Tuesday, November 13, 2012

"ಡೌವ್ ಸೋಪ್ ಹಾಕಿ!!!"

ಈಗ ಸುಮಾರು ಹನ್ನೆರಡು ವರುಷಗಳ ಹಿಂದೆ ನಮ್ಮ ಆಸ್ಪತ್ರೆಗೆ ಇನ್ನೂ ಮದುವೆಯಾಗದ ತರುಣ ವೈದ್ಯರೊಬ್ಬರು ಸೇರಿದರು.ಸದಾ ನಗುಮುಖ.ಮೇಲೆ ಸ್ಪುರದ್ರೂಪಿ.ಸ್ವಾಭಾವಿಕವಾಗಿ ಅವರ ಬಳಿ  ತರುಣಿಯರೇ ಹೆಚ್ಚು ಬರುತ್ತಿದ್ದರು.ಒಮ್ಮೆ ಹುಡುಗಿಯರಿಬ್ಬರು ಅವರನ್ನು ನೋಡುವ ಸಲುವಾಗಿ ಆಸ್ಪತ್ರೆಗೆ ಬಂದರು."ಏನಮ್ಮಾ ಏನು ತೊಂದರೆ ?'ಎಂದರು ಡಾಕ್ಟರು.ಹುಡುಗಿಯರು,ಏನೋ ಒಂದು ಕೇಳೋಣವೆಂದುಕೊಂಡು  "ಮೊಡವೆಗೆ ಯಾವ ಸೋಪು ಹಾಕಬೇಕು ಹಾಕಬೇಕು ಸಾರ್?"ಎಂದು ನುಲಿಯುತ್ತಾ ಕೇಳಿದರು.ನಮ್ಮ ಚೆಂದದ ಡಾಕ್ಟರು ಸ್ವಾಭಾವಿಕವಾಗಿ"ಡೌವ್ ಹಾಕಿ"ಎಂದರು.ಹುಡುಗಿಯರು ಕಿಸಿ,ಕಿಸಿ ನಗುತ್ತಾ ಅಲ್ಲಿಂದ ಕಾಲ್ಕಿತ್ತರು.ಇವರಿಗೆ ಡೌವ್ ಸೋಪನ್ನು ಹಾಕಿ ಎಂದು ಹೇಳಿದ್ದಕ್ಕೆ ಹಾಗೇಕೆ ನಗುತ್ತಾ ಓಡಿಹೋದರೆಂಬುದು ಅರ್ಥವಾಗದೇ ನನ್ನ ಛೇಂಬರಿಗೆ ಬಂದು,ನಡೆದದ್ದೆನ್ನೆಲ್ಲಾ ತಿಳಿಸಿ "ಹುಡುಗಿಯರು ಹಾಗೇಕೆ ನಗುತ್ತಾ ಓಡಿ  ಹೋದರು ಸಾರ್"ಎಂದರು.ನಾನು 'ಡೌವ್ ಹಾಕುವುದು'ಎನ್ನುವುದರ ಅರ್ಥವನ್ನು ಹೇಳಿದ ಮೇಲೆ"ಅಯ್ಯೋ ರಾಮ"ಎನ್ನುತ್ತಾ,ಆದ ಎಡವಟ್ಟಿಗೆ  ಡಾಕ್ಟ್ರು ನಾಚಿಕೆಯಿಂದ ಇನ್ನಷ್ಟು ಕೆಂಪಾದರು.ಈಗ ಅವರಿಗೆ ಮದುವೆಯಾಗಿ ಏಳು ವರ್ಷದ ಮಗನಿದ್ದಾನೆ.ಹೆಂಡತಿಯೂ ವೈದ್ಯೆ.ಹೋದವಾರ ಬೆಂಗಳೂರಿನಲ್ಲಿ ಮನೆಯವರೆಲ್ಲಾ ಸೇರಿದಾಗ ಈ ಘಟನೆಯನ್ನು ನೆನಪಿಸಿಕೊಂಡು,ಅವರನ್ನು ಛೇಡಿಸುತ್ತಾ , ಎಲ್ಲರೂ ನಕ್ಕಿದ್ದೇ ನಕ್ಕಿದ್ದು.

16 comments:

  1. ಬಹಳ ದಿನಗಳ ನಂತರ ಕೊಳಲಿನ ನಾದ ಕೇಳಿಸಿತು. ಡವ್ ಸೋಪಿನ ಮಹಾತ್ಮೆ ಓದಿ ನಗು ಬಂತು. ಇಂದು ಮುಂಜಾನೆಯೇ ನಗುವಿನ ಉಡುಗೊರೆ ನೀಡಿದ ನಿಮಗೆ ದೀಪಾವಳಿ ಹಬ್ಬದ ಶುಭಾಶಯಗಳು.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
    Replies
    1. ಬಾಲಣ್ಣ;ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.ನಮಸ್ಕಾರ.

      Delete
  2. ಡೌವ್ ಸೋಪ್ ಪುರಾಣ ಬಲೇ ಮಜವಾಗಿತ್ತು.

    ಅವರ ಮತ್ತು ನಿಮ್ಮ ಅನುಬಂಧ ಸದಾ ಕಾಲ ತಂದೆ ಮಕ್ಕಳ ಹಾಗೆ ಯಾವತ್ತಿಗೂ ಇರಲಿ. ಅವರ ಅಭಿಮಾನ ಮತ್ತು ನಿಮ್ಮ ಅಕ್ಕರೆ ಸಮಪಾಲಿರಲಿ.

    ಅಂದ ಹಾಗೆ, ತಾವು ತರುಣರಾಗಿದ್ದಾಗ, ಇಂತಹ ಡೌವ್ ಸೋಪ್ ಪುರಾಣಗಳಿದ್ದರೆ (!) ದಯವಿಟ್ಟು ತಿಳಿಸಿರಿ.

    ReplyDelete
  3. ಬದರಿ;ಪ್ರತಿಕ್ರಿಯೆಗೆ ಧನ್ಯವಾದಗಳು.ಹ.....ಹ.....ನಮ್ಮ ಕಾಲದಲ್ಲಿ ಡೌವ್ ಇರಲಿಲ್ಲಾ ಬದರೀ .ಬರೀ ಲೈಫ್ ಬಾಯ್ ಇತ್ತು....ಅಷ್ಟೇ.

    ReplyDelete
  4. ಆ ಕಾಲವೊಂದಿತ್ತು...

    ಲವ್ವು ಡವ್ವಿನ ಕಾಲವದು ...

    ಮಾತನಾಡಿದ್ದೆಲ್ಲ ಅಪಾರ್ಥ...

    ಕೇಕೆ .. ನಗು.. ಹಾಸ್ಯ.. ಕೆಲವೊಮ್ಮೆ ಮುಜುಗರ..

    ದೀಪಾವಳಿಯ ಶುಭಾಶಯಗಳು..

    ಹಾಗೂ ಅನಂತಾನಂತ ಧನ್ಯವಾದಗಳು..

    ಆ ಕಾಲವನ್ನು ನೆನಪಿಸಿದ್ದಕ್ಕೆ..


    ReplyDelete
    Replies
    1. ದೀಪಕ್;ನಿಮ್ಮ ಬಾಳಿನಲ್ಲಿ ಸದಾ ಸುಖ,ಸಂತೋಷ ಸಂವ್ರುದ್ಧಿಯಾಗಲಿ ಎಂದು ಹಾರೈಸುತ್ತೇನೆ.ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  5. ಆಗ ಆ ಡಾಕ್ಟರ ಸ್ಥಿತಿ ಹೇಗಾಗಿರಬೇಡ! ನಮ್ಮೊ೦ದಿಗೆ ಈ ನಗೆಯ ಸ೦ದರ್ಭ ಹ೦ಚಿಕೊ೦ಡದ್ದಕ್ಕಾಗಿ ಧನ್ಯವಾದಗಳು ಹಾಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು ಸರ್ :)

    ReplyDelete
    Replies
    1. ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮಗೂ ಹಬ್ಬದ ಶುಭಾಶಯಗಳು.ಈ ದೀಪಾವಳಿಯು ಎಲ್ಲರ ಬಾಳಿನಲ್ಲೂ ಸುಖ ,ಸಂತೋಷವನ್ನು ತರಲಿ.ನಮಸ್ಕಾರ.

      Delete
  6. Dove haakodu chennagide....
    DeepavaLi shubhashayagalu

    ReplyDelete
  7. ಮಹೇಶ್ ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮಗೂ ಹಬ್ಬದ ಶುಭಾಶಯಗಳು.

    ReplyDelete
  8. ಡೋವ್ ಹಾಕದೆ ಸೋಪು ಹಾಕಿಸಿಕೊಳ್ಳುವ ಸೂಪರ್ ಆಗಿದೆ..ಚಂದದ ನಗೆ ಬುಗ್ಗೆ ಡಾಕ್ಟ್ರೆ ದೀಪಾವಳಿಗೆ..ದೀಪಾವಳಿ ಹಬ್ಬಕ್ಕೆ ನಿಮಗೆ ನಿಮ್ಮ ಕುಟುಂಬಕ್ಕೆ ಶುಭಾಶಯಗಳು

    ReplyDelete
  9. ಶ್ರೀಕಾಂತ್;ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮಗೂ ದೀಪಾವಳಿ ಹಬ್ಬದ ಶುಭಾಶಯಗಳು.ಬರುತ್ತಿರಿ.ನಮಸ್ಕಾರ.

    ReplyDelete
  10. ದಿನಕರ್;ಹ...ಹ...ಹಾ!!ನೀವೂ ಡೌವ್ ಸೋಪ್ ಹಾಕಿದ್ದೀರ?

    ReplyDelete

Note: Only a member of this blog may post a comment.