Tuesday, July 5, 2011

"ಬಾಲ್ಕನಿಯಲ್ಲಿ ಎಡಗಡೆಯಿಂದ ಮೂರನೆಯದು"

1) ಸಿನಿಮಾ ಹಾಲಿನಲ್ಲಿ ಕತ್ತಲಲ್ಲಿ ಟಾರ್ಚ್ ಬೆಳಕಿನಲ್ಲಿ ಟಿಕೆಟ್ ನೋಡಿ ಸೀಟು ತೋರಿಸುವ  ಕೆಲಸ ಮಾಡುವನೊಬ್ಬನಿಗೆ ವಿಪರೀತ ಹಲ್ಲು ನೋವು ಬಂತು.ಹಲ್ಲಿನ ಡಾಕ್ಟರ್ ಬಳಿ ಹೋಗಿ 'ಡೆಂಟಿಸ್ಟ್ ಚೇರಿನಲ್ಲಿ' ಕುಳಿತ.ಡಾಕ್ಟರ್ "ಯಾವ ಹಲ್ಲು ನೋಯುತ್ತೆ?" ಎಂದು ಕೇಳಿದರು.ಅದಕ್ಕವನು "ಬಾಲ್ಕನಿಯಲ್ಲಿ ಎಡಗಡೆ ಯಿಂದ ಮೂರನೆಯದು" ಎಂದು ಉತ್ತರ ಕೊಟ್ಟ! 

2) ಭಿಕ್ಷುಕನೊಬ್ಬ ದೇವಸ್ಥಾನದ ಮುಂದೆ ಕುಳಿತು "ದೇವರ ಹೆಸರಿನಲ್ಲಿ ಏನಾದರೂ ಕೊಡಿ.ದೇವರು ನಿಮ್ಮನ್ನು ಹರಸುತ್ತಾನೆ"ಎಂದು ಬೇಡತೊಡಗಿದ.ಕೆಲವು ಚಿಲ್ಲರೆ ಕಾಸು ಬಿದ್ದವು.ಸಂಜೆ ಬಾರ್ ಒಂದರ ಮುಂದೆ ಕುಳಿತು ಬಾರಿನಿಂದ ಹೊರಗೆ ಬರುವವರ ಹತ್ತಿರ ಅದೇ ರೀತಿ ಬೇಡತೊಡಗಿದ.ಐದರ,ಹತ್ತರ ಸಾಕಷ್ಟು ನೋಟುಗಳು ಅವನ ಡಬ್ಬಿಯಲ್ಲಿ ಬಿದ್ದವು!ಆಗ ಭಿಕ್ಷುಕ ಹೇಳಿಕೊಂಡ"ದೇವರೇ ನೀನು ನಿಜಕ್ಕೂ ಕರುಣಾಮಯಿ !!ನಿನ್ನ ಹೆಸರಿಗೆ ಎಂತಹ ಶಕ್ತಿಯಿದೆ!!ಆದರೆ ನೀನು ಅಷ್ಟೇ ಕಿಲಾಡಿ!! ಅಡ್ರೆಸ್ ಒಂದೆಡೆ ಕೊಟ್ಟು,ಇನ್ನೆಲ್ಲೋ ಕುಳಿತಿದ್ದೀಯ!!!"

16 comments:

  1. ಹಹಹ... ಸಕ್ಕತ್ತಾಗಿದವೆ ಜೋಕ್ಸ್

    ReplyDelete
  2. hhhaaaaa Super! Devara address chennagide!

    ReplyDelete
  3. ನಗೆ ಡಾಕ್ಟ್ರು ..

    ReplyDelete
  4. ನಿಮ್ಮ ನಗೆ ಟಾನಿಕ್ ಚೆನ್ನಾಗಿದೆ ಸರ್, ಅದರಲ್ಲೂ ದೇವರ ಅಡ್ರೆಸ್!

    ReplyDelete
  5. ಮೊಗದಲ್ಲಿ ಒಮ್ಮೆ ನಗೆ ಮೂಡಿಸಿದ್ದರೆ ಬರಹ ಸಾರ್ಥಕ.ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.ನಮಸ್ಕಾರ.

    ReplyDelete
  6. ಚೆನ್ನಾಗಿದೆ ಧಣಿಗಳೇ, ಬಾಲ್ಕನಿಯಲ್ಲಿ ಇನ್ನೂ ಕತ್ತಲಲ್ಲಿ ಕುಳಿತಿರುವುದನ್ನು ಟಾರ್ಚ್ ಹಾಕಿ ಹೊರತನ್ನಿ, ಧನ್ಯವಾದಗಳು.

    ReplyDelete
  7. ಎರಡೂ ಬೊಂಬಾಟ್ ಡಾಕ್ಟ್ರೇ
    ಮೆಚ್ಚಿದೆ ನಿಮ್ಮ ಹಾಸ್ಯ ಪ್ರಙ್ಞೆ

    ReplyDelete
  8. ನಗೆ ಮಾತ್ರೆಗಳು -ದಾಕ್ಟ್ರ ರಿಂದಾ

    ReplyDelete

Note: Only a member of this blog may post a comment.