ನಮ್ಮ ಸಂಸಾರ ..........,
ಎದುರಿನ ಗೋಡೆಯ ಮೇಲಿನ
ಗಡಿಯಾರ.............,
ಎರಡಕ್ಕೂ ಎಷ್ಟೊಂದು ಸಾಮ್ಯ!
ನನ್ನ ಹೆಂಡತಿ.............,
ಶಿಸ್ತಿನ ಸಿಪಾಯಿ !
ಸೆಕೆಂಡಿನ ಮುಳ್ಳಿನ ಹಾಗೆ
ಸಪೂರ.........!
ಮೂಗಿಗೆ ಕವಡೆ ಕಟ್ಟಿಕೊಂಡ
ಗಾಣದೆತ್ತಿನ ದುಡಿತ !
ಅವಳ ನಿರಂತರ
ಪ್ರೀತಿಯ ತುಡಿತವೇ
ನಮ್ಮ ಸಂಸಾರದ
ನಾಡಿಯ ಮಿಡಿತ !
ಮಕ್ಕಳೋ ..........,
ನಿಮಿಷದ ಮುಳ್ಳುಗಳಂತೆ !
ನಿಮಿಷಕ್ಕೊಂದು ರೀತಿ !
ಗಂಟೆಗೆ ಅರವತ್ತರ
ಅವಸರದ ಓಟ !
ಇನ್ನು,ಅರವತ್ತರದ ಸನಿಹದ
ನಾನೋ.................!
ಗಂಟೆಯ ಮುಳ್ಳು !
ಧಡಿಯ !ನಿಧಾನಿ!
ಮನೆಯ ಪ್ರಧಾನಿ (?) !
ಗಂಟೆಗೊಮ್ಮೆ ಕದಲಿಕೆ!
ಮನೆಯೊಡತಿಯಿಂದ
'ಎಷ್ಟು ಸ್ಲೋ', ಎಂಬ
ಸಣ್ಣದೊಂದು ಮೂದಲಿಕೆ!
ಪ್ರೀತಿಯ ಬ್ಯಾಟರಿ ಮುಗಿದಾಗ
ಮನೆಯಲ್ಲಿ ಹಠಾತ್ ಮುಷ್ಕರ!
ಸ್ವಲ್ಪ ಕಾಲ ...........,
ಎಲ್ಲವೂ ,ಎಲ್ಲರೂ ಸ್ತಬ್ಧ!
ಮತ್ತೆ ಪ್ರೀತಿಯ ಹೊಸ ಚೈತನ್ಯ
ಮರು ಚಾಲನೆ ನೀಡುವ ತನಕ!!
ಮತ್ತದೇ ಓಟದ ಮಾಟ !!!
ಸಂಸಾರವನ್ನು ಗಡಿಯಾರಕ್ಕೆ ಹೋಲಿಸಿದ ನಿಮ್ಮ ಜಾಣ್ಮೆಗೆ ಶರಣು.
ReplyDeleteಇಲ್ಲಿ ಮತ್ತೊಂದಿದೆ ಸಾರ್. ಯಾವ ಮುಳ್ಳು ಕಳೆದರೂ ಗಡಿಯಾರ ನಡೀ ಒಲ್ಲದು ಅಲ್ಲವೇ!
ಬದರಿ;ಇಲ್ಲಿ ಇನ್ನೊಂದು ಅಂಶ ಗಮನಿಸ ತಕ್ಕಂತಹುದು.ಎಲ್ಲಾ ಮುಳ್ಳುಗಳಿಗೂ ಸಂಬಂಧವಿದೆ.ಎಲ್ಲವೂ ಎಲ್ಲವನ್ನೂ ಅವಲಂಬಿಸಿವೆ.ಅವು ಅವುಗಳ ಕೆಲಸ ಮಾಡುತ್ತಿದ್ದರೂ ಒಟ್ಟಾರೆ ಉದ್ದಿಶ್ಯ,ಗಡಿಯಾರವನ್ನು ಸರಿಯಾಗಿ ನಡೆಸುವುದು!ನಾವು ಕಲಿಯಬೇಕಾದದ್ದು ಬಹಳವಿದೆ!!ಅಲ್ಲವೇ?
Deleteಜೀವನ ಹೋಲಿಕೆ ಮತ್ತು ಸಂಸಾರ ಸಂಬಂಧಗಳ ವಿಶ್ಲೇಷಣೆ
ReplyDeleteತುಂಬಾ ತುಂಬಾ ವಿಶೇಷವಾಗಿದೆ ಈ ಕವಿತೆಯಲ್ಲಿ ಸರ್.. :)
ಖಟಾವ್ಕರ್;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
DeleteDoctor sir, good one
ReplyDeleteDESAI SIR;THANKS FOR THE KIND COMMENTS.REGARDS.
Deleteಕವನ ತುಂಬಾ ಸ್ವಾರಸ್ಯಕರವಾಗಿದೆ ಸರ್.
ReplyDeleteಸೆಕಂಡ್ ಮುಳ್ಳು ತಿರುಗುತ್ತಿದ್ದರೆ ಮಾತ್ರ ತಾಸಿನ ಮುಳ್ಳು ತಿರುಗುತ್ತದೆ!
ಭಟ್ ಸರ್;ಸೆಕೆಂಡಿನ ಮುಳ್ಳು ಮುಂದೆ ಮುಂದೆ,ತಾಸಿನ ಮುಳ್ಳು ತ್ರಾಸಿನಿಂದ ಮೆಲ್ಲಗೆ ಅದರ ಬೆನ್ನ ಹಿಂದೆ!!!ಹ...ಹ..ಹ...!!!
Deletewaah waah !!!!
ReplyDeleteಗಿರೀಶ್;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
Deleteಈ "ಗಡಿ" ಯಾರ?
ReplyDeleteಈ ಗಡಿಯಾರ
ತುಂಬು ಸಂಸಾರದ ಸಾರ...
ಹೆಜ್ಜೆಯ ಜೊತೆ ಪ್ರತಿ ಹೆಜ್ಜೆ..
ತಕ ತಕ ನೂಪುರದ ..ಸದ್ದು
ಇದೆ ಸುಖಿ ಜೀವನಕ್ಕೆ ಮದ್ದು
ಡಾಕ್ಟ್ರೆ ಸುಂದರ ಜೀವನದ ತಕ್ ತಕ್ ಓಟ ಗಡಿಯಾರದ ಜೊತೆಯಾ ನೋಟ...
ಶ್ರೀಕಾಂತ್;ನಮ್ಮ ಸಂಸಾರಕ್ಕೂ,ಗಡಿಯಾರಕ್ಕೂ ಎಷ್ಟೊಂದು ಸಾಮ್ಯ ಇದೆಯಲ್ಲವೇ?ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDelete