ದಿನನಿತ್ಯದ,ಏಕತಾನತೆಯ,ಜಂಜಾಟದ ಬದುಕಿನಲ್ಲೂ ಕೆಲವೊಮ್ಮೆ ನಡೆಯುವ ಹಾಸ್ಯ ಪ್ರಸಂಗಗಳು ಬದುಕನ್ನು ಹಸನಾಗಿಸುತ್ತವೆ.
ಮೊನ್ನೆ ನಮ್ಮ ಆಸ್ಪತ್ರೆಯ ಹೊರ ರೋಗ ವಿಭಾಗಕ್ಕೆ ನಲವತ್ತೇಳು ವರ್ಷ ವಯಸ್ಸಿನ ಮಹಿಳಾ ರೋಗಿಯೊಬ್ಬರು ಚೀಟಿ ಬರೆಸಿಕೊಂಡು ಬಂದರು.ಚೀಟಿಯಲ್ಲಿ,ಅವರ ಹೆಸರನ್ನು 'ಹೇಮಂತ',ಎಂದು ಬರೆಯಲಾಗಿತ್ತು.'ಅರೇ....! ಇದು ಸಾಮಾನ್ಯವಾಗಿ ಗಂಡಸರು ಇಟ್ಟುಕೊಳ್ಳುವ ಹೆಸರಲ್ಲವೆ....?!' ಅನಿಸಿತು. ಆ ಹೆಂಗಸನ್ನು ಹೆಸರೇನೆಂದು ಕೇಳಿದೆ.ಅದಕ್ಕವರು "ಹೇಮ" ಅಂದರು!ಚೀಟಿ ಬರೆದು ಕೊಟ್ಟ ನನ್ನ ಶಿಷ್ಯನನ್ನು ಕರೆದು, 'ಏನಪ್ಪಾ ಇದು ಇವರ ಹೆಸರನ್ನು"ಹೇಮಂತ"ಅಂತ ಬರೆದಿದ್ದೀಯಲ್ಲಾ ?'ಎಂದೆ.ಅದಕ್ಕವನು'ಸರ್ ....ಎರಡೆರಡು ಸಲ ಕೇಳಿದೆ .ಅವರು "ಹೇಮಂತ"ಎಂದೇ ಹೇಳಿದರು ' ಎಂದ ಭೂಪ!!
ಆ ಹೆಂಗಸಿಗೆ ನಡೆದ ಪರಪಾಟು ಅರ್ಥವಾಗಿ ನಗತೊಡಗಿದರು.ಚೀಟಿ ಬರೆಯುವವನು ಹೆಸರೇನು ಎಂದು ಎರಡೆರಡು ಸಲ ಕೇಳಿದಾಗ, ಇವರು ಎರಡು ಸಲವೂ,"ಹೇಮ ಅಂತ "ಎಂದು ಉತ್ತರಿಸಿದ್ದರು."ಹೇಮ ಅಂತ "ಅನ್ನುವುದನ್ನು,ನನ್ನ ಶಿಷ್ಯ "ಹೇಮಂತ"ಎಂದು ಅರ್ಥ ಮಾಡಿ ಕೊಂಡಿದ್ದ!!! ಆದ ಎಡವಟ್ಟು ಅರ್ಥವಾಗಿ ಅವನೂ ,ನಗುತ್ತಾ ಚೀಟಿ ಬರೆಯಲು ಹೋದ.ಆಸ್ಪತ್ರೆಯ ಎಲ್ಲರಿಗೂ ಗೊತ್ತಾಗಿ,ಎಲ್ಲರೂ ನಕ್ಕಿದ್ದೇ, ನಕ್ಕಿದ್ದು !!!