ಅರ್ಧ ಗಂಟೆಯ ನಂತರ ಬ್ರೆಡ್ ಟೋಸ್ಟ್ ಇದ್ದ ಪ್ಲೇಟ್ ಒಂದನ್ನು ಕೈಯಲ್ಲಿ ಹಿಡಿದು ಬಂದು, 'ನೋಡು ,ನೀನು ಹೇಳಿದ ಬ್ರೆಡ್ ಟೋಸ್ಟ್ ಜ್ಞಾಪಕ ಇಟ್ಟು ಕೊಂಡು ತಂದಿಲ್ವಾ ?ಸುಮ್ನೆ ಮರೆವೂ ,ಮರೆವೂ ಅಂತೀಯ', ಎಂದ .ಹೆಂಡತಿ ಆಶ್ಚರ್ಯದಿಂದ 'ಹೌದಲ್ರೀ ನಿಮ್ಮ ನೆನಪಿನ ಶಕ್ತಿ ಚೆನ್ನಾಗೆ ಇದೆ !ನಾನು ಹೇಳಿದ್ದು ಬ್ರೆಡ್ ಟೋಸ್ಟೇ 'ಎಂದು ಒಪ್ಪಿಕೊಂಡಳು.'ನೋಡಿದ್ಯಾ ,ನೆನಪಿಟ್ಟುಕೊಂಡು ನಿನಗೆ ಬ್ರೆಡ್ ಟೋಸ್ಟ್ ತಂದಿದ್ದಲ್ಲದೇ ನಾನು ಕುಡಿಯೋಕೆ ಅಂತ ಹೋಗಿದ್ದ ಕಾಫಿಯನ್ನೂ ಮರೀದೆ ಮಾಡಿ ಕುಡಿದು ಬಂದೆ ',ಎಂದು ಗಂಡ ಜಂಬ ಕೊಚ್ಚಿಕೊಂಡ !!!
Thursday, July 12, 2012
"ನನಗಲ್ಲ....,ನಿನಗೇ....ಮರೆವು!!!"
ಗಂಡ ಹೆಂಡತಿ ಇಬ್ಬರಿಗೂ ಸುಮಾರು ಎಂಬತ್ತೈದರ ವಯಸ್ಸು.ವಯೋಗುಣಕ್ಕೆ ಸಹಜವಾಗಿ ಸಣ್ಣ ಪುಟ್ಟ ತೊಂದರೆಗಳಿದ್ದರೂ ಅವರಿಗಿದ್ದ ಬಹು ದೊಡ್ಡ ಸಮಸ್ಯೆ ಎಂದರೆ ಮರೆವು .ಮರೆತು ಹೋಗಬಹುದದ್ದನ್ನು ಬರೆದಿಟ್ಟುಕೊಳ್ಳುವಂತೆ ಡಾಕ್ಟರ್ ಒಬ್ಬರು ಸಲಹೆ ನೀಡಿದರು .ಆದರೆ ಇಬ್ಬರೂ ತಮಗೆ ಮರೆವಿದೆಯೆಂದು ಒಪ್ಪಿಕೊಳ್ಳಲು ತಯಾರಿರಲಿಲ್ಲ .ಗಂಡ 'ನನ್ನ ಹೆಂಡತಿಗೆ ತುಂಬಾ ಮರೆವು ಡಾಕ್ಟ್ರೆ'ಎಂದರೆ, ಹೆಂಡತಿ 'ಹಾಗೇನಿಲ್ಲಾ ಡಾಕ್ಟ್ರೆ ಅವರಿಗೇ ವಿಪರೀತ ಮರೆವು 'ಎಂದು ದಬಾಯಿಸುತ್ತಿದ್ದಳು .ಒಂದು ಸಂಜೆ ಇಬ್ಬರೂ ಟಿ.ವಿ.ನೋಡುತ್ತಾ ಕುಳಿತಾಗ ಗಂಡ ಅಡಿಗೆ ಮನೆಗೆ ಹೋಗಲು ಎದ್ದುನಿಂತ .ಹೆಂಡತಿ' ಯಾಕ್ರೀ ಎದ್ರಿ' ?ಎಂದಳು .ಗಂಡ 'ಅಡಿಗೆ ಮನೆಗೆ ,ನೀರು ಕುಡಿಯೋಕೆ 'ಎಂದ .'ಹಾಗೇ ಅಡಿಗೆಮನೆ ಫ್ರಿಡ್ಜ್ ನಿಂದ ನನಗೊಂದು ಕೇಕ್ ತಂದುಕೊಡಿ .ಬರೆದಿಟ್ಟುಕೊಳ್ಳಿ ,ಮರೀತೀರ 'ಎಂದಳು ಹೆಂಡತಿ.ಗಂಡನಿಗೆ ಸಿಟ್ಟು ಬಂತು . 'ಹೋಗೇ---ಹೋಗೇ ,ಅದನ್ನೆಲ್ಲಾ ಯಾರಾದರೂ ಬರೆದಿಟ್ಟು ಕೊಳ್ಳುತ್ತಾರಾ ,ನೀ ಹೇಳಿದ ಕೇಕ್ ಮರೀದೆ ತರ್ತೀನಿ,ನೋಡ್ತಾ ಇರು 'ಎಂದು ನಿಧಾನವಾಗಿ ಅಡಿಗೆ ಮನೆಗೆ ಹೋದ .
Subscribe to:
Post Comments (Atom)
ಮರೆಗುಳಿಗಳು...ಮರೆಗುಳಿಗಳು....ಮರೆವು ಮಾನವನಿಗೆ ಕೊಟ್ಟ ವರ...ಹಾಸ್ಯದ ಮರೆವು...ಹಹಹಃ
ReplyDeleteಮರೆವಿನ ಲೋಕದ ಸಾಮ್ರಾಟರು. ಪರಸ್ಪರ ಸಂಬಂದ ಮರೆತು ಹೊಗದೇ ಇದ್ದದ್ದು ದೊಡ್ಡ ಜಾದು ಸರ್. ಓದಿ ನಕ್ಕು ಹಗುರಾದೆ..ಧನ್ಯವಾದಗಳು.
Deleteಭಗವಂತ ಈ ಸಂಸಾರವನ್ನು ನೀನೇ ಕಾಪಾಡಬೇಕು!!!
ReplyDeleteಸಧ್ಯ ಹೆಂಡತಿಯನ್ನು ಗಂಡ
ಗಂಡನನ್ನು ಹೆಂಡತಿ :
"ಯಾರ್ರೀ ನೀವು?" ಅಂತ ಕೇಳಿದರೆ ಏನು ಗತಿ.
ಇದಕ್ಕೆ ವೈದ್ಯಕೀಯ ಚಿಕಿತ್ಸೆ ಇಲ್ಲವೇ ಸಾರ್?
ಡಾಕ್ಟರ ಅಂಕಲ್,
ReplyDeleteನಗುವಿಗೆ ತುಂಬಾ ಚೆನ್ನಾಗಿ ಔಷಧಿ ಕೊಡ್ತಿರಾ..
ಮರೆವಿನ ಪ್ರಸಂಗ ತುಂಬಾ ಚೆನ್ನಾಗಿದೆ..
:) :) :)
ಹ್ಹ ಹ್ಹ.. ಚೆನ್ನಾಗಿದೆ ಸರ್’ಜೀ :)
ReplyDeleteಚೆನ್ನಾಗಿದೆ ಸರ್ ಮರೆವಿನ ಪ್ರಸ೦ಗ! ಆದರೂ ಆ ವಯಸ್ಸಿನಲ್ಲಿ ಅವರು ಸ್ವಾವಲ೦ಭಿಗಳಾಗಿದ್ದಾರಲ್ಲಾ ಅದೇ ಸ೦ತಸದ ವಿಷಯ!
ReplyDeleteಮೂರ್ತಿ ಸರ್.....
ReplyDeleteಹಹಹ......ಚೆನ್ನಾಗಿದೆ ಮರಗುಳಿಗಳ ಕಥೆ...