Friday, March 4, 2011

"ಟಿಕ್,ಟಿಕ್........! ಧ್ಯಾನದ ಟೆಕ್ನಿಕ್!"

'ಮನಸ್ಸುಮರ್ಕಟ'.ಒಂದು ಕಡೆ ನಿಲ್ಲದು.'ಮನಸ್ಸು ಗೀಜಗನ ಗೂಡು'.ಅಲ್ಲಿ ಸದಾ ಆಲೋಚನೆಗಳ,ಯೋಜನೆಗಳ,
ಚಿಂತೆಯ ಚಿಲಿಪಿಲಿ!ಡಿ.ವಿ.ಜಿ.ಯವರು ತಮ್ಮ ಮಂಕು ತಿಮ್ಮನ ಕಗ್ಗದಲ್ಲಿ ಹೀಗೆ ಹೇಳುತ್ತಾರೆ;
'ತಲೆಯೊಳಗೆ ನೆರದಿಹವು ನೂರಾರು ಹಕ್ಕಿಗಳು ,
ಗಿಳಿ ಗೂಗೆ ಕಾಗೆ ಕೋಗಿಲೆ ಹದ್ದು ನವಿಲು!
ಕಿಲಕಿಲನೆ ಗೊರಗೊರನೆ ಕಿರಿಚಿ ಕೂಗುತ್ತಿಹವು,
ನೆಲೆಯೆಲ್ಲಿ ನಿದ್ದೆಗೆಲೋ ?-ಮಂಕು ತಿಮ್ಮ!'
 ಮನಸ್ಸು ಗೊಂದಲದ ಗೂಡಾದರೆ ನೆಮ್ಮದಿ ಎಲ್ಲಿ ?ಮನಸ್ಸು ನೆಮ್ಮದಿಯಾಗಿ ,ಶಾಂತವಾಗಿ,ಸ್ವಸ್ಥವಾಗಿ ಇರದಿದ್ದರೆ ದೇಹವೂ ಹಲವಾರು ರೋಗಗಳಿಗೆ ಮನೆಯಾಗುತ್ತದೆ.ಇವತ್ತು ಎಲ್ಲೆಲ್ಲೂ ಕಾಣುವ ಬಿ.ಪಿ, ಶುಗರ್,ಆರ್ಥ್ರೈಟಿಸ್ ಗಳೆಲ್ಲ ಹಾಗೆ ಬಂದ ಬೇಡದ ಅತಿಥಿಗಳೇ!ಇದಕ್ಕೆ ಪರಿಹಾರವೇನು?
ಎಲ್ಲರೂ 'ಧ್ಯಾನ ಮಾಡಿ,ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಿ' ಎಂದು ಸಲಹೆ ನೀಡುವವರೆ!ಆದರೆ ಧ್ಯಾನ ಹೇಗೆ ಮಾಡುವುದು ಎನ್ನುವುದರ ಬಗ್ಗೆಯೇ ಸಾಕಷ್ಟು ಗೊಂದಲಗಳಿವೆ!ಕೆಲವರು 'ನೀವು ಸುಮ್ಮನೆ ಕುಳಿತು, ಆಲೋಚನೆಗಳನ್ನು ತಡೆಯದೆ, ಅವನ್ನು ಸಾಕ್ಷೀ ಭಾವದಿಂದ ನೋಡಿ' ಎಂದು ಸಲಹೆ ಕೊಡುತ್ತಾರೆ. ಆಲೋಚನೆಗಳನ್ನು 'ಸಾಕ್ಷೀ  ಭಾವದಿಂದ'ನೋಡುತ್ತಾ ,ನೋಡುತ್ತಾ ನಮಗೇ ಅರಿವಿಲ್ಲದಂತೆ ಅದರ ಸುಳಿಗೆ ಸಿಲುಕಿ
ಆಲೋಚನೆಗಳ ಮಹಾಪೂರದಲ್ಲಿ ಕೊಚ್ಚಿಹೊಗುವುದೇ ಹೆಚ್ಚು!
ನಿನ್ನೆ EckhadtTolle ಯವರ stillness speaks ಎನ್ನುವ ಪುಸ್ತಕದಲ್ಲಿ 'Listening totally can in itself be a complete meditation' ಎನ್ನುವ ವಾಕ್ಯವನೋದಿದ್ದೆ .
ಈ ದಿನ ಬೆಳಿಗ್ಗೆ ಏಳುವಾಗಲೇ ಏಕೋ ವಿಪರೀತ ಮೈಗ್ರೈನ್ ತಲೆನೋವಿತ್ತು.ಖಾಲಿ ಹೊಟ್ಟೆಗೆ ಮಾತ್ರೆ ತೆಗೆದುಕೊಳ್ಳುವುದು ಬೇಡವೆನಿಸಿ ,ಮಾತ್ರೆ ತೆಗೆದುಕೊಳ್ಳುವುದನ್ನು ಮುಂದೂಡಿ,ವ್ಯಾಯಾಮ,ಪ್ರಾಣಾಯಾಮ ಮಾಡಿ,'ಶವಾಸನದಲ್ಲಿ'ಮಲಗಿದ್ದೆ.ಗಡಿಯಾರದ ಟಿಕ್,ಟಿಕ್,ಶಬ್ದ ಕೇಳುತ್ತಿತ್ತು.EckhardtTolle ಯವರ ವಾಕ್ಯ
ನೆನಪಾಯಿತು.ಹಾಗೇ ಆ ಗಡಿಯಾರದ ಶಬ್ಧವನ್ನೇ ಸಂಪೂರ್ಣತೆಯಿಂದ ಆಲಿಸುತ್ತಾ ,ಎಣಿಸುತ್ತಾ ಹೋದೆ.ಸುಮಾರು ಹದಿನೈದು ನಿಮಿಷದ ವರೆಗೆ ಅಂದರೆ ಒಂಬೈನೂರರವರೆಗೆ ಎಣಿಸಿದೆ.ಮನಸ್ಸು ಆ ಹದಿನೈದು ನಿಮಿಷ ಗಡಿಯಾರದ ಶಬ್ಧದ ಧ್ಯಾನದಲ್ಲಿತ್ತು!  ಮನಸ್ಸು ಸಾಕಷ್ಟು ಹಗುರಾಗಿತ್ತು.ಮೈಗ್ರೈನ್ ತಲೆ ನೋವು ಆಶ್ಚೆರ್ಯಕರ ರೀತಿಯಲ್ಲಿ ಮಾಯವಾಗಿತ್ತು! ಯಾವುದೋ ಒಂದು ವಿಷಯದ ಕಡೆಗೋ,ಶಬ್ದದ ಕಡೆಗೋ ಗಮನ ಹರಿಸುವುದೇ ಧ್ಯಾನವಲ್ಲವೇ?
ಈಗ ನಿಮ್ಮದೇ ಧ್ಯಾನದ ಹೊಸ ವಿಧಾನಗಳನ್ನು ಕಂಡು ಕೊಳ್ಳ ಬಹುದು.ಹೌದಲ್ಲವೇ?ಬರೆದು ತಿಳಿಸಿ.ನಮಸ್ಕಾರ.

27 comments:

  1. ಹೌದು ಸಾರ್. ನಿಮ್ಮ ಪ್ರಯೋಗ ಯಶಸ್ವಿಯಾಗಿದೆ. 'Listening totally can in itself be a complete meditation' ಈ ಮಾತುಗಳು ಸತ್ಯ. ಉಪಯುಕ್ತ ಮಾಹಿತಿಗೆ ನಮಸ್ಕಾರಗಳು.

    ReplyDelete
  2. ಸತೀಶ್;ನಾನು ಕೊಟ್ಟ ಮಾಹಿತಿ ನಿಮ್ಮ ಉಪಯೋಗಕ್ಕೆ ಬಂದರೆಸಂತೋಷ.
    ಯಾವುದೋ ಒಂದು ರೀತಿಯಿಂದ ಈ ಮನಸ್ಸಿನ ಬಡಿದಾಟ ಸ್ವಲ್ಪ ಮಟ್ಟಿಗಾದರೂ
    ಶಮನವಾದರೆ ಅಷ್ಟೇ ಸಾಕು.ಅಲ್ಲವೇ.ಧನ್ಯವಾದಗಳು.

    ReplyDelete
  3. Murthy Sir,

    neevu helida maatu khandita nija, intaha prayogagalannu naanu maadi adralli yashassannu padediddene....Dhnyavadagalu....

    ReplyDelete
  4. BAHUSHA NAMMA HINDINAVARU JAPA-TAPA MAADUTIDDARALLA.ADU EDE ERABEKU

    ReplyDelete
  5. ಅಶೋಕ್ ಕೊಡ್ಲಾಡಿ;ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆಅನಂತ ಧನ್ಯವಾದಗಳು.

    ReplyDelete
  6. ಹೇಮಚಂದ್ರ;ನಿಮ್ಮ ಅನಿಸಿಕೆ ಸರಿ.ಅದಕ್ಕೇ ನಮ್ಮ ಹಿಂದಿನವರು ನಿಯಮಿತವಾಗಿ ಜಪ ತಪಾದಿಗಳನ್ನು ತಮ್ಮ ದಿನ ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿಯ ಬದುಕನ್ನು ನಡೆಸಿದ್ದರು.ಧನ್ಯವಾದಗಳು.

    ReplyDelete
  7. ಕೃಷ್ಣಮೂರ್ತಿಯವರೆ...

    ಮನಸ್ಸಿನ ಹತೋಟಿ ಹೇಗೆ ಸಾಧ್ಯ ಅನ್ನೋದನ್ನು ಬಹಳ ಸುಲಭವಾಗಿ ತಿಳಿಸಿಕೊಟ್ಟಿದ್ದೀರಿ...

    ಧನ್ಯವಾದಗಳು...

    ReplyDelete
  8. ಪ್ರಕಾಶಣ್ಣ;ವ್ಯಕ್ತಿಗೆ ಬೇಡದ ಆಲೋಚನೆಗಳು ಎಡ ಬಿಡದೆ ಕಾಡತೊಡಗಿದಾಗ ವ್ಯಕ್ತಿ ಹೈರಾಣಾಗುತ್ತಾನೆ.ಇದು ನಾವು ದಿನ ನಿತ್ಯ ನೋಡುವ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳಿಗೆಕಾರಣವಾಗಬಹುದು.ಧ್ಯಾನವೋ,ಜಪವೋ,ತಪವೋ,ಪೂಜೆಯೂ,ಭಜನೆಯೋ,ಸಂಗೀತವೋ, ಯಾವುದೋ ಒಂದು ಮನಸ್ಸಿನ ಹೊಯ್ದಾಟವನ್ನು ಸ್ವಲ್ಪ ತಹಬದಿಗೆ ತಂದರೆ ಅಷ್ಟೇ ಸಾಕಲ್ಲವೇ?ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  9. houdu sir nija nimma maatu, naanu saha nimmanteye dhyanadatta gamana koDuttaliddene.

    thank you

    ReplyDelete
  10. ಸುಗುಣ ಮೇಡಂ;ಧ್ಯಾನ,ಪ್ರಾಣಾಯಾಮ ಇವೆಲ್ಲಾ ಮನಸ್ಸಿಗೆ ನೆಮ್ಮದಿ ಕೊಡುವುದಂತೂ ನಿಜ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  11. ಈ ತರ ಪ್ರಯೋಗ ನಾನೂ ಮಾಡಿರುವೆ. ಮನಸ್ಸು ಶರೀರ ಹಗುರವಾಗಿದೆ.ಯೋಗ ಪ್ರಾಣಾಯಾಮ ಮುಗಿಸಿ ಕಡೆಗೆ ಯಾವುದಾದರೂ ಮಂತ್ರವನ್ನು ನನಗೆ ಹಿತವೆನಿಸುವ ದನಿಯಲ್ಲಿ ಕೇಳುತ್ತಾ ಶವಾಸನದಲ್ಲಿದ್ದರೆ ೫-೧೦ ನಿಮಿಷಗಳಲ್ಲಿ ಹಲವು ಭಾರಿ ನನಗೆ ನಿದ್ರೆಯೂ ಬಂದು ಆನಂತರ ೫-೧೦ ನಿಮಿಷಗಳಲ್ಲಿ ಎಚ್ಚರವಾಗುತ್ತೆ. ಆಹೊತ್ತಿಗೆ ನಿಜವಾಗಿ ಹಗುರವಾಗಿರುತ್ತೆ.ಈ ಅಭ್ಯಾಸ ಸರಿಯೇ? ವೈದ್ಯರಾದ ನಿಮ್ಮ ಸಲಹೆ?

    ReplyDelete
  12. ಹರಿಹರಪುರ ಶ್ರೀಧರ್;ನಿಮ್ಮ ಪ್ರಯೋಗ ಸರಿಯಿದೆ.ಒಟ್ಟಿನಲ್ಲಿ ಯಾವುದೋ ಒಂದು ದನಿಯನ್ನು ಸಂಪೂರ್ಣವಾಗಿ ಆಲಿಸುವುದೇ ಧ್ಯಾನವಲ್ಲವೇ?ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  13. EckhardtTolle ಯವರ ಉಕ್ತಿ ಹಾಗೂ ನಿಮ್ಮ ಅನುಭವ ಎರಡೂ ಬಹಳ ಉಪಯುಕ್ತವಾಗಿವೆ ಸರ್, ನನಗೂ ಧ್ಯಾನಸ್ಥ ಸ್ಥಿತಿ ತಲುಪಬೆಕೆ೦ಬ ಬಹಳವಾದ ಹ೦ಬಲವಿದೆ. ನೀವು ಸೂಚಿಸಿರುವ ಮಾರ್ಗ ಸರಳವಾಗಿದ್ದು ಅನುಸರಣೀಯವಾಗಿದೆ. ನಮ್ಮೊ೦ದಿಗೆ ಅನುಭವವನ್ನು ಹ೦ಚಿಕೊ೦ಡ ನಿಮಗೆ ಧನ್ಯವಾದಗಳು.

    ReplyDelete
  14. upayukta maahiti Dr sir. halavaaru prayogagalannu maadiruve.. ekaagrate nijaakko dhyaanakke poorakavaguttade. dhanyavaadgalu.

    ananth

    ReplyDelete
  15. ಪ್ರಭಾಮಣಿ ಮೇಡಂ;ಮನಸ್ಸಿನ ಮತ್ತು ದೇಹದ ಸ್ವಾಸ್ಥ್ಯಕ್ಕೆ ಧ್ಯಾನ ಅವಶ್ಯಕ.ಅವರವರಿಗೆ ಸೂಕ್ತವಾದ ದಾರಿಯನ್ನು ಅವರವರೇ ಕಂಡುಕೊಳ್ಳಬೇಕು.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  16. ಅನಂತ್ ಸರ್;ನನಗೆ ಉಪಯೋಗವಾದ ಮಾಹಿತಿ ಬೇರೆಯವರ ಉಪಯೋಗಕ್ಕೂ ಬರಬಹುದು ಎಂದು ಬ್ಲಾಗಿನಲ್ಲಿ ಹಾಕಿದ್ದೇನೆ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  17. ಡಾಕ್ಟ್ರೆ,

    ಧ್ಯಾನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಓದಿದೆ. ಮತ್ತು ಉಳಿದವರ ಅಭಿಪ್ರಾಯಗಳನ್ನು ಓದಿದೆ. ದಾರಿ ಅನೇಕವಿದ್ದರೂ ಗುರಿಯೊಂದೆ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಹೇಳಿದ ವಿಚಾರವೂ ಸರಿಯೆನಿಸುತ್ತದೆ. ಮುಖ್ಯವಾಗಿ ಗುರಿ ಯಶಸ್ವಿಯಾಗಬೇಕಷ್ಟೆ.
    ನಾನು ಕೂಡ ಧ್ಯಾನ ಮತ್ತು ಪ್ರಾಣವನ್ನು ಮಾಡುತ್ತೇನೆ. ಆದ್ರೆ ಅದನ್ನು ಇಲ್ಲಿ ಎಲ್ಲರೂ ವಿವರಿಸಿದಂತೆ ನನಗೆ ವಿವರಿಸಲಾಗದು. ಏಕೆಂದರೆ ಅದು ನಿತ್ಯ ಅಭ್ಯಾಸ ಮತ್ತು ಹವ್ಯಾಸ ಮಾಡಿಕೊಂಡರೆ ಮಾತ್ರ ಅದರಲ್ಲಿ ಯಶಸ್ಸು ಸಾಧಿಸಬಹುದು. ಒಟ್ಟಾರೆ ದೇಹ ಮತ್ತು ಮನಸ್ಸಿನ ಸುಸ್ತು ಸಂಕಟಗಳನ್ನು ಹೋಗಲಾಡಿಸಿ ಹೊಸ ಉಲ್ಲಾಸ ಮೂಡಿಸಿದರೆ ಆಯ್ತಲ್ಲ..
    ಧನ್ಯವಾದಗಳು.

    ReplyDelete
  18. ಶಿವು;ನೀವು ಹೇಳುವುದು ಸರಿ.ಪ್ರತಿಯೊಬ್ಬರೂ ತಮಗೆ ಸರಿಹೊಂದುವ ಹಾದಿಯನ್ನು ತಾವೇ ಕಂಡುಕೊಳ್ಳಬೇಕು.ಧನ್ಯವಾದಗಳು.

    ReplyDelete
  19. ಕೃಷ್ಣಮೂರ್ತಿ ಸರ್,

    ಗಡಿಯಾರದ ಶಬ್ದದ ವಿಧಾನ ಹಂಚಿಕೊಂಡಿದ್ದಕ್ಕೆ ವಂದನೆಗಳು..
    ಈಗ ನಿಮ್ಮ ಮೈಗ್ರೇನ್ ಹೇಗಿದೆ..ಕಾಳಜಿ ವಹಿಸಿ

    ReplyDelete
  20. nanna sadyada allolakallola manastitige chikitsaka baraha. Thanks sir.

    ReplyDelete
  21. ಅಪ್ಪ ಅಮ್ಮ;ನಿಮ್ಮ ಕಾಳಜಿ ಮತ್ತು ಅಪ್ಯಾಯತೆಗೆ ಧನ್ಯವಾದಗಳು.ಬ್ಲಾಗ್ ಸ್ನೇಹಿತರ ಬಾಂಧವ್ಯ ಮತ್ತಷ್ಟು ಬೆಳೆಯಲಿ.

    ReplyDelete
  22. ಬದರೀ ನಾಥ್ ಸರ್;ನಿಮ್ಮ ಮಾನಸಿಕ ನೆಮ್ಮದಿಗೆ ನನ್ನ ಬರಹದಿಂದ ಕಿಂಚಿತ್ ಸಹಾಯವಾದರೂ ನನಗದು ಸಂತಸದ ವಿಷಯ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  23. ಸಾರ್,
    ಮನಸ್ಸೆಂಬ ಮರ್ಕಟನನ್ನು ಧ್ಯಾನದಿಂದ ಪಳಗಿಸುವ ಕುರಿತು ಪಾಲಿಸಬಹುದಾದ ವಿಧಾನವನ್ನು ವಿವರಿಸಿದ್ದೀರಿ..ತುಂಬಾ ಚೆನ್ನಾಗಿದೆ.

    ReplyDelete
  24. ನಾರಾಯಣ್ ಭಟ್ ಸರ್;ನಿಮ್ಮ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.

    ReplyDelete
  25. ಮೂರ್ತಿ ಸರ್ ನಮಸ್ತೆ.
    ಧ್ಯಾನದ ಬಗ್ಗೆ ಹಲವು ಸಲ ಕೇಳಿದ್ದು/ಓದಿದ್ದು ಇದೆ.
    ಆದರೇ, ನನಗೆ ಧ್ಯಾನ ಹೇಗೆ ಮಾಡುವುದು ತಿಳಿದಿರಲಿಲ್ಲ, ಅದರ ಮಹತ್ವವೂ..!
    ಧ್ಯಾನದ ಬಗ್ಗೆ ನಿಮ್ಮ ವಿವರಣೆ ಸರಳ, ಸುಂದರವಾಗಿದೆ.
    ಖಂಡಿತ ಪ್ರಯತ್ನಿಸುವೆ.
    ನಮನಗಳು.
    -ಅನಿಲ್

    ReplyDelete
  26. ಈ ರೀತಿಯ ಧ್ಯಾನ ಸರಳ ವಿಧಾನ ಎಲ್ಲರಿಗೂ ಉಪಯೋಗಕಾರಿ.

    ReplyDelete
  27. namaskara sir
    sorry for delay in commenting.

    thank u for such a good share of experience.

    my words to the above are
    'Listening totally can in itself be a complete meditation' is more of concentration (ekaagrathe) than meditation.
    effortless concentration might be meditation
    make more effortless
    thank u
    bye

    ReplyDelete

Note: Only a member of this blog may post a comment.