(ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ದಿನದಂದು ಜಗತ್ತಿನ ಎಲ್ಲಾ ಮಹಿಳೆಯರಿಗೆ ಶುಭ ಕೋರುತ್ತ )
'ಹೆಣ್ಣು ಸಂಸಾರದ ಕಣ್ಣು '! ಮಾತೆಯಾಗಿ,ಮಡದಿಯಾಗಿ ,ಮಗಳಾಗಿ ,
ಅಕ್ಕ ತಂಗಿಯರಾಗಿ ,
ಮಮತೆಯ ಸಾಕಾರ ರೂಪವಾಗಿ ,ಅಕ್ಕರೆ ಆಸ್ಥೆಗಳ ಊಡಿಸಿ,
ಸದಾ ಪೊರೆಯುವ ,ಜೀವದಾಯಿ ಗಂಗೆ !
ಇರಬಹುದು ಅಲ್ಲೊಂದು ಇಲ್ಲೊಂದು ,
ಸದಾ ಕಿರಿಕಿರಿ ಕೊಡುವ,
ಕಿಸಿರು ಕಣ್ಣು,--------ಅಪರೂಪಕ್ಕೆ!
ಹಾಗೆಂದು --------------,
ಬೆಳಕು ತೋರುವ ಕಣ್ಣನ್ನೇ ಹಳಿಯಬಹುದೇ?
ಕಣ್ಣು ಇಲ್ಲದಿದ್ದರೆ ನೋಟವೆಲ್ಲಿ ?
ಹೆಣ್ಣು ಇಲ್ಲದಿದ್ದರೆ ಪ್ರೀತಿಯೆಲ್ಲಿ?
ಪ್ರೀತಿ ಇಲ್ಲದಿದ್ದರೆ ಈ ಜಗವೆಲ್ಲಿ?
ಜಗಕೆ ಕಾರಣಳಾದ ಹೆಣ್ಣಿಗೆ,
ಈ ಜಗದ ----------ಕಣ್ಣಿಗೆ,
ಕೋಟಿ, ಕೋಟಿ --------------,
------------ನಮನಗಳು!
ಕೃಷ್ಣಮೂರ್ತಿಯವರೆ...
ReplyDeleteಜಗತ್ತಿಗೆ ಮಮತೆ, ಪ್ರೀತಿಕೊಟ್ಟ ಹೆಣ್ಣಿನ ಬಗೆಗೆ ಬರೆದ ಕವನ ಸೊಗಸಾಗಿದೆ...
ಅಭಿನಂದನೆಗಳು.. ಚಂದದ ಕವನಕ್ಕೆ..
ಸಾರ್, ಒಂದು ಭಾವನಾತ್ಮಕ ಕವನ ಕೊಟ್ಟಿದ್ದೀರಿ...ಅಭಿನಂದನೆಗಳು.
ReplyDeleteಡಾ| ಕೃಷ್ಣಮೂರ್ತಿ ಸರ್, ಕವನ ಹೆಣ್ಣಿನ ಹಲವು ಮುಖಗಳನ್ನು, ಪಾತ್ರಗಳನ್ನು ಸಹಜವಾಗಿ ಅಭಿವ್ಯಕ್ತಗೊಳಿಸಿದೆ, ಹಾರ್ದಿಕ ಅಭಿನಂದನೆಗಳು, ನಮಸ್ಕಾರ
ReplyDeleteTrue lines and wonderful
ReplyDeleteheNNina sahanege, mamatege, tyagakkondu salaam...
ReplyDeletechandada kavanakke dhanyavaada sir....
ಕೃಷ್ಣಮೂರ್ತಿ ಸರ್,
ReplyDeleteಸುಂದರ ಕವನಕ್ಕೆ ವಂದನೆಗಳು.
ಪ್ರತಿಕ್ರಿಯೆ ನೀಡಿದ @ಪ್ರಕಾಶ್ ಹೆಗ್ಡೆ@ನಾರಾಯಣ್ ಭಟ್,ವಿ.ಆರ್.ಭಟ್,ನಾಗರಾಜ್,ದಿನಕರ್ಮತ್ತು@ಅಪ್ಪ ಅಮ್ಮ ,ಇವರಿಗೆಲ್ಲಾ ಅನಂತ ಧನ್ಯವಾದಗಳು.ನಮಸ್ಕಾರ.
ReplyDeleteMurthy Sir,
ReplyDeleteBhavanathmaka Kavana, vhennagide...