ನಾವು ಸಣ್ಣವರಿದ್ದಾಗ ಸಿಂಧನೂರಿನ ಹತ್ತಿರವಿರುವ ಧಡೇಸುಗೂರ್ ಎಂಬಲ್ಲಿರುವ ಅಗ್ರಿಕಲ್ಚರ್ ಫಾರಮ್ಮಿನಲ್ಲಿ ನಮ್ಮ ತಂದೆ ಕೆಲಸ ಮಾಡುತ್ತಿದ್ದರು.ಅಕ್ಕ ಪಕ್ಕದ ಮನೆಗಳಲ್ಲಿ ಹೈದರಾಬಾದಿನಿಂದ ಬಂದಿದ್ದ ರೆಡ್ಡಿಯವರೂ,ಧಾರವಾಡದಿಂದ ಬಂದಿದ್ದ ದೆಸಾಯಿಯವರೂ ಇದ್ದರು.ದೇಸಾಯಿಯವರ ಹೆಂಡತಿ ಅಪ್ಪಟ ಕನ್ನಡತಿ.ಅವರಿಗೆ ತೆಲುಗು ಭಾಷೆ ಬರುತ್ತಿರಲಿಲ್ಲ.ರೆಡ್ಡಿಯವರ ಹೆಂಡತಿಗೆ ತೆಲುಗು ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ.
ಒಮ್ಮೆ ದೇಸಾಯಿ ಯವರ ಹೆಂಡತಿ ರೆಡ್ಡಿಯವರ ಮನೆಗೆ ಹೋದರು.ರೆಡ್ಡಿಯವರ ಹೆಂಡತಿ ತೆಲುಗಿನಲ್ಲಿ 'ರಂಡಿ,ರಂಡಿ'ಎಂದರು.
ತೆಲುಗಿನಲ್ಲಿ 'ರಂಡಿ'ಎಂದರೆ ಬನ್ನಿ ಎಂದರ್ಥ.ಅದನ್ನು ದೇಸಾಯಿಯವರ ಹೆಂಡತಿ 'ಬೈಗಳು' ಎಂದು ಅಪಾರ್ಥ ಮಾಡಿಕೊಂಡು ಅಲ್ಲಿಂದ ಧಡಕ್ಕನೆ ಎದ್ದು, ದುರ್ದಾನ ತೆಗೆದುಕೊಂಡವರಂತೆ ಹೊರಟು ಹೋದರು.ರೆಡ್ಡಿಯವರ ಹೆಂಡತಿಗೆ ಅವರು ಹಾಗೇಕೆ ಹೊರಟು ಹೋದರು ಎಂದು ಅರ್ಥವಾಗಲಿಲ್ಲ.ಮತ್ತೊಮ್ಮೆ ರೆಡ್ಡಿಯವರ ಹೆಂಡತಿ ದೇಸಾಯಿಯವರಮನೆಗೆ ಹೋದರು.
ದೇಸಾಯಿಯವರ ಹೆಂಡತಿ ತಮ್ಮ ಸಂಪ್ರದಾಯದಂತೆ 'ಬರ್ರಿ,ಬರ್ರಿ' ಎಂದರು.ತೆಲುಗಿನಲ್ಲಿ 'ಬರ್ರ 'ಎಂದರೆ ಎಮ್ಮೆ ಎಂದರ್ಥ.
ತಮ್ಮ ಭಾರಿ ಗಾತ್ರದ ದೇಹವನ್ನು ಕಂಡು ಎಮ್ಮೆ ಎಂದು ಅಪಹಾಸ್ಯ ಮಾಡುತ್ತಿದ್ದಾರೆ ಎಂದುಕೊಂಡು ರೆಡ್ಡಿಯವರ ಹೆಂಡತಿ ಅಲ್ಲಿಂದ ಭರ,ಭರನೇ ಹೊರಟು ಹೋದರು. ದೇಸಾಯಿಯವರ ಹೆಂಡತಿಗೆ ಏನೊಂದೂ ತಿಳಿಯಲಿಲ್ಲ .ನಮ್ಮ ತಾಯಿಗೆ ತೆಲುಗು ಮತ್ತು ಧಾರವಾಡದ ಕನ್ನಡ ಎರಡೂ ಭಾಷೆ ಬರುತ್ತಿತ್ತು.ಇಬ್ಬರ ಅಹವಾಲುಗಳನ್ನೂ ಆಲಿಸಿ,ಇಬ್ಬರ ಅನುಮಾನಗಳನ್ನೂ ಪರಿಹರಿಸಿ ವಾತಾವರಣ ತಿಳಿಗೊಳಿಸಿದರು .ಭಾಷೆಯ ಗೊಂದಲದಿಂದ ಉಂಟಾದ ಆಭಾಸದ ಬಗ್ಗೆ ಎಲ್ಲರೂ ಮತ್ತೆ ಮತ್ತೆ ನೆನಪಿಸಿಕೊಂಡು ಮನಸಾರೆ ನಕ್ಕರು.ನೆರೆ ಹೊರೆಯಲ್ಲಿ ಸ್ನೇಹ ಭಾವ ಮೂಡಿತು.
ತಿಳಿಯದ ಭಾಷೆ ಎಷ್ಟೊಂದು ಗೊಂದಲವನ್ನು ಉಂಟು ಮಾಡ ಬಹುದಲ್ಲವೇ!!!!
ಕೃಷ್ಣಮೂರ್ತಿಯವರೆ...
ReplyDeleteಭಾಷೆಗಳ ಗೊಂದಲದ ಘಟನೆ ಸೂಪರ್ರಾಗಿದೆ...!
ಹ್ಹಾ..ಹ್ಹಾ...!
ಹ ಹ್ಹಾ
ReplyDeleteಸೂಪರ್!
ReplyDeleteಪ್ರಕಾಶಣ್ಣ;ನನ್ನ ಅನುಭವಕ್ಕೆ ಬಂದ ಇನ್ನೊಂದು ಭಾಷಾ ಗೊಂದಲದ ಪ್ರಸಂಗವಿದೆ. ಆದರೆ ಅದನ್ನು ಬ್ಲಾಗಿನಲ್ಲಿ ಬರೆಯುವಂತಿಲ್ಲ.ಸಿಕ್ಕಾಗ ಅದರ ಬಗ್ಗೆ ಹೇಳುತ್ತೇನೆ.ಧನ್ಯವಾದಗಳು.
ReplyDeleteಸುಬ್ರಮಣ್ಯ;ಧನ್ಯವಾದಗಳು.
ReplyDeleteಸುನಾತ್ ಸರ್;ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteತುಂಬಾ ಚೆನ್ನಾಗಿದೆ.
ReplyDeleteha ha :)
ReplyDeletechennagide
ReplyDeleteತಮಾಷೆಯಾಗಿದೆ ಸಾರ್!
ReplyDeleteಭಾಷಾ ಗೊಂದಲಗಳು ಕೆಲವೊಮ್ಮೆ ವಿಕೋಪಕ್ಕೆ ತಿರುಗುತ್ತವೆ.
ಟೀವಿಯವರು ಸಬ್ ಟೈಟಲ್ ಹಾಕಿ ಬಚಾವ್ ಆಗುತ್ತೇವೆ
Murthy sir,
ReplyDeleteha ha ha....namma tulu bhasheya kelavu shabdagalu marathi bhasheya baigula galaaguttave...officenalli naanu nanna tulu maatanaduva friends jote maatadta iddare Marathi maatanaduva huduga, hudugiyaru nagaaduvudu tumbaa sa la aagide.....
ನಾರಾಯಣ್ ಭಟ್;ಧನ್ಯವಾದಗಳು.
ReplyDeleteಸುಮ ಮೇಡಂ;ಧನ್ಯವಾದಗಳು.
ReplyDeleteಶ್ರೀಧರ್;ಬರುತ್ತಿರಿ ಧನ್ಯವಾದಗಳು.
ReplyDeleteಬದರಿನಾಥ್;ಅನಂತ ಧನ್ಯವಾದಗಳು.
ReplyDeleteಅಶೋಕ್;ನಿಮ್ಮ ಅನುಭವವನ್ನು ಹಂಚಿ ಕೊಂಡಿದ್ದಕ್ಕೆ ಧನ್ಯವಾದಗಳು.
ReplyDeleteಗುರುಗಳೆ,
ReplyDeleteಹ್ಹಹ್ಹಹ್ಹಾ.......
ಸೊಗಸಾಗಿದೆ!
praveen;ಬಹಳ ದಿನಗಳ ನಂತರ ನಿಮ್ಮನ್ನು ಬ್ಲಾಗಿನಲ್ಲಿ ಕಂಡು ಸಂತಸವಾಯಿತು.ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಡಾಕ್ಟರ್ ಸರ್ ಸೂಪರ್ , ನಕ್ಕೂ ನಕ್ಕೂ ಸುಸ್ತಾಯ್ತು. ಚೆನ್ನಾಗಿದೆ.
ReplyDelete--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]
ಬಾಲೂ ಸರ್;ನಿಮಗೆ ಒಂದಷ್ಟು ಸಂತಸವನ್ನು ಕೊಟ್ಟಿದ್ದು ಲೇಖನದ ಸಾರ್ಥಕತೆ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDelete:) :) :)
ReplyDeleteNisha;thank you.:-)
ReplyDeleteಡಾಕ್ಟ್ರೇ,
ReplyDeleteಭಾಷೆ ಬರದಿದ್ದಲ್ಲಿ ಏನಾಗುತ್ತದೆ ಎನ್ನುವುದಕ್ಕೆ ನಿಮ್ಮ ಉದಾಹರಣೆ ನೋಡಿ ಸಾಕ್ಷಿ. ನಗು ಬಂತು...
ಭಾಷಾ ಗೊ೦ದಲ - ರ೦ಡೀ ಅನ್ನುವ ಪದ ಉತ್ತರ ಕರ್ನಾಟಕದಲ್ಲಿ ಬಳಕೆಯಲ್ಲಿದ್ದರೂ ಅದನ್ನು ಸ೦ಪ್ರದಾಯಸ್ತರು ಬಳಸುವುದಿಲ್ಲ.. ಆದರೆ "ಬೆರಕೀ" ಅನ್ನುವ ಪದ ಮಾತ್ರ ಸರ್ವೇ ಸಾಮಾನ್ಯವಾಗಿ ಮಾತಿನಲ್ಲಿ ನುಗ್ಗಿಬಿಡುತ್ತದೆ..!
ReplyDeleteನಿರೂಪಣೆ ಸೊಗಸಾಗಿ ಡಾಕ್ಟ್ರೇ..
ಅನ೦ತ್
Dr,
ReplyDeleteSuperb
nakku nakku sustu
ಶಿವು ಸರ್,ಅನಂತ್ ಸರ್,ಗುರು ಸರ್ ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ಅನಂತ ಧನ್ಯವಾದಗಳು.ನಮಸ್ಕಾರ.
ReplyDeleteಹಹಹಹ....ಸೊಗಸಾಗಿದೆ ಡಾಕ್ಟ್ರೇ....
ReplyDeleteಮಹೇಶ್ ಸರ್;ಅನಂತ ಧನ್ಯವಾದಗಳು.
ReplyDeletehha hha... majavaagide sir...
ReplyDeleteThanks Dinakar.
ReplyDelete:-)
ReplyDeleteಹ ಹಾ....ಮಜವಾಗಿದೆ..
ReplyDelete