ಮೊನ್ನೆ ಓ.ಪಿ.ಡಿ.ಗೆ ರೋಗಿಯೊಬ್ಬ ಬಂದ.ಸ್ಟೂಲ್ ತೋರಿಸಿ ಕೂತ್ಕೊಳಪ್ಪಾ ಎಂದೆ.'ಪರವಾಗಿಲ್ಲಾ ಬುಡಿ ಸಾ'ಎಂದ.ಎಷ್ಟು ಬಲವಂತ ಮಾಡಿದರೂ ಕುಳಿತುಕೊಳ್ಳಲಿಲ್ಲ.ಕಾರಣ ಕೇಳಿದರೆ "ಹಾಸನದಲ್ಲಿ ಮಳೆ ಆಗೈತೆ ಸಾ....! "ಎಂದ.ನಾನು "ಅರೆ.....!!ಹಾಸನದಲ್ಲಿ ಮಳೆ ಆದರೆ ನೀನು ಇಲ್ಲಿ ಕುಳಿತು ಕೊಳ್ಳೋಕೆ ಏನು ತೊಂದರೆಯಪ್ಪಾ"ಎಂದೆ.ಅದಕ್ಕವನು "ಅಯ್ಯೋ......ನಿಮಗೆ ಎಂಗೆ ಎಳಾದು ಸಾ .....!
ಪೈಲ್ಸ್ ...ಆಗೈತೆ "ಎಂದ."ಆಸನದಲ್ಲಿ ಮೊಳೆ "ಅನ್ನೋದು ಅವನ ಬಾಯಲ್ಲಿ "ಹಾಸನದಲ್ಲಿ ಮಳೆ"ಆಗಿತ್ತು!!
ಹಾಸನದಲ್ಲಿ ಮಳೆ ಪರಿಣಾಮ ಪಸಂದಾಗೈತೆ ಡಾಕುಟ್ರೆ.. !
ReplyDeleteನಕ್ಕು ನಕ್ಕು ಸುಸ್ತಾಯ್ತು !
ಔದು ಸ್ವಾಮಿ ಹವನು ನಮ್ಮ ಆಸನದವನೇ ಹಾಗಿರಬೇಕು. ಹವ ನಿಮ್ಮ ಅಳ್ಳಿಗೆ ಹ್ಯಾಕ್ ಬಂದ?
ReplyDelete- ಸ್ರೀದರ್
-ಆಸನ
ಹ್ಹ ಹ್ಹ ಹ್ಹ
ReplyDeleteಹಹ್ಹಹ್ಹ...ನಗೆಯ ಬುಗ್ಗೆ ಹೊಮ್ಮಿಸಿ ಬಿಡುತ್ತಿರಿ ಸರ್..
ReplyDeleteಸೂಪರ್....
ಆ ಮಳೆಗೆ ನೀರು ಬೀಳುತ್ತೆ .ಈ ಮಳೆಗೆ ರಕ್ತ ಸೂರುತ್ತೆ
ReplyDeletehaha...nice...dr. Idu shree krishna sandhaana ennuva Sri Aswath virichita pournika haasya naataka da dialogue. Recently we performed this drama..very humours...;)
ReplyDeleteಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.ವರ್ಷವೆಲ್ಲಾ ನಗು ನಗುತ್ತಿರಿ.ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteತಮಾಷೆ ಚೆನ್ನಾಗಿದೆ.
ReplyDeleteನಿಮಗೂ ಉಗಾದಿ ಹಬ್ಬದ ಶುಭಾಶಯಗಳು.
Ha ha ha! hilarious!
ReplyDeleteಸರ್,
ReplyDeleteನಿಮಗೆ , ನಿಮ್ಮ ಕುಟುಂಬದವರಿಗೆ, ನಿಮ್ಮ ಗೆಳೆಯರಿಗೆಲ್ಲಾ "ಉಗಾದಿ"ಯ ಶುಭಾಷಯಗಳು.
ಬೋ ತಮಾಸೆಯಾಗೈತೆ ಹಾಸನದ ಕತೆ.
ನಕ್ಕು ನಕ್ಕು ಸಾಕಾಯ್ತು ಸಾ.
- ಸುನೀಲ್ ಕೇಳ್ಕರ್
ಛೆ ಪಾಪ!
ReplyDeleteಹಾ ಹಾ..ಚೆನಾಗಿದೆ..
ReplyDeleteಬನ್ನಿ ನಮ್ಮನೆಗೂ
http://chinmaysbhat.blogspot.in/
ಇತಿ ನಿಮ್ಮನೆ ಹುಡುಗ,
ಚಿನ್ಮಯ ಭಟ್
" ಸಾರ್ ಚೋರ್ಮನ್ರು ಬರ ಏಳ್ಯವ್ರೆ ಅಂಗೇ ಬರುತ್ಲೂ ಬಾಟ್ಲಿ ಸಾರಾಯ್ ತರಯೇಳ್ಯವ್ರೆ " ಎಂದವ ಒಬ್ಬ ಹಂಗಾಮೀ ಕೆಲಸದವ. ಇದು ನಡೆದಿದ್ದು ೧೯೯೭ ರಲ್ಲಿ. ನಾವೆಲ್ಲಾ ಒಂದು ಟ್ರಸ್ಟ್ ನಲ್ಲಿದ್ದೆವು. ಅದರ ಅಧ್ಯಕ್ಷರು ರಾಮಚಂದ್ರ ರಾವ್ ಅಂತ. ಯಾವುದೇ ಸಭೆಯ ನಿಮಿತ್ತ ಏರ್ಪಾಡು ನಡೆದಿತ್ತು. ನನ್ನ ತಾಬಾ ತರಹೇಳಿದ್ದ ಒಂದು ಫ್ಲವರ್ ಪಾಟ್ ಮತ್ತು ಒಂದೆರಡು ಹೂವಿನ ಸರಗಳನ್ನು ನಾನು ತೆಗೆದುಕೊಂಡು ಬೇಗ ಬರಬೇಕೆಂದು ಕಳಿಸಿದ ಸಂದೇಶವಾಗಿತ್ತು. ಅಂದು ಜವಾನ ರಜೆಯಲ್ಲಿದ್ದುದರಿಂದಲೂ, ನನ್ನಲ್ಲಿ ದೂರವಾಣಿ ಇರದ್ದರಿಂದಲೂ ಹಂಗಾಮಿ ಕೂಲಿ ಕೆಲಸಕ್ಕೆ ಬಂದ ಯಾರನ್ನೋ ವಿಳಾಸ ನೀಡಿ ಕಳಿಸಿದ್ದರು. ದೂರನಿಂತು ಏನೋ ಕೇಳಿಸಿಕೊಂಡಾತ ನನಗೆ ತಲ್ಪಿಸಿದ ಸಂದೇಶ ಇದು! ಅಕಸ್ಮಾತ್ ಅರ್ಥಗೊತ್ತಿರದ ಯಾರಾದರೂ ಆಗಿದ್ದರೆ ಮುಂದೆ ಏನಾಗಬಹುದಿತ್ತು ಎಂಬುದನ್ನು ಕಲ್ಪಿಸಿಕೊಳ್ಳಿ, ಜೀವನದಲ್ಲಿ ಇಂತಹ ಹಾಸ್ಯಗಾರರು ಅಲ್ಲಲ್ಲಿ ಸಿಗುತ್ತಲೇ ಇರುತ್ತಾರೆ.
ReplyDeleteನಿಮಗೂ, ನಿಮ್ಮ ಕುಟುಂಬಕ್ಕೂ, ನಿಮ್ಮ ಸ್ನೇಹಿತ ಬಳಗಕ್ಕೂ ಶ್ರೀ ನಂದನ ಸಂವತ್ಸರದ ಮತ್ತು ಶ್ರೀರಾಮನವಮಿಯ ಹಾರ್ದಿಕ ಶುಭಾಶಯಗಳು.
ಹ್ಹ ಹ್ಹ ಹ್ಹಾ... ಸೂಪರ್! "ವರದರಾಜ ಬಾನಾವರ" ಕಥೆ ನೆನಪಾಯ್ತು :-)
ReplyDelete