Wednesday, August 15, 2012
"ನಂಗಿನ್ನೊಂದು ಕನ್ಯಾ ನೋಡ್ರಪ್ಪಾ !!!!"
ನಮ್ಮ ಹಿರಿಯರ ಹಾಸ್ಯ ಪ್ರಜ್ಞೆ ಅದ್ಭುತವಾಗಿತ್ತು!!!ಇದು ನಾನು ಹೇಳಿದ್ದಲ್ಲ.ಬೀಚಿ ಯವರು ತಮ್ಮ ಆತ್ಮ ಕಥನ "ಭಯಾಗ್ರಫಿ"ಯಲ್ಲಿ ಅದರ ಬಗ್ಗೆಯೇ ಒಂದು ಅಧ್ಯಾಯ ವನ್ನು ಬರೆದಿದ್ದಾರೆ.ಹರಪನಹಳ್ಳಿಯಲ್ಲಿದ್ದ ಶೇಷ ಮುತ್ಯ ಮತ್ತು ಕಮಲ ಕಕ್ಕಿ ತೊಂಬತ್ತರ ಸನಿಹದ ವೃದ್ಧ ದಂಪತಿಗಳು.ಆ ವಯಸ್ಸಿನಲ್ಲೂ ಅವರದು ಬತ್ತದ ಉತ್ಸಾಹ ಮತ್ತು ಅದ್ಭುತ ಹಾಸ್ಯ ಪ್ರಜ್ಞೆ!!!ಒಂದು ರಾತ್ರಿ ಶೇಷ ಮುತ್ಯ ಮನೆಯಿಂದ ಹೊರಬಿದ್ದರು.ಒಂದು ಕೈಯಲ್ಲಿ ಬಡಿಗೆ ,ಇನ್ನೊಂದು ಕೈಯಲ್ಲಿ ಕಮಲ ಕಕ್ಕಿಯ ಕೈ.ಕಮಲ ಕಕ್ಕಿಯ ಇನ್ನೊಂದು ಕೈಯಲ್ಲಿ ಕೈ ದೀಪ.ಕಮಲ ಕಕ್ಕಿ ಗಟ್ಟಿ ದನಿಯಲ್ಲಿ ಪೇಚಾಡಿಕೊಂಡರು."ಕಣ್ಣಿಲ್ಲ,ಕಾಲಿಲ್ಲ.ಕುಂತಲ್ಲಿ ಕೂಡೋಲ್ಲಾ ,ನಿಂತಲ್ಲಿ ನಿಲ್ಲೋಲ್ಲಾ!ಮುದಕರಾದ ಮ್ಯಾಲೆ ಮನೆಯಾಗೆ ಸುಮ್ಮನೆ ಕೂಡ ಬಾರದೇನು?"ಇದಕ್ಕೆ ಶೇಷ ಮುತ್ಯನ ಉತ್ತರ "ಏ....,ಏನೇ !! ನೀನೇ ನನ್ನ ಮುದುಕ ಅಂದು ಬಿಟ್ಟರೆ ಮಂದಿ ಅನ್ನದೆ ಬಿಟ್ಟಾರೇ...?"ಅಲ್ಲಿದ್ದವರೆಲ್ಲಾ ಜೋರಾಗಿ ನಕ್ಕರು.ಕಮಲ ಕಕ್ಕಿಯೂ "ಮಾತಿಗೇನೂ ಕಮ್ಮಿ ಇಲ್ಲ "ಎಂದು ನಕ್ಕು ಸುಮ್ಮನಾದರು.ಶೇಷ ಮುತ್ಯ ಮತ್ತು ಕಮಲ ಕಕ್ಕಿ ಇಬ್ಬರೂ ಒಂದೇ ಬಾರಿಗೆ ಹಾಸಿಗೆ ಹಿಡಿದರು.ಸಾವು ಸಮೀಪಿಸಿದೆ ಅನ್ನಿಸಿತು ಮಕ್ಕಳಿಗೆ.ಎಲ್ಲಾ ಬಂಧುಗಳನ್ನೂ ಕರೆಸಿದರು.ಕಮಲ ಕಕ್ಕಿ ಮೊದಲು ಸತ್ತರು.ಶೇಷ ಮುತ್ಯ ಅರೆ ಬರೆ ಪ್ರಜ್ಞಾವಸ್ಥೆಯಲ್ಲಿದ್ದರು. ಅವರಿಗೆ ಕಮಲ ಕಕ್ಕಿಯ ಸಾವಿನ ಸುದ್ಧಿ ಹೇಳಿದರೆ ಹೃದಯಾ ಘಾತ ವಾಗಬಹುದು ಎಂದು ಹೆದರುತ್ತಲೇ ಅವರ ಬಳಿ ಸಮೀಪಿಸಿ"ಶೇಷ ಮುತ್ಯಾ,ಶೇಷ ಮುತ್ಯಾ ...."ಎಂದು ಕೂಗಿದರು.ಸಾವಿನತ್ತ ಸಾಗುತ್ತಿದ್ದ ಶೇಷ ಮುತ್ಯಾ ಕಣ್ಣು ತೆರೆದರು.ಏನು ಎಂಬಂತೆ ನೋಡಿದರು."ಕಮಲ ಕಕ್ಕಿ ಹೋದಳು"ಎಂದರು."ಹೋದಳೇ......?".....ಮೌನ.ಸಣ್ಣದೊಂದು ಕಿರು ನಗೆಯೊಂದಿಗೆ ಕ್ಷೀಣ ದನಿಯಲ್ಲಿ "ನಂಗಿನ್ನೊಂದು ಕನ್ಯಾ ನೋಡ್ರಪಾ"ಎಂದರು.ಸಾಯುವ ಸಮಯದಲ್ಲೂ ಹಾಸ್ಯವೇ?!!!
ಎಂತಹ ಅದ್ಭುತ,ಅಪರೂಪದ ಚೇತನ ಇವರದು!!ಸಾವಿನ ಮನೆಯಲ್ಲಿ ನಗೆಯೇ ನಗೆ.ಕೆಲ ಗಂಟೆಗಳ ನಂತರ ಶೇಷ ಮುತ್ಯ ಕೂಡ ದೇಹವನ್ನು ತ್ಯಜಿಸಿದರು.ನಗು ನಗುತ್ತಲೇ ಇಹಲೋಕ ಯಾತ್ರೆ ಮುಗಿಸಿ ಎಲ್ಲರ ಮನಸ್ಸಿನಲ್ಲೂ ತಂಬೆಳಕಿನಂತೆ ಉಳಿದು ಹೋದರು!!!
Subscribe to:
Post Comments (Atom)
ಎಲ್ಲೋ ಓದಿದ ನೆನಪು...ಬಹುಕಾಲ ಜೊತೆ ಬಾಳಿದ ದಾಂಪತ್ಯದಲ್ಲಿ..ಬರು ಬರುತ್ತಾ..ಗಂಡ ಹೆಂಡತಿ ಇಬ್ಬರು ಮುಖದಲ್ಲಿ, ಗುಣದಲ್ಲಿ ಒಂದೇ ಹೋಲಿಕೆ ಹೋಲುತ್ತಾರೆ ಅಂತ...
ReplyDeleteಒಬ್ಬರಿಗೊಬ್ಬರು ಅವಶ್ಯಕತೆ ಅನ್ನುವುದಕ್ಕಿಂತ ಬಿಟ್ಟಿರಲಾರದ ಅನುಬಂಧ..ಇಂತಹ ಬಂಧವನ್ನು ಗಟ್ಟಿ ಮಾಡುವುದು...ನಿಜ ದಾಂಪತ್ಯದ ಸಾಂಗತ್ಯ ಅಂದ್ರೆ ಬಹುಶಃ ಇದೆ ಇರಬೇಕು..
ಒಳ್ಳೆಯ ಲೇಖನ ಹಂಚಿಕೊಂಡದಕ್ಕೆ ಧನ್ಯವಾದಗಳು ಡಾಕ್ಟ್ರೆ
Shrikant hELiddu satya....
ReplyDeletetumbaa sogasaada prasanga hanchikonDiddakke dhanyavaada sir.....
ಇಂತಹ ಸಾವು ಬರಬೇಕು ಸಾರ್. ದಂಪತಿಗಳು ಜೊತೆಗೆ ಮರಣಿಸಿದರೆ ಚೆನ್ನ!
ReplyDeleteಶೀರ್ಷಿಕೆ ಓದಿ ಡಾಕ್ಟರಿಗೆ ಯಾಕಪ್ಪ ಮತ್ತೆ ಕನ್ಯೆ ನೋಡೋಣ ಅಂತ ಅನುಮಾನ ಬಂತು. ಒಳ್ಳೆಯ ಪ್ರಸಂಗ ಉಲ್ಲೇಖಿಸಿದ್ದೀರಿ, ಧನ್ಯವಾದಗಳು.
Heart touching Black humor
ReplyDeleteಎಲ್ಲೋ ಎಲ್ಲೋ ಬೆಳೆದು ಸಂಸಾರ ಬಂಧನ ದಲ್ಲಿ ಸಿಲುಕಿ ಗಂಡನಿಗೆ ಹೆಂಡತಿ ........ಹೆಂಡತಿಗೆ ಗಂಡ...ಬದುಕು ಎಷ್ಟೊಂದು ಅರ್ಥಪೂರ್ಣವಲ್ಲವೇ ......ಆದರ್ಶ ಬದುಕಿಗೆ ಕಥೆಯ ಓದಿನೊಂದಿಗೆ ಕಾಣಿಸುತ್ತಿದೆ ದೂರದ ದಾರಿ.............ಧನ್ಯವಾದಗಳು..
ReplyDeletebeechi yavara saahityada nenapu maadiddakke dhanyavaada doctre
ReplyDeleteolave namma jeevana joteyali saagona- santrupta badukina anavarana
ReplyDeleteಚಂದದ ಲೇಖನ , ಮನಸಿಗೆ ತುಂಬಾ ಹಿಡಿಸಿತು. ಜೈ ಹೋ ಸಾರ್
ReplyDeleteಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
touching.. Nice one
ReplyDeleteಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು.ನಿಮ್ಮ ಪ್ರೋತ್ಸಾಹ ಸದಾ ಇರಲಿ.ಬರುತ್ತಿರಿ.ನಮಸ್ಕಾರ.
ReplyDeleteAha.. Dr... Bhayagraphiyannu nenapu tarisidiri..
ReplyDeleteSavinallu mereyuva ee hasya pragne.. hiriyarige sadya..
Yes alwaa? some people are really amazing!! liked this
ReplyDelete:-)
malathi S
climax super...sir....like this sooo...much... :)
ReplyDeleteMurthy Sir,
ReplyDeleteTumbaa sogasaada baraha....ishta aitu sir...
ADBUTA ANDRE KADMEYAYTENO ALVE SIR? BIchi
ReplyDeleteHAASYA MANA MUTTUVANTAHADDU MATTU
TATTUVANTAHADDU.DHANYVADAGALU SIR.