Sunday, March 20, 2011

"ಅಪ್ಪಾ ......ನಾನೇ .....ದೀಪು !"

ಹೋಳಿ ಹಬ್ಬ ಬಂತೆಂದರೆ ಅಮೆರಿಕಾದಲ್ಲಿ ಎಂ.ಎಸ್.ಮಾಡುತ್ತಿರುವ ಮಗ ನೆನಪಾಗುತ್ತಾನೆ.
ಸುಮಾರು ಇಪ್ಪತ್ತೆರಡು ವರ್ಷಗಳ  ಹಿಂದಿನ ಮಾತು.ಆಗಿನ್ನೂ ಮಗ ಒಂದನೇ ತರಗತಿಯಲ್ಲಿದ್ದ.ಹೋಳಿ ಹಬ್ಬಕ್ಕೆಂದು ಬಣ್ಣಗಳನ್ನು ಅಂಗಡಿಯಿಂದ ತಂದು ಅವುಗಳನ್ನು ಬಕೆಟ್ಟಿನಲ್ಲಿ ನೀರುಹಾಕಿ  ಕರಗಿಸಿ,ಬೇರೆ ಬೇರೆ ಬಣ್ಣಗಳನ್ನು ಬಾಟಲಿಗಳಲ್ಲಿ ತುಂಬಿಸಿಕೊಂಡು ಹುಡುಗರ ಜೊತೆ ಬೆಳಿಗ್ಗೆ ಒಂಬತ್ತು ಗಂಟೆಗೆ ಹೋದವನು ಮಧ್ಯಾಹ್ನ  ಒಂದು ಗಂಟೆಯಾದರೂ ಮನೆಗೆ ಬರದಿದ್ದಾಗ ಅವನಮ್ಮ  ಸಹಜವಾಗಿ ಆತಂಕ ಗೊಂಡಿದ್ದಳು. ಆಸ್ಪತ್ರೆಯಿಂದ ಡ್ಯೂಟಿ ಮುಗಿಸಿ ಮನೆಗೆ ಬಂದ ನನ್ನನ್ನು 'ಬೆಳಿಗ್ಗೆ ಹೋದ ದೀಪು ಇನ್ನೂ ಬಂದಿಲ್ಲ.ಎಲ್ಲಿದ್ದಾನೋ ನೋಡಿ ಕರೆದುಕೊಂಡು ಬನ್ನಿ 'ಎಂದು ಕಳಿಸಿದಳು.ನಮ್ಮ ಶಕ್ತಿನಗರದ ಕಾಲೋನಿ ತುಂಬಾ ದೊಡ್ಡದು.ಸ್ಕೂಟರಿನಲ್ಲಿ ಮಗನನ್ನು ಹುಡುಕಿಕೊಂಡು ಹೊರಟೆ.ಒಂದು ಕಡೆ ಹುಡುಗರ ಗುಂಪೊಂದು
ಬಣ್ಣ ವಾಡುತ್ತಿತ್ತು.ಅವರ ಬಳಿ ಹೋಗಿ ಮುಖಕ್ಕೆಲ್ಲಾ ಕಪ್ಪು ಬಣ್ಣ ಬಳಿದುಕೊಂಡಿದ್ದ ಹುಡುಗನೊಬ್ಬನನ್ನು  ಉದ್ದೇಶಿಸಿ 'ನನ್ನ ಮಗ ದೀಪಕ್ ನನ್ನು ಎಲ್ಲಾದರೂ ನೋಡಿದೆಯೇನಪ್ಪಾ'ಎಂದೆ.ಆ ಹುಡುಗ ಕಪ್ಪು ಮುಖದಲ್ಲಿ ಬಿಳಿ ಹಲ್ಲುಗಳನ್ನು ತೋರಿಸಿ'ಅಪ್ಪಾ ನಾನೇ ದೀಪು'ಎಂದು ಮನೆಯ ಕಡೆ ಓಡಿದ.ಹಸಿರು,ಕೆಂಪು,ನೀಲಿ ಎಲ್ಲಾ ಬಣ್ಣಗಳೂ ಸೇರಿ ಮುಖ ಕಪ್ಪು ಬಣ್ಣಕ್ಕೆ ತಿರುಗಿತ್ತು .ಆ ವಿಚಿತ್ರ ವೇಷದಲ್ಲಿ ನನ್ನ ಮಗನೇ ನನಗೆ ಗುರುತು ಸಿಕ್ಕಿರಲಿಲ್ಲ!ಅವನ ಆಗಿನ ಮುಖ ನೆನೆಸಿಕೊಂಡರೆ ಈಗಲೂ ನಗು ಬರುತ್ತದೆ.

23 comments:

  1. BAYALUSEEMEYA BANNADATADA BEDAGU ELLI BENGALURINALLI KALEDIDE. NIMMA NENAHU MATTE NANNA HINDINA VARUSHAGALA HOLI HABBADA SAMBHRAMA TANDITU.

    ReplyDelete
  2. ಮೌನ ರಾಗ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ;

    ReplyDelete
  3. ಮಂಜು;ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  4. ವಿದ್ಯ ರಮೇಶ್;ಪ್ರತಿಕ್ರಿಯೆಗೆ ಧನ್ಯವಾದಳು.

    ReplyDelete
  5. ಮಹಾಬಳಗಿರಿಭಟ್ಟ;ಧನ್ಯವಾದಗಳು.

    ReplyDelete
  6. ಹೇಮಚಂದ್ರ;ನನ್ನ ಬರಹ ನಿಮ್ಮ ಹೋಳಿಯ ನೆನಪುಗಳು ಮರುಕಳಿಸುವುದಕ್ಕೆ ಸಹಕಾರಿಯಾದದ್ದಕ್ಕೆ ಸಂತಸವಾಯಿತು.ಬರುತ್ತಿರಿ.ಧನ್ಯವಾದಗಳು.

    ReplyDelete
  7. hha hha... majavaagide sannivesha...

    UhisikonDare nagu baruttade....

    ReplyDelete
  8. ಧನ್ಯವಾದಗಳು ದಿನಕರ್.ಬರುತ್ತಿರಿ.ನಮಸ್ಕಾರ.

    ReplyDelete
  9. ತೇಜಸ್ವಿನಿ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  10. ಡಾಕ್ಟರ.. ಚೆನ್ನಾಗಿದೆ.. :-)

    ReplyDelete
  11. ರಾಕೇಶ್;ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  12. ಸರ್,

    ಸವಿಸವಿ ನೆನಪು ಸಾವಿರ ನೆನಪು...ಮಧುರ ಅಲ್ವಾ..

    ReplyDelete
  13. ಶಿವುಸರ್;ನೀವು ಹೇಳುವುದು ಸರಿ.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  14. ಅಪ್ಪ ಅಮ್ಮ;ಧನ್ಯವಾದಗಳು.

    ReplyDelete

Note: Only a member of this blog may post a comment.