Saturday, August 11, 2012

"ಜೋಕು........ಜೋಕಾಲಿ!!!"

೧)ಹೆಂಗಸೊಬ್ಬಳು ಕಣ್ಣಾಸ್ಪತ್ರೆಯ ಡಾಕ್ಟರರ ಮೇಲೆ "ನೀವು ನನ್ನ ಗಂಡನ ಕಣ್ಣಿನ ಆಪರೇಶನ್ ಸರಿಯಾಗಿ ಮಾಡಿಲ್ಲ.ಕಣ್ಣಿನ ಆಪರೇಶನ್ ಮಾಡಿದ ಮೇಲೆ ನನ್ನ ಗಂಡ ನನ್ನನ್ನು ಕಣ್ಣೆತ್ತಿಯೂ ನೋಡುತ್ತಿಲ್ಲ!!"ಎಂದು ಕೋರ್ಟಿನಲ್ಲಿ ದಾವೆ ಹಾಕಿದಳು.ಕೋರ್ಟಿನಲ್ಲಿ ಕಣ್ಣಾಸ್ಪತ್ರೆಯ ಡಾಕ್ಟರ್ರು"ನಾವು ನಿಮ್ಮ ಗಂಡನ ದೃಷ್ಟಿಯನ್ನು ಸರಿಮಾಡಿದ್ದೇವೆ.ಅದರಿಂದಾದ ಅನಾಹುತಕ್ಕೆನಾವು ಜವಾಬ್ದಾರರಲ್ಲ"ಎಂದರು.
೨)ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಒಬ್ಬರು ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು"ನೀವು ಬೀಚಿನಲ್ಲಿ ಹೋಗುತ್ತಿದ್ದೀರ.ಸುಂದರ ಯುವತಿಯೊಬ್ಬಳು ಸ್ಮೃತಿ ತಪ್ಪಿ ಬಿದ್ದಿದ್ದಾಳೆ.ಅವಳು ಉಸಿರಾಡುತ್ತಿಲ್ಲ.ತಕ್ಷಣವೇ ನೀವು ಅವಳ ತುಟಿಗಳನ್ನು ಬೆರಳುಗಳಿಂದ ಅಗಲಿಸಿ,ಬಾಯಿಂದ ಬಾಯಿಗೆ ಉಸಿರು ತುಂಬ ಬೇಕು.ಜೊತೆ ಜೊತೆಗೆ ನಿಮ್ಮ ಎರಡೂ ಕೈಗಳನ್ನೂ ಅವಳ ಎದೆಯ ಮೇಲಿರಿಸಿ ನಿಮಿಷಕ್ಕೆ ಅರವತ್ತು ಸಲ ಒತ್ತಬೇಕು.ಏನಾದರೂ ಪ್ರಶ್ನೆಗಳಿವೆಯೆ?(any questions?)"ಎಂದರು.ಹಿಂದಿನ ಬೆಂಚಿನಲ್ಲಿದ್ದ ಬಂಟಾ ಸಿಂಗ್ ಪ್ರಶ್ನಿಸಿದ "ಅವಳನ್ನು ಸ್ಮೃತಿ ತಪ್ಪಿಸುವುದು ಹೇಗೆ?".
೩)ಎಂಬತ್ತೆರಡು ವರ್ಷದ ಮಾರಿಸ್ ವೈದ್ಯಕೀಯ ಪರೀಕ್ಷೆಗೆಂದು ವೈದ್ಯರ ಬಳಿ ಹೋದ.ವೈದ್ಯರು ಕೆಲ ಔಷಧಿಗಳನ್ನು ಬರೆದು ಕೊಟ್ಟರು.ಜೊತೆಗೆ" you have got a heart murmer,be careful" ಎಂದು ಹೇಳಿದ್ದರು.ಎರಡು ದಿನಗಳ ಬಳಿಕ ಪಬ್ ಒಂದರಲ್ಲಿ ಮಾರಿಸ್ ಚೆಂದದ ಯುವತಿಯೊಂದಿಗೆ ಕುಳಿತದ್ದು ಕಂಡ ಡಾಕ್ಟರ್ "Ah !Morris !! you are doing great!! aren't you?" ಎಂದರು.ಅದಕ್ಕೆ ಮಾರಿಸ್" I sincerely followed your advise doctor. you had said -get a hot mamma and be cheerful".ತಾನು ಹೇಳಿದ್ದೇನು !!ಇವನು ಮಾಡುತ್ತಿರುವುದೇನು!!ಎಂದು ಡಾಕ್ಟರ್ರು ಅವಾಕ್ಕಾದರು.
(ಆಧಾರ:ಇಂದಿನ DECCAN HERALD ನ KHUSHWANT SINGH ಅವರ ಕಾಲಂ)

5 comments:

  1. ನಗು ಮಗುವಿನ ತರಹ..
    ಅದು ಕೊಡುವ ಚೈತನ್ಯದ ಚಿಲುಮೆ
    ಬತ್ತುವುದಿಲ್ಲ..
    ನಗಬೇಕು..ನಗುತಿರಬೇಕು..
    ಸುಂದರವಾದ ನಗೆ ಬುಗ್ಗೆಗಳು ಡಾಕ್ಟ್ರೆ

    ReplyDelete
  2. ಹಹಹ ತುಂಬಾ ಗಂಭೀರವಾದ ವೈದ್ಯಕೀಯ ವೃತ್ತಿಯಲ್ಲೂ ಇಂತಹ ಹಾಸ್ಯ ಪ್ರಸಂಗಗಳು ಇದ್ದಾಗಲೇ ವೈದ್ಯರಿಗೂ ಖುಷಿ.

    ReplyDelete

Note: Only a member of this blog may post a comment.