೧) ಕೀಳರಿಮೆ ಬಿಡಿ. ಡಿ.ವಿ.ಜಿ.ಯವರು ಕಗ್ಗದಲ್ಲಿ ಹೇಳಿದಂತೆ "ತರಚುಗಾಯವ ಕೆರೆದು ಹುಣ್ಣನಾಗಿಪ ಕಪಿಯಂತೆ,ಕೊರತೆಯೊಂದನ್ನು ನೆನೆನೆದು ಕೊರಗಿ,ಮನದಲ್ಲಿ ನರಕ"ಸೃಷ್ಟಿಸಿಕೊಳ್ಳದಿರಿ.ನಮ್ಮ ವ್ಯಕ್ತಿತ್ವದಲ್ಲಿ ಸಕಾರಾತ್ಮ ಗುಣಗಳು ಇದ್ದೇ ಇರುತ್ತವೆ.ಅವನ್ನು ಮೊದಲು ನಾವು ಗುರುತಿಸಿಕೊಳ್ಳಬೇಕಷ್ಟೇ !
೨)ನಿಮ್ಮ ಮನಸ್ಸಿನಿಂದ ನಿಮ್ಮ ಹಳೆಯ ತಪ್ಪುಗಳು,ಸೋಲುಗಳು,ಬೇಸರಗಳು,ಪರರ ನಿಂದನೆಗಳು,ಹೀಗಳಿಕೆಗಳು ಮತ್ತು ಅವಮಾನಗಳನ್ನು ಎತ್ತಿ ಆಚೆಗೆ ಬಿಸಾಡಿ.ಅವನ್ನೆಲ್ಲಾ ಮೊದಲು ಬಿಟ್ಟುಹಾಕಿ.ನೀವು ಯಾರಿಗೂ,ಯಾವುದರಲ್ಲೂ ಕಮ್ಮಿ ಇಲ್ಲಾ ಎನ್ನುವ ಆತ್ಮ ವಿಶ್ವಾಸವನ್ನು ಹುಟ್ಟು ಹಾಕಿ.
೩)ನಿಮ್ಮ ಬಗ್ಗೆ ನೀವೇ ಮರುಕ ಪಡುವುದನ್ನು (self pity) ಮೊದಲು ನಿಲ್ಲಿಸಿ.ನಿಮ್ಮಲ್ಲಿ ಏನಿಲ್ಲ ಎನ್ನುವುದಕ್ಕಿಂತ ಏನೆಲ್ಲಾ ಇದೆ ಎನ್ನುವುದನ್ನು ಮೊದಲು ಗಮನಕ್ಕೆ ತಂದು ಕೊಳ್ಳಿ.ನೀವು ಏನು ಮಾಡಲಾರಿರಿ ಎನ್ನುವುದಕ್ಕಿಂತ ಏನನ್ನು ಮಾಡಬಲ್ಲಿರಿ ಎನ್ನುವುದರ ಕಡೆ ಗಮನಕೊಡಿ.
೪)ಸದಾ ಕಾಲ ನಿಮ್ಮ ಬಗ್ಗೆಯೇ ಚಿಂತಿಸುವುದನ್ನು ನಿಲ್ಲಿಸಿ.ನಿಮ್ಮ ರೋಗಗಳ ಬಗ್ಗೆ ಮತ್ತು ನಿಮ್ಮ ಸಮಸ್ಯೆಗಳ ಬಗ್ಗೆಯೇ ಚಿಂತಿಸುತ್ತಿದ್ದರೆ ಅವು ಭೂತಾಕಾರವಾಗಿ ಬೆಳೆಯುತ್ತವೆ.ನಿಮ್ಮಿಂದ ಯಾರಿಗಾದರೂ ಸಣ್ಣದೊಂದು ಸಹಾಯವಾಗಬಹುದೇ ನೋಡಿ.ಅವರಿಂದ ಏನನ್ನೂ ಬಯಸದೆ ಸಹಾಯ ಮಾಡುವುದು ಉತ್ತಮ.
೫)ಶಾಂತಿ,ಸಮಾಧಾನ,ಮತ್ತು ಆನಂದದ ಬಗ್ಗೆ ಸದಾ ಯೋಚಿಸುವುದನ್ನು ರೂಢಿಸಿಕೊಳ್ಳಿ.ಈ ಉತ್ತಮ ಗುಣಗಳು ನಿಮ್ಮ ಅಭ್ಯಾಸವಾಗಲಿ.
೬)ನಾವು ಅಂದು ಕೊಂಡಿದ್ದಕ್ಕಿಂತ ಹೆಚ್ಚು ದೈವಿಕತೆ ನಮ್ಮೊಳಗಿದೆ.ನಮ್ಮ ಅಹಂಕಾರ ಮಾಯವಾದಾಗ ನಾವು ದೈವಿಕವಾಗಿರುತ್ತೇವೆ.ನಾವು ದೈವಿಕವಾಗಿದ್ದಾಗ ಪರಿಶುದ್ಧರಾಗಿರುತ್ತೇವೆ.ಆರೋಗ್ಯದಿಂದಿರುತ್ತೇವೆ.ನಾವು ಧ್ಯಾನದಲ್ಲಿ ಮುಳುಗಿದಾಗ ನಮ್ಮ ಅಹಂಕಾರ ಮಾಯವಾಗಿ ನಾವು ದೈವಿಕ ಸಂಪರ್ಕದಲ್ಲಿರುತ್ತೇವೆ.ನಾವು ನಿದ್ದೆ ಹೋದಾಗ ನಮ್ಮ ಅಹಂಕಾರವೂ ನಿದ್ರಿಸಿರುತ್ತದೆ.ನಮ್ಮ ಹುದ್ದೆ ,ಸಂಪತ್ತು,ಸ್ಥಾನ ಮಾನ,ಕಾಡುವುದಿಲ್ಲ.ನಾವು ದೈವಿಕತೆಯೊಂದಿಗೆ ಒಂದಾಗಿರುತ್ತೇವೆ.ನಾವು ಮತ್ತೊಬ್ಬರ ಆರೈಕೆಯನ್ನು ಮನಸ್ಸಿಟ್ಟು ಮಾಡಿದಾಗ ದೈವಿಕತೆಯಲ್ಲಿ ಮುಳುಗಿರುತ್ತೇವೆ.ನಾವು ಎಲ್ಲರನ್ನೂ ಅವರಂತೆಯೇ ಸ್ವೀಕರಿಸಿದಾಗ ದೈವಿಕತೆ ಮೂಡುತ್ತದೆ.ನಮ್ಮ ದೇಹದ ಪ್ರತಿಯೊಂದು ಜೀವ ಕೋಶದಲ್ಲೂ ಪ್ರೀತಿ ತುಂಬಿ ಹರಿಯುತ್ತದೆ.ನಾವು ಈಗಿನ ಕ್ಷಣವನ್ನು ಸಂಪೂರ್ಣವಾಗಿ ಸ್ವೀಕರಿಸಿದಾಗ ಆ ಶ್ರೇಷ್ಠ ಶಕ್ತಿಯೊಂದಿಗೆ ಒಂದಾಗಿರುತ್ತೇವೆ.
೭)ನಾನು ಸಂತಸದಿಂದ ಇದ್ದೇನೆ,ಸಂತೃಪ್ತಿಯಿಂದ ಇದ್ದೇನೆ,ಆ ದೇವರ ಆಶೀರ್ವಾದದಿಂದ ನನಗೆ ಯಾವ ಕೊರತೆಯೂ ಇಲ್ಲ ಎಂದುಕೊಂಡು ಧ್ಯಾನ ಮಾಡಿ.ಎಲ್ಲದರಿಂದ ಮುಕ್ತವಾದ ಶಾಂತಿಯ ನದಿ ನಿಮ್ಮಲ್ಲಿ ಹರಿಯುತ್ತದೆ.ಅದುವೆ ದೈವಿಕತೆ!
(ಸಾಧಾರಿತ.ಭಾಗ(೬)ಮತ್ತು (೭)ಇಂದಿನ ಪ್ರಜಾವಾಣಿಯಲ್ಲಿ ಭರತ್ ಮತ್ತು ಶಾಲನ್ ಸವೂರ್ ಬರೆದ 'ಸ್ವಸ್ಥ ಬದುಕು' ಎಂಬ ಬರಹದಿಂದ ಆಯ್ದುಕೊಂಡಿದ್ದು.)
ನಿಜಕ್ಕೂ ಒಳ್ಳೆಯ ಮಾರ್ಗದರ್ಶಿಯಗಬಲ್ಲ ಅಂಶಗಳು ಇವು...ಚೆನ್ನಾಗಿದೆ ಸರ್..
ReplyDeleteಜೀವನಕ್ಕೆ ಹೊಸ ತಿರುವು ಕೊಡಬಲ್ಲ ಸೂತ್ರಗಳು ಧನ್ಯವಾದಗಳು
ReplyDeleteಮನುಜನ ಜೀವನಕ್ಕೆ ಬಲು ಮುಖ್ಯವಾದ ಬಂಗಾರದಂತ ಮಾತುಗಳು.
ReplyDelete೭ ಅಂಶಗಳಲ್ಲಿ ಸ್ವಯಂ ಪರಿಷ್ಕರಣ ಸರಳ ಉಪಾಯಗಳನ್ನು ತೆರೆದಿಟ್ಟಿದ್ದೀರಿ, ಧನ್ಯವಾದಗಳು.
ReplyDeleteಮುಖ್ಯವಾಗಿ ನನ್ನಂತಹ ಹೊಯ್ದಾಟದ ಮನಸ್ಸಿನವರು ಈ ಬರಹವನ್ನು ಪ್ರಿಂಟ್ ಔಟ್ ತೆಗೆದು, ಜೊಬಿನಲ್ಲೇ ಇಟ್ಟುಕೊಂಡು ಆಗಾಗ ಓದಿಕೊಳ್ಳುತ್ತಿದ್ದರೆ ಮನವಾದರೂ ಸಮ ಸ್ಥಿತಿಗೆ ತಲುಪೀತು!
ಒಳ್ಳೆಯ ಚಿಕಿತ್ಸಕ ಲೇಖನ ಸರ್.. ಖಂಡಿತ ಉಪಯೋಗಿಸಿಕೊಳ್ಳುತ್ತೇವೆ..
ReplyDeleteನಿಮ್ಮ ಸಮಯದಲ್ಲಿ ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ..
http://ishwaratatva.blogspot.in/2012/02/blog-post.html
ಮನನ ಮಾಡಿಕೊಂಡು ಪಾಲಿಸಬೇಕಾದ ಮುತ್ತಿನಂಥ ಸೂತ್ರಗಳು..ಇಷ್ಟವಾಯ್ತು ಸಾರ್.
ReplyDeleteನನಗೂ ಹಾಗೇ ಅನ್ನಿಸಿತು, ದಿನದ ಒತ್ತಡಗಳಿಗೆ ಕೆಲವು ಮಾತ್ರೆಗಳನ್ನು ಸೂಚಿಸಿದ್ದೀರಿ. ಶ್ರೇಷ್ಠ ಸೃಜನಶೀಲ " ಟಿಪ್ಸ್"ಗಳು. ಇದರ ಕಾಪಿಯನ್ನಿ ನಾನೂ ತೆಗೆದಿಟ್ಟುಕೊಳ್ಳುತ್ತೇನೆ.ದಿನಕ್ಕೆ ಒಂದು ಬಾರಿ ಓದುವುದು ಉತ್ತಮ
ReplyDeleteಸಂತೃಪ್ತಿಯ ಜೀವನಕ್ಕೆ ಸರಳ ಸೂತ್ರಗಳು. ಜೀವನ ಶುದ್ದಗೊಳಿಸುವ ಮಾತುಗಳು ಇವು.
ReplyDeleteಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
ಇಂಥ ಸೂತ್ರಗಳು ನಮ್ಮ ಬದುಕಿಗೂ ಬೇಕು ಸರ್...ಚೆನ್ನಾಗಿದೆ..
ReplyDeleteಸರ್...
ReplyDeleteಎಲ್ಲರೂ ಅವಶ್ಯವಾಗಿ ಅಳವಡಿಸಿಕೊಳ್ಳಬೇಕಾದ..
ಅತ್ಯವಶ್ಯ ಸರಳ ಸೂತ್ರಗಳು...
ತುಂಬಾ ಚೆನ್ನಾಗಿದೆ...
ಮೂರ್ತಿ ಸರ್....
ReplyDeleteಸುಖ ಬದುಕಿಗೆ ಸುಂದರ ಸೂತ್ರಗಳು......ಅಳವಡಿಸಿಕೊಳ್ಳಲೇ ಬೇಕಾಗಿರೋ ನಿಯಮಗಳು.....ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು...
ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಅನಂತ ಧನ್ಯವಾದಗಳು.ನಮಸ್ಕಾರ.
ReplyDeleteಬದುಕಿನ ಮಾರ್ಗದರ್ಶಿ ಸೂತ್ರಗಳು.ನಮ್ಮ ಜೀವನಕ್ಕೆ ಸ್ಪೂರ್ಥಿದಾಯಕ.ಧನ್ಯವಾದಗಳು ಮಾನ್ಯರೇ.
ReplyDeleteಸರ್,
ReplyDeleteನಿಮ್ಮ ಲೇಖನವು ತುಂಬಾ ಚೆನ್ನಾಗಿದೆ. ಬ್ಲಾಗ್ ಲೋಕದಲ್ಲಿ ಹೊಸದಾಗಿ ಕಾಲಿಟ್ಟ ನನಗೆ
ನಿಮ್ಮ ಲೇಖನವು ಹೊಸ ಸ್ಪೂರ್ತಿ ತುಂಬುವಂತೆ ಮಾಡಿದೆ.
ನನ್ನನ್ನು ಬ್ಲಾಗ್ ಲೋಕಕ್ಕೆ ಕರೆದ ಪ್ರಕಾಶಣ್ಣಗೆ ನನ್ನ ಕೃತಜ್ಞತೆಯನ್ನು ಹೇಳಲೇ ಬೇಕು.
......ನನ್ನ ಬ್ಲಾಗ್ ಗೆ ಬನ್ನಿ......
ಶ್ರೀಮತಿ ರಾಜಿ ಲೋಕೇಶ್ ಅವರಿಗೆ;ನನ್ನ ಬ್ಲಾಗಿಗೆ ಸ್ವಾಗತ.ಲೇಖನ ತಮಗೆ ಇಷ್ಟವಾದದ್ದು ಸಂತೋಷ.ತಪ್ಪದೆ ಬರುತ್ತಿರಿ,ನಮಸ್ಕಾರ.
Deleteಒಳ್ಳೆಯ ಮಾತುಗಳು ಸರ್..ಕ್ಷಮಿಸಿ ತುಂಬಾ ದಿನ ಬ್ಲಾಗ್ ಕಡೆ ಬರಲಾಗಲಿಲ್ಲ...
ReplyDeleteನಿಮ್ಮ ಬ್ಲಾಗಿಗೆ ೨ ತುಂಬಿದ್ದಕ್ಕೆ ಅಭಿನಂದನೆಗಳು...ಬರೆಯುತ್ತಿರಿ,ಧನ್ಯವಾದಗಳು.
ಬನ್ನಿ ನಮ್ಮನೆಗೂ,
http://chinmaysbhat.blogspot.com/
ಇತಿ ನಿಮ್ಮನೆ ಹುಡುಗ,
ಚಿನ್ಮಯ ಭಟ್
ತುಂಬಾ ಉಪಯುಕ್ತ ಲೇಖನ ಸರ್. ಡಿ.ವಿ.ಜಿ. ಯವರ ಮುತ್ತಿನಂತ ಸಾಲುಗಳೊಂದಿಗೆ ಶುರುವಾದ ಲೇಖನ ನಮ್ಮನ್ನು ವ್ಯಕ್ತಿತ್ವ ವಿಕಸನದತ್ತ ಕೊಂಡೊಯ್ಯುತ್ತದೆ.
ReplyDeleteಚಿನ್ಮಯ್ ಭಟ್ ಮತ್ತು ಚೇತನಾಭಟ್;ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮಗೆಲ್ಲಾ ಇಷ್ಟವಾಗುವ,ಉಪಯುಕ್ತ ಮಾಹಿತಿಗಳುಳ್ಳ ಬರಹಗಳನ್ನು ಕೊಡುವುದು ಬ್ಲಾಗಿನ ಉದ್ದಿಶ್ಯ.ನೀವೆಲ್ಲಾ ಬ್ಲಾಗಿಗೆ ಬಂದರೇ ಬ್ಲಾಗಿನ ಸಾರ್ಥಕತೆ.ಇದು ನಿಮ್ಮದೇ ಬ್ಲಾಗು.ತಪ್ಪದೆ ಬರುತ್ತಿರಿ.ವಂದನೆಗಳು.
ReplyDeleteಉತ್ತಮ, ಆರೋಗ್ಯ ಪೂರ್ಣ ವಿಚಾರ ನೀಡಿದ್ದಕ್ಕೆ ಧನ್ಯವಾದಗಳು ಸರ್.
ReplyDeleteಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteuttama mahiti
ReplyDelete