Friday, March 18, 2011

ಶೀಟಿ ಹಾಕುವ 'ಪೋಲಿ ಹಕ್ಕಿ'

ಬಾಲ್ಕನಿಯಲ್ಲಿ ಕುಳಿತು ಏನೋ ಓದುತ್ತಿದ್ದೆ.ಯಾರೋ ಪೋಲಿ ಹುಡುಗರು ಶೀಟಿ ಹೊಡೆದಂತೆ ಶೀಟಿಯ ಶಬ್ದ ಬಂತು.ಅಡಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಹೆಂಡತಿ "ಛೀ ......ಏನ್ರೀ  ಇದು.ಈ ವಯಸ್ಸಿನಲ್ಲಿ ಈ ರೀತಿ ಶೀಟಿ ಹಾಕ್ತೀರಾ"ಎಂದಳು."ಬಾ ಇಲ್ಲಿ "ಎಂದು ಮರದ ಮೇಲೆ ಕುಳಿತು ಶೀಟಿ ಹೊಡೆಯುತ್ತಿದ್ದ ಕಪ್ಪು ಬಣ್ಣದ,ನೀಲಿ ಕಣ್ಣಿನ  'ಪೋಲಿ' ಹಕ್ಕಿಯನ್ನು ತೋರಿಸಿದೆ.ಮತ್ತೊಮ್ಮೆ ಅದೇ ರಾಗದಲ್ಲಿ ಶೀಟಿ ಹೊಡೆದು ಬಾಲ ಅಲ್ಲಾಡಿಸಿ 'ಪುರ್ರ್'ಎಂದು ಹಾರಿ ಹೋಯಿತು.
ನಮ್ಮ ಸ್ನೇಹಿತರೊಬ್ಬರ ಮನೆಯ ಮಹಡಿಯ ಮೇಲಿನ ಮನೆಯಲ್ಲಿ ಕಾಲೇಜು ಕನ್ಯೆ ಯೊಬ್ಬಳಿದ್ದಳು.ಆ ಹುಡುಗಿ ದಿನಾ ಸಂಜೆ ಕಾಲೇಜಿನಿಂದ ಮನೆಗೆ ಬಂದ ನಂತರ, ಮೇಲಿನಿಂದ ಸೀಟಿಯ ಶಬ್ದ ಕೇಳುತ್ತಿತ್ತು.ನಮ್ಮ ಸ್ನೇಹಿತರ ಹೆಂಡತಿ 'ಛೆ .....ಇದೇನು ಮರ್ಯಾದಸ್ಥರ ಮನೆಯ ಈ  ಹುಡುಗಿ ಹೀಗೇಕೆ  ಶೀಟಿ ಹೊಡೆಯುತ್ತಾಳೆ !'ಎಂದುಕೊಂಡರು.ತಡೆಯಲಾರದೆ ಒಂದು ಸಲ'ದಿನಾ ಸಂಜೆ ಮೇಲಿನಿಂದ ಶೀಟಿಯಶಬ್ದ ಬರುತ್ತದಲ್ಲ!'ಎಂದು  ಅವರಮ್ಮನನ್ನೇ ಕೇಳಿದರು.ಅವರಮ್ಮ ನಕ್ಕು ಅವರ ಮನೆಯ ಬಾಲ್ಕನಿಗೆ ಅಂಟಿಕೊಂಡಿದ್ದ ಮರದ ರೆಂಬೆಯತ್ತ ತೋರಿಸಿದರು.ಅದೇ ಜಾತಿಯ ನೀಲಿ ಕಣ್ಣಿನ ಕಪ್ಪು ಹಕ್ಕಿ ತನ್ನ ಪಾಡಿಗೆ  ತಾನು  ಶೀಟಿಹೊಡೆಯುವುದನ್ನುಮುಂದುವರಿಸಿತು. 
ನನ್ನ ಸಹೋದ್ಯೋಗಿಯೊಬ್ಬರ  ಮನೆಯಲ್ಲಿ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದ ಹುಡುಗಿ ಇದ್ದಳು.ದಿನಾ ಮುಂಜಾನೆ 'ಪೋಲಿ ಹುಡುಗನೊಬ್ಬನ'ಶೀಟಿ ಕೇಳಿಸುತ್ತಿತ್ತು.ಒಂದು ದಿನ ಸಿಟ್ಟು ಬಂದು 'ಯಾವೋನೋ ಅವನು' ಎಂದು ಸಿಟ್ಟಿನಿಂದ ಬೈಯುತ್ತಾ ಹೊರ ಬಂದು ನೋಡಿದರೆ ಅದೇ 'ಪೋಲಿ'ಹಕ್ಕಿ ಮರದ ಮೇಲೆ ಕುಳಿತು ನಿರಾತಂಕವಾಗಿ ಸೀಟಿ ಹೊಡೆಯುತ್ತಿತ್ತು. ಓದುಗರಲ್ಲಿ ಯಾರಾದರೂ ಇದು ಯಾವ ಜಾತಿಯ ಹಕ್ಕಿ ಎಂದು ಹೇಳುತ್ತೀರಾ? ಸಧ್ಯಕ್ಕಂತೂ ನಾವಿದನ್ನು ಪೋಲಿ ಹಕ್ಕಿ ಎಂದೇ ಕರೆಯುತ್ತಿದ್ದೇವೆ.

15 comments:

 1. ಡಾಕ್ಟರ್ ಸರ್ ಪಾಪ ಆ ಹಕ್ಕಿಯನ್ನು ಪೋಲಿ ಹಕ್ಕಿ ಅಂತಾ ಕರೆದಿರಲ್ಲಾ. ನಿಮ್ಮ ಲೇಖನದಲ್ಲಿ ಆ ಹಕ್ಕಿಯ ಬಗ್ಗೆ ಕಪ್ಪು ಬಣ್ಣದ ಹಕ್ಕಿ ಬಾಳಾ ಇತ್ತು ಅನ್ನೋದು ಬಿಟ್ರೆ ಜಾಸ್ತಿ ವಿವರ ಇಲ್ಲ ಆದ ಕಾರಣ ಹಕ್ಕಿ ಯಾವುದು ಅನ್ನೋದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗದು.ಕಪ್ಪು ಬಣ್ಣದ ,ಬಾಳಾ ಇರುವ ಶಿಳ್ಳೆ ಹಾಕುವ ಹಲವು ಬಗೆಯ ಹಕ್ಕಿ ಇವೆ . ಹೆಚ್ಚಿನ ವಿವರ ನೀಡಿ ಹಕ್ಕಿಯನ್ನು ಪೋಲಿ ಹಕ್ಕಿ ಎಂಬ ಅಪಾದನೆಯಿಂದ ಮುಕ್ತಿಗೊಳಿಸಿ.

  --
  ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

  ReplyDelete
 2. ಗುರುಗಳೇ, ಕೆಲವೊಮ್ಮೆ ಹೀಗೂ ಆಗಿಬಿಡುತ್ತದೆ, ಯಾರದೋ ತಪ್ಪಿಗೆ ಯಾರೋ ಬೈಗುಳಕ್ಕೆ ಅವಹೇಳನಕ್ಕೆ,ತಿರಸ್ಕಾರಕ್ಕೆ ಗುರಿಯಾಗುತ್ತಾರೆ, ಆದರೆ ಸದ್ಯ ಇಲ್ಲಿ ಹಾಗಾಗಲಿಲ್ಲವಲ್ಲ, ತಾವು ಹೇಳಿದಹಾಗೇ ಆ ಥರದ ತರಲೆ ಹಕ್ಕಿಯನ್ನು ನಾನೂ ಕಂಡಿದ್ದೇನೆ. ಚಳಿಗಾಲದಲ್ಲಿ ಅದರ ಶಿಳ್ಳೆ ಸ್ವಲ್ಪ ಜಾಸ್ತಿ ಎನಿಸುತ್ತದೆ. ಜೀವಶಾಸ್ತ್ರೀಯ ಅಥವಾ ಜನಪದ ಬಳಕೆಯ ಹೆಸರು ನಂಗೂ ಗೊತ್ತಿಲ್ಲ, ಓದಿ ಸಂತೋಷವಾಯ್ತು, ಧನ್ಯವಾದಗಳು

  ReplyDelete
 3. ಬಾಲು ಸರ್;ಆ ಹಕ್ಕಿಯ ಬಗ್ಗೆ ಮತ್ತೊಂದು ಮಾಹಿತಿ ಸಿಕ್ಕಿತು.ಅದರ ಕಣ್ಣುಗಳು ನೀಲಿ ಬಣ್ಣದವು.ರೆಕ್ಕೆಯ ಒಂದು ಭಾಗವೂ ನೀಲಿ ಬಣ್ಣದ್ದು.ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 4. ಭಟ್ ಸರ್;ಆ ಹಕ್ಕಿ ವಸಂತ ಮಾಸದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ.ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

  ReplyDelete
 5. ಇನ್ಯಾವುದೋ ಒಂದು ಜೀವಿ-ಅದೂ ರಾತ್ರಿಯಲ್ಲಿ-ಜುಂಯ್ ಜುಂಯ್ ಎಂದು ನಿದಾನದಿಂದ ನಿದಾನವಾಗಿ ಜೋರಾಗಿ ಶಬ್ದ ಮಾಡುತ್ತಾ-ಗೆಜ್ಜೆ ಶಬ್ದದಂತೆ-ಅದೂ ಅದು ದೂರದಿಂದ ಹತ್ತಿರ ಹತ್ತಿರ ಬಂದಂತೆ ಶಬ್ದ ಮಾಡುವುದನ್ನು-ನಾನು ನಮ್ಮನೇಲಿ ಆಗಾಗ ಕೇಳಿ ಆಶ್ಚರ್ಯಪಟ್ಟಿದ್ದು ಜ್ಞಾಪಕಕ್ಕೆ ಬಂತು!!!

  ReplyDelete
 6. ಸುಬ್ರಮಣ್ಯ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಮಿಡತೆ ಜಾತಿಯ ಒಂದು ಕೀಟ ತನ್ನ ಕಾಲುಗಳಿಂದ ರೆಕ್ಕೆಗಳನ್ನು ಉಜ್ಜುವುದರಿಂದ ಆ ರೀತಿಯ ಗೆಜ್ಜೆಯ ಶಬ್ದ ಉಂಟಾಗುತ್ತದೆ ಎನ್ನುತ್ತಾರೆ.

  ReplyDelete
 7. Malabar Whistling thrush..ಇದೇನ ಅ೦ತ ನೋಡಿ.

  http://en.wikipedia.org/wiki/Malabar_Whistling-thrush

  ReplyDelete
 8. Digvas Hegde;It is the same bird.THE MALABAR WHISTLING THRUSH. Thank you very much for identifying the bird.Regards.

  ReplyDelete
 9. ಚನ್ನಾಗಿದೆ ಸರ್ , ಪೋಲಿ ಹಕ್ಕಿಯ ಕಥೆ
  ಹೌದು ಅದು MALABAR WHISTLING THRUSH.

  ReplyDelete
 10. ಹಹಹ ಪೋಲಿ ಹಕ್ಕಿ ...ಹಹಹಹ್ ಒಳ್ಳೆ ಕಥೆ ಪಾಪ ಪಡ್ಡೆ ಹೈಕ್ಳಿಗೆ ಬೈಗ್ಳ...ಚನ್ನಾಗಿದೆ ಡಾಕ್ಟ್ರೇ ಪ್ರಸಂಗ ವಿವರ...

  ReplyDelete
 11. ದೀಪ್ ಅವರಿಗೆ;ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.

  ReplyDelete
 12. ಅಜಾದ್ ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.ನೀವು ಹೇಳಿದ ಹಾಗೆ ಪಾಪ ಪಡ್ಡೆ ಹುಡುಗರಿಗೆ ಪುಕ್ಕಟೆ ಬೈಗಳು !

  ReplyDelete
 13. Murthi sir,

  Nice one....ishta aitu..

  ReplyDelete
 14. Ashok;thanks for your kind comments.regards.

  ReplyDelete