Saturday, July 30, 2011

"ನಿಮ್ಮೊಳಗೊಬ್ಬ ...ಬುದ್ಧ!!"

ಇಂದಿನ 'ಪ್ರಜಾವಾಣಿ'ಯಲ್ಲಿ ಭರತ್ ಮತ್ತು ಶಾಲನ್ ಸವೂರ್ ಅವರ "ಬುದ್ಧನಂತಾಗಿ"ಎನ್ನುವ ಬರಹ ತುಂಬಾ ಇಷ್ಟವಾಯ್ತು.ನಿಮ್ಮೊಂದಿಗೆ ಹಂಚಿಕೊಳ್ಳಬೇಕಿನಿಸುತ್ತಿದೆ.ನಿಮಗೂ ಇಷ್ಟವಾಗಬಹುದು.ಅದರ ಸಾರಾಂಶ ಹೀಗಿದೆ:

ಬೌದ್ಧ ಮಠವೊಂದರ ಹಿರಿಯ  ಸನ್ಯಾಸಿಯೊಬ್ಬ ಚಿಂತೆಗೀಡಾದ.ಅವನಿಗೆ ಪದೇಪದೇ ಹೊಟ್ಟೆ ನೋವು ಕಾಡತೊಡಗಿತು.ಮಠದ ಧಾರ್ಮಿಕ ಚಟುವಟಿಕೆಗಳು ಕಮ್ಮಿಯಾದವು.ಮಠದಲ್ಲಿ ಸಣ್ಣಗೆ ರಾಜಕೀಯ ಶುರುವಾಗಿತ್ತು.ಹಲವಾರು ಗುಂಪುಗಳಾದವು.ಒಬ್ಬರನ್ನೊಬ್ಬರು ದೂರುವುದೂ ,ಸಣ್ಣ ಪುಟ್ಟ ಘರ್ಷಣೆ ಗಳೂ,ಶುರುವಾದವು.ಮಠದ ಯುವ ಸನ್ಯಾಸಿಗಳು ಆಲಸಿಗಳಾದರು.ಮಠದ ಕೀರ್ತಿ ಕ್ರಮೇಣ ಇಳಿಮುಖವಾಗುತ್ತಾ ಬಂದು,ಅನುಯಾಯಿಗಳು ಮಠಕ್ಕೆ ಬರುವುದನ್ನೇ ನಿಲ್ಲಿಸಿದರು. ಸನ್ಯಾಸಿ ಇದಕ್ಕೆ ಪರಿಹಾರ ತಿಳಿಯಲು  ಬೆಟ್ಟದಲ್ಲಿ ಗುಹೆಯೊಂದರಲ್ಲಿ ತಪೋ ನಿರತನಾಗಿದ್ದ ತನ್ನ ಗುರುವನ್ನು ಹುಡುಕಿ ಹೊರಟ.ಧ್ಯಾನದಲ್ಲಿ ಮುಳುಗಿದ್ದ ಗುರು ನಿಧಾನವಾಗಿ ಕಣ್ಣು ತೆರೆದು ಶಿಷ್ಯನಿಗೆ ಹೇಳಿದ"ನೀನು ಬಂದ ಕಾರಣ ನನಗೆ ಗೊತ್ತು.ನಿನ್ನ ಮಠ ಏಕೆ ಮಂಕಾಗಿದೆ ಎಂದರೆ ,ನೀವು ಯಾರೂ ಮಠದಲ್ಲಿ ಇರುವ ಜೀವಂತ ಬುದ್ಧ ನನ್ನು ಗುರುತಿಸಲೇ ಇಲ್ಲವಲ್ಲಾ!"ಎಂದು ಹೇಳಿ ಮತ್ತೆ ಧ್ಯಾನಸ್ಥ ನಾದ.

ಹಿರಿಯ ಸನ್ಯಾಸಿ ಮಠಕ್ಕೆ ಮರಳಿ ತನ್ನ ಗುರು ಹೇಳಿದ ವಿಷಯವನ್ನು ಎಲ್ಲರಿಗೂ ತಿಳಿಸಿದ. ಎಲ್ಲರಲ್ಲೂ "ತಮ್ಮಲ್ಲಿ ಇರುವ ಬುದ್ಧ ಯಾರು ?"ಎನ್ನುವ ವಿಷಯದ ಬಗ್ಗೆ ಜಿಜ್ಞಾಸೆ ಶುರುವಾಯಿತು.ಮಠದ ಪ್ರತಿಯೊಬ್ಬರೂ ಮತ್ತೊಬ್ಬರನ್ನು ಬುದ್ಧನಿರಬಹುದೆಂದುಕೊಂಡು ಗೌರವದಿಂದ ,ಭಕ್ತಿಯಿಂದ ಕಾಣ ತೊಡಗಿದರು.ಪರಸ್ಪರ ಗೌರವ ಆದರಗಳು ಹೆಚ್ಚಾದವು. ಮಠದಲ್ಲಿ ಸ್ನೇಹ ,ಶಾಂತಿ,ಸೌಹಾರ್ದದ ಗಾಳಿ ಬೀಸ ತೊಡಗಿತು.ಹಿರಿಯ ಸನ್ಯಾಸಿಯ ಹೊಟ್ಟೆ ನೋವು ಪವಾಡದಂತೆ ಮಾಯವಾಯಿತು.ಮಠ ಮತ್ತೆ ಮಾನ್ಯತೆ ಪಡೆದು ಮೊದಲಿನ ಪ್ರಸಿದ್ಧಿ ಪಡೆಯಿತು.

ಪ್ರತಿಯೊಬ್ಬರ ಅಪರಿಪೂರ್ಣ ವ್ಯಕ್ತಿತ್ವದ ಹಿಂದೆಯೂ ಒಬ್ಬ ಬುದ್ಧ ಅಡಗಿದ್ದಾನೆ.ನಮ್ಮೊಳಗಿನ ಬುದ್ಧ್ಹನನ್ನು ನಾವು ಗುರುತಿಸಿ ಕೊಂಡಾಗ ,ಆರೋಗ್ಯ ,ಸಂತಸ ಮತ್ತು ಸೌಹಾರ್ದಯುತ ಬದುಕು ನಮ್ಮದಾಗುತ್ತದೆ.
ನಿಮಗೆ ಎದುರಾಗುವ ಸನ್ನಿವೇಶ ಅಥವಾ ನೀವು ವ್ಯವಹರಿಸುವ ಜನರಲ್ಲಿ ಸತತವಾಗಿ ನೀವು ತಪ್ಪುಕಂಡು ಹಿಡಿಯುತ್ತಿದ್ದಲ್ಲಿ ,ನಿಮ್ಮ ಮನಸ್ಸು ಕ್ರಮೇಣ ಬಳಲುತ್ತದೆ.ಜಡವಾಗುತ್ತದೆ.ದುಃಖಿತವಾಗುತ್ತದೆ.ತಪ್ಪು ಕಂಡು ಹಿಡಿಯುವ ನಿಮ್ಮ  ಸ್ವಭಾವ ನಿಮ್ಮ ದೇಹದ ಪಿತ್ತ ಕೋಶ ,ಮೂತ್ರ ಪಿಂಡ ,ಕಣ್ಣು, ಮತ್ತು ಎಲ್ಲಾ ಪ್ರಮುಖ ಅಂಗಗಳ  ಮೇಲೂ ಋಣಾತ್ಮಕ ಪರಿಣಾಮ ಬೀರುತ್ತದೆ.
ಎಚ್ಚೆತ್ತು ಕೊಳ್ಳಿ.....!! ಬೇರೆಯವರ ತಪ್ಪುಗಳ ಬಗ್ಗೆ ಮಾತನಾಡುವ  ಮೊದಲು ಬಾಯಿ ಮುಚ್ಚಿಕೊಳ್ಳಿ.ಸಣ್ಣ ದೊಂದು ಕಿರಿ ಕಿರಿ ನಿಮ್ಮಲ್ಲಿ ಹುಟ್ಟಿದರೂ,ಅದರ ಕಾರಣ ಹುಡುಕಿ.ಅದನ್ನು ತಕ್ಷಣವೇ ಹೊರ ಹಾಕಿ.ನನ್ನೊಳಗಿರುವ ಶಾಂತಿಯ ಸ್ವರೂಪನಾದ 'ಬುದ್ಧ',ಈ ಕ್ಷುಲ್ಲಕ ವಿಷಯಗಳಿಗಿಂತ ದೊಡ್ಡದು ಎಂದು ಕೊಳ್ಳಿ.

ಬುದ್ಧನಂತೆ ಪ್ರೀತಿಯಿಂದ ಆಲೋಚಿಸಿ.ಬುದ್ಧನಂತೆ ಮೃದುವಾಗಿ ಮಾತನಾಡಿ.ನಿಮ್ಮೊಳಗೆ ಪ್ರೀತಿಯನ್ನು ತುಂಬಿಕೊಳ್ಳಿ.ನಿಮ್ಮ ಕುಟುಂಬದ ಸದಸ್ಯರನ್ನು,ಸ್ನೇಹಿತರನ್ನು,ನೆರೆಯವರನ್ನು,ಸಹೋದ್ಯೋಗಿಗಳನ್ನು ಮತ್ತೊಬ್ಬ ಬುದ್ಧನಂತೆ ಕಾಣಲು ಶುರುಮಾಡಿ.ಅವರೆಲ್ಲರ ಕುರಿತು ಒಳ್ಳೆಯ ಮಾತುಗಳನ್ನಾಡಿ.

ನಿಮ್ಮ ಮನೋಭಾವ ,ಆಲೋಚನೆಗಳನ್ನು ಹಂತ ,ಹಂತವಾಗಿ ಪ್ರತಿನಿತ್ಯ ಬದಲಿಸಿಕೊಳ್ಳಿ.ಪರಿಷ್ಕರಿಸಿಕೊಳ್ಳಿ.ಯಾರ ಕುರಿತೂ ಬಾಯಿಗೆ ಬಂದಂತೆ ಮಾತನಾಡ ಬೇಡಿ.ನಿಮ್ಮ ಮಾತಿಗೆ ಒಂದು ಮೌಲ್ಯವಿರಲಿ.ನಿಮ್ಮ ದೃಷ್ಟಿಕೋನವನ್ನು ವಿರೋಧಿಸುವವರ ಬಳಿ ವಾದ ಬೇಡ.ಪೂರ್ವ ಗ್ರಹ ಪೀಡಿತರಾಗದೆ  ಮುಕ್ತ ಮನಸ್ಸಿನಿಂದ ಎಲ್ಲವನ್ನು ಕೇಳಿಸಿಕೊಳ್ಳಿ.
ಬೇರೆಯವರ ಬಗ್ಗೆ ವಿಶ್ವಾಸ ವಿರಲಿ.ಅದೇ ವಿಶ್ವಾಸ ನಿಮಗೆ ಮರಳಿ ಬರುತ್ತದೆ ಎನ್ನುವ ನಂಬಿಕೆ ಇರಲಿ.ಯಾರನ್ನೂ ಅವಹೇಳನ ಮಾಡ ಬೇಡಿ .ಅವಮಾನಿಸಬೇಡಿ.ಹಾಗೆ ಮಾಡಲು ನೀವೂ ಸಹ ಕೆಳ ಮಟ್ಟಕ್ಕೆ ಇಳಿಯಬೇಕಾಗುತ್ತದೆ.

'ಒಬ್ಬರ ಜೊತೆ ಇನ್ನೊಬ್ಬರು ಸಂತಸದಿಂದ ಇರೋಣ .ಈ ಸಾಂಗತ್ಯ ಇಬ್ಬರನ್ನೂ ಆತ್ಮದ ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿ'ಎನ್ನುವ ಮನೋಭಾವವನ್ನು ಸದಾ ಕಾಪಾಡಿ ಕೊಳ್ಳಿ.ನಿಮ್ಮೊಳಗಿನ ಬುದ್ಧನ ಹಾರೈಕೆ ನಿಮ್ಮ ಪ್ರತಿ ಆಲೋಚನೆ,ನೀವು ಮಾಡುವ ಪ್ರತಿಯೊಂದು ಕೆಲಸ,ಪ್ರತಿ ಸಂಬಂಧವನ್ನೂ ಬೆಳಗುತ್ತದೆ.
(ಈ ಬರಹದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ  ತಿಳಿಸಿ.ನಮಸ್ಕಾರ)

26 comments:

 1. Nangu ishtavaytu..
  Moulyayuta lekhana..

  ReplyDelete
 2. ಪ್ರತಿಯೊಬ್ಬರೂ ಇಷ್ಟನ್ನು ಅನುಸರಿಸಿದರೆ ಸಾಕು ಭುವಿ ಸ್ವರ್ಗವಾಗುವುದರಲ್ಲಿ ಯಾವ ಸಂಶಯವೂ ಇಲ್ಲ.

  ReplyDelete
 3. "ಅಹಂ ಬ್ರಹ್ಮಾಸ್ಮಿ" ಅಂದರೆ ಇದೇ ಪರಿಕಲ್ಪನೆಯಲ್ಲವೇ?

  ReplyDelete
 4. ವಿಚಲಿತ ಅವರೆ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಜಗತ್ತು ಕನ್ನಡಿಯಂತೆ ಎನ್ನುತ್ತಾರೆ.ಬೇರೆಯವರಲ್ಲಿ ತಪ್ಪು ಕಂಡು ಹಿಡಿಯುವ ಮೊದಲು ನಮ್ಮ ಮನಸ್ಸನ್ನು ಸುಂದರವಾಗಿಸಿಕೊಳ್ಳೋಣ.ಅಲ್ಲವೇ?ನಮಸ್ಕಾರ.

  ReplyDelete
 5. ಉಷಾ ಅವರೆ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನೀವು ಹೇಳುವುದು ನೂರಕ್ಕೆ ನೂರು ಸತ್ಯ.ಆದರೆ ಸಮಸ್ಯೆ ಇರುವುದು ಇಲ್ಲಿಯೇ.ಪ್ರತಿಯೊಬ್ಬರೂ ಬೇರೊಬ್ಬರಲ್ಲಿಯೇ ತಪ್ಪು ಹುಡುಕುವುದರಲ್ಲಿ ತೊಡಗಿದ್ದೇವೆ.ನಮ್ಮ ಮನಸ್ಸನ್ನು ಸರಿ ಮಾಡಿಕೊಳ್ಳುವುದು ಯಾವಾಗ?ನಮಸ್ಕಾರ.

  ReplyDelete
 6. ಸುಬ್ರಮಣ್ಯ ಅವರೆ;ನಿಮ್ಮ ಪ್ರತಿಕ್ರಿಯೆಗೆಧನ್ಯವಾದಗಳು."ಅಹಂಬ್ರಹ್ಮ್ಮಾಸ್ಮಿ"ಎನ್ನುವುದರ ಸರಿಯಾದ ಅರ್ಥ ನನಗೆ ತಿಳಿದಂತೆ ಈ ರೀತಿ ಇದೆ.ನನ್ನಲ್ಲಿ ಮತ್ತು ಜಗತ್ತಿನ ಪ್ರತಿ ಜಡ ಮತ್ತು ಚೇತನ ವಸ್ತುವಿನಲ್ಲಿ ಇರುವುದು ಒಂದೇ ಬ್ರಹ್ಮ ವಸ್ತು,ಆದ್ದರಿಂದ ನಾನು ಬೇರೆಯಲ್ಲ ಜಗತ್ತು ಬೇರೆಯಲ್ಲ ಎನ್ನುವ ಭಾವವನ್ನು ಜೀವನದಲ್ಲಿ ಅಳವಡಿಸಿಕೊಂಡು ವಿನೀತ ಭಾವದಿಂದ ಜೀವನ ನಡೆಸುವುದು. ನಮಸ್ಕಾರ.

  ReplyDelete
 7. ರವಿಕಾಂತರವರಿಗೆ;ನಿಮ್ಮ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ನಮಸ್ಕಾರ.

  ReplyDelete
 8. ಸ್ವಾಮೀ, ನಮ್ಮ ಭಗವದ್ಗೀತೆಯ ಕೃಷ್ಣ ಬುದ್ಧಭಿಕ್ಷುವಿಗಿಂತಾ ಮೊದಲೇ ಸಾರಿದ ತತ್ವವಿದು. || ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ|| ಪ್ರತಿಯೊಂದು ಜೀವಿಯಲ್ಲೂ ನಾನು ವಾಸವಿದ್ದೇನೆ ಎನ್ನುತ್ತಾನೆ. ಕೃಷ್ಣ ಭಕ್ತರು ಎಲ್ಲದರಲ್ಲೂ ಕೃಷ್ಣನನ್ನೇ ಕಾಣುವುದಾದರೆ, ಭಗವಂತನ ಭಕ್ತರು ಎಲ್ಲೆಲ್ಲೂ ಭಗವಂತನ ಸಾನ್ನಿಧ್ಯವನ್ನೇ ಕಂಡರೆ ಆಗ ಅನಾಯಾಸವಾಗಿ ಜಗಳ-ದೊಂಬಿ, ಹಿಂಸೆ ಇವೆಲ್ಲಾ ಅಳಿದು ಜಗತ್ತು ಪುನಶ್ಚೇತನ ಪಡೆಯುತ್ತದೆ, ಅದೇ ಹೊಸ ಸತ್ಯಯುಗದ ಅರಂಭ, ಅದು ನಮ್ಮ ಈ ’ವೇಷ’ ದ ಕಾಲಘಟ್ಟದಲ್ಲಿ ಆಗುವಂಥದ್ದಲ್ಲ! ಆಗ ನಾವು ಯಾವ ವೇಷ ಧರಿಸಿರುತ್ತೇವೋ ಗೊತ್ತಿಲ್ಲ. ಹೀಗಾಗಿ ಯಾರೋ ಬುದ್ಧ ನಮ್ಮಲಿದ್ದಾನೆ ಎಂದು ಎಲ್ಲರೂ ಪರಸ್ಪರ ಗೌರವಾದರಗಳಿಂದ ನಡೆದಂತೇ ಪರಮಾತ್ಮ ಎಲ್ಲದರಲ್ಲೂ ಎಲ್ಲರಲ್ಲೂ ಅಡಗಿದ್ದಾನೆ, ಆತ ನಮಗೆ ಹತ್ತಿರದಲ್ಲಿದ್ದೂ ಕಾಣುತ್ತಿಲ್ಲ, ನಮ್ಮೊಳಗೇ ಇದ್ದು ಕೈಗೆ ಸಿಗುತ್ತಿಲ್ಲ ಎಂಬ ಪರಿಜ್ಞಾನ ಉಂಟಾದರೆ ಸಾಧನೆಗೆ, ಆತ್ಮೋದ್ಧಾರಕ್ಕೆ, ಉತ್ತಮ ಸಮಾಜ ನಿರ್ಮಾಣಕ್ಕೆ ಅದೇ ತಳಪಾಯವಾಗುತ್ತದೆ. ಅದು ಸಾಧ್ಯವಾಗಲಿ ಎಂದು ಹಾರೈಸುತ್ತೇನೆ. ಘಟನೆ ನಿಜಕ್ಕೂ ಆದರ್ಶವಾಗಿದೆ.

  ReplyDelete
 9. ಉತ್ತಮ ಮಾರ್ಗದರ್ಶಕ ಲೇಖನ ಸರ್, 'ನಮ್ಮೊಳಗಿನ ಬುದ್ಧ್ಹನನ್ನು ನಾವು ಗುರುತಿಸಿ ಕೊಂಡಾಗ ,ಆರೋಗ್ಯ ,ಸಂತಸ ಮತ್ತು ಸೌಹಾರ್ದಯುತ ಬದುಕು ನಮ್ಮದಾಗುತ್ತದೆ,' ಸತ್ಯವಾದ ಮಾತು. ಲೇಖನವನ್ನು ನಮ್ಮೊ೦ದಿಗೆ ಹ೦ಚಿಕೊ೦ಡ ನಿಮಗೆ ಅನೇಕ ಧನ್ಯವಾದಗಳು.

  ReplyDelete
 10. ಭಟ್ ಸರ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಭಗವತ್ಗೀತೆಯ ನುಡಿಗಳು ಸದಾ ಕಾಲಕ್ಕೂ ಸತ್ಯ.ಅದೇ ಸತ್ಯವನ್ನು ಬೇರೆ ಧರ್ಮಗಳೂ ಬೇರೆ ರೀತಿಯಲ್ಲಿ ಹೇಳಿರಬಹುದು.ಈ ಪ್ರಸಂಗದಲ್ಲಿ ಬರುವ ಕಥೆ ಮತ್ತು ಅದು ಹೇಳುವ ನೀತಿ ಅದ್ಭುತವಾಗಿರುವುದರಿಂದ ಬ್ಲಾಗಿನಲ್ಲಿ ಹಾಕಿದ್ದೇನೆ.ನಿಮಗೂ ಇಷ್ಟವಾಗಿದೆ ಎನಿಸುತ್ತದೆ.ಬರುತ್ತಿರಿ.ನಮಸ್ಕಾರ.

  ReplyDelete
 11. ಪ್ರಭಾಮಣಿ ಮೇಡಂ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಇಂತಹ ಅನೇಕ ಮಾರ್ಗದರ್ಶಕ ಲೇಖನಗಳನ್ನು ನಿಮ್ಮ ಬ್ಲಾಗಿನಲ್ಲಿ ನೀವು ಪ್ರಕಟಿಸುತ್ತಿದ್ದೀರಿ.ನಿಮ್ಮ ಬರವಣಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರಲಿ ಎಂದು ಹಾರೈಸುತ್ತೇನೆ.ನಮಸ್ಕಾರ.

  ReplyDelete
 12. chennagide sir... thumba moulyayutavaagide lekhana....

  ReplyDelete
 13. Baraha chennagide... jeevanadalli alavadisikollalu sadhyavaadare santhosha guarantee

  ReplyDelete
 14. ಗಿರೀಶ್;ನನಗೆ ಇಷ್ಟವಾದ ಲೇಖನ ನಿಮಗೂ ಹಿಡಿಸಿದ್ದು ಸಂತೋಷ.ಮೂಲ ಲೇಖಕರಿಗೆ ಧನ್ಯವಾದಗಳನ್ನು ಸಲ್ಲಿಸೋಣ.ನಮಸ್ಕಾರ.

  ReplyDelete
 15. ಭಾಶೆ ಯವರೇ;ನಮ್ಮ ಮನಸ್ಸೇ ಆನಂದ ಅಥವಾ ದುಃಖದ ಮೂಲ ಎಂದು ಒಳ್ಳೆಯ ಉದಾಹರಣೆಯೊಂದಿಗೆ ತಿಳಿಸಿರುವ ಮೂಲ ಲೇಖಕರಿಗೆ ನಮನಗಳು.ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 16. ತುಂಬಾ ಅವಶ್ಯಕ ವಿಚಾರಧಾರೆ ಜೇವನದಲ್ಲಿ ಅಳವಡಿಸಲು.

  ReplyDelete
 17. ಸೀತಾರಾಂ ಸರ್;ನಿಮ್ಮ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

  ReplyDelete
 18. ಪರಸ್ಪರ ಗೌರವಿಸುವುದರಲ್ಲೇ ಭಗವತ್ ದರ್ಶನ. ಆ ಮೂಲಕ ಸ್ವತಃ ನಮ್ಮ ದೈಹಿಕ, ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಪರಿಪಾಟ ಬೆಳೆಸಿಕೊಳ್ಳುವಂತೆ ಪ್ರೇರೇಪಿಸಿದ್ದಕ್ಕಾಗಿ ಧನ್ಯವಾದಗಳು ಡಾಕ್ಟ್ರೇ.

  ReplyDelete
 19. ಬದರಿ;ನೀವು ಲೇಖನ ಇಷ್ಟಪಟ್ಟಿದ್ದು ಸಂತೋಷ.ಇಂತಹ ಒಳ್ಳೆಯ ಬರಹವನ್ನು ಕೊಟ್ಟ ಮೂಲ ಲೇಖಕರಿಗೆ ಧನ್ಯವಾದಗಳನ್ನು ಅರ್ಪಿಸೋಣ.ಅಲ್ಲವೇ?

  ReplyDelete
 20. Dr, tumbaa ishta aytu baraha, idara eshto saalugalu namge anvayisuttave,

  sadaa bereyavara tappanne hudukuva namma manassige nammalle iruva buddana sakhsstkaara aagabekide,

  sundara baraha

  ReplyDelete
 21. ಗುರು ಸರ್;ಬರಹ ನಿಮಗೆ ಇಷ್ಟವಾದದ್ದು ಸಂತೋಷವಾಯಿತು.ಬೇರೆಯವರ ಬಗ್ಗೆ ನಮ್ಮ ಮನಸ್ಸಿನಲ್ಲಿ ಒಳ್ಳೆಯ ಅಭಿಪ್ರಾಯವಿರದಿದ್ದರೆ ಅವರಿಗೂ ನಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವಿರುವುದಿಲ್ಲ ಎನ್ನುವುದನ್ನು ತಿಳಿದುಕೊಳ್ಳುವುದು ಒಳ್ಳೆಯದು.ಆದ್ದರಿಂದ ಬೇರೆಯವರ ಬಗ್ಗೆ ಯಾವುದೇ ಪೂರ್ವಾಗ್ರಹವಿಲ್ಲದೆ ವ್ಯವಹರಿಸುವುದನ್ನು ರೂಢಿಸಿಕೊಳ್ಳುವುದು ಒಳ್ಳೆಯದಲ್ಲವೇ?ನಮಸ್ಕಾರ.

  ReplyDelete
 22. idannu sariyaagi artha maaDikonDavara baaLu svarga anisatte sir...
  tumbaa sundara baraha...
  nammoDane hanchikonDiddakke dhanyavaada...

  tumbaa dhanyavaada...

  ReplyDelete
 23. ದಿನಕರ್;ಹುಟ್ಟು ಹಬ್ಬದ ಶುಭಾಶಯಗಳು.ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 24. ಡಾಕ್ಟ್ರೇ, ಬಿಡುವಿಲ್ಲದ ಕಾರಣ ಪತ್ರಿಕೆಯಲ್ಲೂ ಇದನ್ನು ಓದಿರಲಿಲ್ಲ. ಈಗ ನಿಮ್ಮ ಬ್ಲಾಗಿನಲ್ಲಿ ಓದಿದೆ. ನಮ್ಮೊಳಗಿರುವ ಬುದ್ದನನ್ನು ಗುರುತಿಸಿಕೊಳ್ಳಲು ಇದು ಒಳ್ಳೆಯ ಲೇಖನ. ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್.

  ReplyDelete
 25. ಶಿವು;ನಿಮ್ಮ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.

  ReplyDelete