ಅವನು ಆ ಊರಿಗೇ ಒಬ್ಬ ದೊಡ್ಡ ಶ್ರೀಮಂತ.ಅವನ ಬಳಿ ಬಂಗಲೆ,ಗಾಡಿ,ಆಳು ಕಾಳು,ಸಾಕಷ್ಟು ಹಣ ಎಲ್ಲವೂ ಇವೆ.ಆದರೂ ಅವನನ್ನು ಏನೋ ಒಂದು ಕೊರತೆ ಸದಾ ಕಾಡುತ್ತದೆ.ಇದ್ದಕ್ಕಿದ್ದಂತೆ ಭಾವುಕನಾಗುತ್ತಾನೆ.
ಊರಿನ ಆ ಒಂದು ರಸ್ತೆ ಬದಿಯ ಗಬ್ಬು ನಾರುವ ಕಸದ ತೊಟ್ಟಿ ಯೊಂದರ ಬಳಿ ಆಗಾಗ ಹೊಗುತ್ತಾನೆ.ಅವನ ಕಣ್ಣುಗಳು ಅವನು ಅಲ್ಲಿ ಏನೋ ಕಳೆದು ಕೊಂಡವನಂತೆ ಹುಡುಕುತ್ತವೆ. ಮತ್ತೆ ಸ್ವಲ್ಪ ಸಮಯದ ನಂತರ ಸುಸ್ತಾದವನಂತೆ ಕಾರಿನಲ್ಲಿ ಕುಳಿತು ಮನೆಗೆ ಮರಳುತ್ತಾನೆ.
ಊರಿನವರೆಲ್ಲಾ ಅವನನ್ನು ನೋಡಿ ಅವನಿಗೆಲ್ಲೋ ಸ್ವಲ್ಪ ತಲೆ ಕೆಟ್ಟಿದೆ ಎಂದು ಆಡಿಕೊಳ್ಳುತ್ತಾರೆ. ಅವನು ನನಗೂ ಅಲ್ಪ ಸ್ವಲ್ಪ ಪರಿಚಯ. ಆಗಾಗ ಸಣ್ಣ ಪುಟ್ಟ ಚಿಕಿತ್ಸೆಗೆ ನನ್ನ ಆಸ್ಪತ್ರೆಗೆ ಬರುತ್ತಾನೆ.
ನಾನು ರೋಗಿಗಳ ವೈಯಕ್ತಿಕ ವಿಷಯಗಳಲ್ಲಿ ಹೆಚ್ಚು ತಲೆ ಹಾಕುವುದಿಲ್ಲ. ಆದರೆ ಒಮ್ಮೆ ಅವನೊಬ್ಬನೇ ಇದ್ದಾಗ ಕುತೂಹಲ ಹತ್ತಿಕ್ಕಲಾರದೇ ಅವನನ್ನು "ಆ ಕಸದ ತೊಟ್ಟಿಯಲ್ಲಿ ಏನು ಹುಡುಕುತ್ತೀರಿ? ಏನನ್ನಾದರೂ ಕಳೆದು ಕೊಂಡಿದ್ದೀರಾ ಹೇಗೆ ?"ಎಂದು ಕೇಳಿಯೇ ಬಿಟ್ಟೆ.
ಅವನು ನನ್ನಿಂದ ಈ ಪ್ರಶ್ನೆ ನಿರೀಕ್ಷಿಸಿರಲಿಲ್ಲವೆಂದು ಕಾಣುತ್ತೆ.ಸ್ವಲ್ಪ ಹೊತ್ತು ಮೌನದಲ್ಲಿ ಕಳೆದು ಹೋದ. ಸರಿಯಾದ ಪದಗಳಿಗಾಗಿ ತಡಕಾಡುವಂತಿತ್ತು ಅವನ ಚಹರೆ. ನಾನು ಅವನನ್ನು ಯಾಕಾದರೂ ಈ ಪ್ರಶ್ನೆ ಕೇಳಿದೆನೋ ಎಂದು ಕಸಿವಿಸಿಗೊಂಡೆ.
ನಂತರ ಅವನು ನಿಧಾನವಾಗಿ ತನ್ನ ಕಥೆ ಹೇಳತೊಡಗಿದ. "ಸಾರ್ ಊರಿನ ಜನ ನನ್ನ ಬಗ್ಗೆ ಏನೆಲ್ಲಾ ಆಡಿ ಕೊಳ್ಳುತ್ತಾರೆ ಎನ್ನುವುದು ನನಗೆ ಗೊತ್ತಿದೆ. ನಾನು ಸಣ್ಣವನಾಗಿದ್ದಾಗಲಿಂದಲೂ ನನ್ನನ್ನು ಬೆಳೆಸಿದ್ದು ಗೋವಿಂದಜ್ಜನೇ. ನಾನು ಅಪ್ಪ ಅಮ್ಮನ ಬಗ್ಗೆ ಕೇಳಿದಾಗಲೆಲ್ಲಾ ,ನೀನು ಸಣ್ಣವನಿದ್ದಾಗಲೇ ನಿನ್ನ ಅಪ್ಪ ಅಮ್ಮ ತೀರಿಕೊಂಡರು ಎನ್ನುತ್ತಿದ್ದ. ಅಜ್ಜ ಸಾಯುವುದಕ್ಕೆ ಸ್ವಲ್ಪ ದಿನ ಮುಂಚೆ ,ನನ್ನ ಅಪ್ಪ ಅಮ್ಮ ಯಾರೆಂದು ತನಗೆ ಗೊತ್ತಿಲ್ಲವೆಂದೂ,ನಾನು ತೊಟ್ಟಿಯಲ್ಲಿ ಸಿಕ್ಕ ಹಸುಗೂಸೆಂದೂ,ಅಳುವಿನ ಶಬ್ದ ಕೇಳಿ ತಾನು ಎತ್ತಿಕೊಂಡು ಬಂದು ಸಾಕಿದುದಾಗಿಯೂ ನಿಜ ಹೇಳಿದ.
ನನಗೆ ಆಗಾಗ ನನ್ನ ಅಮ್ಮನ ನೆನಪಾಗುತ್ತದೆ ಸರ್.ಪಾಪ ಏನು ಕಷ್ಟದಲ್ಲಿ ಇದ್ದಳೋ,ನನ್ನನ್ನು ತೊಟ್ಟಿಯಲ್ಲಿ ಬಿಟ್ಟು ಹೋಗುವಾಗ ಎಂತಹ ಸಂಕಟ ಅನುಭವಿಸಿದಳೋ.ನೆನೆಸಿಕೊಂಡರೆ ಬಹಳ ನೋವಾಗುತ್ತೆ ಸರ್.ಅಮ್ಮನ ನೆನಪಾದಗಲೆಲ್ಲಾ ಆ ತೊಟ್ಟಿಯ ಬಳಿ ಹೋಗುತ್ತೀನಿ ಸರ್"ಎಂದು ಮಾತು ಮುಗಿಸಿದ.ಅವನು ಅತ್ತು ಎದೆ ಹಗುರ ಮಾಡಿ ಕೊಂಡ.ನನ್ನ ಎದೆ ಭಾರವಾಗಿತ್ತು !!!
ಆಧಾರ:"ಕಥೆಗಳಲ್ಲದ ಕಥೆಗಳು"ಪುಸ್ತಕದ ಒಂದು ಕಥೆ.

uff...chennaagide nivu bareda reeti...
ReplyDeletethanks for sharing sir...
ನಮ್ಮ ನ್ಯೂಸ್ ಚಾನೆಲಿನಲ್ಲಿ ವಾರಕ್ಕೋಂದಾದರೂ ಎಳೆಗೂಸು ಕಸದ ತೊಟ್ಟಿಯಲ್ಲಿ ಸಿಕ್ಕ ದೃಶ್ಯ ತೋರಿಸುತ್ತೇವೆ. ಬೀದಿ ನಾಯಿಗಳಿಂದ ಭಯಂಕರವಾಗಿ ಕಚ್ಚಿಸಿಕೊಂಡು ಭೋರಿಟ್ಟು ಆ ಕಂದಮ್ಮಗಳು ಆಳುವಾಗಳೆಲ್ಲ ಮನಸ್ಸು ಹಿಂಡಿದಂತಾಗುತ್ತದೆ. ಹೀಗೆ ಬಹುಪಾಲು ಕಸದ ತೊಟ್ಟಿ ಪಾಲಾಗುವ ಮಕ್ಕಳಲ್ಲಿ ಹೆಣ್ಣೂ ಮಕ್ಕಳದೇ ಸಂಖ್ಯೆ ಹೆಚ್ಚು!
ReplyDeleteನನ್ನ ತಂದೆ ತೀರಿಕೊಂಡಾಗ ನನಗೆ ಬರೀ 3 ವರ್ಷ. ಆನಂತರ ನನ್ನ ಅಣ್ಣಂದಿರು - ಅತ್ತಿಗೆಯರೇ ನನ್ನನ್ನು ಸ್ವಂತ ಮಗನಿಗಿಂತಲೂ ಹೆಚ್ಚಿಗೆ ನೋಡಿಕೊಂಡರು. ಆದರೂ ನಾನು ಏನೋ 'ಅನಾಥಪ್ರಜ್ಞೆ' ಕಾಡುವಂತೆ ಮನಸ್ಥಿತಿ ಇಟ್ಟುಕೊಂಡಿರುತ್ತಿದ್ದೆ. ಆದರೆ ಯಾವುದೋ ಕಾರಣಕ್ಕೆ ಪರಿತ್ಯಕ್ತವಾದ ಈ ಕಂದಮ್ಮಗಳ ಬಾಳುವೆ ನೆನೆಸಿ ಹಲವರು ಪಾಠ ಕಲಿಯಬೇಕಿದೆ.
ತುಂಬಾ ಮನಮಿಡಿಯುವ ಕಥೆ ಇದು.
feeling silkkapatte feeling ide ..to be serious this is so good doctor saab
ReplyDelete
ReplyDeleteಕಾಣೋದೆಲ್ಲ ನಿಜವಲ್ಲ ಖಂಡಿದ್ದೆಲ್ಲ ಸುಳ್ಳಲ್ಲ ಅನ್ನುವ ಹಾಗೆ ಭಾವುಕಮನಸ್ಸಿನ ಕಣ್ಣುಗಳು ಹುದುಕುತಿದ್ದದು ಬೇರೆಯೇ. ಮನ ಸೆಳೆಯುವ ಘಟನೆಗಳು ಕೆಲವೊಮ್ಮೆ ಛಾಪನ್ನು ಒತ್ತಿ ಬಿಡುತ್ತವೆ. ಮನಕಲಕುವ ಕಥೆ ಡಾಕ್ಟರ್
:-( :-( Mana kalakitu sir :-(
ReplyDeleteಮನ ಮುಟ್ಟುವಂತಹ ಕಥೆ....
ReplyDeleteಕಸದ ತೊಟ್ಟಿಯಲ್ಲಿ ಎಸೆದು ಹೋದಳಲ್ಲಾ ಅನ್ನೋ
ಸಿಟ್ಟಿಲ್ಲದೇ ಅವಳ ಪರಿಸ್ಥಿತಿ ಏನಿತ್ತೋ ಅನ್ನುವಷ್ಟು ಅಮ್ಮನಿಗಾಗಿ ತಿಡಿದ ಜೀವವೇನೋ...
ಇಷ್ಟವಾಯ್ತು.........
ಕಥೆ ಬರಿಯ ಕಥೆಯಾಗಿ ಉಳಿಯದೇ ಮನ ತಟ್ಟಿತು ...ಮನ ಮುಟ್ಟಿತು ...
ReplyDeleteಇಷ್ಟವಾಯ್ತು ಅಂದರೆ ನೋವೇ ಇಷ್ಟವಾಯ್ತೇನೋ ಅಂತನಿಸಿ ಕ್ಷಣವೊಂದಕ್ಕೆ ಕಂಗಾಲಾದೆ ನಾ !
ಆ ಮಗ ತಾಯಿಯ ಬಗ್ಗೆ ದುಃಖಪಡದೆ ನೆನೆಸಿಕೊಳ್ಳುತ್ತಾನಲ್ಲ.. ಆ ತಾಯಿ ನಿಜಕ್ಕೂ ಅದೃಷ್ಟವಂತೆ...
ReplyDeletekasada tottiyalli tannaannu
ReplyDeletebitta taayiya bagge yochisi
vedanepaduttiruvane nijavaagiu
vishishta vyakti.antaha paristitiyavarige
aadarshavenisuvantaha kathe.