Thursday, February 9, 2012

"ನನ್ನ ಬ್ಲಾಗಿಗೆ ಎರಡು ವರ್ಷದ ಹರ್ಷ!!"

ಮೊನ್ನೆ ಮೊನ್ನೆ ಬ್ಲಾಗ್ ಶುರು ಮಾಡಿದ ಹಾಗಿದೆ.ಮೊನ್ನೆಗೆ ನನ್ನ ಬ್ಲಾಗಿಗೆ ಎರಡು ವರ್ಷ ತುಂಬಿದೆ.ಸುಮಾರು 184 ಬರಹಗಳು ಪ್ರಕಟವಾಗಿವೆ.ಸುಮಾರು 176 ಜನ  followers ಆಗಿದ್ದಾರೆ.ಬ್ಲಾಗ್ ಎನ್ನುವುದು ಏನು ಎಂದೇ ತಿಳಿಯದವನು ಅವರಿವರ ಸಹಾಯದಿಂದ ಕಷ್ಟ ಪಟ್ಟು ಶುರು ಮಾಡಿದೆ.ಈಗ ಹಿಂದಿರುಗಿ ನೋಡಿದರೆ ಇಷ್ಟೆಲ್ಲಾ ಬರಹಗಳನ್ನು ಹೇಗೆ ಬರೆದೆ ಎನ್ನುವುದು ತಿಳಿಯುತ್ತಿಲ್ಲ.ಇದಕ್ಕೆ ನಿಮ್ಮೆಲ್ಲರ ನಿರಂತರ ಪ್ರತಿಕ್ರಿಯೆ,ಪ್ರೋತ್ಸಾಹಗಳೇ ಮುಖ್ಯ ಕಾರಣ ಎನ್ನುವುದರಲ್ಲಿ ಅನುಮಾನವಿಲ್ಲ.ಎಲ್ಲಾ ಬ್ಲಾಗಿಗರದೂ ಉದಾರ ಮನಸ್ಸು.ಬ್ಲಾಗಿನ ಬಾಂಧವ್ಯ ನನಗೆ ಉತ್ತಮ ಸ್ನೇಹಿತರನ್ನು ಕೊಟ್ಟಿದೆ.ನಿಮ್ಮೆಲ್ಲರ ಪ್ರೀತಿ ,ಸ್ನೇಹಕ್ಕೆ ನಾನು ಚಿರಋಣಿ.ಮುಂದೆಯೂ ನಿಮ್ಮೆಲ್ಲರ ಪ್ರೀತಿ ವಿಶ್ವಾಸಗಳು ನನಗೆ ನಿರಂತರವಾಗಿ ಸಿಗಲಿ ಎಂದು  ಆ ದೇವರಲ್ಲಿ ನನ್ನ ಪ್ರಾರ್ಥನೆ. ತಿಳಿಯದೆ ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ.ಬ್ಲಾಗಿಗೆ ಬರುವುದನ್ನು ನಿಲ್ಲಿಸಿರುವ ಎಲ್ಲಾ ಬಂಧುಗಳಿಗೂ ನನ್ನ ಬ್ಲಾಗಿಗೆ  ಬರುವಂತೆ ವಿನಂತಿ.ಇಂತಿ ನಮನಗಳು.

25 comments:

 1. ಕೃಷ್ಣಮೂರ್ತಿಯವರೆ,
  ಎರಡು ಸಾರ್ಥಕ ವರ್ಷಗಳನ್ನು ಪೂರೈಸಿದ ನಿಮ್ಮ ಬ್ಲಾಗಿಗೆ ಶುಭಾಶಯಗಳು. ಕನ್ನಡದ ಕೊರಳಿನಿಂದ ಮಧುರವಾದ ಕೊಳಲಿನ ನಿನಾದವನ್ನು ನಾವೆಲ್ಲರೂ ಕೇಳಿ ಆನಂದಿಸಿದ್ದೇವೆ. ಇದೇ ರೀತಿ ಇನ್ನೂ ಅನೇಕ ವಸಂತಗಳನ್ನು ಸಂತೋಷದಲ್ಲಿ ಕಳೆಯೋಣ!

  ReplyDelete
 2. Wow congratulations and Happy Bday 'Kolalu'
  Swarna

  ReplyDelete
 3. ಬ್ಲಾಗುಗಳ ರಾಜನಿಗೆ ಹಾರ್ಧಿಕ ಶುಭಾಶಯಗಳು.
  ೧೮೪ ಬರಹಗಳು ೧೮೪೦೦ ಆಗಲಿ.

  ReplyDelete
 4. ಶರಾವತಿ ತೀರದ ಕೃಷ್ಣ ನುಡಿಸುತಿಹ ಕೊಳಲಿಗೆ ಎರಡುವರ್ಷದ ಸಂಭ್ರಮ.ಉತ್ತಮ ಸಾಮಾಜಿಕ ಕಳಕಳಿಯ ಮಾಹಿತಿ ಹೊತ್ತ ಆರೋಗ್ಯವಂತ ಬ್ಲಾಗಿದು.ಉತ್ತಮ ಸಂದೇಶಗಳನ್ನು ನೀಡುವ ನಿಮಗೆ ಅಭಿನಂದನೆಗಳು ಡಾಕ್ಟರ್ ಕೃಷ್ಣಮೂರ್ತಿ ಸರ್ . ಕೊಳಲಿನ ನಾದ ಸುಧೆ ಮುಂದೆಯೂ ಮಧುರವಾಗಿ ಮೂಡಿಬರಲಿ.
  ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

  ReplyDelete
 5. ಎರಡು ವರ್ಷಗಳ ನಿಮ್ಮ ಪರಿಶ್ರಮಕ್ಕೆ ಹೃದಯ ಪೂರ್ವಕ ಅಭಿನಂದನೆಗಳು ಮೂರ್ತಿ ಸರ್. ನಾವು ಸಹ ನಿಮ್ಮ ಬರಹಗಳಿಂದ ತಿಳುವಳಿಕೆ ಪಡೆದಿದ್ದೇವೆ. ನಕ್ಕು ಖುಷಿ ಪಟ್ಟಿದ್ದೇವೆ. ಮನಸ್ಸು ತುಂಬಿ ಮೌನವಾಗಿದ್ದೇವೆ. ನಿಮ್ಮ ಮನದ ಭಾವನೆಗಳನ್ನು ಹಂತ ಹಂತವಾತಿ ನಮಗೆ ತಿಳಿಸುತ್ತ ನಮಗೂ ಬರೆಯುವಂತ ಉತ್ಸಾಹವನ್ನು ತುಂಬಿದ್ದಕ್ಕಾಗಿ ನಿಮಗೆ ಮತ್ತೊಮ್ಮೆ ಧನ್ಯವಾದವನ್ನು ಅರ್ಪಿಸುತ್ತಿದ್ದೇನೆ... ಶುಭವಾಗಲಿ...

  ReplyDelete
 6. ಎರಡು ವರ್ಷಗಳ ನಿಮ್ಮ ಪರಿಶ್ರಮಕ್ಕೆ ಹೃದಯ ಪೂರ್ವಕ ಅಭಿನಂದನೆಗಳು ಮೂರ್ತಿ ಸರ್. ನಾವು ಸಹ ನಿಮ್ಮ ಬರಹಗಳಿಂದ ತಿಳುವಳಿಕೆ ಪಡೆದಿದ್ದೇವೆ. ನಕ್ಕು ಖುಷಿ ಪಟ್ಟಿದ್ದೇವೆ. ಮನಸ್ಸು ತುಂಬಿ ಮೌನವಾಗಿದ್ದೇವೆ. ನಿಮ್ಮ ಮನದ ಭಾವನೆಗಳನ್ನು ಹಂತ ಹಂತವಾಗಿ ನಮಗೆ ತಿಳಿಸುತ್ತ ನಮಗೂ ಬರೆಯುವಂತ ಉತ್ಸಾಹವನ್ನು ತುಂಬಿದ್ದಕ್ಕಾಗಿ ನಿಮಗೆ ಮತ್ತೊಮ್ಮೆ ಧನ್ಯವಾದವನ್ನು ಅರ್ಪಿಸುತ್ತಿದ್ದೇನೆ... ಶುಭವಾಗಲಿ...

  ReplyDelete
 7. ನಮ್ಮೆಲ್ಲರ ಅಚ್ಚುಮೆಚ್ಚಿನ ವೈದ್ಯಕೃಷ್ನನ ಕೊಳಲಿಗೆ ಎರಡನೇ ವರ್ಷದ ಹಾರ್ದಿಕ ಶುಭಾಶಯಗಳು.|| ಸರ್ವೇ ಜನಾಃ ಸುಖಿನೋ ಭವಂತು || ಎಂಬುದನ್ನು ಬಯಸುವ ನಿಮ್ಮೆದುರು ಚುಚ್ಚು ಮದ್ದಿನ ಬದಲಾಗಿ ನಿಮ್ಮ ’ಕೊಳಲಿ’ನ ನಿನಾದ ಹೊಮ್ಮಿದರೂ ಹಲವು ರೋಗಿಗಳು ವಾಸಿಯಾಗಿ ಮನೆಗೆ ತೆರಳಬಹುದು ! ಈ ಇಂಪು-ಕಂಪು ಸದಾ ಹಾಗೇ ಇರಲಿ, ಹಲವು ಬರಹಗಳು ಬರಲಿ ಎಂದು ಮನಸಾ ಮತ್ತೊಮ್ಮೆ ಹಲವೊಮ್ಮೆ ಹಾರೈಸುತ್ತಿದ್ದೇನೆ.

  ReplyDelete
 8. ಅಭಿನಂದನೆಗಳು ಸರ್ :) ಇನ್ನೂ ತುಂಬಾ ಉಣಬಡಿಸುವುದು ಬಾಕಿ ಇದೆ :)

  ReplyDelete
 9. AYYA ERADU VARSHAVAYITE? GOTTE AAGALILLA.BARAHAKKE STOP BEDA HAAGOO OTHAYAKKE BAREYABEDA

  ReplyDelete
 10. ಹಬ್ಬದ ಸ೦ಭ್ರಮಕ್ಕೆ ನನ್ನದೊ೦ದು ಶುಭಾಶಯ...:)

  ReplyDelete
 11. ಕೊಳಲು ಬ್ಲಾಗಿನ ಎರಡು ವರ್ಷದ ಸಾರ್ಥಕ ಸಾಧನೆ ನನಗೆ ತುಂಬ ಸಂತಸ ತಂದಿದೆ..ಕೊಳಲು ಬ್ಲಾಗು ಸದಾ ಬೆಳೆಯುತ್ತಿರಲಿ ಎಂದು ಹಾರೈಸುತ್ತೇನೆ.

  ReplyDelete
 12. ಡಾ. ಟಿ.ಡಿ.ಕೆ. ಸರ್...ಅಭಿನಂದನೆಗಳು.. ನಿಜಕ್ಕೂ ಎರಡುವರ್ಷ ಆಯ್ತೇ ಈ ಕೊಳಲಿನ ಇಂಪು ಕೇಳ್ತಾ ಕೇಳ್ತಾ?? ಈ ಅವಧಿಯಲ್ಲಿ ಸುಂದರ ರಾಗಗಳು..ಲಲಿತ ಗಾನ, ತುಕಡಿ ಎಷ್ಟೊಂದು ಮಾಧುರ್ಯ ಉಣಬಡಿಸಿದೆ...!! ಅಮೂಲ್ಯ... ಹೀಗೇ ಈ ಮುರಳಿ ಮೋಹಿಸುತ್ತಾ ಸಾಗಲಿ ಎಂದು ಹಾರೈಕೆ.

  ReplyDelete
 13. ಎರಡು ಸಂವತ್ಸರಗಳನ್ನು ಪೂರೈಸಿದ ನಮ್ಮೆಲ್ಲರ ನೆಚ್ಚಿನ ಕೊಳಲು ಬ್ಲಾಗಿಗೆ, ಸಜ್ಜನ್ ಸರ್ಜನರಿಗೆ ಅಭಿನಂದನೆಗಳು.

  ReplyDelete
 14. ಶುಭಾಶಯಗಳು ಸರ್...

  ReplyDelete
 15. ಶುಭ ಹಾರೈಸಿದ ಎಲ್ಲರಿಗೂ ಅನಂತ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

  ReplyDelete
 16. ಅಭಿನಂದನೆಗಳು ಸರ್.

  ReplyDelete
 17. ಡಾಕ್ಟ್ರೆ, ಎರಡು ವರ್ಷಗಳು ಎಷ್ಟು ಬೇಗ ಕಳೆದುಹೋಯ್ತಲ್ವ....ಅಭಿನಂದನೆಗಳು

  ReplyDelete
 18. ಮೂರ್ತಿ ಸರ್.....

  ಹಾರ್ದಿಕ ಅಭಿನಂದನೆಗಳು...ನಿಮ್ಮ ಬ್ಲಾಗ್ ಬರಹಗಳ ಕಟ್ಟಾ ಅಭಿಮಾನಿಗಳಲ್ಲಿ ನಾನೊಬ್ಬ.....ನಿಮ್ಮ ಕೊಳಲಿನ ದನಿ ಇನ್ನಷ್ಟು ಪಸರಿಸಲಿ.......

  ReplyDelete