Thursday, April 11, 2013

"ವಿಜಯನಾಮ ಸಂವತ್ಸರ ,ಅನ್ವರ್ಥ ನಾಮ ಸಂವತ್ಸರವಾಗಲಿ!!!"

ಬಾ ಬಾರೋ ವಿಜಯ ನಾಮ
ಸಂವತ್ಸರವೇ ,ಸ್ವಾಗತ ನಿನಗೆ!!!
ಇರು ...ಇರು..... ,
'ಬರ'ಬೇಡ ,ತಡಿ!!!

ನೀನು ಬಾ ಮಹರಾಯ .....!!!
ಆದರೆ 'ಬರ'ವನ್ನು ತಡಿ!!!
ನೀನೇ ನೋಡು ಎಲ್ಲಕ್ಕೂ ಬರ!!

ಎಣ್ಣೆ ಸ್ನಾನ ಮಾಡೋಣವೆಂದರೆ
ನೀರಿಗೆ ಬರ.....!

ಹೋಳಿಗೆ ತಿನ್ನಬೇಕೆಂದರೆ .....
ಬೇಳೆಯ ಮತ್ತು ಬೆಲ್ಲದ ಬೆಲೆ
ಬೇವಿನ ಕಹಿಯಂತಿವೆ  !!!

ಇನ್ನೆಲ್ಲಿಯ ಯುಗಾದಿ!!?
ಈ ಬಿಸಿಲಿನ ಝಾಳಕ್ಕೆ
ತಂಗಾಳಿಗೂ ತಗಾದಿ !!!

ಕೈಕೊಟ್ಟಿದೆ ಕರೆಂಟು
ಫ್ಯಾನಿನ ಗಾಳಿಯೂ ಇಲ್ಲದೇ
ಬೆವರಿನಿಂದ ಮೈಯೆಲ್ಲಾ ಅಂಟು !!!

ಇರಲಿ ಬಿಡು ಮಹರಾಯ !
ಇವೆಲ್ಲಾ ನಮಗೆ ಮಾಮೂಲು!!
ನೀನು ಬಲಗಾಲಿಟ್ಟು ಒಳಗೆ  ಬಾ !!

ಎಲ್ಲರ ಬಾಳಲ್ಲೂ ......... ,
ಸುಖ ಸಂತಸ ,ಸಂವ್ರುದ್ಧಿಗಳನ್ನು
ತಪ್ಪದೆ ಹೊತ್ತು ತಾ...!!!

ಎಲ್ಲರಿಗೂ ವಿಜಯನಾಮ ಸಂವತ್ಸರ
ಅನ್ವರ್ಥ ನಾಮ ಸಂವತ್ಸರವಾಗಲಿ
ಎಂಬ ಆಶಾವಾದದ ಎಳೆ ಹಿಡಿದು ಬಾ!!!

ಬಾ ಬಾರೋ ,ನವ ವಸಂತವೇ........!!!
ನಿನಗೆ ..................,
ಕೊಳಲಿನ ನಾದದ ಸ್ವಾಗತ!!!!

12 comments:

  1. ವಿಜಯ ನಾಮ ಸಂವತ್ಸರಕ್ಕೆ ಇಡಕಿಂತಲೂ ಒಳ್ಳೆಯ ಸುಸ್ವಾಗತ ಗೀತೆ ಹುಡುಕಿದರೂ ಸಿಗದು. ಬರವನ್ನು ತರಬೇಡ ಎನ್ನುವರಲ್ಲೇ ನಿಮ್ಮ ಸರ್ವೇ ಜನ ಸುಖಿನೋಭಾವಂತು ಮನಸ್ಥಿತಿ ಅರ್ಥವಾಗುತ್ತದೆ. ತುಂಬಾ ಅರ್ಥಗರ್ಭಿತ ಹೃದಯವಂತ ರಚನೆ.

    ತಮಗೂ ತಮ್ಮ ಮನೆ ಮಂದಿಗೆಲ್ಲ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

    ReplyDelete
    Replies
    1. ಬದರಿ ಸರ್; ಹೊಸ ವರ್ಷದ ಶುಭಾಶಯಗಳು.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

      Delete
  2. ಯುಗಾದಿ ಶುಭಾಶಯಗಳು ಸರ್ ... ಚೆನ್ನಾಗಿದೆ ಸರ್ ಕವನ ವೆಲ್-ಕಮ್ ಸಾಂಗ್

    ReplyDelete
    Replies
    1. ಮನಸು ಮೇಡಂ; ಹೊಸ ವರ್ಷದ ಶುಭಾಶಯಗಳು.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

      Delete

  3. ಅಕ್ಷರಗಳಿಗೆ ಗಾದಿಯಾಗಿ
    ಚಿಗುರುಗಳಿಗೆ ಪ್ರೇರಣೆಯಾಗಿ
    ಬೆಳವಣಿಗೆಯ ಬುನಾದಿಯಾಗುವ
    ಯುಗಾದಿಗೆ ಸುಂದರ ಕವನ ಡಾಕ್ಟ್ರೆ
    ಹೊಸವರುಷದ ಶುಭಾಶಯಗಳು ಕೊಳಲಿನ ಗಾನ ಹರಿಯುತ್ತಾ ಇರಲಿ!

    ReplyDelete
    Replies
    1. ಶ್ರೀಕಾಂತ್ ಮಂಜುನಾತ್ ಸರ್: ಹೊಸ ವರ್ಷದ ಶುಭಾಶಯಗಳು.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

      Delete
  4. ವಿಜಯ ನಾಮ ಸಂವತ್ಸರದ ಯುಗಾದಿಗೆ ಸ್ವಾಗತ ಬಯಸುತ್ತಲೇ ಎಚ್ಚರಿಕೆಯನ್ನೂ ಕೊಟ್ಟಿರುವಿರಿ. ನಿಮಗೂ ಸಹ ಯುಗಾದಿಯ ಶುಭಾಶಯಗಳು.

    ReplyDelete
    Replies
    1. ಸುನಾತ್ ಸರ್: ಹೊಸ ವರ್ಷದ ಶುಭಾಶಯಗಳು.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

      Delete
  5. NIMMA ASHAYA SARTHAKAVAGALI- 'BARA' BEDA JOJEGE ADAMBARAVOO BEDA- HABBADA SHUBHASHAYAGALU

    ReplyDelete
    Replies
    1. ಹೇಮಚಂದ್ರ; ಹೊಸ ವರ್ಷದ ಶುಭಾಶಯಗಳು.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

      Delete
  6. `ವಿಜಯ'ಕ್ಕೆ ಎಚ್ಚರಿಕೆಯಿ0ದ ಕೂಡಿದ ಸ್ವಾಗತ! ಸರಳ ಸು0ದರ ಕವನಕ್ಕಾಗಿ ಅಭಿನ0ದನೆಗಳು ಸರ್.

    ReplyDelete
    Replies
    1. ಪ್ರಭಾಮಣಿ ನಾಗರಾಜ್ ಮೇಡಂ;ಬಹಳ ದಿನಗಳ ನಂತರ ಬ್ಲಾಗಿನಲ್ಲಿ ನಿಮ್ಮ ಪ್ರತಿಕ್ರಿಯೆ ನೋಡಿ ನಿಜಕ್ಕೂ ಸಂತೋಷವಾಗಿದೆ.ತುಂಬಾ ,ತುಂಬಾ ಧನ್ಯವಾದಗಳು.ಹೊಸ ವರ್ಷ ನಿಮಗೂ ನಿಮ್ಮ ಕುಟುಂಬಕ್ಕೂ ಶುಭಾದಾಯಕವಾಗಲಿ.ಬ್ಲಾಗಿಗೆ ಬರುತ್ತಿರಿ.ನಮಸ್ಕಾರ.

      Delete

Note: Only a member of this blog may post a comment.