Sunday, December 4, 2011

"ಧ್ಯಾನದಲ್ಲಿ ಫ್ಲಶ್ ಮಾಡಿ!" ( Flush Meditatively ! )

ಎರಡು ವರ್ಷಗಳ ಹಿಂದೆ ಬೆಂಗಳೂರಿನ ಚಿತ್ರ ಕಲಾ ಪರಿಷತ್ ಗೆ ಹೋಗಿದ್ದೆ.ಅಲ್ಲೊಂದು ಚಿತ್ರಕಲಾ ಪ್ರದರ್ಶನ ನೋಡಿಕೊಂಡು ವಾಪಸ್ ಬರುತ್ತಿದ್ದಾಗ ಅಲ್ಲೇ 'ಓಶೋ ಮೆಡಿಟೇಶನ್ ಸೆಂಟರ್'ಎನ್ನುವ ಬೋರ್ಡ್ ಕಾಣಿಸಿತು.ಸರಿ,ಒಮ್ಮೆ ನೋಡಿಕೊಂಡು ಬರೋಣ ಎಂದು ಒಳ ಹೊಕ್ಕೆ.ಅದನ್ನು ನೋಡಿಕೊಳ್ಳುತ್ತಿದ್ದ ಸುಮಾರು ಎಂಬತ್ತು ವರ್ಷಗಳ ವಯೋ ವೃದ್ಧರ ಮುಖದಲ್ಲಿ ಅಪೂರ್ವ ಕಾಂತಿ ಇತ್ತು.ಅವರು ಆಚಾರ್ಯ ರಜನೀಶರಿಗೆ ಬಹಳ ಆಪ್ತರಾಗಿದ್ದವರು.ಹತ್ತಿರದಿಂದ ಬಲ್ಲವರು.ಬೆಂಗಳೂರಿನ ಸೆಂಟರ್ ಅನ್ನು ಸುಮಾರು ಮೂವತ್ತು ವರ್ಷಗಳಿಂದ ಅವರೇ ನೋಡಿಕೊಳ್ಳುತ್ತಿದ್ದಾರೆ .ಅವರ ನಡವಳಿಕೆಯಲ್ಲಿ ಒಂದು ವಿಶಿಷ್ಟ ರೀತಿಯ ಸೌಮ್ಯತೆ ಇತ್ತು .ಅಲ್ಲಿದ್ದ ಲೈಬ್ರರಿಯಲ್ಲಿ ಕೆಲ ಪುಸ್ತಕಗಳನ್ನು ಖರೀದಿಸಿದೆ.ಅಲ್ಲೇ ಇದ್ದ ಧ್ಯಾನ ಮಂದಿರದಲ್ಲಿ ಕುಳಿತು ಧ್ಯಾನ ಮಾಡಿದಾಗ ಮನಸ್ಸಿಗೆ  ಯಾವುದೋ ಅಲೌಕಿಕ ಆನಂದದ ಅನುಭೂತಿಯಾಯಿತು.ಅಲ್ಲಿದ್ದ ಪ್ರಶಾಂತ ವಾತಾವರಣ ವಿಶಿಷ್ಟವೆನಿಸಿತ್ತು.ಅಲ್ಲೇ ಹಿಂದೆ ಇದ್ದ ಟಾಯ್ಲೆಟ್ಟಿಗೆ ಹೋದೆ.ಅಲ್ಲಿ ಫ್ಲಷ್ ಮಾಡುವ ಜಾಗದಲ್ಲಿ 'FLUSH  MEDITATIVELY ' ಎನ್ನುವ ಬೋರ್ಡ್ ಇತ್ತು! 
ಕುತೂಹಲದಿಂದ ಅಲ್ಲಿಯ ಮೇಲ್ವಿಚಾರಕರಲ್ಲಿ  ಅದರ ಪ್ರಸ್ತಾಪ ಮಾಡಿದೆ.ಅದಕ್ಕೆ ಅವರು ನಗುತ್ತ ಕೊಟ್ಟ ಉತ್ತರ ಬಹಳ ಅರ್ಥ ಪೂರ್ಣವಾಗಿತ್ತು.'ನೀವು ಏನೋ ಯೋಚನೆ ಮಾಡುತ್ತಾ ಜೋರಾಗಿ flush ಮಾಡಿದರೆ ಅದರ ಹಿಡಿಯೇ ಕಿತ್ತು ಹೋಗಬಹುದು.ಧ್ಯಾನದಲ್ಲಿ ಇರುವುದು ಎಂದರೆ ಸಂಪೂರ್ಣ ಎಚ್ಚರದಲ್ಲಿ ಇರುವುದು ಎಂದರ್ಥ.ನೀವು ಯಾವುದೇ ಕೆಲಸ ಮಾಡುವಾಗ ಸಂಪೂರ್ಣ ಎಚ್ಚರದ ಸ್ಥಿತಿಯಲ್ಲಿ ಇರಿ ಎನ್ನುವುದನ್ನು ನೆನಪಿಸುವುದಕ್ಕೆ ಆ ರೀತಿ ಬೋರ್ಡ್ ಹಾಕಿದ್ದೇವೆ. ಧ್ಯಾನದ ಸ್ಥಿತಿಯಲ್ಲಿ ನಿಮ್ಮ ಮನಸ್ಸಿನಲ್ಲಿರುವ ಚಿಂತೆ ಮತ್ತು ಕೆಟ್ಟ ಆಲೋಚನೆಗಳನ್ನೂ flush ಮಾಡಿ 'ಎಂದು ಮಾರ್ಮಿಕವಾಗಿ ನಕ್ಕರು ! ಅವರ ಅರ್ಥ ಪೂರ್ಣ ಮಾತುಗಳ ಬಗ್ಗೆ ಯೋಚಿಸುತ್ತಾ ಮನೆಯ ದಾರಿ ಹಿಡಿದೆ.

32 comments:

  1. ಡಾಕ್ಟರ್ ಸರ್ ಚೆನ್ನಾಗಿದೆ. ಇನ್ನು ಮೇಲೆ ಫ್ಲಶ್ ಮಾಡುವಾಗಲೆಲ್ಲ ಈ ವಿಚಾರ ನೆನಪಾಗಬಹುದು..!!

    ReplyDelete
  2. ಹೌದು ಸರ್ ನಿಮ್ಮ ಲೇಖನದ ಆಶಯ ಸರಿಯಾಗಿದೆ. ಇದನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ನಮಗಿರಬೇಕು ಅಷ್ಟೇ. [ನಿಮ್ಮೊಳಗೊಬ್ಬಬಾಲು. ]

    ReplyDelete
  3. ಅದು ಅವರು ಹೊಸದಾಗಿ ಕಂಡುಹಿಡಿದ್ದಲ್ಲ, ಸನಾತನ ಪರಂಪರೆಯೇ ಅದನ್ನು ಸಾರುತ್ತಾ ಬಂದಿದೆ. ನಾನೊ ಅದನ್ನು ನನ್ನ ಹಲವು ಪ್ರಬಂಧಗಳಲ್ಲಿ ಹೇಳಿದ್ದೇನೆ. ’ಶರೀರದ ಸ್ವಚ್ಛತೆಗೆ ಸ್ನಾನಮಾಡುವಂತೇ ಮನಸ್ಸಿನ ಸ್ವಚ್ಛತೆಗೆ ಧ್ಯಾನಮಾಡಿ” ಎನ್ನುತ್ತಾ ಬಂದಿದ್ದೇನೆ. ತಮಗೆ ಅಲ್ಲ ಹೊಸ ಶಬ್ದ ಪ್ರಯೋಗ ಕಾಣಿಸಿದಾಗ ತಾವು ಚಕಿತರಾಗಿರಬಹುದು. ಓಶೋ ನನ್ನ ಪ್ರಕಾರ ಸ್ಥಿತಪ್ರಜ್ಞರಲ್ಲ, ಅವರು ಹೊಸ ಆವಿಷ್ಕಾರವನ್ನು ಮಾಡಲು ಹೊರಟು ಗುರಿ ತಲುಪದೇ ಇದ್ದವರು. ಗುರಿ ತಲುಪಿದ ಸ್ವಾಮೀ ರಾಮಬರೆದ ’ದಿ ಗ್ತೇಟ್ ಸೇಂಟ್ಸ್ ಆಫ್ ಹಿಮಾಲಯ’ಇಂತಹ ಪುಸ್ತಕಗಳಲ್ಲಿ ತಾವು ಓದಿದ್ದನ್ನು ಉದಹರಿಸಿದರೆ ಬಹಳ ಜನರಿಗೆ ಅದು ಅನುಭವಕ್ಕೆ ನಿಲುಕುತ್ತದೆ. ನಿರೂಪಣೆ ಚೆನ್ನಾಗಿದೆ, ಧನ್ಯವಾದಗಳು.

    ReplyDelete
  4. nice way of educating people.
    no doubt, meditation calms the mind and increases the inner strength.

    ReplyDelete
  5. @ವಿ.ಆರ್.ಭಟ್
    pl provide more info on that particular book. I could not find that title from Swamy Rama!

    ReplyDelete
  6. @ಕೃಷ್ಣ ಭಟ್ಟ: Normally I won't comeback once after commenting, fortunately while pressing other tab I had selected http://dtkmurthy.blogspot.com & happened to revisit, pls refer : Living with the Himalayan Masters (ISBN 0893891568).

    ReplyDelete
  7. ಚೆನ್ನಾಗಿದೆ. ಯಾವುದೇ ಪರಿಸರದಲ್ಲಿ/ಸನ್ನಿವೇಶದಲ್ಲಿ ಕೂಡ ಮನಸಿಗೆ ತರಬೇತಿ ಕೊಡಲು ಲಿಂಕ್'ಗಳು ಸಿಗುತ್ತವೆ ಅಲ್ಲವೇ?..ಅದನ್ನು ಕಾಣುವ/ಗೃಹಿಸುವ ಅಂತ:ಚಕ್ಷು ಮಾತ್ರ ಬೇಕು..ಅದು ಧ್ಯಾನದೆಡೆಗೆ ನಿರಂತರ ತುಡಿತದಿಂದ ಮಾತ್ರ ಸಾಧ್ಯವೇನೋ.

    ReplyDelete
  8. ಉಮೇಶ್ ದೇಸಾಯ್ ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  9. ಬಾಲೂ ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.ಧ್ಯಾನ ಎನ್ನುವುದು ಪ್ರತಿ ಕ್ಷಣವೂ ಪ್ರತಿ ಕಾರ್ಯದಲ್ಲೂ ನಡೆಯುತ್ತಿರಬೇಕು ಎನ್ನುವುದನ್ನು ನೆನಪಿಸುವ ಮಾರ್ಗದರ್ಶಿ ಘಟನೆ ಇದಾದ್ದರಿಂದ ಇದನ್ನು ಬ್ಲಾಗಿಸಿದ್ದೇನೆ.ನಾವೆಲ್ಲಾ ಆಗಾಗ ನೆನಪು ಮಾಡಿಕೊಳ್ಳಬೇಕಾದ ವಿಷಯ ಇದು.ನಮಸ್ಕಾರ.

    ReplyDelete
  10. ಭಟ್ ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.ಇಲ್ಲಿ ಯಾವುದೂ ಹೊಸದಲ್ಲ.ನೀವಾಗಲೀ ನಾನಾಗಲೀ ಹೇಳಿದ ವಿಚಾರಗಳು ಹಿಂದೆ ಯಾರೋ ಹೇಳಿದ ವಿಚಾರಗಳೆ.ಆದರೆ ಹೇಳುವ ರೀತಿ ವಿಶಿಷ್ಟವಾಗಿರುತ್ತದೆ.ಓಶೋ ಬಗ್ಗೆ ನಿಮ್ಮ ಅಭಿಪ್ರಾಯದ ಬಗ್ಗೆ ನನ್ನ ಸಹಮತಿ ಇಲ್ಲ.ಅವರ ವಿಸ್ತ್ರುತ ಜ್ಞಾನ ಮತ್ತು ವಿಚಾರ ಧಾರೆ ಅದ್ಭುತ.ಅವರನ್ನು ತಪ್ಪಾಗಿ ತಿಳಿದವರೇ ಹೆಚ್ಚು.ನನಗೂ ಕೂಡ ಮೊದಲು ಅವರ ಬಗ್ಗೆ ಪೂರ್ವಾಗ್ರಹ ಇತ್ತು.ಆದರೆ ಅವರ ಪುಸ್ತಕಳನ್ನು ಆಳವಾಗಿ ಅಭ್ಯಾಸ ಮಾಡಿದ ನಂತರ ಅಭಿಪ್ರಾಯ ಬದಲಾಗಿದೆ.ಅವರ ಬಗ್ಗೆ ಮಾತನಾಡುವ ಮೊದಲು ಅವರ ಸುಮಾರು ಎಂಟು ನೂರರಷ್ಟು ಪುಸ್ತಕಗಳನ್ನೂ ಓದಿ ನಂತರ ಮಾತನಾಡೋಣ.ನಮಸ್ಕಾರ.

    ReplyDelete
  11. ಡಾಕ್ಟ್ರೆ...

    ಎಲ್ಲವೂ ಹಾಗೆನೇ..
    ನಮಗೆ ಗೊತ್ತಿರುವ ವಿಷಯಗಳನ್ನೇ ಹೊಸ ರೀತಿಯಲ್ಲಿ ಹೇಳಿದರೆ ಖುಷಿಯಾಗುತ್ತದೆ..
    ಹೊಸತು ಎನ್ನಿಸುತ್ತದೆ..

    ನೀವು ಹೇಳಿದ ವಿಷಯ ನನಗಂತೂ ಹೊಸದು..

    ದೇಸಾಯಿ ಸಾಹೇಬರು ಹೇಳಿದ ಹಾಗೆ ಫ್ಲಷ್ ಮಾಡುವಾಗಲೆಲ್ಲ ನಿಮ್ಮ ಈ ಲೇಖನದ ನೆನಪು ಬರುತ್ತದೆ..

    ಹೊಸ ವಿಚಾರವೊಂದನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು..

    ReplyDelete
  12. ಕೃಷ್ಣ ಭಟ್ ;ಪ್ರತಿಕ್ರಿಯೆಗೆ ಧನ್ಯವಾದಗಳು.ಓಶೋ ಅವರ full circle publication ನ'osho meditation series' ಓದಿ.ಹನ್ನೆರಡು volumes ಇವೆ.ಒಂದಕ್ಕೆ ಎಂಬತ್ತು ರುಪಾಯಿಗಳು.ತುಂಬಾ ಅದ್ನ್ಹುತ ಪುಸ್ತಕಗಳು.ನಮಸ್ಕಾರ.

    ReplyDelete
  13. ನಾರಾಯಣ್ ಭಟ್ ಸರ್;ನೀವು ಹೇಳಿರುವುದು ಸರಿ.ಧ್ಯಾನದಲ್ಲಿರುವುದು ಎಂದರೆ ಸದಾ ಎಚ್ಚರಿಕೆಯಲ್ಲಿ,ವರ್ತಮಾನದಲ್ಲಿರುವುದು.ಅದು ಕಷ್ಟ.ಆದರೆ ಅಸಾಧ್ಯವೇನಲ್ಲ.ಅಲ್ಲವೇ?ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  14. ಪ್ರಕಾಶಣ್ಣ;ನಾನು ಈವರೆಗೆ ಎಲ್ಲೂ ಫ್ಲಶ್ ಮಾಡುವ ಜಾಗದಲ್ಲಿ ಆ ರೀತಿ ಬರೆದಿರುವುದನ್ನು ನೋಡಿಲ್ಲ.ಹೊಸ ವಿಚಾರ.ನಿಮ್ಮೊಂದಿಗೆ ಹಂಚಿಕೊಳ್ಳ ಬೇಕಿನಿಸಿತು.ಕೆಲವರಿಗೆ ಇದರಲ್ಲಿ ವಿಶೇಷವೇನಿದೆ ಅನಿಸಬಹುದು.ಅದು ಅವರ ಅನಿಸಿಕೆ.ಆದರೆ ನನ್ನಂತಹ ಕೆಲವರಿಗೆ ಇದರಲ್ಲೂ ಕಲಿಯಬೇಕಾದ್ದು ಇದೆ ಅನಿಸಬಹುದಲ್ಲವೇ? ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  15. ನಿದ್ರೆಯಲ್ಲಿ ಮನಸು ಹೇಗೆ ಕನಸಿನ ಮೂಲಕ ಬೇಡದ ವಿಚಾರಗಳನ್ನು flush ಮಾಡಿ, ನಮಗೆ ಬೇಕಾದ ವಿಚಾರಗಳನ್ನು ಮೆದುಳು ಒಪ್ಪ ಮಾಡುತ್ತದೋ, ಅದೇ flush ಅನ್ನು ಜಾಗೃತ ಸ್ಥಿತಿಯಲ್ಲಿ ಸಿದ್ಧಿಸಿಕೊಳ್ಳ ಬಹುದು. ಇದು ನನಗೂ ಈ ಪ್ರಬುದ್ಧ ಲೇಖನದಿಂದ ಅರಿವಾಯ್ತು.

    ಓಶೋ ಪರ ವಿರೋಧಿ ಚರ್ಚೆಗಳಿಗೆ ಇದು ವೇದಿಕೆಯಾಗ ಬಾರದು. ಒಳ್ಳೆಯ ವಿಚಾರಗಳು ಎಲ್ಲಿಂದ ಬಂದರೂ ಅದನ್ನು ವಿಶ್ಲೇಷಿಸಿ ಸ್ವೀಕರಿಸಬೇಕೆ ಹೊರತು, ಅದರ ಮೂಲವನ್ನು ಕೆದಕುತ್ತಾ ಕೂರ ಬಾರದು. ಓಶೋ ತುಂಬಾ ಓದಿಕೊಂಡವರು. ಅವರು ಜಗತ್ತಿನ ಙ್ಞಾನ ಮೂಲಗಳನ್ನು ಅರ್ಥೈಸಿಕೊಂಡವರು. ಅದನ್ನೆಲ್ಲ ಕ್ರೋಢೀಕರಿಸಿ ಪುಸ್ತಕ ಮತ್ತು ದ್ವನಿ ಮುಖೇನ ಇಂದಿಗೂ ಪ್ರಚಲಿತದಲಿ ಇಟ್ಟವರು.

    ಪ್ರತಿ ಗುರುವು ಸ್ವಯಂಭು ಗುರುವಾಗಲು ಸಾಧ್ಯವೇ ಇಲ್ಲ. ಆತನದೂ ನಿರಂತರ ಶಿಷ್ಯ ವೃತ್ತಿ. ತಾನು ಗ್ರಹಿಸಿದ, ಕಲಿತ ಅಥವಾ ಓದಿಕೊಂಡ ಙ್ಞಾನವನ್ನು ಆತ ಹಂಚಲು ಕೂರುತ್ತಾನೆ. ಹಲವು ಮೂಲಗಳಿಂದ ನಾವು ಓದಿಕೊಳ್ಳಲಾರದ ಙ್ಞಾನವನ್ನು ಆತ ಶುದ್ಧೀಕರಿಸಿ ನಮಗೆ ಗುಕ್ಕು ನೀಡುತ್ತಾ ಹೋಗುತ್ತಾನೆ.

    ಬೋಧನೆಯಲಿ ಸತ್ವವಿಲ್ಲದಿದ್ದರೆ ಅದು ಬೇಗನೆ ಅಪ್ರಸ್ತುತವಾಗಿ ನಶಿಸಿ ಹೋಗುತ್ತದೆ. ಪೊಳ್ಳು ಮಾರಿಕೊಳ್ಳುವ ಡೋಂಗಿ ಗುರುಗಳ ಮದ್ಯೆ ತೀರಿಕೊಂಡು ದಶಕಗಳು ಕಳೆದರೂ ಇನ್ನೂ ಪ್ರಸ್ತುತದಲ್ಲೇ ಉಳಿಯಲು ಅವರಲ್ಲೇನೋ ಗಟ್ಟಿ ಮಾಲು ಇರಬೇಕಲ್ಲವೇ!

    ReplyDelete
  16. ಗೀತೆಯಲ್ಲಿನ ಶ್ಲೋಕಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕೇ ವಿನಃ, ಯುದ್ಧ ಭೂಮಿಯಲ್ಲಿ ಎಲ್ಲ ಕೆಲಸ ಬಿಟ್ಟು ಶ್ರೀಕೃಷ್ಣ ಪರಮಾತ್ಮನು ಗೀತಾಮೃತ ಏಕೆ ಬೋಧಿಸಿಕೊಂಡು ಕೂತರು ಎಂದು ಕ್ಯಾತೆ ತೆಗೆದರೆ, ವಾದಕ್ಕೆ ಬೀಳುವುದೇ ವ್ಯರ್ಥ!

    ReplyDelete
  17. ಡಾಕ್ಟರೇ,
    ಕೇವಲ ದೈಹಿಕ ವ್ಯಾಧಿಗಳಿಗೆ ಮದ್ದು ನೀಡುವದಲ್ಲದೆ, ಮಾನಸಿಕ ಹಾಗು ಆಧ್ಯಾತ್ಮಿಕ ವ್ಯಾಧಿಗಳಿಗೂ, ನಿಮ್ಮ ಲೇಖನಗಳ ಮೂಲಕ ಮದ್ದು ನೀಡುವದು ನಿಮ್ಮ ವೈಶಿಷ್ಟ್ಯವಾಗಿದೆ. ಮನಸ್ಸಿನಲ್ಲಿಯ ಅಪ್ರಬುದ್ಧ ವಿಚಾರಗಳನ್ನು ಧ್ಯಾನದ ಮೂಲಕ ನಿವಾರಿಸಿಕೊಳ್ಳಬೇಕು ಎನ್ನುವ ಓಶೋ ಸಲಹೆಯಿಂದ ನನಗೆ ಹೊಸ ಬೆಳಕು ಕಂಡಂತಾಯಿತು. ನಿಮಗೆ ಧನ್ಯವಾದಗಳು.

    ReplyDelete
  18. ಬದರಿ;ಅಜ್ಞಾನದ ಅಂಧಕಾರವನ್ನು ದೂರಾಗಿಸುವ ಯಾವುದೇ ಜ್ಞಾನದ ಜ್ಯೋತಿಯನ್ನು ಸ್ವಾಗತಿಸೋಣ.ಧನ್ಯವಾದಗಳು.

    ReplyDelete
  19. ಸುನಾತ್ ಕಾಕ;ಎಲ್ಲಾ ತಮ್ಮಂತಹ ಹಿರಿಯರ ಆಶೀರ್ವಾದ.ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  20. arthapurNa maatugalu sir......
    thank you for sharing......

    ReplyDelete
  21. ದಿನಕರ್;ಪ್ರತಿಕ್ರಿಕ್ರಿಯೆಗೆ ಧ್ಯಾನಪೂರ್ವಕ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  22. FLUSHINGDA MOOLAKA ELLA KETTADDANNU DOORA MAADALU PRAYATNISONA.SARALA HAADI TORIDDAKKE DHANYAVAADAGALU.

    ReplyDelete
  23. ಹೇಮಚಂದ್ರ;ನೀವು ಹೇಳುವುದು ಸರಿಯಾಗಿದೆ.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  24. ಶೌಚಾಲಯ ಸಾಹಿತ್ಯ ವಿಭಿನ್ನವಾಗಿದೆ. ಚೆನ್ನಾಗಿದೆ. ಸ್ವತಂತ್ರವಾಗಿ ಯೋಚಿಸಿ ಹೊಸತನ್ನು ಕೊಟ್ಟಿದ್ದು ಯಾವುದೇ ಆದರೂ ಖುಷಿ ಕೊಡುತ್ತದೆ. ಓಶೋ ಪುಸ್ತಕ ಓದುವವರೆಂದರೆ ಅಧ್ಯಾತ್ಮದ ಹೆಸರಿನಲ್ಲಿ ಕಾಮಶಾಸ್ತ್ರ ಅಧ್ಯಯನ ಮಾಡುವವರು ಅನ್ನುವ ಭಾವನೆ ಬಹಳ ಜನರಲ್ಲಿ ಇತ್ತು. ಅದೂ ಮಹಿಳೆಯರು ಓಶೋ ಪುಸ್ತಕದ ಅಭಿರುಚಿ ಹೊಂದಿದ್ದರೆ ಅವರನ್ನು ಇನ್ನು ವಿಚಿತ್ರವಾಗಿ ನೋಡುತ್ತಿದ್ದರು. ಆದರೆ ಓಶೋ ಪುಸ್ತಕ ಓದಿದವರ ಅಭಿಪ್ರಾಯವೆ ಬೇರೆ. ಯಾವುದನ್ನೂ ಸರಿಯಾಗಿ ಓದಿ ಅರ್ಥಮಾಡಿಕೊಳ್ಳದೆ ಟೀಕಿಸುವುದು ತಪ್ಪು.

    ReplyDelete
  25. Very nice sir.
    Osho always says things in unique way (at least unknown to common people like me). Like "Fish in the water never cries"
    Thanks for sharing this.

    ReplyDelete
  26. `ಧ್ಯಾನದಲ್ಲಿ ಇರುವುದು ಎಂದರೆ ಸಂಪೂರ್ಣ ಎಚ್ಚರದಲ್ಲಿ ಇರುವುದು ಎಂದರ್ಥ.'ಎ೦ಥಾ ಅದ್ಭುತ ವಿಚಾರ. ಬೆಕ್ಕು ಕಣ್ಮುಚ್ಚಿ ನಿದ್ದೆ ಮಾಡುವ೦ತೆ ಕಾಣುತ್ತಿದ್ದರೂ ಸ್ವಲ್ಪ ಸಪ್ಪಲವಾದ ತತ್ ಕ್ಷಣವೇ ಒಡಿಹೊಗುವ೦ತಹ ಸ್ಥಿತಿಯಲ್ಲಿ ನಾವು ಇರಬೇಕು ಎ೦ದು ಒ೦ದುಕಡೆ ಓದಿದ್ದೆ. `ಧ್ಯಾನದ ಸ್ಥಿತಿಯಲ್ಲಿ ನಿಮ್ಮ ಮನಸ್ಸಿನಲ್ಲಿರುವ ಚಿಂತೆ ಮತ್ತು ಕೆಟ್ಟ ಆಲೋಚನೆಗಳನ್ನೂ flush ಮಾಡಿ' ಎನ್ನುವುದ೦ತೂ ಅನುಸರಣ ಯೋಗ್ಯವಾಗಿದೆ.ನಮ್ಮೊಡನೆ ಹ೦ಚಿಕೊ೦ಡದ್ದಕ್ಕಾಗಿ ಧನ್ಯವಾದಗಳು ಸರ್ .

    ReplyDelete
  27. ಚೆಂದದ ವಿಚಾರ ಎಲ್ಲಿಂದ ಬಂದರು ಸರಿ....

    ReplyDelete
  28. ಶಿವರಾಮ ಭಟ್;ನಿಜಕ್ಕೂ ಆ ರೀತಿಯ ಬರಹವನ್ನು ಶೌಚಾಲಯದಲ್ಲಿ ನೋಡಿದಾಗ ಅಚ್ಚರಿಯಾಗಿತ್ತು.ಆದರೆ ಆ ಹಿರಿಯರು ಅದರ ಹಿಂದಿನ ಉದ್ದೇಶವನ್ನು ವಿವರಿಸಿದಾಗ ಅದು ಎಷ್ಟೊಂದು ಅರ್ಥಪೂರ್ಣ ಎನಿಸಿತ್ತು.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  29. @gold 13;osho is really unique.Iam yet to read many of his article.thanks for your kind comments.

    ReplyDelete
  30. ಪ್ರಭಾಮಣಿ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  31. ಸೀತಾರಾಮ್ ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  32. hahaha Flush ಗೆ ಹಾಸ್ಯದ ಲೇಪಕೊಟ್ಟ ನಿಮ್ಮ ಪರಿ ಚನಾಗಿದೆ ಡಾಕ್ಟ್ರೇ..ಕೆಲವು ಲೇಖನಗಳು ಮಿಸ್ ಆಗಿವೆ ನಿಮ್ಮವು..ಕ್ಷಮಿಸಿ.

    ReplyDelete

Note: Only a member of this blog may post a comment.