ಅವನು ಆ ಊರಿಗೇ ಒಬ್ಬ ದೊಡ್ಡ ಶ್ರೀಮಂತ.ಅವನ ಬಳಿ ಬಂಗಲೆ,ಗಾಡಿ,ಆಳು ಕಾಳು,ಸಾಕಷ್ಟು ಹಣ ಎಲ್ಲವೂ ಇವೆ.ಆದರೂ ಅವನನ್ನು ಏನೋ ಒಂದು ಕೊರತೆ ಸದಾ ಕಾಡುತ್ತದೆ.ಇದ್ದಕ್ಕಿದ್ದಂತೆ ಭಾವುಕನಾಗುತ್ತಾನೆ.
ಊರಿನ ಆ ಒಂದು ರಸ್ತೆ ಬದಿಯ ಗಬ್ಬು ನಾರುವ ಕಸದ ತೊಟ್ಟಿ ಯೊಂದರ ಬಳಿ ಆಗಾಗ ಹೊಗುತ್ತಾನೆ.ಅವನ ಕಣ್ಣುಗಳು ಅವನು ಅಲ್ಲಿ ಏನೋ ಕಳೆದು ಕೊಂಡವನಂತೆ ಹುಡುಕುತ್ತವೆ. ಮತ್ತೆ ಸ್ವಲ್ಪ ಸಮಯದ ನಂತರ ಸುಸ್ತಾದವನಂತೆ ಕಾರಿನಲ್ಲಿ ಕುಳಿತು ಮನೆಗೆ ಮರಳುತ್ತಾನೆ.
ಊರಿನವರೆಲ್ಲಾ ಅವನನ್ನು ನೋಡಿ ಅವನಿಗೆಲ್ಲೋ ಸ್ವಲ್ಪ ತಲೆ ಕೆಟ್ಟಿದೆ ಎಂದು ಆಡಿಕೊಳ್ಳುತ್ತಾರೆ. ಅವನು ನನಗೂ ಅಲ್ಪ ಸ್ವಲ್ಪ ಪರಿಚಯ. ಆಗಾಗ ಸಣ್ಣ ಪುಟ್ಟ ಚಿಕಿತ್ಸೆಗೆ ನನ್ನ ಆಸ್ಪತ್ರೆಗೆ ಬರುತ್ತಾನೆ.
ನಾನು ರೋಗಿಗಳ ವೈಯಕ್ತಿಕ ವಿಷಯಗಳಲ್ಲಿ ಹೆಚ್ಚು ತಲೆ ಹಾಕುವುದಿಲ್ಲ. ಆದರೆ ಒಮ್ಮೆ ಅವನೊಬ್ಬನೇ ಇದ್ದಾಗ ಕುತೂಹಲ ಹತ್ತಿಕ್ಕಲಾರದೇ ಅವನನ್ನು "ಆ ಕಸದ ತೊಟ್ಟಿಯಲ್ಲಿ ಏನು ಹುಡುಕುತ್ತೀರಿ? ಏನನ್ನಾದರೂ ಕಳೆದು ಕೊಂಡಿದ್ದೀರಾ ಹೇಗೆ ?"ಎಂದು ಕೇಳಿಯೇ ಬಿಟ್ಟೆ.
ಅವನು ನನ್ನಿಂದ ಈ ಪ್ರಶ್ನೆ ನಿರೀಕ್ಷಿಸಿರಲಿಲ್ಲವೆಂದು ಕಾಣುತ್ತೆ.ಸ್ವಲ್ಪ ಹೊತ್ತು ಮೌನದಲ್ಲಿ ಕಳೆದು ಹೋದ. ಸರಿಯಾದ ಪದಗಳಿಗಾಗಿ ತಡಕಾಡುವಂತಿತ್ತು ಅವನ ಚಹರೆ. ನಾನು ಅವನನ್ನು ಯಾಕಾದರೂ ಈ ಪ್ರಶ್ನೆ ಕೇಳಿದೆನೋ ಎಂದು ಕಸಿವಿಸಿಗೊಂಡೆ.
ನಂತರ ಅವನು ನಿಧಾನವಾಗಿ ತನ್ನ ಕಥೆ ಹೇಳತೊಡಗಿದ. "ಸಾರ್ ಊರಿನ ಜನ ನನ್ನ ಬಗ್ಗೆ ಏನೆಲ್ಲಾ ಆಡಿ ಕೊಳ್ಳುತ್ತಾರೆ ಎನ್ನುವುದು ನನಗೆ ಗೊತ್ತಿದೆ. ನಾನು ಸಣ್ಣವನಾಗಿದ್ದಾಗಲಿಂದಲೂ ನನ್ನನ್ನು ಬೆಳೆಸಿದ್ದು ಗೋವಿಂದಜ್ಜನೇ. ನಾನು ಅಪ್ಪ ಅಮ್ಮನ ಬಗ್ಗೆ ಕೇಳಿದಾಗಲೆಲ್ಲಾ ,ನೀನು ಸಣ್ಣವನಿದ್ದಾಗಲೇ ನಿನ್ನ ಅಪ್ಪ ಅಮ್ಮ ತೀರಿಕೊಂಡರು ಎನ್ನುತ್ತಿದ್ದ. ಅಜ್ಜ ಸಾಯುವುದಕ್ಕೆ ಸ್ವಲ್ಪ ದಿನ ಮುಂಚೆ ,ನನ್ನ ಅಪ್ಪ ಅಮ್ಮ ಯಾರೆಂದು ತನಗೆ ಗೊತ್ತಿಲ್ಲವೆಂದೂ,ನಾನು ತೊಟ್ಟಿಯಲ್ಲಿ ಸಿಕ್ಕ ಹಸುಗೂಸೆಂದೂ,ಅಳುವಿನ ಶಬ್ದ ಕೇಳಿ ತಾನು ಎತ್ತಿಕೊಂಡು ಬಂದು ಸಾಕಿದುದಾಗಿಯೂ ನಿಜ ಹೇಳಿದ.
ನನಗೆ ಆಗಾಗ ನನ್ನ ಅಮ್ಮನ ನೆನಪಾಗುತ್ತದೆ ಸರ್.ಪಾಪ ಏನು ಕಷ್ಟದಲ್ಲಿ ಇದ್ದಳೋ,ನನ್ನನ್ನು ತೊಟ್ಟಿಯಲ್ಲಿ ಬಿಟ್ಟು ಹೋಗುವಾಗ ಎಂತಹ ಸಂಕಟ ಅನುಭವಿಸಿದಳೋ.ನೆನೆಸಿಕೊಂಡರೆ ಬಹಳ ನೋವಾಗುತ್ತೆ ಸರ್.ಅಮ್ಮನ ನೆನಪಾದಗಲೆಲ್ಲಾ ಆ ತೊಟ್ಟಿಯ ಬಳಿ ಹೋಗುತ್ತೀನಿ ಸರ್"ಎಂದು ಮಾತು ಮುಗಿಸಿದ.ಅವನು ಅತ್ತು ಎದೆ ಹಗುರ ಮಾಡಿ ಕೊಂಡ.ನನ್ನ ಎದೆ ಭಾರವಾಗಿತ್ತು !!!
ಆಧಾರ:"ಕಥೆಗಳಲ್ಲದ ಕಥೆಗಳು"ಪುಸ್ತಕದ ಒಂದು ಕಥೆ.