Saturday, September 8, 2012

"ಎಲ್ಲಾ....ಪ್ರೇಯಸಿಗಾಗಿ---!!! "

ಬೆರಳಷ್ಟೇ ಗಾತ್ರದ
ಹಸಿರು ಪುಟ್ಟ ಹಕ್ಕಿ!!
ನುಗ್ಗೆ ಮರದ ಹೂವಿಗೆ
ಲಗ್ಗೆ......... ಹಾಕಿದೆ!!
ನುಗ್ಗೆ ಮರಕ್ಕೋ ರೋಮಾಂಚನ!!
ರೆಂಬೆ ರೆಂಬೆಗೂ ಹಸಿರು ಹುಚ್ಚು!!
ಪಕ್ಕದ ಗುಲ್ಮೊಹರಿಗೆ,
ಮೈ ತುಂಬಾ ಕೆಂಪು ಕಿಚ್ಚು !!
ಗಾಳಿಯಲ್ಲೇ ರೆಕ್ಕೆ ಬಡಿದು,
ಮಧುವ ಹೀರಿದ ಮತ್ತಿನಲ್ಲಿ
ಅಲ್ಲೇ ಒಂದರೆ ಕ್ಷಣ ,
ತೇಲಾಡುವ ತ್ರಿಶಂಕು!!!
ಮತ್ತೆ ಮರದ ಮೇಲೆಕೂತು,
ಗತ್ತಿನಿಂದ ಕತ್ತು ಕೊಂಕಿಸಿ,
ಪುಚ್ಚಗಳ ತಿದ್ದಿ ತೀಡಿ,
ಅತ್ತಿತ್ತ ತಿರುಗಿ ....,
ಚುಂಚದಲ್ಲೊಂದು ಹೂವ ಹಿಡಿದು,
ಪುರ್ರನೆ ಹಾರಿತ್ತು !!!
ಪ್ರೇಯಸಿಯ ಹುಡುಕುತ್ತಾ !!!

21 comments:

  1. WAH!AARU MATTU ENTANE SAALUGALU SEEREGE MATCHING BLOUSE AAGIVE

    ReplyDelete
    Replies
    1. ಧನ್ಯವಾದಗಳು ಹೇಮಾ ಚಂದ್ರ!

      Delete
  2. ಮಧುರಾನುಭೂತಿ ತೆರೆದಿಟ್ಟ ಕವನ. ಹಗುರವಾಯಿತು ನನ್ನ ಮನಸು. ಯಾಕೆಂದರೆ ಮುಖ್ಯವಾಗಿ ನೀವೂ ಹಗುರವಾದಿರಿ.

    ಅಮೋಘ ಕಲ್ಪನೆಯ ಕವನ. ಸೂಪರ್. ಸೂಪರ್.

    ReplyDelete
  3. ನಿಮ್ಮಂಥ ಕವಿಗಳ ಪ್ರೋತ್ಸಾಹ ಪೂರ್ವಕ ನುಡಿಗಳು ಸಂತಸ ನೀಡುತ್ತವೆ.ಧನ್ಯವಾದಗಳು ಬದರಿ ಸರ್.

    ReplyDelete
  4. ಚೆನ್ನಾಗಿದೆ ಡಾಕ್ಟ್ರೆ... ಮುಂದುವರೆಯಲಿ ಕವನಗಳ ಜೈತ್ರ ಯಾತ್ರೆ...

    ಜೈ ಹೋ !

    ReplyDelete
    Replies
    1. ಹಕ್ಕಿಯಷ್ಟೇ ಸು೦ದರವಾಗಿದೆ ಕವನ ಕಥನ ಸರ್, ಧನ್ಯವಾದಗಳು.

      Delete
    2. ಪ್ರಕಾಶಣ್ಣ;ನಿಮ್ಮ ಕಾಮೆಂಟ್ಸ್ ಅಮೂಲ್ಯ!ಧನ್ಯವಾದಗಳು.

      Delete
  5. ಪ್ರಭಾಮಣಿ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು."ಪ್ರತೀಕ್ಷೆ"ಯ ಪ್ರತೀಕ್ಷೆಯಲ್ಲಿದ್ದೇವೆ.ಬರುತ್ತಿರಿ .ನಮಸ್ಕಾರ.

    ReplyDelete
  6. ಕೃಷ್ಣಮೂರ್ತಿ ಸರ್,
    ವಸಂತ ಕಾಲದ ನೆನಪಾಯ್ತು ನಿಮ್ಮ ಕವಿತೆ ಓದಿ !
    ಸೊಗಸಾಗಿದೆ

    ReplyDelete
    Replies
    1. ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಮುಂದುವರಿಯಲಿ.

      Delete
  7. ಹಸಿದ ಚೀಲದಿಂದ...ಚೀಲ ತುಂಬಿಕೊಂಡು ಓಲಾಡುವ ಮಜಲುಗಳನ್ನು ತೋರಿಸಿದ ಕವಿ ಮನಸು ಭಾವಾನಾತೀರದ ಒಂದು ಹಾಯಿ ದೋಣಿ..ಸೊಗಸಾಗಿದೆ..ಡಾಕ್ಟ್ರೆ!!!

    ReplyDelete
    Replies
    1. ನಿಮ್ಮ ಪ್ರೋತ್ಸಾಹಪೂರಕ ನುಡಿಗಳಿಗೆ ಧನ್ಯವಾದಗಳು ಶ್ರೀಕಾಂತ್.ಬರುತ್ತಿರಿ .ನಮಸ್ಕಾರ.

      Delete
  8. ಇಂದಿನ 'ಅವಧಿ'ಯಲ್ಲಿ ನನ್ನ ಈ ಕವನ ಪ್ರಕಟವಾಗಿದೆ.ಧನ್ಯವಾದಗಳು 'ಅವಧಿ'.

    ReplyDelete
  9. ಸುಂದರ ಅನುಭವ ಕೊಟ್ಟ ಕವನ
    ಸ್ವರ್ಣಾ

    ReplyDelete
    Replies
    1. ಅಭಿನಂದನೆಗಳು ಸ್ವರ್ಣಾ.ಬರುತ್ತಿರಿ.ನಮಸ್ಕಾರ.

      Delete
  10. ಸುಂದರ ಕವನ ...ಇಷ್ಟ ಆಯಿತು ಸರ್....

    ReplyDelete
  11. ಧನ್ಯವಾದಗಳು ಅಶೋಕ್,ಧನ್ಯವಾದಗಳು ವಸಂತ್.

    ReplyDelete
  12. ಡಾಕ್ಟರ್ ಸಾರ್ ವಾಹ್ ಸುಂದರ ಕವಿತೆ , ಕವಿತೆಯ ಪದ ಪದಗಳಲ್ಲಿಯೂ ಸೌಂದರ್ಯ ಅಡಗಿದೆ .ಸುಂದರ ಕವಿತೆ ಬರೆದ ನಿಮಗೆ ಜೈ ಹೋ ಸಾರ್
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete

Note: Only a member of this blog may post a comment.