ಇನ್ನೂ ಇದೀಗ ಮಾರ್ಚ್ ತಿಂಗಳು.ಬೇಸಿಗೆಯ ಬಿಸಿಗೆ ಬೇಸರ ಬಂದು ಪುಸ್ತಕದ ಗೂಡಿನಲ್ಲಿ ತಡಕಾಡಿದಾಗ ಸಿಕ್ಕಿದ್ದು ,ನನ್ನ ನೆಚ್ಚಿನ ಕವಿ ಬಿ.ಆರ್.ಲಕ್ಷ್ಮಣ ರಾವ್ ಅವರ 'ಹನಿಗವಿತೆಗಳು'ಪುಸ್ತಕ.ಇಲ್ಲಿದೆ ನೋಡಿ ತಂಪನೀಯುವ ಅವರ ಕೆಲ 'ಹನಿಗವಿತೆಗಳು';
೧) ಕಂಪನಿ
ಕೈಮರಕ್ಕೆ ಬೇಸರ
ನೀಗಲೆಂದು
ಹೆಗಲ ಮೇಲೆ
ಕೂತು
ಒಂದು ಗಿಣಿ
ನೀಡಿದೆ ಕಂಪನಿ
೨) ಮಾಮೂಲು
೨) ಮಾಮೂಲು
ಚಂದ್ರ ಕಲಾ ಮತ್ತು ಸೂರ್ಯ ಪ್ರಕಾಶ
ಅಮರ ಪ್ರೇಮಿಗಳು ,
ಇವರಿಬ್ಬರ ನಡುವೆ ಯಥಾ ಪ್ರಕಾರ
ಭೂಮಿ ಅಡ್ಡ ಬಂತು ,
ಜಾಣ ಸೂರ್ಯ ತಲೆ ಮರೆಸಿಕೊಂಡ .
ಚಂದ್ರ ಗ್ರಹಣವಾಯ್ತು.
೩) ದುರಂತ
ಹೆಣ್ಣು ತೊಟ್ಟು ಮೆರೆಯುವಳೇ
ಸಲ್ವಾರ್ ಕಮೀಜು ?
ಕನ್ನಡಿ ನೋಡಿ ಹಿಗ್ಗುವಳೇ
ತನ್ನದೇ ಇಮೇಜು?
ಕನ್ಯತ್ವದ ಹಂತ.
ಸದಾ ಸೀರೆಯೇ? ಹ್ಯಾಪು ಮೋರೆಯೇ?
ದಾಂಪತ್ಯ ದುರಂತ.
೪)ಪಾಠ
ಹುಡುಗಿ ,ಯಾಕಮ್ಮಾ ಈ ಮೊಸಳೆ ಕಣ್ಣೀರು ?
ಕೈ ಕೊಟ್ಟ ನಿನ್ನ ರೋಮಿಯೋ ಬಗ್ಗೆ
ವೃಥಾ ಕ್ರೋಧದ ಜ್ವಾಲೆ?
ನಿನಗೆ ಮೊದಲೇ ಗೊತ್ತಿರಬೇಕಿತ್ತು
ಕೋತಿಯ ಹೃದಯ
ಕೊಂಬೆಯ ಮೇಲೆ.
೫)ಸಮಾನತೆ
ಬಡವರ ಮಕ್ಕಳು
ಮೂಟೆ ಹೊರುತ್ತಾರೆ
ಕೂಲಿಗೆ.
ಶ್ರೀಮಂತರ ಮಕ್ಕಳೂ
ಮೂಟೆ ಹೊರುತ್ತಾರೆ
ಸ್ಕೂಲಿಗೆ.
೬)ವಸ್ತು
೬)ವಸ್ತು
ಹಾಡೇ ಹಾಡೇ ,ಇಂದಿನ ಪಾಡೇ
ಏನು ನಿನ್ನ ವಸ್ತು?
ಓಲೆ,ಓಲೆ ,ಸೆಕ್ಸಿ,ಸೆಕ್ಸಿ,
ಹಮ್ಮ,ಮಸ್ತು ,ಮಸ್ತು.
೭)ಪಾಕಂಪೊಪ್ಪು
ತುಳುಕುವ ಬಳುಕುವ ತಾರಾ
ಹುಡುಗರು ರೆಗಿಸ್ತಾರಾ ?
ಅದರಲ್ಲೇನಿದೆ ತಪ್ಪು ?
ನೀನೋ ಪಾಕೊಂಪೊಪ್ಪು.
ಪಾಕೊಂಪೊಪ್ಪಿಗೆ ಇರುವೆ
ಮುತ್ತಿಗೆ ಹಾಕೋ ಥರವೇ
ನಿನ್ನ ಸುತ್ತಾ ಬಾಯ್ಸು.
ದಂ ಇದ್ರೆ ದಬಾಯ್ಸು.
೮)ಕೊಡಲಿ
ಸ್ವಾರ್ಥಿ ,ಕಟುಕ
ಈ ಮನುಜನಿಗೆ
ದೇವರು ಬುದ್ಧಿಯ ಕೊಡಲಿ
ಎಂದು
ಹಸಿರು ಕೈಗಳೆತ್ತಿ
ಪ್ರಾರ್ಥಿಸುತ್ತಿರುವ
ಮರದ
ಬುಡಕ್ಕೆ
ಕೊಡಲಿ.
olle "ಹನಿಗವಿತೆಗಳು".Ishta aaytu sir..:-)
ReplyDeleteವಾಹ್..! ಒಂದಕ್ಕಿಂತ ಒಂದು ಸುಪರ್..
ReplyDeleteಮೂರ್ತಿ ಸರ್ ನಮ್ಮೊಡನೆ ಹಂಚಿಕೊಂಡಿದ್ದಕ್ಕೆ,ಅನಂತ ಧನ್ಯವಾದಗಳು .
nice collection.
ReplyDeleteಚುಟುಕುಗಳು ಚೆನ್ನಾಗಿವೆ ಸರ್. ಲಕ್ಷ್ಮಣರಾಯರು ಈಗ ಪದ್ಮನಾಭ ನಗರದಲ್ಲೇ ಇದ್ದಾರೆ, ಪ್ರತಿನಿತ್ಯ ವಾಕಿ೦ಗ್ ಹೋಗೋವಾಗ ಸಿಗ್ತಾರೆ.
ReplyDeleteಕೃಷ್ಣಮೂರ್ತಿಯವರೆ...
ReplyDeleteಲಕ್ಷಣರಾಯರ ಸೊಗಸಾದ ಚುಟುಕುಗಳನ್ನು ನಮಗೆ ಉಣಬಡಿಸಿದ್ದೀರಿ...
ನಿಮ್ಮ ರುಚಿ ಚೆನ್ನಾಗಿದೆ..
ಎಲ್ಲವೂ ಮಸ್ತ್ ಇವೆ...
ಧನ್ಯವಾದಗಳು...
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.@ವಸಂತ್;ಹನಿಗವನಗಳು ಖ್ಯಾತ ಕವಿ ಲಕ್ಷ್ಮಣ ರಾವ್ ಅವರದ್ದು.ನಿಮ್ಮ ಕಾಮೆಂಟ್ ನಲ್ಲಿ ತಪ್ಪಾಗಿ ನನ್ನದು ಎಂದು ಹಾಕಿದ್ದೀರಿ.ವಂದನೆಗಳು.
ReplyDeleteಆಹಾ ಎಂಥಾ ರಿವೈಂಡು ಸಾರ್!
ReplyDeleteಕವಿಕೆಯನ್ನು ಮತ್ತೆ ಮತ್ತೆ ಓದಲು ಪ್ರೇರೇಪಿಸುವ ಕವಿ BRL. ಹನಿಗವನಗಳಿಗೆ honey ಸಲಾಮು