Sunday, July 29, 2012

"ಡಯಾಬಿಟಿಸ್ ಇದೆಯೇ? ಕೊಬ್ಬು ಕಮ್ಮಿ ಮಾಡಿ !!!"

ಮೊನ್ನೆ ಮದುವೆಯೊಂದಕ್ಕೆ ಹೋಗಿದ್ದೆ.ಧಾರೆ ಮಹೂರ್ತ ಹತ್ತಕ್ಕೆ ಮುಗಿದು,ಊಟದ ತನಕ ಸಾಕಷ್ಟು ಸಮಯವಿದ್ದುದರಿಂದ ಪರಿಚಯಸ್ಥರ ಜೊತೆ ಹರಟೆ ಕಾರ್ಯಕ್ರಮ ಶುರುವಾಯಿತು.ಎಲ್ಲರೂ ಮಧ್ಯವಯಸ್ಕರೇ ಆದ್ದರಿಂದ ಸಹಜವಾಗಿ ಎಲ್ಲರ ಹರಟೆಯ ವಿಷಯವೂ ಬೀಪಿ,ಡಯಾಬಿಟಿಸ್ಸೇ !!!ಈಗೀಗ ಬೀಪಿ,ಶುಗರ್ರು ಇಲ್ಲದವರೇ ಅಪರೂಪವೇನೋ ಎನ್ನುವಂತಾಗಿ ಬಿಟ್ಟಿದೆ !ಇಲ್ಲೊಂದು ಮುಖ್ಯ ವಿಷಯವನ್ನು ನಿಮಗೆ ಹೇಳಲೇ ಬೇಕೆಂಬ ಉದ್ದೇಶದಿಂದ ಈ ಲೇಖನ ಬರೆಯುತ್ತಿದ್ದೇನೆ.ವಯಸ್ಕರಲ್ಲಿ ಬರುವ ಸಕ್ಕರೆ ಖಾಯಿಲೆ ಅಥವಾ ಟೈಪ್ 2 ಡಯಾಬಿಟಿಸ್ ನಲ್ಲಿ ಇನ್ಸುಲಿನ್ ಕೊರತೆಗಿಂತ ಹೆಚ್ಚಾಗಿ ,ಇರುವ ಇನ್ಸುಲಿನ್ ಸಮರ್ಪಕವಾಗಿ ಕೆಲಸ ಮಾಡುತ್ತಿರುವುದಿಲ್ಲ.ಇದಕ್ಕೆ INSULIN RESISTANCE ಎನ್ನುತ್ತಾರೆ.ಇದು ಸಾಮಾನ್ಯವಾಗಿ ಮಧ್ಯವಯಸ್ಕ,ಸ್ಥೂಲ ಕಾಯ ಡಯಾಬಿಟಿಸ್ ರೋಗಿಗಳಲ್ಲಿ ಹೆಚ್ಚು.ಮದುವೆ ಮನೆಯಲ್ಲಿ ಇವರನ್ನುಗಮನಿಸಿದರೆ ,ನನಗೆ 'ಶುಗರ್ ಲೆಸ್'ಕಾಫಿ ಎನ್ನುವ ಇವರು , ಊಟದಲ್ಲಿ ಎರಡೆರಡು ಒಬ್ಬಟ್ಟಿಗೆ ತುಪ್ಪ ಹಾಕಿಸಿಕೊಂಡು ಹೊಡೆಯುತ್ತಾರೆ!ಚಿರೋಟಿಗೆ ಬೂರಿಸಕ್ಕರೆ,ಮೇಲೆ ಬಾದಾಮಿ ಹಾಲು!ಹೆಚ್ಚೇನಿಲ್ಲಾ.........ಎರಡೇ ಎರಡು ಅಲೂ ಬೋಂಡಾ! ಇಷ್ಟೆಲ್ಲಾ ತಿಂದು ಮೇಲೆ ಎರಡೆರಡು ಕಪ್ ಪಾಯಸ !ಅಪರೂಪಕ್ಕೆ ತಿಂದರೆ ಹೋಗಲಿ ಎನ್ನ ಬಹುದು.ಬೆಂಗಳೂರಿನಂತಹ ನಗರಗಳಲ್ಲಿ ವಾರಕ್ಕೊಂದು ಮದುವೆ ಮುಂಜಿ ಕಾರ್ಯಕ್ರಮ ನಡೆಯುತ್ತಲೇ ಇರುತ್ತವೆ.ಇಂತಹವರು 'ಏನು ಮಾಡೋದು ಸರ್ ಏನು ಮಾತ್ರೆ ತೆಗೆದು ಕೊಂಡರೂ ,ಎಷ್ಟು ಡಯಟ್ ಕಂಟ್ರೋಲ್ ಮಾಡಿದರೂ ಶುಗರ್ರು ಇನ್ನೂರ ಐವತ್ತಕಿಂತ ಕಮ್ಮೀನೇ ಆಗೋಲ್ಲಾ ಅಂತಾರೆ!' ಇಂತಹವರು ತಮ್ಮ ಆಹಾರದಲ್ಲಿ ಕೊಬ್ಬಿನ ಅಂಶವನ್ನು ಆದಷ್ಟೂ ಕಮ್ಮಿ ಮಾಡಲೇ ಬೇಕು.ಒಂದು ಗ್ರ್ಯಾಂ ಪಿಷ್ಟದಿಂದ (carbohydrate) 4 ಕ್ಯಾಲೋರಿ ಎನರ್ಜಿ ಉತ್ಪತ್ತಿಯಾದರೆ,ಒಂದು ಗ್ರ್ಯಾಂ ಕೊಬ್ಬು (fat) 9 ಕ್ಯಾಲೋರಿ ಎನರ್ಜಿ ಕೊಡುತ್ತದೆ.ವ್ಯಯವಾಗದ ಎನರ್ಜಿ ದೇಹದ ಎಲ್ಲಾ ಕಡೆ (ಮುಖ್ಯವಾಗಿ ಮಾಂಸ ಖಂಡ ಗಳಲ್ಲಿ) ಸೇರಿ insulin resistance ಗೆ ಕಾರಣವಾಗುತ್ತದೆ.ಆದ್ದರಿಂದ ತೂಕ ಹೆಚ್ಚಿರುವ ಡಯಾಬಿಟಿಸ್ ರೋಗಿಗಳು ಮುಖ್ಯವಾಗಿ ತಮ್ಮ ಆಹಾರದಲ್ಲಿನ ಕೊಬ್ಬಿನ ಅಂಶವನ್ನು ಕಮ್ಮಿ ಮಾಡಲೇ ಬೇಕು .ದೇಹದ ಮಾಂಸ ಖಂಡಗಳು ಕೆಲಸ ಮಾಡಿದರೆ ಅವುಗಳಲ್ಲಿ ಕೊಬ್ಬಿನ ಅಂಶ ಹೆಚ್ಚು ಸೇರುವುದಿಲ್ಲ.ಆದ್ದರಿಂದ ದಿನಕ್ಕೆ ಅರ್ಧ ತಾಸಿನಿಂದ ಒಂದು ತಾಸಿನ ನಡಿಗೆ ಬೇಕೇ ಬೇಕು.ನಡಿಗೆಯನ್ನು ನಿಲ್ಲಿಸಲೇ ಬಾರದು.ಇವರು ಔಷಧಿಗಳನ್ನು ಸರಿಯಾಗಿ ತೆಗೆದುಕೊಂಡು ,ಕೊಬ್ಬಿನ ಅಂಶ ಕಮ್ಮಿ ಮಾಡಿ ,ನಡೆ ಮುಂದೆ ,ನಡೆ ಮುಂದೆ ಎಂದು ನಡಿಗೆಯನ್ನು ತಮ್ಮ ದಿನ ನಿತ್ಯದ ಜೀವನದಲ್ಲಿ ಅಳವಡಿಸಿ ಕೊಂಡರೆ ,ಯಾವುದೇ ತೊಂದರೆ ಇಲ್ಲದೆ ಎಲ್ಲರಂತೆ ಸುಖವಾಗಿ ಬಾಳಬಹುದು. ಶುಭಮಸ್ತು.ಸರ್ವೇ ಜನಾಹ ಸುಖಿನೋ ಭವಂತು!ನಮಸ್ಕಾರ.

12 comments:

 1. ಹಾ ಹೌದು ಸರ್.. & ನಮ್ಮ ದೊಡ್ಡಪ್ಪ ಅವರು ಡಯಾಬಿಟಿಸ್ ಅಂತಾ ಇನ್ಸುಲಿನ್ ತೊಗೊತಾ ಇದ್ರು ತುಂಬಾ ದಿನ.. ಆದರೆ ಈಗೀಗ ಒಂದು ವರ್ಷ ಆಗಿದೆ ನಿಲ್ಲಿದ್ದಾರೆ .. ಕಾರಣ ದಿನಕ್ಕೆ ಎರಡು ಗಂಟೆ ಕಾಲ ವಾಕಿಂಗ್ ಮಾಡ್ತಾರೆ .. ಮೊದಲು ಊರಿಂದ ಊರಿಗೆ ಹೋಗಿ ಬರೋಕ್ಕೆ ಯಾರಾದ್ರು ಜೊತೆ ಇರಬೇಕಿತ್ತು .. ಆದರೆ ಈಗ ಅವರೊಬ್ಬರೇ ಪ್ರಯಾಣ ಮಾಡುವಷ್ಟು ಆರಾಮ್ ಆಗಿದ್ದಾರೆ .. ಅವರಿಗೀಗ ಎಪ್ಪತ್ತೇಳು ವರ್ಷಗಳು ದಾಟಿದೆ .. ಆದರೆ ಈಗ ಅವರು ಐವತ್ತು ವರ್ಷದವರಂತೆ ಅನ್ನಿಸ್ತಾರೆ ... ಅದಕ್ಕೆಲ್ಲಾ ಪ್ರತೀ ದಿನದ ಎರಡು ಗಂಟೆ ನಡಿಗೆಯೇ ಕಾರಣ .. & ನಿಮ್ಮ ಈ ಲೇಖದಲ್ಲಿನ ಮಾಹಿತಿ ತುಂಬಾ ಉಪಯುಕ್ತ ವಿಚಾರವನ್ನು ಉದ್ದೇಶಿಸಿ ಚೆಂದವಾದ ಕಥೆಯಾಗಿ ಹೊರಹೊಮ್ಮುತ್ತಿದೆ .. ಇಷ್ಟ ಆಯಿತು ಸರ್.. :)

  ReplyDelete
  Replies
  1. ಖಟಾವಕರ್;ಪ್ರತಿಕ್ರಿಯೆಗೆ ಧನ್ಯವಾದಗಳು.ಪ್ರತಿನಿತ್ಯ ತಪ್ಪದೆ ಒಂದು ಗಂಟೆ ವಾಕಿಂಗ್ ಮಾಡಿ ,ಆಹಾರದಲ್ಲಿನ ನಿಯಮಗಳನ್ನೂ ಕಟ್ಟುನಿಟ್ಟಾಗಿ ಪಾಲಿಸಿ ಚೆನ್ನಾಗಿರುವ ಮಧುಮೆಹಿಗಳನ್ನು ನೋಡಿದ್ದೇನೆ.

   Delete
 2. ಈಗ ಸರ್ವೇ ಸಾಮಾನ್ಯವಾದ ಸಕ್ಕರೆ ಖಾಯಿಲೆ ಮತ್ತು ಅದರ ನಿಯಂತ್ರಣದ ಬಗ್ಗೆ ಅತ್ಯುತ್ತಮ ಮಾಹಿತಿ ಕೊಟ್ಟಿದ್ದೀರ.

  ಒಬ್ಬಟ್ಟಿನ ಮೇಲೆ ತುಪ್ಪ ಎಂದಾಗ ನನಗೆ ನನ್ನ ಹತ್ತಿರದ ನೆಂಟರೊಬ್ಬರು ನೆನಪಾದರು. ಅವರಿಗೆ ಇನ್ಸುಲಿನ್ ಚುಚ್ಚು ಮದ್ದು ಕೊಟ್ಟುಕೊಟ್ಟೆ ವೈದ್ಯರೊಬ್ಬರು ನಿವೇಶನ ತೆಗೆದುಕೊಂಡರು!!

  ReplyDelete
  Replies
  1. ಬದರಿ;ನಿಮಗೆ ಒಬ್ಬ ನೆಂಟರು ನೆನಪಾದರು.ಇಂತಹ ರೋಗಿಗಳನ್ನು ನಾವು ದಿನ ನಿತ್ಯ ನೋಡುತ್ತಿರುತ್ತೇವೆ.ಅವರಿಗೆ ಬಾಯಿ ಕಟ್ಟುವುದು,ವ್ಯಾಯಾಮ,ನಡಿಗೆ ಯಾವುದೂ ಬೆಲಿಲ್ಲ.ಎಲ್ಲವೂ ಔಷಧಿಯಿಂದಲೇ ಗುಣವಾಗಬೇಕೆನ್ನುತ್ತಾರೆ !

   Delete
 3. ಉತ್ತಮ ಮಾಹಿತಿ ಡಾಕ್ಟ್ರೆ...ರೋಗವಲ್ಲದ ರೋಗಕ್ಕೆ ಮದ್ದು ಬಯಸುವರೆ ಜಾಸ್ತಿ...ನೀವು ಕೊಟ್ಟ ಮಾಹಿತಿ ಉಪಯೋಗಮಾಡಿಕೊಂಡು...ಈ ಅನುಮಾನದ ರೋಗವನ್ನು ಖಂಡಿತ ಹೋಗಲಾದಿಸಿಕೊಳ್ಳಬಹುದು

  ReplyDelete
  Replies
  1. ಶ್ರೀಕಾಂತ್;ಈ ರೋಗಕ್ಕೆ ಮದ್ದು ನಮ್ಮ ಕೈಯಲ್ಲೇ ......ಅಲ್ಲಲ್ಲಾ ಕಾಲಲ್ಲೇ ಇದೆ!ಎಷ್ಟು ಸಾಧ್ಯವೋ ಅಷ್ಟು ನಡೆದು ಸ್ವಲ್ಪ ಬಾಯಿ ಕಟ್ಟಿದರೆ ಸಾಕು !

   Delete
 4. ನನಗೂ ಡಯಾಬಿಟಿಸ್ ಇದೆ. ಕಳೆದೊಂದು ತಿಂಗಳಿನಿಂದ ವಾಕಿಂಗ್ ನಿಲ್ಲಿಸಿಬಿಟ್ಟಿದ್ದೆ. ನಿಮ್ಮ ಲೇಖನ ಓದಿ ಕಣ್ಣು ತೆರೆಯಿತು. ಮತ್ತೇ ನಡಿಗೆಯನ್ನು ಪ್ರಾರಂಭಿಸುವೆ.

  ReplyDelete
  Replies
  1. ಸುನಾತ್ ಕಾಕ;ನಡೆಯೋದನ್ನು ಮಾತ್ರ ಬಿಡಬೇಡಿ.ಅದು ಬಹಳಷ್ಟು ರೀತಿಯಲ್ಲಿ ಲಾಭದಾಯಕ.ಆಹಾರದಲ್ಲಿ ಕೊಬ್ಬಿನ ಅಂಶ ಎಷ್ಟು ಸಾಧ್ಯವೋ ಅಷ್ಟೂ ಕಮ್ಮಿಯಾಗಲಿ.ನಮಸ್ಕಾರ.

   Delete
 5. ಮಾರ್ಗದರ್ಶಕ ಲೇಖನ..ತುಂಬಾ ಚೆನ್ನಾಗಿದೆ. ನನಗೊಬ್ಬ ಮಧುಮೇಹ ರೋಗಿ ಗೊತ್ತು...ಸಪ್ಪೆ ಊಟ ಮಾಡಿ ಮಾಡಿ ಬೇಜಾರಾಗಿದೆ..ಎಂದು ಹೇಳುತ್ತಾ ಊಟದ ಕೊನೆಯಲ್ಲಿ "ಸ್ವೀಟ್" ತಿಂದುಬಿಡುತ್ತಾರೆ!..ರುಚಿ ಹತ್ತಿದ ನಾಲಿಗೆಯನ್ನು ಹದ್ದು-ಬಸ್ತಿನಲ್ಲಿ ಇಡುವದು ತುಂಬಾ ಕಷ್ಟ!

  ReplyDelete
 6. ಭಟ್ ಸರ್;ಬಹಳಷ್ಟು ಸಿಹಿತಿನ್ದಿಗಳಲ್ಲಿ ಸಾಕಷ್ಟು ಕೊಬ್ಬಿನ ಅಂಶವೂ ಇರುವುದರಿಂದ ಅವು ಹೆಚ್ಚು ಹಾನಿಕರ .ಉದಾಹರಣೆಗೆ;ಮೈಸೂರ್ ಪಾಕು ,ಗುಲಾಬ್ ಜಾಮೂನು ,ಜಿಲೇಬಿ,ಜಹಾಂಗೀರ್,ಬಾದುಷಾ,ಹಲ್ವಾ,.....ವಗೈರೆ,ವಗೈರೆ.

  ReplyDelete
 7. nimma kathegalannu oduvude ondu sogasu doc.. keep bloging

  ReplyDelete
 8. maanyare, dayabities idu maarkarogavaadru. obbobbaralli ondondu reetiya parinaama beeruttade. vaidyaraada neevu rogada bagge maahiti needalu koruttene. dEhadalli E roga kanisikonda nantara side effect needaanavaagi kaanisutta baruttade. e bagge mahitineedalu koruttene. maahitigaagi vandanegalu.

  ReplyDelete