ಅದಕ್ಕೆ ವೈದ್ಯರು "ನೋಡಿ ಮಿಸ್ಟರ್,ಹಾಗೆಲ್ಲಾ ಪರೀಕ್ಷೆ ಮಾಡದೇ ಔಷಧಿ ಕೊಡಲು ಆಗುವುದಿಲ್ಲ.ಅವರನ್ನು ಕರೆದು ಕೊಂಡು ಬನ್ನಿ ,ಪರೀಕ್ಷೆ ಮಾಡಿ ಔಷಧಿ ಕೊಡೋಣ"ಎಂದರು.
ಅದಕ್ಕೆ ಆ ವ್ಯಕ್ತಿ "ಅವಳು ಆಸ್ಪತ್ರೆಗೆ ಬರುವುದಿಲ್ಲಾ ಸರ್.ನಿಮಗೇ ಕಿವಿ ಕೆಪ್ಪು.ಬೇಕಾದರೆ ನೀವೇ ಪರೀಕ್ಷೆ ಮಾಡಿಸಿಕೊಳ್ಳಿ"ಎಂದು ದಬಾಯಿಸುತ್ತಾಳೆ ಎಂದ.
ಅದಕ್ಕೆ ವೈದ್ಯರು"ಅವರಿಗೆ ಎಷ್ಟು ದೂರದಿಂದ ಕಿವಿ ಕೇಳುವುದಿಲ್ಲ ಎಂದು ತಿಳಿದು ಕೊಂಡು ಬನ್ನಿ .ಆಮೇಲೆ ನೋಡೋಣ"ಎಂದರು.
ಆ ದಿನ ಆ ವ್ಯಕ್ತಿ ತನ್ನ ಹೆಂಡತಿಗೆ ಎಷ್ಟು ದೂರದಿಂದ ಕಿವಿ ಕೇಳುವುದಿಲ್ಲ ಎಂದು ತಿಳಿದುಕೊಳ್ಳಬೇಕೆಂದು ನಿರ್ಧರಿಸಿ ಮನೆಗೆ ಬಂದ.ಹೆಂಡತಿ ಅಡಿಗೆ ಮನೆಯಲ್ಲಿದ್ದಳು.
ಇವನು ಮನೆಯ ಮುಂಬಾಗಿಲ ಬಳಿ ನಿಂತು"ಏನೇ, ಇವತ್ತು ಏನಡಿಗೆ ?"ಎಂದು ಕೂಗಿದ.
ಉತ್ತರವಿಲ್ಲ.ನಡು ಮನೆಗೆ ಬಂದು ಕೂಗಿದ.ಉತ್ತರವಿಲ್ಲ.ಹೀಗೆಯೇ ಹತ್ತಾರುಸಲ ಸ್ವಲ್ಪ,ಸ್ವಲ್ಪವೇ ಹತ್ತಿರಬಂದು"ಏನೇ ,ಇವತ್ತು ಏನಡಿಗೆ?"ಎಂದು ಪ್ರಶ್ನೆ ಕೇಳಿ ,ಉತ್ತರ ಸಿಗದೇ, ಕಡೆಗೆ ಅಡಿಗೆ ಮನೆಗೆ ಬಂದು "ಏನೇ....,ಇವತ್ತು ಏನಡಿಗೆ?"ಎಂದ.
ಅದಕ್ಕೆ ಅವನ ಹೆಂಡತಿ"ಅಯ್ಯೋ......!ಆಗ್ಲಿಂದ ಹತ್ತು ಸಲ ಬೆಂಡೆಕಾಯಿ ಸಾಂಬಾರು,ಬೆಂಡೆಕಾಯಿ ಸಾಂಬಾರು ಅಂತ ಬಡಕೊಂಡು,ಬಡಕೊಂಡು ಸಾಕಾಯಿತು.ನಿಮಗೇ ಕಿವಿ ಕೆಪ್ಪಾಗಿದೆ ಅಂತ ಹೇಳಿದರೆ ನೀವು ಕೇಳೋಲ್ಲಾ!ಮೊದಲು ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ."ಎಂದಳು.
ಪರೀಕ್ಷೆ ಮಾಡಲು ಬಂದವನೇ ಪರೀಕ್ಷೆಯಲ್ಲಿ ಫೇಲಾಗಿದ್ದ!!! ಪರೀಕ್ಷೆಯ ರಿಸಲ್ಟ್ ತಿಳಿದು ಪೇಲಾಗಿದ್ದ!!!
ಹ್ಹಾ... !! ಹ್ಹೋ ಹ್ಹೊ !!
ReplyDeleteಸೂಪರ್ರು ಡಾಕ್ಟ್ರೆ... !!
ಆಜಾದನ ಮನೆ ರೂಫ್ ಕಾಂಕ್ರೀಟು ಮುಗಿಸಿ ...
ಸುಸ್ತಾಗಿ ಬಂದವನಿಗೆ ನಿಮ್ಮ ಬ್ಲಾಗ್ ಸಿಕ್ಕಿತು...
ನಕ್ಕು ನಕ್ಕೂ ಸುಸ್ತೆಲ್ಲ ಮಾಯವಾಯ್ತು...
ಇತ್ತೀಚೆಗೆ ನಮ್ಮನೆಯಲ್ಲೂ ಇಂಥಹದ ಘಟನೆಯೊಂದು ನಡೆದಿತ್ತು..........
ಹ್ಹಾ ಹ್ಹಾ ಹ್ಹಾ !!
olle joke!!!
ReplyDeleteroga nammalle ittukondu bereyavarige chikitse kodo huchchige ondu uttama kathe
ha ha ha... :) :)
ReplyDeleteಪ್ರಪಂಚ ಯಾಕೋ ಮಂಕಾಗಿ ಬಿಟ್ಟೈತೆ ಅಂತ ಕೊರಗುತ್ತ ಕೂರುವ ಬದಲು...ಕನ್ನಡಕ ದೂಳು ಒರೆಸಿಕೂಳ್ಳಬೇಕು ಎನ್ನುವ ತತ್ವವನ್ನು ಸಾರುವ ಅನುಭವ ಕೊಡುತ್ತೆ...
ReplyDeleteಧನ್ಯವಾದಗಳು ಡಾಕ್ಟ್ರೆ...
ಕಥೆ ಉಲ್ಟಾ ಹೊಡೆಯೋ ಕ್ಲೈ ಮ್ಯಾಕ್ಸಿನಲ್ಲಿ ಬಾಂಬ್ ಸಿಡಿಸಿದ ನಿಮ್ಮ ಕಥೆ ಅದ್ಭುತವಾಗಿದೆ.
ReplyDeleteತನ್ನ ಲೋಪವನ್ನು ಅರಿಯದ ಪೆದ್ದರು ಇನ್ನೊಬ್ಬರಲ್ಲಿ ಲೋಪವು ಇರಬಹುದು ಎಂದು ಅನುಮಾನಿಸಿ ಅವಮಾನಿಸೋ ಜಗತ್ತಿಗೆ ಇದು ಸರಿಯಾದ ಪಾಠ.
ಕೊಳಲು ಇದಕ್ಕೆ ನನಗೆ ತುಂಬಾ ಆಪ್ತವಾಗುವುದು.
hha hha...chennaagi barediddiri.....
ReplyDeleteಹ ಹ ಹ , ಇದಪ್ಪಾ ತಮಾಷೆ , ತನ್ನಲ್ಲಿರುವ ನ್ಯೂನ್ಯತೆ ಸರಿಪಡಿಸಿಕೊಳ್ಳದೆ, ಬೇರೆಯವರ ನ್ಯೂನ್ಯತೆ ಬಗ್ಗೆ ಅನುಮಾನ ಪಟ್ಟರೆ ಹೀಗೆ ಆಗೋದು.
ReplyDeleteಹಹಹಹ.......
ReplyDeleteಮರು ಮಾತಿಲ್ಲ....
ಡಾ. ಡಿ,ಟಿ.ಕೆ ಹತ್ರ ನಾನೂ ಅಪಾಯಿಂಟ್ಮೆಂಟ್ ತಗೋಬೇಕು...ಹಹಹಹಹ
ಹ ಹ ಹ ಹ....ಸೂಪರ್ ಮೂರ್ತಿ ಸರ್....
ReplyDelete