Sunday, July 15, 2012

"ಎದೆಗು ,ಎದೆಗು ನಡುವೆ ಕಡಲು!!! "

ಗಂಟಲೊಳಗಿನ ಬಿಸಿ ತುಪ್ಪ
ಉಗುಳಲಾಗದು, ನುಂಗಲಾಗದು!
ಹೆಸರಿಗೆ ಮಾತ್ರದ ಸಂಬಂಧಗಳು !
ಎದೆಗೂ,ಎದೆಗೂ ನಡುವೆ ಕಡಲು!
ಕಡಲೊಳಗೆ ಸಾವಿರ ಸಾವಿರ
ಮುಸುಕಿನ ಗುದ್ದಾಟದ
ಶಾರ್ಕ್,ತಿಮಿಂಗಿಲಗಳು!
ನಮ್ಮ ನಮ್ಮ ಅಹಂಕಾರಗಳ
ಆಕ್ಟೋಪಸ್ ಹಿಡಿತಗಳು!
ಇಷ್ಟು ಸಾಲದೇ ಸಂಬಂಧ ಕೆಡಲು!
ಮೇಲೆ ಮಾತಿನ ಮರ್ಮಾಘಾತದ
ಅಲೆಗಳ ಹೊಡೆತಕ್ಕೆ
ಆತ್ಮೀಯತೆಯ ಸೇತುವಿನ
ಬೆಸೆಯಲಾಗದ ಬಿರುಕು!
ಯಾವುದೋ ಮದುವೆಯಲ್ಲೋ
ಮುಂಜಿಯಲ್ಲೋ,
ಎದುರೆದುರು ಸಿಕ್ಕಾಗ
ಹುಳ್ಳಗೆ ನಕ್ಕು 'ಹಾಯ್'ಎಂದು
ಗಾಯಕ್ಕೆ ಮುಲಾಮು ಸವರೋಣ!!
ಮುಂದಿನ ಭೆಟ್ಟಿಯ ತನಕ
ನಿರಾಳವಾಗಿ 'ಬೈ'ಎಂದು ಬಿಡೋಣ!!

5 comments:

  1. ಶೀರ್ಷಿಕೆಗೆ ಸಂಪೂರ್ಣ ೧೦೦ ಅಂಕಗಳು.

    ಸಂಬಂಧಗಳು ಹದಗೆಟ್ಟಾಗ ಅವುಗಳು ಕೊಡುವ ಮಾನಸಿಕ ವೇದನೆಯನ್ನು ಸಮರ್ಥವಾಗಿ ಚಿತ್ರಿಸಿದ್ದೀರ.

    ಯಾರೋ ನಮ್ಮನ್ನು ಕಂಡರೆ ವಿನಾಕಾರನ ಉರಿದು ಬೀಳುತ್ತಾರೆ, ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಾರೆ. ಅವರ ಆ ಸಿಟ್ಟಿನ ಜ್ವಾಲೆ ನಮ್ಮನ್ನು ಸುಡುತ್ತಿರುತ್ತದೆ. ಆದರೂ ನಾವು ಒಮ್ಮೆಲೆ ಅವರನ್ನು ದೂರ ತಳ್ಳಲಾರೆವು. ಅವರ ಈ ಕೋಪಾಟೋಪ ನಮಗೆ ಇಷ್ಟವಾಗುತ್ತಿಲ್ಲ ಎಂದು ಅವರಿಗೂ ಗೊತ್ತಿರುತ್ತದೆ ಆದರೆ ಅವಎಉ ನಮ್ಮನ್ನು ಘಾಸೀ ಮಾಡುತ್ತಲೇ ಇರುತ್ತಾರೆ.

    ಆದರೂ, ಅವರನ್ನು ಹೇಗಾದರೂ ಮಾಡಿ ಸರ್ ದಾರಿಗೆ ತರುವ ನಿಮ್ಮ ಆಲೋಚನೆ ಇದೆಯಲ್ಲ, ಇದು ಉತ್ತಮ ಬೆಳವಣಿಗೆ.

    ReplyDelete
  2. ಸ೦ಬ೦ಧಗಳು ನಶಿಸಿಹೋಗುತ್ತಿರುವ ಬಗೆಯನ್ನು ಬಹಳ ಚೆನ್ನಾಗಿ ಕವನಿಸಿದ್ದೀರಿ ಸರ್, ಆದರೂ ಅದನ್ನು ಉಳಿಸಿಕೊಳ್ಳುವ ಪರಿ ಆಶಾದಾಯಕವಾಗಿದೆ! ಬದರಿಯವರ ವಿಶ್ಲೇಷಣೆ ಹೊಸ ಹೊಳಹನ್ನೇ ನೀಡುತ್ತಿದೆ. ನನ್ನ ಬ್ಲಾಗ್ ಗೂ ಬನ್ನಿ.

    ReplyDelete
  3. wonderful.....yaantrika badukina kannaDi nimma kavana.... novu saha ide....

    tumbaa chennaagide sir...

    ReplyDelete
  4. thumbaa olle kavana .arthapoorna vaagide.

    ReplyDelete
  5. ಮೂರ್ತಿ ಸರ್,

    ಸಂಬಂಧಗಳು ಹೇಗೆ ದೂರ ಆಗುತ್ತವೆ ಹಾಗೆ ಅವುಗಳನ್ನು ಹೇಗೆ ಹತ್ತಿರ ಮಾಡಿಕೊಳ್ಳಬೇಕು ಎಂಬುದನ್ನು ಸರಳವಾಗಿ ಸುಂದರ ಸಾಲುಗಳ ಮೂಲಕ ಚಿತ್ರಿಸಿದ್ದೀರಿ.

    ಯಾವುದೋ ಮದುವೆಯಲ್ಲೋ
    ಮುಂಜಿಯಲ್ಲೋ,
    ಎದುರೆದುರು ಸಿಕ್ಕಾಗ
    ಹುಳ್ಳಗೆ ನಕ್ಕು 'ಹಾಯ್'ಎಂದು
    ಗಾಯಕ್ಕೆ ಮುಲಾಮು ಸವರೋಣ!!
    ಮುಂದಿನ ಭೆಟ್ಟಿಯ ತನಕ
    ನಿರಾಳವಾಗಿ 'ಬೈ'ಎಂದು ಬಿಡೋಣ!!

    ಈ ಸಾಲುಗಳು ತುಂಬಾನೇ ಇಷ್ಟ ಆದವು.....

    ನಿಮ್ಮ ಬರಹಗಳ ಅಭಿಮಾನಿ...
    ಅಶೋಕ್

    ReplyDelete

Note: Only a member of this blog may post a comment.