ಕಡ್ಡಿಯನ್ನು ಗುಡ್ಡ ಮಾಡಿ
ಗುಡ್ಡವನ್ನು ವೃಥಾ
ಅಗೆದದ್ದೇ,ಅಗೆದದ್ದು!
ನೆಮ್ಮದಿಯ ಸಿಹಿನೀರಾಗಲೀ
ಅರಿವಿನ ಊಟೆಯಾಗಲೀ
ದಕ್ಕಿತೇ ದಣಿವು ನೀಗಲು?
ಬದಲಿಗೆ ಸಂಚಯ
ರಾಶಿ ರಾಶಿ,ಗುಡ್ಡೆ ಗುಡ್ಡೆ
ವ್ಯರ್ಥ ಚಿಂತೆಯ ಮಣ್ಣು!
ನಿದ್ದೆ ಬಾರದೆ ಅಳುವ
ತೊಟ್ಟಿಲಿನ ಕೂಸನ್ನು
ಗಂಟೆಗಟ್ಟಲೆ
ತೂಗಿದ್ದೇ ,ತೂಗಿದ್ದು !
ತೊಡೆಗೆ ಬಂದೊಡನೇ
ಮಗುವಿಗೆ ಸವಿ ನಿದ್ದೆ!
ಸಾಗರದಲೆಗಳಂತೆ ಭೋರ್ಗರೆದ
ತಿಂಗಳುಗಟ್ಟಲೆಯ
ಚಿಂತೆಯ ಮೊರೆತ
ನೀರಿನ ಆವಿಯಂತೆ
ಕ್ಷಣ ಒಂದರಲೇ ಮಾಯ!
ಕಾಯಬೇಕು ಆ ಸಮಯಕ್ಕೆ!
ಒಂಬತ್ತು ತಿಂಗಳ ನರಳಿಕೆಯ
ಸುಖಪ್ರಸವದ ಸುಮುಹೂರ್ತಕ್ಕೆ!
ಸಮಯ ಬಂದಾಗ..........,
ಎಲ್ಲವೂ ಸುಸೂತ್ರ!!
ಗುಡ್ಡವನ್ನು ವೃಥಾ
ಅಗೆದದ್ದೇ,ಅಗೆದದ್ದು!
ನೆಮ್ಮದಿಯ ಸಿಹಿನೀರಾಗಲೀ
ಅರಿವಿನ ಊಟೆಯಾಗಲೀ
ದಕ್ಕಿತೇ ದಣಿವು ನೀಗಲು?
ಬದಲಿಗೆ ಸಂಚಯ
ರಾಶಿ ರಾಶಿ,ಗುಡ್ಡೆ ಗುಡ್ಡೆ
ವ್ಯರ್ಥ ಚಿಂತೆಯ ಮಣ್ಣು!
ನಿದ್ದೆ ಬಾರದೆ ಅಳುವ
ತೊಟ್ಟಿಲಿನ ಕೂಸನ್ನು
ಗಂಟೆಗಟ್ಟಲೆ
ತೂಗಿದ್ದೇ ,ತೂಗಿದ್ದು !
ತೊಡೆಗೆ ಬಂದೊಡನೇ
ಮಗುವಿಗೆ ಸವಿ ನಿದ್ದೆ!
ಸಾಗರದಲೆಗಳಂತೆ ಭೋರ್ಗರೆದ
ತಿಂಗಳುಗಟ್ಟಲೆಯ
ಚಿಂತೆಯ ಮೊರೆತ
ನೀರಿನ ಆವಿಯಂತೆ
ಕ್ಷಣ ಒಂದರಲೇ ಮಾಯ!
ಕಾಯಬೇಕು ಆ ಸಮಯಕ್ಕೆ!
ಒಂಬತ್ತು ತಿಂಗಳ ನರಳಿಕೆಯ
ಸುಖಪ್ರಸವದ ಸುಮುಹೂರ್ತಕ್ಕೆ!
ಸಮಯ ಬಂದಾಗ..........,
ಎಲ್ಲವೂ ಸುಸೂತ್ರ!!
ತುಂಬ ಅರ್ಥಗರ್ಭಿತ ಕವನವಿದು. ಹೌದಲ್ಲ ಕಡ್ಡಿಯನ್ನೇ ಗುಡ್ಡ ಮಾಡಿ ನಾವು ಹಲಬುತ್ತಾ ಕೂರುತ್ತೇವೆ. ಆ ಗಳಿಗೆ ಬರುವ ವರೆಗೂ ಗರ್ಭವೂ ಚಿಂತೆಯ ಭಾರವೇ. ಮಗುವಿಗೆ ಮಡಿಲೇ ಉಯ್ಯಾಲೆ. ಬಿರುಗಾಳಿಯಂತೆ ಕಾಡೋ ಎಂಥಾ ಚಿಂತೆಯೂ ವಿಮೋಚನೆ ಗಳಿಗೆ ಬಂದಾಗ ಫಟಾಪಂಚಲು!
ReplyDeleteಪದ ಪೋಣಿಕೆಯಲ್ಲೂ ಲಯವಿದೆ.
ಕವಿತೆಗೆ ಭೂಷಣದಂತಿದೆ ಶೀರ್ಷಿಕೆ ಡಾಕ್ಟ್ರೇ, ಸೂಪರ್ ಸಿಕ್ಸರ್ ಹೊಡೆದ್ದೀರಾ!
many times we make negligible aspects as blunders, this is true. we realize it later but some times it sounds like late for the confession. meanwhile, we wait for other person should come and initiate the apology. really, the time makes difference and time brings the solution.
ReplyDeleteNice lines sir, Thank you.
Beautiful poem!
ReplyDeleteಹೌದು ಕಾಯಬೇಕು ಆ ಸಮಯಕ್ಕೆ...............
ReplyDeleteSUKHAPRASAVA- SUMUHURTHA, AATMA TANNAGAGALU BEKINNENU?10 RINDA 15 NE SAALINAVAREGE K.S.NARASIMHASWAMY YAVARA SMARANE AAYITU.
ReplyDeleteSUKHAPRASAVA- SUMUHURTHA, AATMA TANNAGAGALU BEKINNENU?10 RINDA 15 NE SAALINAVAREGE K.S.NARASIMHASWAMY YAVARA SMARANE AAYITU.
ReplyDeleteಒಳ್ಳೆಯ ಕವಿತೆ ಸರ್ ಚೆನ್ನಾಗಿದೆ. ಚಿಕ್ಕ ಚಿಕ್ಕ ವಿಚಾರಗಳನ್ನು ಬೆಟ್ಟ ಮಾಡಿಕೊಂಡು ವ್ಯರ್ಥ ಪ್ರಲಾಪ ಮಾಡಿಕೊಂಡು ಪರದಾಡುವ ಜೀವನದ ಒಂದು ಮುಖದ ಪರಿಚಯ ಚೆನ್ನಾಗಿದೆ.ನಿಮಗೆ ಧನ್ಯವಾದಗಳು.
ReplyDeleteಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
Beautiful lines.
ReplyDeleteSwarna
ಬಹಳ ಚನ್ನಾಗಿದೆ...ಕವನ (ಕವಿತೆ) ನನಗೂ ಕಂಫ್ಯೂಶನ್ನು ಸೀತಾರಾಂ ಬಜ್ ನಲ್ಲಿ ಹಾಕಿದಂದಿನಿಂದ...ಹಹಹ..
ReplyDeleteನಿಮ್ಮ ಭಾವ ಪ್ರಕಟದ ಸಾಲುಗಳು
ನಿದ್ದೆ ಬಾರದೆ ಅಳುವ
ತೊಟ್ಟಿಲಿನ ಕೂಸನ್ನು
ಗಂಟೆಗಟ್ಟಲೆ
ತೂಗಿದ್ದೇ ,ತೂಗಿದ್ದು !
ತೊಡೆಗೆ ಬಂದೊಡನೇ
ಮಗುವಿಗೆ ಸವಿ ನಿದ್ದೆ!
ಇವು ಇಷ್ಟವಾದವು...ಮಮತೆಯ ಬಿಸಿ, ಹೃದಯಬಡಿತದ ಜೋಗುಳ ಮಗುವಿನ ನಿದ್ದೆಗೆ ಕಾರಣ ಇರಬಹುದಲ್ಲಾ....
chendada kavana. arthavattaagi pada ponike asaamanyavadudu
ReplyDelete