DHANYAVADAGALU.

    ReplyDelete
  7. Work is worship ಅಂಥ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ.ಅಪಘಾತ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು.

    ReplyDelete
  8. ಅನಿಲ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನೀವು ಹೇಳುವುದು ಸರಿ.ಈ ಕ್ಷಣದಲ್ಲಿ ಬದುಕುವುದು ಎಷ್ಟು ಸಣ್ಣ ವಿಷಯವೇ ಆದರೂ ಅದನ್ನು ಅಳವಡಿಸಿಕೊಳ್ಳುವುದು ನಿಜಕ್ಕೂ ಕಷ್ಟ.ನಮ್ಮ ಅರಿವು ಈ ಕ್ಷಣದಲ್ಲಿ ಇಲ್ಲದಿದ್ದರೆ ಮನಸ್ಸು ಯಾವುದೋ ಆಲೋಚನೆಯಲ್ಲಿ ತೊಡಗುತ್ತದೆ!

    ReplyDelete
  9. ಹೇಮಚಂದ್ರ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.By default our mind gets in to a thought spinning mode!ನಾವು ಈ ಕ್ಷಣದಲ್ಲೇ ಬದುಕುತ್ತಿದ್ದರೂ ನಮ್ಮ ಮನಸ್ಸೂ ಈ ಕ್ಷಣದ ಕೆಲಸದಲ್ಲಿ ತೊಡಗಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು.

    ReplyDelete
  10. ಗಿರೀಶ್;ನೀವು ಹೇಳುವುದು ಸರಿ.ಯಾವುದೇ ಕೆಲಸವನ್ನೂ ಪೂಜೆಯಷ್ಟು ಶ್ರದ್ಧೆ ಯಿಂದ ಮಾಡಿದರೆ ಯಾವ ತೊಂದರೆಯೂ ಇರದು.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  11. ಮೂರ್ತಿಯವರೆ,
    ಬಾಳನ್ನು ರಕ್ಷಿಸುವ ನಿಮ್ಮ ಎಚ್ಚರಿಕೆಗೆ ಧನ್ಯವಾದಗಳು.

    ReplyDelete
  12. bahalaShtu upayukta vicharagalu Dr Sir. saagaradante hariyuva vaahanagala vega nodidare, nimma maatugalannu hechchu nenapisikollabekaguttade.
    dhanyavaadagalu.

    ananth

    ReplyDelete
  13. ಕೃಷ್ಣಮೂರ್ತಿಯವರೆ...

    ನಮ್ಮ ಬದುಕು...
    ಜೀವ.... ಅಮೂಲ್ಯ..!

    ನಾವು ಎಚ್ಚರಿಕೆಯಲ್ಲಿರ ಬೇಕು..

    ನಮ್ಮನ್ನೊಮ್ಮೆ ಎಚ್ಚರಿಸಿದ್ದಕ್ಕೆ ಧನ್ಯವಾದಗಳು..

    ReplyDelete
  14. ಸುನಾತ್ ಸರ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  15. ಅನಂತ್ ಸರ್;ನೀವು ಹೇಳುವುದು ಸರಿ.ಮಿಂಚಿನ ವೇಗದಲ್ಲಿ ಸಾಗುವ ವಾಹನಗಳ ನಡುವೆ ಸಾಗುವಾಗ ಮೈಯೆಲ್ಲಾ ಕಣ್ಣಾದರೂ ಸಾಲದು!ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.

    ReplyDelete
  16. ಪ್ರಕಾಶಣ್ಣ;ಎಚ್ಚರಿಕೆಯಲ್ಲಿರಿ ಎಂದರೆ ಏನೋ ಅಪಾಯ ಕಾದಿದೆಯೇನೋ ಎಂದು ಭಯವಾಗುತ್ತದೆ.ಎಚ್ಚರದಿಂದಿರಿ ಎಂದರೆ ಈ ಕ್ಷಣದಲ್ಲಿ ಮಾಡುವ ಕೆಲಸದಲ್ಲಿ ಮನಸ್ಸು ನೆಲಸಿರಲಿ ಎಂದಷ್ಟೇ ಅರ್ಥ.ಆತಂಕ ಪಡುವುದೂ ನಮ್ಮ ಸಹಜ ಗುಣವೇ?ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  17. hani hani kudidare halla haage pratiyobaru tamma tamma echarike alli iddare valitu alwe ......?

    ellaru gamana kodalebekad lekhana .......

    ReplyDelete
  18. ಮಂಜು ಅವರೆ;ನೀವು ಹೇಳುವುದು ಸರಿ.ಇದು ಎಲ್ಲರೂ ತಮ್ಮ ಪಾತ್ರವನ್ನು ಸರಿಯಾಗಿ ವಹಿಸಬೇಕಾದ ಕೆಲಸ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  19. doddavaru echcharisuttale iruttaare tamma anubhavada maathugalinda..
    echcharikeyinda kelabekashte... naavu..

    echcharisiddakke thanks..sir..

    ReplyDelete
  20. ಹೌದು ಸಾರ್, precaution is better than cure!

    ReplyDelete
  21. ಚುಕ್ಕಿ ಚಿತ್ತಾರ ಮೇಡಂ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  22. ಗುಬ್ಬಚ್ಚಿ ಸತೀಶ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  23. sir.
    nammalli (construction site) idara bagge tumbaa careful aagirteve... aadrU aphaghaata naDEyuttaa iratte...
    sakaalika lekhana....

    ReplyDelete
  24. ದಿನಕರ್ ;ನಿಮ್ಮ ಅನುಭವಗಳನ್ನೂ ಬರಹಕ್ಕಿಳಿಸಿ.ಅದರಿಂದ ಬೇರೆಯವರಿಗೆ ಪಾಠ ಸಿಗಬಹುದು.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  25. ಅಪಘಾತಕ್ಕೆ ಅವಸರವೇ ಕಾರಣ ಎಂಬುದು ನಮಗೆ ತಿಳಿದೇ ಇದ್ದರೂ ಅದನ್ನು ಮರೆತಿರುತ್ತೇವೆ. ಯಾರೋ ಅಸಹಾಯಕರು ದೈನ್ಯದಿಂದ ಬೇಡಿದಾಗ ದೂರ ತಳ್ಳುತ್ತೇವೆ; ಅಲ್ಲಿ ಅವರಿಗೆ ಅನಿವಾರ್ಯತೆಯೂ ಇತ್ತೇನೋ ಎಂಬುದು ನಮಗೆ ತಿಳಿಯದು. ಶಾಲೆಗಳಲ್ಲಿ ಫೀಸು ಕಟ್ಟುವಂತೆ ಒತ್ತಡ ಹೇರುವ ವ್ಯವಸ್ಥಾಪಕರು ಕೆಲವೊಂದು ಸಂದರ್ಭಗಳಲ್ಲಿ ವ್ಯಕ್ತಿಗಳ ಅನಿವಾರ್ಯತೆಯನ್ನು ನೋಡಿ ಸಹಕರಿಸಿದರೆ ಕೆಲವು ಆತ್ಮಹತ್ಯೆಗಳು ತಪ್ಪಬಹುದು, ಲೇಖನ ಮಾರ್ಮಿಕ ಮತ್ತು ಮಾರ್ಗದರ್ಶಕವಾಗಿದೆ, ಧನ್ಯವಾದಗಳು

    ReplyDelete

Note: Only a member of this blog may post a comment.